ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಕೊರಿಯಾದ ಆಟೋ ದೈತ್ಯ ಕಿಯಾ ಮೋಟಾರ್ಸ್ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಸೆಲ್ಟೋಸ್ ಅನ್ನು ಬಿಡುಗಡೆಗೊಳಿಸಿತ್ತು. ಈ ಎಸ್‍‍ಯುವಿ ಇದೀಗ ಹೊಸ ದಾಖಲೆಯನ್ನು ನಿರ್ಮಿಸಿದೆ. 9.69 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಹೊಂದಿರುವ ಈ ಎಸ್‍‍ಯು‍ವಿ ಕೇವಲ ಎರಡು ತಿಂಗಳಲ್ಲಿ 50,000 ಯು‍ನಿ‍ಟ್‍ ಬುಕ್ಕಿಂಗ್ ದಾಖಲಿಸುವ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸಿದೆ.

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಸೆಲ್ಟೋಸ್ ಬಿಡುಗಡೆಯಾಗುವ ಮೊದಲೇ 32,000 ಬುಕ್ಕಿಂಗ್ ದಾಖಲಾಗಿತ್ತು. ಈ ಎಸ್‍‍ಯು‍ವಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಎಸ್‍‍ಯು‍ವಿ ಮೂರು ಬಿಎಸ್-6 ಪ್ರೇರಿತ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಎಸ್‍‍ಯು‍ವಿನಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ.

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಎಸ್‍‍ಯು‍ವಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಮತ್ತು 350 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಎಲ್ಲಾ ಎಂಜಿನ್‍ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 3 ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆ-1.5 ಲೀಟರ್ ಪೆಟ್ರೋಲ್ ಸಿವಿ‍ಟಿ. 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊಗೆ 7 ಸ್ಪೀಡ್ ಡಿಸಿಟಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಸೆಲ್ಟೋಸ್ ಟಾಪ್ ಸ್ಪೀಡ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ಎಸ್‍‍ಯು‍ವಿನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಸೆಲ್ಟೋಸ್‍‍ನ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಅನ್ನು ಅಳವಡಿಸಲಾಗಿದೆ.

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಈ ಎಸ್‍‍ಯು‍ವಿನಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಅನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಕಿಯಾ ಮೋಟಾರ್ಸ್ ಬೇಡಿಕೆ ಹೆಚ್ಚಾಗಿರುವುದರಿಂದ ಎರಡನೇ ಹಂತದ ಉತ್ಪಾದನೆಯಲ್ಲಿ ತೊಡಗಿರುವುದಾಗಿ ಕಂಪನಿ ತಿಳಿಸಿದೆ. ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಪ್ತು ಮಾಡಲು ನಿರ್ಧರಿಸಿದೆ. ಆದರೆ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗಳನ್ನು ಪೂರೈಸಿದ ನಂತರವೇ ರಪ್ತು ಮಾಡಲಾಗುವುದು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬುಕ್ಕಿಂಗ್‍‍ನಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಆಟೋಮೊಬೈಲ್ ಕ್ಷೇತ್ರ ಕುಸಿತ ಕಂಡಿರುವ ವೇಳೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ 50,000 ಬುಕ್ಕಿಂಗ್ ದಾಖಲಿಸುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.

More from DriveSpark

Article Published On: Thursday, October 10, 2019, 17:30 [IST]
English summary
Kia Seltos Bookings Crosses 50,000 Units Since Launch: Waiting Period Between Three & Six Weeks - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+