Just In
- 1 hr ago Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- 14 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 16 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 17 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
Don't Miss!
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಯಾ ಸೆಲ್ಟೊಸ್ ಜಿಟಿ ಲೈನ್ನಲ್ಲೂ ಡೀಸೆಲ್ ಆವೃತ್ತಿ ಬಿಡುಗಡೆ ಪಕ್ಕಾ..!
ಕಿಯಾ ಸಂಸ್ಥೆಯು ಇದೇ ತಿಂಗಳು 22ಕ್ಕೆ ತನ್ನ ಮೊದಲ ಕಾರು ಆವೃತ್ತಿಯಾದ ಸೆಲ್ಟೊಸ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಮಾಹಿತಿಗಳ ಪ್ರಕಾರ ಸೆಲ್ಟೊಸ್ ಜಿಟಿ ಲೈನ್ ವೆರಿಯೆಂಟ್ನಲ್ಲೂ ಡೀಸೆಲ್ ಆವೃತ್ತಿಯನ್ನು ಬಿಡುಗಡೆ ಮಾಡುವ ಕುರಿತು ಮಾಹಿತಿ ಲಭ್ಯವಾಗಿದೆ.
ಸೆಲ್ಟೊಸ್ ಕಾರು ಸದ್ಯಕ್ಕೆ ಟೆಕ್ ಲೈನ್ ಮತ್ತು ಜಿಟಿ ಲೈನ್ ಎನ್ನುವ ಎರಡು ಮಾದರಿಯಲ್ಲಿ ಬಿಡುಗಡೆಯಾಗುತ್ತಿದ್ದು, ಟೆಕ್ ಲೈನ್ ಮಾದರಿಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದರೆ ಜಿಟಿ ಲೈನ್ ಮಾದರಿಯಲ್ಲಿ ಪೆಟ್ರೋಲ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜಿಟಿ ಲೈನ್ ಮಾದರಿಯಲ್ಲೂ 1.5-ಲೀಟರ್ ಡೀಸೆಲ್ ಆಯ್ಕೆಯನ್ನು ನೀಡುವ ಬಗ್ಗೆ ಕಿಯಾ ಸಂಸ್ಥೆಯು ಸುಳಿವು ನೀಡಿದ್ದು, ಸದ್ಯ ಪೆಟ್ರೋಲ್ ಮಾದರಿಯನ್ನು ಮಾತ್ರವೇ ಬಿಡುಗಡೆಗೊಳಿಸುತ್ತಿದೆ.
ಟೆಕ್ ಲೈನ್ ವೆರಿಯೆಂಟ್ ಸಾಮಾನ್ಯ ಮಾದರಿಯ ಕಾರು ಮಾದರಿಯಾಗಿದ್ದರೆ ಜಿಟಿ ಲೈನ್ ವೆರಿಯೆಂಟ್ ಕಾರು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ಹೊಂದಿರಲಿದೆ.
ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್ನಲ್ಲಿ 5 ವೆರಿಯೆಂಟ್ಗಳನ್ನು ಮತ್ತು ಪೆಟ್ರೋಲ್ ಎಂಜಿನ್ನಲ್ಲಿ 3 ವೆರಿಯೆಂಟ್ಗಳನ್ನು ಹೊಂದಿದ್ದು, ಪೆಟ್ರೋಲ್ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದ್ದಲ್ಲಿ ಡೀಸೆಲ್ನಲ್ಲಿ ಹೆಚ್ಟಿಇ, ಹೆಚ್ಟಿಕೆ, ಹೆಚ್ಟಿಕೆ ಪ್ಲಸ್, ಹೆಚ್ಟಿಎಕ್ಸ್ ಮತ್ತು ಹೆಚ್ಟಿಎಕ್ಸ್ ಪ್ಲಸ್ ವೆರಿಯೆಂಟ್ಗಳನ್ನು ಖರೀದಿಸಬಹುದಾಗಿದೆ.
ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಸಿಆರ್ಡಿಐ ಡೀಸೆಲ್ ಎಂಜಿನ್ ಹೊಂದಿರುವ ಸೆಲ್ಟೊಸ್ ಕಾರು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ವರ್ಷನ್ ಕೂಡಾ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಸಾಮಾನ್ಯ ಕಾರುಗಳು 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳನ್ನು ಹೊಂದಿದ್ದರೆ ಟರ್ಬೋ ಎಂಜಿನ್ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಜೊತೆಗೆ ಸ್ಮಾರ್ಟ್ ಸ್ಟ್ರೀಮ್ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಇನ್ನು ಸೆಲ್ಟೊಸ್ ಕಾರಿನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದ್ದು, ಮಧ್ಯಮ ಗಾತ್ರದ ಎಸ್ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ.
