ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ವಿಶ್ವದ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, 2019ರ ಅಗಸ್ಟ್ ಹೊತ್ತಿಗೆ ತನ್ನ ಮೊದಲ ಕಾರು ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಭಾರತದಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ತನ್ನ ಹೊಸ ಕಾರಿನ ಬಗ್ಗೆ ಈಗಾಗಲೇ ಮಾಹಿತಿ ಹೊರಹಾಕಿರುವ ಕಿಯಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಪ್ರವೇಶಿಸುವ ತವಕದಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಸ್‌ಪಿ ಕಾನ್ಸೆಪ್ಟ್ ಕಾರಿನಲ್ಲಿ ಸ್ಪೋರ್ಟಿ ವರ್ಷನ್‌ ಅನ್ನು ಸಹ ಬಿಡುಗಡೆ ಮಾಡಲಿದೆಯೆಂತೆ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಕಿಯಾ ಸಂಸ್ಥೆಯು ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದರಲ್ಲಿ ಮೊದಲಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದೇ ಕ್ರೆಟಾ ಮತ್ತು ಬ್ರೆಝಾ ಕಾರಿನ ಪ್ರತಿಸ್ಪರ್ಧಿಯಾದ ಎಸ್‌ಪಿ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್‌ಯುವಿ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

2018ರ ದೆಹಲಿ ಆಟೋ ಮೇಳದಲ್ಲೂ ಸಹ ತನ್ನ ಬಹುನೀರಿಕ್ಷಿತ ಹೊಸ ಕಾರುಗಳನ್ನು ಪ್ರದರ್ಶನ ಮಾಡಿ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಕಿಯಾ ಸಂಸ್ಥೆಯು ಕೈಗೆಟುಕುವ ಬೆಲೆಗಳಲ್ಲಿ ಮಧ್ಯಮ ಗಾತ್ರದ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿತ್ತು.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಅದರಂತೆಯೇ ಇದೀಗ ಎಸ್‌ಪಿ ಕಾನ್ಸೆಪ್ಟ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಸಾಮಾನ್ಯ ಮಾದರಿಯ ಎಂಜಿನ್ ಮಾತ್ರವಲ್ಲದೇ ಸ್ಪೋರ್ಟಿ ವರ್ಷನ್‌ನಲ್ಲೂ ಹೊಸ ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆ ಮಾಡುವುದಾಗಿ ಕಿಯಾ ಸಂಸ್ಥೆಯು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದೆ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಸಾಮಾನ್ಯ ಮಾದರಿಯಲ್ಲಿ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಹಾಗೆಯೇ ಸ್ಪೋರ್ಟಿ ವರ್ಷನ್ ಮಾದರಿಯು 1.4-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಇದು ಪರ್ಫಾಮೆನ್ಸ್ ವಿಚಾರದಲ್ಲಿ ಹೆಚ್ಚು ಬಲಿಷ್ಠತೆಯನ್ನು ಹೊಂದಿರಲಿದೆ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಜೊತೆಗೆ ಕಾರಿನ ಒಳಭಾಗದಲ್ಲಿ ಸಾಮಾನ್ಯ ಮಾದರಿಯ ಕಾರುಗಳಿಂತಲೂ ತುಸು ಸ್ಪೋರ್ಟಿ ಲುಕ್ ಹೊಂದಿರಲಿದ್ದು, ಹೆಚ್ಚುವರಿಯಾಗಿ ಆಫ್-ರೋಡ್ ಡ್ರೈವ್ ಮೊಡ್ ಸೌಲಭ್ಯಗಳು ಇದರಲ್ಲಿವೆ. ಹೀಗಾಗಿ ಸ್ಪೋರ್ಟಿ ಮಾದರಿಗಳನ್ನು ಇಷ್ಟಪಡುವ ಗ್ರಾಹಕರ ಆಯ್ಕೆಗೆ ಇದು ಸಹಕಾರಿಯಾಗಲಿದೆ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಇದರೊಂದಿಗೆ ಸಾಮಾನ್ಯ ಮಾದರಿಯ ಕಾರು ಬೆಲೆಗಿಂತಲೂ ತುಸು ದುಬಾರಿ ಎನ್ನಿಸುವ ಸ್ಪೋರ್ಟಿ ವರ್ಷನ್ ಮಾದರಿಯು ಪರ್ಫಾಮೆನ್ಸ್ ಪ್ರಿಯರು ಇಷ್ಟಪಡುವ 140-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು ಎನ್ನಲಾಗಿದ್ದು, ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ರೂ.12 ಲಕ್ಷದಿಂದ ರೂ.16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಇನ್ಮುಂದೆ ಹೊಸ ಅನುಭವದೊಂದಿಗೆ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಿ..!

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಈ ಮೂಲಕ ಭಾರತದಲ್ಲಿ ಜನಪ್ರಿಯೊಂಡಿರುವ ಕ್ರೆಟಾ, ವಿಟಾರಾ ಬ್ರೆಝಾ ಮತ್ತು ಡಸ್ಟರ್ ಎಸ್‌ಯುವಿ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ದಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ದೇಶಿಯ ಗ್ರಾಹಕರಿಗಾಗಿ ವಿವಿಧ ಕಾರುಗಳನ್ನು ಉತ್ಪಾದನೆ ಮಾಡಲು ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಇದರ ಜೊತೆಗೆ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್ ಮತ್ತು ಐಷಾರಾಮಿ ಕಾರುಗಳನ್ನು ಸಿದ್ದಗೊಳಿಸಿದ್ದು, ಇದರಲ್ಲಿ ಇನೋವಾ ಕ್ರಿಸ್ಟಾ ಕಾರುಗಳ ಪ್ರತಿಸ್ಪರ್ಧಿಯಾಗಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರಿನ ಮೇಲೆ ಭಾರೀ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಸ್ಪೋರ್ಟಿ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಿರಲಿದೆಯೆಂತೆ ಕಿಯಾ ಮೊದಲ ಕಾರು..!

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರುವ ಉದ್ದೇಶದೊಂದಿದೆ ಬೃಹತ್ ಯೋಜನೆ ಹೊತ್ತು ಬಂದಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಗಳಿಗೆ ತ್ರೀವ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ ಅಂದ್ರೆ ತಪ್ಪಾಗುವುದಿಲ್ಲ.

Article Published On: Friday, January 18, 2019, 11:36 [IST]
English summary
Kia SP SUV To Receive A New Sporty Variant — Will Feature A More Powerful Engine. Read in kannada.
Read more on ಕಿಯಾ kia motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+