ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ತನ್ನ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಸೆಪ್ಟೆಂಬರ್‌ ಆರಂಭದಲ್ಲಿ ಬಿಡುಗಡೆಯಾಗಲಿರುವ ಮೊದಲ ಕಾರಿನ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಹಂಚಿಕೊಂಡಿರುವುದಲ್ಲದೇ ಉತ್ಪಾದನಾ ಆವೃತ್ತಿಯನ್ನು ಸಹ ಬಹಿರಂಗಪಡಿಸಿತ್ತು. ಇದೀಗ ಮತ್ತೊಮ್ಮೆ ಹೊಸ ಕಾರಿನ ಡಿಸೈನ್‌ಗಳ ಕುರಿತಾಗಿ ಅಧಿಕೃತ ಕಾರಿನ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಜೂನ್ 20ರಂದು ಹೊಸ ಕಾರನ್ನು ಅನಾವರಣಗೊಳಿಸಲು ಸಿದ್ದತೆ ನಡೆಸಿದೆ.

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಭಾರತದಲ್ಲಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ಎಸ್‌ಪಿ2ಐ ಕಾನ್ಸೆಪ್ಟ್ ಎನ್ನುವ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಈಗಾಗಲೇ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್‌ಗಳನ್ನು ನಡೆಸಲಾಗಿದ್ದು, ಜೂನ್ 20ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಕಾರಿನ ಅಧಿಕೃತ ಹೆಸರು ಬಹಿರಂಗವಾಗಲಿದೆ.

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ಎಸ್‌ಪಿ2ಐ ಕಾರು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ತವಕದಲ್ಲಿದ್ದು, ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆ ವೇಳೆ ಅತ್ಯುತ್ತಮ ಎಂಜಿನ್ ಪರ್ಫಾಮೆನ್ಸ್ ಪ್ರದರ್ಶಿಸುತ್ತಿದೆ.

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಇದೀಗ ಬಿಡುಗಡೆ ಮಾಡಲಾಗಿರುವ ರೇಖಾಚಿತ್ರಗಳ ಪ್ರಕಾರ ಹೊಸ ಕಾರಿನ ಮುಂಭಾಗದಲ್ಲಿ ಎಲ್ಇಡಿ ಇಂಡೀಕೇಟರ್‌ಗಳು, ಫ್ರಂಟ್ ಫಾಸಿಯಾ, ಗ್ರಿಲ್ ನ ಬಳಿ ಟೈಗರ್ ಚಿಹ್ನೆ, ಎರಡೂ ಬದಿಯಲ್ಲೂ ಎಲ್ಇಡಿ ಹೆಡ್ ಲ್ಯಾಂಪ್‍ ಕ್ಲಸ್ಟರ್, ರೂಪ್ ರೈಲ್ಸ್ ಇರುವುದು ಸ್ಪಷ್ಟವಾಗಿದೆ.

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಹಾಗೆಯೇ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿರು ಹೊಸ ಕಾರಿ ಮುಂಭಾಗದಲ್ಲಿರುವ ಗ್ರಿಲ್ ನ ಕೆಳಗೆ ದೊಡ್ಡ ಏರ್ ಡ್ಯಾಮ್ ಇದ್ದು, ಮುಂಭಾಗದಲ್ಲಿರುವ ಬಂಪರ್ ನ ಬಳಿ ಸಮವಾಗಿರುವ ಫಾಗ್ ಲ್ಯಾಂಪ್ ಗಳಿವೆ. ಜೊತೆಗೆ ಹಿಂಭಾಗದಲ್ಲೂ ಎಲ್ಇಡಿ ಟೈಲ್ ಲೈಟ್‍ಗಳನ್ನು ಅಳವಡಿಸಲಾಗಿದ್ದು, ಸ್ಪೋರ್ಟಿ ಮಾದರಿಯ ಟ್ವಿನ್ ಎಕ್ಸಾಸ್ಟ್, ರಿಯರ್ ಬಂಪರ್ ಜೋಡಿಸಲಾಗಿದೆ.

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಆದ್ರೆ ಹೊಸ ಕಾರಿನ ಒಳಭಾಗದ ಬಗೆಗೆ ಯಾವುದೇ ಮಾಹಿತಿ ನೀಡಿಲ್ಲವಾದರೂ, ಹೊಸ ಕಾರಿನಲ್ಲಿ ಲಾರ್ಜ್ ಟಚ್‍ಸ್ಕ್ರೀನ್ ಇನ್ಫೊಟೇನ್ಮೆಂಟ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಳು ಇವೆ ಎನ್ನಲಾಗಿದ್ದು, ಜೂನ್ 20ರಂದು ಹೊಸ ಕಾರಿನ ಬಗೆಗೆ ಮತ್ತಷ್ಟು ಮಾಹಿತಿಗಳು ಬಹಿರಂಗವಾಗಲಿವೆ.

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಇನ್ನು ಕಿಯಾ ಹೊಸ ಎಸ್‍ಯುವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಮಾದರಿಗಳಲ್ಲೂ ಬರುವ ಸಾಧ್ಯತೆಗಳಿದ್ದು, ಪವರ್ ಹಾಗೂ ಟಾರ್ಕ್ ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗೆಯೇ ಎರಡೂ ಎಂಜಿನ್ ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿವೆ ಎನ್ನಲಾಗಿದೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಎಂಜಿನ್ ಸಾಮರ್ಥ್ಯ

ಎಸ್‌ಪಿ2ಐ ಕಾನ್ಸೆಪ್ಟ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಸಾಮಾನ್ಯ ಮಾದರಿಯ ಎಂಜಿನ್ ಮಾತ್ರವಲ್ಲದೇ ಸ್ಪೋರ್ಟಿ ವರ್ಷನ್‌ನಲ್ಲೂ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಕಿಯಾ ಸಂಸ್ಥೆಯು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿತ್ತು. ಹೀಗಾಗಿ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ ಹೊಸ ಕಾರು ಸಾಮಾನ್ಯ ಮಾದರಿಯ ಎಂಜಿನ್ ಜೊತೆ ಸ್ಪೋರ್ಟಿ ವರ್ಷನ್ ಅನ್ನು ಕೂಡಾ ಹೊಂದಿದೆ.

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಸಾಮಾನ್ಯ ಮಾದರಿಯಲ್ಲಿ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಪರ್ಫಾಮೆನ್ಸ್ ಪ್ರಿಯರಿಗಾಗಿ 7-ಸ್ಪೀಡ್ ಡಿಟಿಸಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 1.4-ಲೀಟರ್ ಟರ್ಬೋಚಾಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಸಹ ಅಭಿವೃದ್ಧಿಗೊಳಿಸಲಾಗಿದೆಯೆಂತೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಹೀಗಿರಲಿದೆ..!

ಈ ಮೂಲಕ ಎಸ್‌ಯುವಿ ಮಾದರಿಗಳನ್ನು ಇಷ್ಟಪಡುವ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲು ಯತ್ನಿಸಿರುವ ಕಿಯಾ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.30 ಲಕ್ಷದಿಂದ ಹೈ ಎಂಡ್ ಮಾದರಿಗೆ ರೂ.15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Kia Motors Reveals Official Sketches Of Their Upcoming Sp2i SUV For India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more