Just In
Don't Miss!
- News
ಬೆಂಗಳೂರಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹೊಸ ಯೋಜನೆ ತಯಾರಿ
- Technology
ಗೂಗಲ್ ಮ್ಯಾಪ್ ನಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗುವ ಮತ್ತೊಂದು ಫೀಚರ್
- Finance
ಎಲ್ಲ ತೆರಿಗೆದಾರರಿಗೆ PAN ಯಾಕೆ ನೀಡಲಾಗುತ್ತದೆ ಗೊತ್ತಾ?
- Lifestyle
ಕಬ್ಬಿಣಾಂಶದ ಕೊರತೆಯೇ? ಈ ಆಹಾರಗಳನ್ನು ಸೇವಿಸಿ
- Sports
ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ! ಹೇಗಿರಲಿದೆ ಆಡುವ ಬಳಗ
- Education
ಎಸ್ಎಸ್ಎಲ್ಸಿ ಪಾಸ್...ಚಾಲಕ ವೃತ್ತಿ ಅಂದ್ರೆ ನಂಗಿಷ್ಟ… ಹಾಗಿದ್ರೆ ಈ ಸಾರಿಗೆ ಸಂಸ್ಥೆ ನೇಮಕಾತಿಗೆ ಅರ್ಜಿ ಹಾಕ
- Movies
ಸಂಸದೆಯಾದ ನಂತರ ಸುಮಲತಾ ನಟಿಸಿದ ಮೊದಲ ಸಿನಿಮಾವಿದು
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
ಮತ್ತಷ್ಟು ಮಳಿಗೆಗಳನ್ನು ತೆರೆಯಲಿದೆ ಕಿಯಾ ಮೋಟಾರ್ಸ್
ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ದೇಶಾದ್ಯಂತವಿರುವ ತನ್ನ ಡೀಲರ್ ನೆಟ್‍ವರ್ಕ್ ಅನ್ನು 300ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ. ಕಂಪನಿಯನ್ನು 260 ಟಚ್ ಪಾಯಿಂಟ್‌ಗಳೊಂದಿಗೆ ಆರಂಭಿಸಲಾಯಿತು.

2020ರ ಮಾರ್ಚ್ ವೇಳೆಗೆ ಈ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲು ಬಯಸಿದೆ. ಈ ಬಗ್ಗೆ ಮಾತನಾಡಿದ ಕಿಯಾ ಮೋಟಾರ್ಸ್ ಕಂಪನಿಯ ವಕ್ತಾರರು, ಕಿಯಾ ಮೋಟಾರ್ಸ್ ಇಂಡಿಯಾ ಈಗ ಅಸ್ತಿತ್ವದಲ್ಲಿಲ್ಲದ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಲು ಬಯಸಿದೆ ಎಂದು ಹೇಳಿದರು.

ಕಿಯಾ ಕೇವಲ ಒಂದು ವಾಹನದೊಂದಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿತು. ದೇಶೀಯ ಮಾರುಕಟ್ಟೆಯ ಪ್ರಯಾಣಿಕರ ವಾಹನದ ಸೆಗ್‍ಮೆಂಟಿನ ಮಾರಾಟದಲ್ಲಿ ಐದನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಪ್ರಯತ್ನದಲ್ಲಿರುವ ಕಂಪನಿಯು ಸಣ್ಣ ನಗರ ಹಾಗೂ ಪಟ್ಟಣಗಳಲ್ಲಿ ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದ್ದು, ಇದರಿಂದಾಗಿ ಸಂಭಾವ್ಯ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ.

50 ಟಚ್ ಪಾಯಿಂಟ್‌ಗಳನ್ನು ತೆರೆಯುವುದರೊಂದಿಗೆ 2020ರ ಫೆಬ್ರವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬೇಕಿಂದಿರುವ ಎರಡನೇ ವಾಹನವಾದ ಕಾರ್ನಿವಲ್ ಎಂಪಿವಿಯನ್ನು ಬಿಡುಗಡೆಗೊಳಿಸಿದಾಗ ಕಿಯಾ ಮೋಟಾರ್ಸ್ ಹೆಚ್ಚಿನ ಗ್ರಾಹಕರನ್ನು ತಲುಪಲು ಸಹಾಯವಾಗಲಿದೆ.

ಕಿಯಾ ಮೋಟಾರ್ಸ್ ಇಂಡಿಯಾದ ಮಾರುಕಟ್ಟೆ ಹಾಗೂ ಸೇಲ್ಸ್ ವಿಭಾಗದ ಮುಖ್ಯಸ್ಥರಾದ ಮನೋಹರ್ ಭಟ್‍ರವರು ಮಾತನಾಡಿ, ನಾವು 260 ಟಚ್ ಪಾಯಿಂಟ್‌ಗಳೊಂದಿಗೆ ಆರಂಭಿಸಿದ್ದೇವು. ಈಗ ಈ ಸಂಖ್ಯೆಯನ್ನು ಇನ್ನೂ 50ರಷ್ಟು ಹೆಚ್ಚಿಸಲು ಉದ್ದೇಶಿಸಿದ್ದೇವೆ ಎಂದು ಹೇಳಿದರು.

