ಕೇವಲ 20 ದಿನದಲ್ಲಿ 23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್

ಕಿಯಾ ಸೆಲ್ಟೊಸ್ ಪ್ರಸ್ಥುತ ಎಂಜಿ ಹೆಕ್ಟರ್‍‍‍ನ ನಂತರ ಹೆಚ್ಚು ಜನಪ್ರೀಯತೆ ಪಡೆಯುತ್ತಿರುವ ಎಸ್‍ಯುವಿ ಕಾರಾಗಿದ್ದು, ಎಂಜಿ ಹೆಕ್ಟರ್ 20 ದಿನಗಳಲ್ಲಿ 21 ಸಾವಿರ ಬುಕ್ಕಿಂಗ್ ಪಡೆದಿದ್ದರೆ ಕಿಯಾ ಸೆಲ್ಟೋಸ್ ಸಮರು 23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದಿದೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಕಿಯಾ ಸೆಲ್ಟೊಸ್ ಕಾರು ಇದೇ ತಿಂಗಳ 22ರಂದು ಬಿಡುಗಡೆಯಾಗಲಿದ್ದು, ಈ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಗೊಂಡ ಮೊದಲ ದಿನದಲ್ಲೆ ಸುಮಾರು 6,000 ಬುಕ್ಕಿಂಗ್ ಪಡೆದಿತ್ತು. ಜುಲೈ 26ರಂದು ಕಿಯಾ ಸೆಲ್ಟೊಸ್ ಕಾರಿನ ಬುಕ್ಕಿಂಗ್ ಪ್ರಾರಂಭಗೊಂಡಿದ್ದು, ದೇಶಿಯ ಮಾರಕಟ್ಟೆಯಲ್ಲಿ ಬಹು ನಿರೀಕ್ಷಿತ ಕಾರಾಗಿರುವ ಸೆಲ್ಟೊಸ್ ಕೇವಲ 20 ದಿನದಲ್ಲಿ 23,000 ಬುಕ್ಕಿಂಗ್ ಪಡೆದಿರುವುದು ಅಚ್ಚರಿಯ ವಿಷಯ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಕಿಯಾ ಸೆಲ್ಟೊಸ್ ಕಾರು ಬಿಡುಗಡೆಗಾಗಿ ಇನ್ನು ಕೇವಲ 14 ದಿನಗಳು ಮಾತ್ರ ಉಳಿದಿದ್ದು, ಈ ನಡುವಿನ ಗಡುವಲ್ಲಿ ಸುಮಾರು 35,000 ಬುಕ್ಕಿಂಗ್ ಪಡೆಯುವ ಸಾಧ್ಯತೆಗಳಿವೆ. ಕಿಯಾ ಸೆಲ್ಟೊಸ್ ಎಸ್‍ಯುವಿ ಕಾರಿನ ಖರೀದಿಗಾಗಿ ಆಸಕ್ತ ಗ್ರಾಹಕರು ನಿಮ್ಮ ಹತ್ತಿರದಲ್ಲಿರುವ ಕಿಯಾ ಡೀಲರ್‍‍ನ ಬಳಿ ಅಥವಾ ಕಿಯಾ ಮೋಟಾರ್‍‍ನ ಅಧಿಕೃತ ವೆಬ್‍‍ಸೈಟ್‍‍ನಲ್ಲಿ ರೂ. 25,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಸುಮಾರು 28 ಸಾವಿರ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಕಾರಿನ ಕಾಯುವಿಕೆಯ ಅವಧಿಯು ಕೆಲ ರಾಜ್ಯದಲ್ಲಿ 6 ರಿಂದ 8 ತಿಂಗಳವರೆಗು ಮುಂದೂಡಲಾಗಿದ್ದು, ಇನ್ನು 23 ಸಾವಿರ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ ಕಾರಿನ ಕಾಯುವಿಕೆಯ ಅವಧಿ ಎಷ್ಟು ದಿನಗಳ ಕಾಲ ಮುಂದೂಡಲಾಗುತ್ತದೆ ಎಂದು ಕಾಯ್ದು ನೋಡಬೇಕಿದೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಕಿಯಾ ಸೆಲ್ಟೊಸ್ ಕಾರು ಟೆಕ್-ಲೈನ್ ಮತ್ತು ಜಿಟಿ-ಲೈನ್ ಎನ್ನುವ ಪ್ರಮುಖ ಎರಡು ಮಾದರಿಯಲ್ಲಿ ಮಾರಾಟವಾಗಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಎರಡೂ ಎಂಜಿನ್‌ ಮಾದರಿಗಳಲ್ಲೂ ಖರೀದಿ ಲಭ್ಯವಾಗಲಿದೆ. ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ 5 ವೇರಿಯೆಂಟ್ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 3 ವೇರಿಯೆಂ‍ಟ್‍ಗಳನ್ನು ಹೊಂದಿದ್ದು, ಪೆಟ್ರೋಲ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್ ವೇರಿಯೆಂಟ್ ಖರೀದಿಗೆ ಲಭ್ಯವಿದ್ದಲ್ಲಿ ಡೀಸೆಲ್‌ನಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೇರಿಯೆಂಟ್ಗಳನ್ನು ಖರೀದಿಸಬಹುದಾಗಿದೆಯೆಂತೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಪ್ರೀಮಿಯಂ ವಿಭಾಗದಲ್ಲಿ ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ವರ್ಷನ್ ಕೂಡಾ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಸಾಮಾನ್ಯ ಕಾರುಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದ್ದರೆ ಟರ್ಬೋ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಸ್ಮಾರ್ಟ್ ಸ್ಟ್ರೀಮ್ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಸೆಲ್ಟೊಸ್ ಕಾರಿನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಇದರೊಂದಿಗೆ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಮತ್ತು ಡ್ಯುಯಲ್ ಸನ್‌ರೂಫ್ ಕೂಡಾ ಹೊಸ ಕಾರಿನ ಖದರ್ ಹೆಚ್ಚಿಸಿದೆ. ಹೈ ಎಂಡ್ ವೇರಿಯೆಂಟ್ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಪ್ಯಾಕೇಜ್ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಸುರಕ್ಷಾ ಸೌಲಭ್ಯಗಳು

