ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಆಟೋ ಉದ್ಯಮ ಭಾರೀ ಹಿನ್ನಡೆ ಅನುಭವಿಸಿದ್ದು, ಬಹುತೇಕ ಆಟೋ ಉದ್ಯಮ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ. 2019ರ ಆರಂಭದಿಂದ ಹೊಸ ವಾಹನಗಳ ಮಾರಾಟದಲ್ಲಿ ಗರಿಷ್ಠ ಇಳಿಕೆ ದಾಖಲಾಗುತ್ತಿದ್ದು, ಇದುವರೆಗೂ ಆಟೋ ಉದ್ಯಮವು ಚೇತರಿಕೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಟೋ ಉದ್ಯಮವನ್ನೇ ನಂಬಿಕೊಂಡಿದ್ದ ಬೀಡಿಭಾಗಗಳ ತಯಾರಿಕಾ ಸಂಸ್ಥೆಗಳು ಕದ ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಹೌದು, ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ಹೊಸ ಉತ್ಪಾದನಾ ಪ್ರಕ್ರಿಯೆಯು ಕೂಡಾ ಕುಂಟುತ್ತಾ ಸಾಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡಿವೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

2019ರ ಅವಧಿಯಲ್ಲಿ ಭಾರತೀಯ ಆಟೋ ಉತ್ಪಾದನಾ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದು, ಹೊಸ ವಾಹನ ಮಾರಾಟದಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸಿವೆ. ಅದರಲ್ಲೂ ಕಳೆದ ಏಪ್ರಿಲ್ ಮತ್ತು ಮೇ ಅವಧಿಯಲ್ಲಿನ ಹೊಸ ವಾಹನಗಳ ಮಾರಾಟವು ಪ್ರಮಾಣವು ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ತೀವ್ರ ಕುಸಿತ ಕಂಡಿತ್ತು.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಇದರಿಂದ ಮಾರಾಟವಾಗದೇ ಉಳಿದ ಸ್ಟಾಕ್ ಇದೀಗ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದ್ದು, ಬಹುತೇಕ ಆಟೋ ಸಂಸ್ಥೆಗಳು ತಮ್ಮ ಹೊಸ ವಾಹನಗಳ ಉತ್ಪಾದನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿ ಸ್ಟಾಕ್ ಕರಗಿಸಲು ಪ್ರಯತ್ನದಲ್ಲಿವೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ದೇಶಿಯ ಮಾರುಕಟ್ಟೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು 2019ರ ಆರಂಭದಿಂದಲೇ ಹೊಸ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಮೇ ಅವಧಿಯಲ್ಲಿ ಅತಿ ಹೆಚ್ಚು ಹಿನ್ನಡೆಯಾಗಿದೆ. ಮಾಹಿತಿಗಳ ಪ್ರಕಾರ, ಶೇ. 20.5 ರಷ್ಟು ಹೊಸ ಪ್ಯಾಸೆಂಜರ್ ವಾಹನಗಳ ಮಾರಾಟ ಪ್ರಮಾಣವು ಕುಸಿತ ಕಂಡಿದ್ದು, 2001ರಿಂದ ಇದು ಮೊದಲ ಬಾರಿಗೆ ಗರಿಷ್ಠ ಪ್ರಮಾಣದ ಮಾರಾಟ ಕುಸಿತ ದಾಖಲಾಗಿದೆ. ಹೀಗಾಗಿ ಸ್ಟಾಕ್ ಪ್ರಕ್ರಿಯೆಗೆ ಸದ್ಯಕ್ಕೆ ಬ್ರೇಕ್ ಹಾಕಲಾಗಿದ್ದು, ಬೀಡಿಭಾಗಗಳನ್ನು ಪೂರೈಕೆ ಮಾಡುವ ಸಾವಿರಾರು ಸಂಸ್ಥೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