ಈಶಾನ್ಯ ಭಾರತ, ತೆಲಂಗಾಣದ ಉತ್ತರ ಭಾಗ, ಕರ್ನಾಟಕ, ಪಶ್ಚಿಮ ರಾಜಸ್ಥಾನ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಾವು ಮಳಿಗೆಗಳನ್ನು ಇನ್ನೂ ತೆರೆದಿಲ್ಲ. ಅಂತಹ ಪ್ರದೇಶಗಳಲ್ಲಿ ನಾವು ಮಳಿಗೆಗಳನ್ನು ತೆರೆಯಲು ಬಯಸುತ್ತೇವೆ ಎಂದು ಅವರು ಹೇಳಿದರು.
MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಕಿಯಾ ಮೋಟಾರ್ಸ್ 2020ರ ಆಟೋ ಎಕ್ಸ್‌ಪೋ ಸಮಯದಲ್ಲಿ ತನ್ನ ಹೊಸ ಕಾರ್ನೀವಲ್ ಎಂಪಿವಿಯನ್ನು ಬಿಡುಗಡೆಗೊಳಿಸಲಿದೆ. ನಂತರ ಮುಂದಿನ ವರ್ಷದ ಕೊನೆಯಲ್ಲಿ ಮೂರನೇ ವಾಹನವನ್ನು ಬಿಡುಗಡೆಗೊಳಿಸಲು ಯೋಜಿಸಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಂಪನಿಯು ಪ್ರತಿ ಆರು ತಿಂಗಳಿಗೊಂದು ಕಾರನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದ್ದು, ಹೊಸ ಮಳಿಗೆಗಳು ನೆರವಾಗಲಿವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಸೆಲ್ಟೋಸ್‍ಗಾಗಿ ಕಿಯಾ ಕಂಪನಿಯು 62,000 ಯುನಿಟ್‍ಗಳಷ್ಟು ಬುಕ್ಕಿಂಗ್‍ಗಳನ್ನು ಪಡೆದಿದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಈ ಪೈಕಿ ಕಂಪನಿಯು ಈಗಾಗಲೇ 33,000 ಯುನಿಟ್‍ಗಳನ್ನು ವಿತರಿಸಿದೆ. ಹೆಚ್ಚಿನ ಬೇಡಿಕೆಯಿರುವ ಕಾರಣಕ್ಕೆ ಟಾಪ್ ಎಂಡ್ ಮಾದರಿಯ ಕಾರುಗಳ ವಿತರಣೆಯನ್ನು ಪಡೆಯಲು ಮೂರು ತಿಂಗಳು ಕಾಯಬೇಕಾಗುತ್ತದೆ.

ಕಾಯುವ ಅವಧಿಯನ್ನು ಕಡಿಮೆಗೊಳಿಸುವ ಕಾರಣಕ್ಕೆ ಕಿಯಾ ಮೋಟಾರ್ಸ್ ಕಂಪನಿಯು ಅನಂತಪುರದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಎರಡನೇ ಶಿಫ್ಟ್ ಅನ್ನು ಪ್ರಾರಂಭಿಸಿದೆ. ಈ ಮೊದಲು ಈ ಘಟಕದಲ್ಲಿ ಪ್ರತಿ ತಿಂಗಳಿಗೆ ಸುಮಾರು 6,500 ಯುನಿಟ್‌ಗಳನ್ನು ಉತ್ಪಾದಿಸಲಾಗುತ್ತಿತ್ತು. ಈಗ 13,000 ಯುನಿಟ್‌ಗಳನ್ನು ಉತ್ಪಾದಿಸಲಾಗುತ್ತಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹೆಚ್ಚು ಟಚ್ ಪಾಯಿಂಟ್‍ಗಳನ್ನು ಆರಂಭಿಸುವ ಮೂಲಕ ಕಿಯಾ ಮೋಟಾರ್ಸ್ ಚಾಣಾಕ್ಷ ನಡೆಯನ್ನು ಅನುಸರಿಸಿದೆ. ಬೇರೆ ಕಂಪನಿಗಳು ನೀಡಲಾಗದಷ್ಟು ಬೆಲೆಗೆ ಕಿಯಾ ಮೋಟಾರ್ಸ್ ಅದ್ಭುತವಾದ ವಾಹನಗಳನ್ನು ಮಾರಾಟ ಮಾಡುತ್ತದೆ. ದೇಶಾದ್ಯಂತ ತಮ್ಮ ಮಳಿಗೆಗಳನ್ನು ಹೆಚ್ಚಿಸಿಕೊಳ್ಳುವುದರಿಂದ ಇನ್ನೂ ಹೆಚ್ಚಿನ ಗ್ರಾಹಕರನ್ನು ತಲುಪಬಹುದಾಗಿದೆ.