ಅತ್ಯುತ್ತಮ ಸ್ಟೀಲ್ ಪಡೆದುಕೊಂಡಿರುವ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಕಾರಿನ ಉದ್ದಳತೆ

ಕ್ರೆಟಾ ಕಾರಿಗಿಂತಲೂ 45-ಎಂಎಂ ಹೆಚ್ಚುವರಿ ಉದ್ದ ಪಡೆದಿರುವ ಸೆಲ್ಟೊಸ್ ಕಾರು 4,315-ಎಂಎಂ ಉದ್ದ, 1,800-ಎಂಎಂ ಅಗಲ, 2,610-ಎಂಎಂ ವೀಲ್ಹ್‌ಬೆಸ್, 1,620-ಎಂಎಂ ಎತ್ತರ ಮತ್ತು 190-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಬೂಟ್ ಸ್ಪೆಸ್ ಸಾಮರ್ಥ್ಯವು ಕೂಡಾ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಖರೀದಿಗೆ ಲಭ್ಯವಾಗುವ ಬಣ್ಣಗಳು

ಸೆಲ್ಟೊಸ್ ಕಾರು ರೆಡ್, ಆರೇಂಜ್, ಗ್ಲ್ಯಾಸೆರ್ ವೈಟ್, ಕ್ಲಿಯರ್ ವೈಟ್, ಗ್ರೇ, ಸಿಲ್ವರ್, ಬ್ಲ್ಯೂ ಮತ್ತು ಬ್ಲ್ಯಾಕ್ ಸಿಂಗಲ್ ಟೋನ್ ಬಣ್ಣಗಳ ಜೊತೆಗೆ ರೆಡ್/ಬ್ಲ್ಯಾಕ್, ಗ್ಲ್ಯಾಸೆರ್ ವೈಟ್/ಬ್ಲ್ಯಾಕ್, ಗ್ಲ್ಯಾಸೆರ್ ವೈಟ್/ ಆರೇಂಜ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಒಟ್ಟಿನಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ಮಾದರಿಯಾಗಲಿರುವ ಕಿಯಾ ಸೆಲ್ಟೊಸ್ ಕಾರು ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಗೂ ಈ ಕಾರು ಉತ್ತಮ ಪೈಪೋಟಿಯಾಗುವ ನೀರಿಕ್ಷೆಯಲ್ಲಿದೆ.

23 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದ ಕಿಯಾ ಸೆಲ್ಟೊಸ್ - ಎಂಜಿ ಹೆಕ್ಟರ್‍ ಎದುರಾಳಿ

ಕಾರಿನ ಬೆಲೆಗಳು(ಅಂದಾಜು)

ಹೊಸ ಕಾರಿನಲ್ಲಿ ಒದಗಿಸಲಾಗಿರುವ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಸೆಲ್ಟೊಸ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.14.99 ಲಕ್ಷಕ್ಕೆ ಖರೀದಿಗೆ ಲಭ್ಯವಾಗಲಿವೆ ಎನ್ನಲಾಗಿದ್ದು, ಮಧ್ಯಮ ಕ್ರಮಾಂಕರ ಎಸ್‌ಯುವಿಯಲ್ಲಿ ಅತ್ಯುತ್ತಮ ಕಾರು ಮಾದರಿಯಾಗಿ ಸದ್ದು ಮಾಡಲಿದೆ.

More from DriveSpark

Article Published On: Thursday, August 8, 2019, 14:43 [IST]
English summary
Kia Seltos Receives Over 23,000 Bookings Within 20 Days: Launch Scheduled For 22nd Of August. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+