Just In
Don't Miss!
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್ ಮಾಡಿದ ಹೊಸ ಕಿಯಾ ಎಸ್‍ಯುವಿ
ಕಿಯಾ ಮೋಟಾರ್ಸ್ ತನ್ನ ವಾಹನವನ್ನು ಪ್ರಥಮ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ 2019ರ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಲಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಹೊಸ ಕಿಯಾ ಎಸ್‍ಯುವಿ ಮಾದರಿಯನ್ನು ಹಲವು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಗಾಡಿವಾಡಿ ಸುದ್ದಿ ಸಂಸ್ಥೆಯು ಬಿಡುಗಡೆ ಮಾಡಿರುವ ಸ್ಪಾಟ್ ಟೆಸ್ಟ್ ಮಾಡುತ್ತಿರುವ ಚಿತ್ರದಲ್ಲಿ, ಕೊರಿಯಾದ ಕಾರು ತಯಾರಕ ಕಂಪನಿಯ ಹೊಸ ಎಸ್‍ಯುವಿ ಯನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ವಾಹನವನ್ನು ಕವರ್ ನಿಂದ ಮುಚ್ಚಿ ಸ್ಪಾಟ್ ಟೆಸ್ಟ್ ಮಾಡುತ್ತಿರುವ ಹೊಸ ಕಿಯಾ ಎಸ್‍ಯುವಿ ಯ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಚಿತ್ರದಲ್ಲಿ ತೋರಿಸಿರುವಂತೆ ಮುಂಭಾಗದಲ್ಲಿ ಎಲ್ಇಡಿ ಇಂಡೀಕೇಟರ್ ಗಳನ್ನು ಅಳವಡಿಸಲಾಗಿದೆ. ಎಸ್‍ಯುವಿಯ ಮುಂಭಾಗದಲ್ಲಿ ಫಾಸ್ಕಿಯಾ ಇದ್ದು, ಗ್ರಿಲ್ ನ ಬಳಿ ಟೈಗರ್ ಚಿಹ್ನೆ ಇದ್ದು, ಎರಡೂ ಬದಿಯಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳಿವೆ.

17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿರುವ ಗ್ರಿಲ್ ನ ಕೆಳಗೆ ದೊಡ್ಡ ಏರ್ ಡ್ಯಾಮ್ ಇದ್ದು, ಮುಂಭಾಗದಲ್ಲಿರುವ ಬಂಪರ್ ನ ಬಳಿ ಸಮವಾಗಿರುವ ಫಾಗ್ ಲ್ಯಾಂಪ್ ಗಳಿವೆ. ಹಿಂಭಾಗದಲ್ಲೂ ಎಲ್ಇಡಿ ಟೇಲ್ ಲೈಟ್ ಗಳನ್ನು ಅಳವಡಿಸಲಾಗಿದೆ.

ಈ ಕಿಯಾ ಎಸ್‍ಯುವಿಯು ರೂಫ್ ಮೌಂಟೆಡ್ ಸ್ಟಾಪ್ ಲ್ಯಾಂಪ್ , ರೂಫ್ ರೇಲ್ಸ್, ಶಾರ್ಕ್ ಫಿನ್ ಆಂಟೇನಾ, ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಗಳನ್ನು ಹೊಂದಿದೆ. ಹೊಸ ಕಿಯಾ ಎಸ್‍ಯುವಿ ಇನ್ನೂ ಹೆಚ್ಚಿನ ಗುಣಮಟ್ಟದ ಫೀಚರ್ ಗಳನ್ನು ಮತ್ತು ಕನೆಕ್ಟಿವಿಟಿ ಎಕ್ವಿಪ್ ಮೆಂಟ್ ಗಳನ್ನು ಒಳಗೊಂಡಿದೆ.

ಇವುಗಳಲ್ಲಿ ಲಾರ್ಜ್ ಟಚ್ ಸ್ಕ್ರೀನ್ ಇನ್ಫೊಟೇನ್ ಸಿಸ್ಟಂ ಮತ್ತು ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಳು ಸೇರಿವೆ. ಕಿಯಾ ಅನೇಕ ವಿಶೇಷತೆಗಳನ್ನು ತನ್ನ ಸೋದರ ಸಂಸ್ಥೆಯಾದ ಹ್ಯುಂಡೈ ಕ್ರೆಟಾ ದಿಂದ ಪಡೆದಿದೆ. ಇವುಗಳಲ್ಲಿ ಚಿಕ್ಕ ಚಿಕ್ಕ ಡಿಸೈನ್ ಗಳು, ಬಾಡಿ ಪ್ಯಾನೆಲ್ ಗಳು ಮತ್ತು ಇಂಟಿರಿಯರ್ ಗಳು ಸೇರಿವೆ. ಕಿಯಾ ಎಸ್‍ಯುವಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಬರುವ ಸಾಧ್ಯತೆಗಳಿವೆ, ಪವರ್ ಹಾಗೂ ಟಾರ್ಕ್ ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದ್ದು, ಎರಡೂ ಎಂಜಿನ್ ಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಸಾಧ್ಯತೆಗಳಿವೆ.
MUST READ: ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಕಿಯಾ ಇತ್ತೀಚಿಗೆ ಕಿಯಾ ಎಸ್‍ಪಿ ಎಸ್‍ಯುವಿ ಯ ಟ್ರಯಲ್ ಮಾದರಿಯ ಉತ್ಪಾದನೆಯನ್ನು ಮಾಡುವುದಾಗಿ ಘೋಷಿಸಿತ್ತು. ಈ ಹೊಸ ಎಸ್‍ಯುವಿ ಕಾನ್ಸೆಪ್ಟ್ ನ ಮೇಲೆ ಆಧಾರವಾಗಿದ್ದು, ಮೊದಲ ಬಾರಿಗೆ 2018ರ ಆಟೋ ಎಕ್ಸ್ ಪೋ ನಲ್ಲಿ ಅನಾವರಣಗೊಳಿಸಲಾಗಿತ್ತು. ಕಿಯಾ ಈ ಮಾದರಿಯ ಕಾರಿಗೆ ಇನ್ನೂ ಯಾವುದೇ ಹೆಸರಿಟ್ಟಿಲ್ಲ, ಆದರೆ ಟ್ರೇಲ್ ಸ್ಟರ್ ಅಥವಾ ಟಸ್ಕರ್ ಎಂಬ ಹೆಸರಿಡಬಹುದು.

ಭಾರತದಲ್ಲಿ ಕಿಯಾ ಮೋಟಾರ್ಸ್ ನ ಉತ್ಪಾದನಾ ಘಟಕವು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕಿಯಾ ಎಸ್ ಪಿ ಎಸ್‍ಯುವಿ ಕೊರಿಯಾದ ಕಾರು ತಯಾರಕ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ವಾಹನವಾಗಿದೆ. ಹ್ಯುಂಡೈ ಕಾರುಗಳು ಭಾರತದಲ್ಲಿ ಮಾಡಿದ ಮ್ಯಾಜಿಕ್ ಅನ್ನು ಕಿಯಾ ವಾಹನಗಳೂ ಮಾಡುವ ನಿರೀಕ್ಷೆಯಿದೆ. ಕಿಯಾ ಎಸ್‍ಯುವಿಯನ್ನು ಭಾರತದಲ್ಲಿ 2019ರ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈ ಕಾರು ಬಿಡುಗಡೆಯಾದ ನಂತರ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್ ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿ ನೀಡುವ ಸಾಧ್ಯತೆಗಳಿವೆ.