ಹಾಗೆಯೇ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?
ಇದರೊಂದಿಗೆ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್, ಡ್ಯುಯಲ್ ಸನ್ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.
MOST READ: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗುತ್ತಾ ಕಿಯಾ ಕಾರ್ನಿವಾಲ್?
ಹೈ ಎಂಡ್ ವೆರಿಯೆಂಟ್ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್ ಪ್ಯಾಕೇಜ್ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದೆ.
MOST READ: ಪ್ಲಾಸ್ಟಿಕ್ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?
ಸುರಕ್ಷಾ ಸೌಲಭ್ಯಗಳು
ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್ಬ್ಯಾಗ್ಗಳು, ಎಬಿಎಸ್ ಜೊತೆ ಇಎಸ್ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.
ಕಾರಿನ ಉದ್ದಳತೆ
ಕ್ರೆಟಾ ಕಾರಿಗಿಂತಲೂ 45-ಎಂಎಂ ಹೆಚ್ಚುವರಿ ಉದ್ದ ಪಡೆದಿರುವ ಸೆಲ್ಟೊಸ್ ಕಾರು 4,315-ಎಂಎಂ ಉದ್ದ, 1,800-ಎಂಎಂ ಅಗಲ, 2,610-ಎಂಎಂ ವೀಲ್ಹ್ಬೆಸ್, 1,620-ಎಂಎಂ ಎತ್ತರ ಮತ್ತು 190-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಬೂಟ್ ಸ್ಪೆಸ್ ಸಾಮರ್ಥ್ಯವು ಕೂಡಾ ಎಸ್ಯುವಿ ಪ್ರಿಯರನ್ನು ಸೆಳೆಯಲಿದೆ.
ಖರೀದಿಗೆ ಲಭ್ಯವಾಗುವ ಬಣ್ಣಗಳು
ಸೆಲ್ಟೊಸ್ ಕಾರು ರೆಡ್, ಆರೇಂಜ್, ಗ್ಲ್ಯಾಸೆರ್ ವೈಟ್, ಕ್ಲಿಯರ್ ವೈಟ್, ಗ್ರೇ, ಸಿಲ್ವರ್, ಬ್ಲ್ಯೂ ಮತ್ತು ಬ್ಲ್ಯಾಕ್ ಸಿಂಗಲ್ ಟೋನ್ ಬಣ್ಣಗಳ ಜೊತೆಗೆ ರೆಡ್/ಬ್ಲ್ಯಾಕ್, ಗ್ಲ್ಯಾಸೆರ್ ವೈಟ್/ಬ್ಲ್ಯಾಕ್, ಗ್ಲ್ಯಾಸೆರ್ ವೈಟ್/ ಆರೇಂಜ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಒಟ್ಟಿನಲ್ಲಿ ಕಂಪ್ಯಾಕ್ಟ್ ಎಸ್ಯುವಿ ಮಾದರಿಗಳಲ್ಲಿ ಅತ್ಯುತ್ತಮ ಮಾದರಿಯಾಗಲಿರುವ ಕಿಯಾ ಸೆಲ್ಟೊಸ್ ಕಾರು ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್ಯುವಿ500, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಎಸ್ಯುವಿ ಮಾದರಿಗೂ ಈ ಕಾರು ಉತ್ತಮ ಪೈಪೋಟಿಯಾಗುವ ನೀರಿಕ್ಷೆಯಲ್ಲಿದೆ.
ಕಾರಿನ ಬೆಲೆಗಳು(ಅಂದಾಜು)
ಹೊಸ ಕಾರಿನಲ್ಲಿ ಒದಗಿಸಲಾಗಿರುವ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಸೆಲ್ಟೊಸ್ ಕಾರಿನ ಬೆಲೆಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 9.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.14.99 ಲಕ್ಷಕ್ಕೆ ಖರೀದಿಗೆ ಲಭ್ಯವಾಗಲಿವೆ ಎನ್ನಲಾಗಿದ್ದು, ಮಧ್ಯಮ ಕ್ರಮಾಂಕರ ಎಸ್ಯುವಿಯಲ್ಲಿ ಅತ್ಯುತ್ತಮ ಕಾರು ಮಾದರಿಯಾಗಿ ಸದ್ದು ಮಾಡಲಿದೆ.