ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಕಿಯಾ ಮೋಟಾರ್ಸ್ ಕಳೆದ ವಾರವಷ್ಟೇ ತನ್ನ ಬಹುನೀರಿಕ್ಷಿತ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಅಗಸ್ಟ್ 22ಕ್ಕೆ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ. ಹೀಗಾಗಿ ಕಾರಿನ ತಾಂತ್ರಿಕ ಸೌಲಭ್ಯಗಳನ್ನು ಮತ್ತೊಂದು ಸುತ್ತಿನ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ಕಿಯಾ ಸಂಸ್ಥೆಯು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿನೂತನ ಮಾದರಿಯ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಗುರುತರ ಬದಲಾವಣೆ ತರುವ ಉದ್ದೇಶದಿಂದಲೇ ಮಾರುಕಟ್ಟೆಯಲ್ಲಿರುವ ಇತರೆ ಪ್ರತಿಸ್ಪರ್ಧಿ ಕಾರುಗಳಿಂತಲೂ ವಿನೂತನ ಡ್ರೈವ್ ಟೆಕ್ನಾಲಜಿ ಜೊತೆಗೆ ಹಲವು ಹೊಸ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸೆಲ್ಟೊಸ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿರುವ ಕಿಯಾ ಸಂಸ್ಥೆಯು ಅತಿ ಕಡಿಮೆ ಬೆಲೆಯಲ್ಲಿ ಐಷಾರಾಮಿ ಮಾದರಿಯ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಲ್ಲಿ ಖರೀದಿ ಲಭ್ಯವಿರುವ ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ 5 ವೆರೆಯೆಂಟ್ ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 3 ವೆರಿಯೆಂಟ್ ಪಡೆದುಕೊಂಡಿರಲಿದ್ದು, ಪೆಟ್ರೋಲ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್ ಖರೀದಿಗೆ ಲಭ್ಯವಿದ್ದಲ್ಲಿ ಡೀಸೆಲ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಸಬಹುದಾಗಿದೆಯೆಂತೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಇನ್ನು ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವಿಲ್ಲ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಹಾಗೆಯೇ ಸೆಲ್ಟೊಸ್ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಮತ್ತು ಡ್ಯುಯಲ್ ಸನ್‌ರೂಫ್ ಕೂಡಾ ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಈ ಹಿಂದೆ ಸೆಲ್ಟೊಸ್ ಕಾರಿನ ಅನಾವರಣ ಕಾರ್ಯಕ್ರಮದಲ್ಲಿ ಕಾರಿನ ಹೊರಭಾಗದ ತಾಂತ್ರಿಕ ಸೌಲಭ್ಯಗಳ ಕುರಿತಾಗಿ ಮಾತ್ರವೇ ಮಾಹಿತಿ ಹಂಚಿಕೊಂಡಿದ್ದ ಕಿಯಾ ಇಂಟಿರಿಯರ್ ಮಾಹಿತಿ ಕುರಿತಾಗಿ ಗೌಪ್ಯತೆ ಕಾಯ್ದುಕೊಂಡಿತ್ತು. ಆದರೆ ರೋಡ್ ಟೆಸ್ಟಿಂಗ್ ವೇಳೆ ಸೆಲ್ಟೊಸ್ ಕಾರಿನ ಇಂಟಿರಿಯರ್ ಡಿಸೈನ್ ಮತ್ತು ಚಾಲನಾ ತಂತ್ರಜ್ಞಾನ ಮಾಹಿತಿ ಕುರಿತಾದ ಚಿತ್ರಗಳು ಸೋರಿಕೆಯಾಗಿದ್ದು, ಮಾಹಿತಿಗಳ ಪ್ರಕಾರ, ಕಾರಿನಲ್ಲಿ 10.25-ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, 360 ಡಿಗ್ರಿ ವ್ಯೂ ಮಾನಿಟರ್, ಹೆಡ್ ಅಪ್ ಡಿಸ್‌ಪ್ಲೇ, ಸನ್‌ರೂಫ್ ಮತ್ತು 8-ಸ್ಪಿಕರ್ಸ್ ಬಾಷ್ ಸೌಂಡ್ ಸಿಸ್ಟಂ ಹೊಂದಿರಲಿದೆಯೆಂತೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಇದರ ಜೊತೆಗೆ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ನಲ್ಲಿ ಬ್ಲ್ಯೂ ಲಿಂಕ್ ಪ್ಯಾಕೇಜ್ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಕಾರಿನ ಉದ್ದಳತೆ

ಕ್ರೆಟಾ ಕಾರಿಗಿಂತ 45-ಎಂಎಂ ಹೆಚ್ಚು ಉದ್ದವಾಗಿರುವ ಸೆಲ್ಟೊಸ್ ಕಾರು 4,315-ಎಂಎಂ ಉದ್ದ, 1,800-ಎಂಎಂ ಅಗಲ, 2,610-ಎಂಎಂ ವೀಲ್ಹ್‌ಬೆಸ್, 1,620-ಎಂಎಂ ಮತ್ತು 190-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಬೂಟ್ ಸ್ಪೆಸ್ ಸಾಮರ್ಥ್ಯವು ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಎಂಜಿನ್ ಸಾಮರ್ಥ್ಯ

ಸೆಲ್ಟೊಸ್ ಕಾರು ಬಿಎಸ್-6 ಪ್ರೇರಿತ 1.5-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಇದರೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆ ಸಹ ಒದಗಿಸಲಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಇದರಲ್ಲಿ ಸಾಮಾನ್ಯ ಕಾರುಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಗಳನ್ನು ಹೊಂದಿದ್ದರೆ ಟರ್ಬೋ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಇಲ್ಲವೇ 6-ಸ್ಟೆಪ್ ಟಾರ್ಕ್ ಕನರ್ವಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿವೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಸುರಕ್ಷಾ ಸೌಲಭ್ಯಗಳು

ಶೇ.73ರಷ್ಟು ಅತ್ಯುತ್ತಮ ಸ್ಟೀಲ್ ಪಡೆದುಕೊಂಡಿರುವ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಕಾರಿನ ಬೆಲೆಗಳು(ಅಂದಾಜು)

ಆಕರ್ಷಕ ಬೆಲೆಗಳಲ್ಲಿ ಸೆಲ್ಟೊಸ್ ಬಿಡುಗಡೆಯ ಸುಳಿವು ನೀಡಿರುವ ಕಿಯಾ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 16 ಲಕ್ಷ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೂ ಮುನ್ನ ಕಿಯಾ ಸೆಲ್ಟೊಸ್ ಕಾರಿನ ತಾಂತ್ರಿಕ ಮಾಹಿತಿ ಸೋರಿಕೆ

ಇನ್ನು ಕಿಯಾ ಸಂಸ್ಥೆಯು ಸೆಲ್ಟೊಸ್ ಬಿಡುಗಡೆಯ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರು ಆವೃತ್ತಿಗಳನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಲಿದ್ದು, ಇದರಲ್ಲಿ 2 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ.

Source: Car News By Rishabh Arora/YouTube

Article Published On: Friday, July 5, 2019, 8:45 [IST]
English summary
Kia Seltos Variants Leaked Ahead Of Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+