2018ರ ಮೇ ಅವಧಿಯಲ್ಲಿ ದೇಶಾದ್ಯಂತ 3,01,238 ಹೊಸ ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದರೆ ಅದೇ 2019ರ ಮೇ ಅವಧಿಯಲ್ಲಿ 2,39,347 ಹೊಸ ಪ್ಯಾಸೆಂಜರ್ ವಾಹನಗಳು ಮಾತ್ರವೇ ಮಾರಾಟವಾಗುವ ಮೂಲಕ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಮತ್ತು ಹೊಸ ವಾಹನಗಳ ಖರೀದಿ ಮೇಲೆ ಜಾರಿ ಮಾಡಲಾದ ಕೆಲವು ಹೊಸ ನಿಯಮಗಳಿಂದಾಗಿ ವಾಹನಗಳ ಖರೀದಿ ಪ್ರಕಿಯೆಗೆ ಪ್ರತಿಕೂಲಕರ ವಾತಾವರಣ ನಿರ್ಮಾಣವಾಗಿದ್ದರಿಂದ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ನಿಗದಿತ ಮಟ್ಟದ ಗುರಿ ಮುಟ್ಟಲು ಸಾಧ್ಯವಾಗದೇ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಮಾರಾಟವಾಗದೇ ಉಳಿದಿರುವ ಸ್ಟಾಕ್ ಪ್ರಮಾಣವನ್ನು ಕರಗಿಸಲು ಕೆಲವು ಕಠಿಣ ನಿರ್ಣಯಗಳನ್ನು ತಗೆದುಕೊಳ್ಳುತ್ತಿವೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಸದ್ಯ ಮಾರುಕಟ್ಟೆಯಲ್ಲಿ ಲೋಕಸಭಾ ಚುನಾವಣೆ ನಂತರ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯಲ್ಲಿ ಚೇತರಿಕೆ ಕಂಡುಬರುತ್ತಿದ್ದರೂ ಸಹ ಸ್ಟಾಕ್ ಪ್ರಮಾಣ ಮಾತ್ರ ಹಾಗೆಯೇ ಇದೆ. ಈ ನಿಟ್ಟಿನಲ್ಲಿ ಬಹುತೇಕ ಕಾರು ಸಂಸ್ಥೆಗಳು ವಿವಿಧ ಮಾದರಿಯ ಆಫರ್ ನೀಡುವ ಮೂಲಕ ಮಾರಾಟದ ಸಂಖ್ಯೆಗಳನ್ನು ಹೆಚ್ಚಿಸುವತ್ತ ಗಮನಹರಿಸಿದ್ದು, ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಹೀಗಾಗಿಯೇ ಸದ್ಯಕ್ಕೆ ಹೊಸ ಕಾರು ಮತ್ತು ಬೈಕ್‌ಗಳ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡಲು ನಿರ್ಧರಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಈ ಹಿಂದಿನಂತೆಯೇ ಕಠಿಣ ಕ್ರಮ ಕೈಗೊಂಡಿದ್ದು, ಮಾರುಕಟ್ಟೆಯ ಚೇತರಿಕೆ ನಂತರವಷ್ಟೇ ಮತ್ತೆ ಉತ್ಪಾದನೆಯನ್ನು ಶುರು ಮಾಡಲಿವೆ. ತದನಂತರವಷ್ಟೇ ಆಟೋ ಉದ್ಯಮವು ಸಹಜ ಸ್ಥಿತಿಯತ್ತ ಮರಳಲಿದ್ದು, ಹೊಸ ಮಾರಾಟ ಸುಧಾರಿಸಿಕೊಳ್ಳಲು ಮುಂದಿನ ಎರಡರಿಂದ ಮೂರು ತಿಂಗಳ ಕಾಲ ಸಮಯಾವಕಾಶ ಬೇಕು ಎನ್ನಲಾಗುತ್ತಿದೆ.

ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ- ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತ...!

ಇದರೊಂದಿಗೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನ ಮಾರಾಟ ನಿಷೇಧವಾಗಿ ಬಿಎಸ್-6 ನಿಯಮವು ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲೂ ಕೂಡಾ ಬಹುತೇಕ ಗ್ರಾಹಕರು ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ವಾಹನಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಿಎಸ್-6 ವಾಹನ ಖರೀದಿಯ ಯೋಜನೆಯಲ್ಲಿರುವುದರಿಂದ ವಾಹನ ಉತ್ಪಾದನಾ ಸಂಸ್ಥೆಗಳು ಸಹ ಎಚ್ಚರಿಕೆಯ ಹೆಜ್ಜೆಯೊಂದಿಗೆ ಸ್ಟಾಕ್ ಪ್ರಮಾಣವನ್ನು ಮುಂದುವರಿಸುತ್ತಿವೆ.

Most Read Articles

Kannada
English summary
Jobs Cut In Automobile Industry. Read in Kannada.
Story first published: Friday, July 26, 2019, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X