ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಬಿಡುಗಡೆ- ಮೊದಲ ಮಾಲೀಕರಾದ ಬೆಂಗಳೂರು ಉದ್ಯಮಿ..!
ಲಂಬೋರ್ಗಿನಿ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಅವೆಂಡೊರ್ ಆವೃತ್ತಿಯಲ್ಲಿ ಎಸ್‌ವಿಜೆ ಎನ್ನುವ ಹೊಸ ವಿನ್ಯಾಸದ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ನಮ್ಮ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರು ಬಿಡುಗಡೆ ಸಮಾರಂಭದ ಪ್ರಮುಖ ಹೈಲೆಟ್ಸ್ ಇಲ್ಲಿವೆ ನೋಡಿ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಸದ್ಯ ಆಟೋ ಉದ್ಯಮದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ಸೂಪರ್ ಕಾರುಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಅಂದ್ರೆ ದೇಶದ ಇತರೆ ನಗರಗಳಿಂತ ಹೆಚ್ಚಿನ ಮಟ್ಟದಲ್ಲಿ ಸೂಪರ್ ಕಾರುಗಳು ಬೆಂಗಳೂರಿನಲ್ಲೇ ಮಾರಾಟವಾಗುತ್ತಿರುವುದು.

ಹೌದು, ಲಂಬೋರ್ಗಿನಿ ಸರಣಿ ಕಾರುಗಳು ಸದ್ಯ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ಇದೀಗ ಮತ್ತೊಂದು ಹೊಸ ನಮೂನೆಯ ಅವೆಂಟಡೊರ್ ಎಸ್‌ವಿಜೆ ಕಾರು ಆವೃತ್ತಿಯು ಸಿಲಿಕಾನ್ ಸಿಟಿಯಲ್ಲಿ ಬಿಡುಗಡೆಯಾಗಿದೆ. ಅಷ್ಟಕ್ಕೂ ಇದನ್ನು ಖರೀದಿ ಮಾಡಿದವರು ಬೆಂಗಳೂರಿನ ಉದ್ಯಮಿ ಎನ್ನವುದು ಮತ್ತೊಂದು ಆಕರ್ಷಣೆ.

ಲಂರ್ಬೋಗಿನಿ ಸಂಸ್ಥೆಯು ಇದುವರೆಗೆ ಪರಿಚಯಿಸುವ ಹಲವು ಸೂಪರ್ ಕಾರು ಮಾದರಿಗಳಲ್ಲಿ ಅವೆಂಟಡೊರ್ ಎಸ್‌ವಿಜೆ ಕಾರು ಆವೃತ್ತಿ ಹಲವು ವಿಶೇಷತೆಗಳಿಂದ ಕೂಡಿದ್ದು, ಜಗತ್ತಿನಾದ್ಯಂತ ಮಾರಾಟಕ್ಕೆ ಲಭ್ಯವಿರುವ 63 ಅವೆಂಟಡೊರ್ ಎಸ್‌ವಿಜೆ ಕಾರುಗಳಲ್ಲಿ ಇದು ಕೂಡಾ ಒಂದು.

ಹಾಗೆಯೇ ಈ ಕಾರು ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೇ ಭಾರತದಲ್ಲಿ ಖರೀದಿಸಲಾದ ಮೊದಲ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲೂ ಮಾರಾಟವಾದ 3ನೇ ಕಾರು ಕೂಡಾ ಇದೆ ಎನ್ನುವುದು ಮತ್ತೊಂದು ವಿಶೇಷ.

ಅಂದ್ರೆ ಅವೆಂಟಡೊರ್ ಎಸ್‌ವಿಜೆ ಕಾರು ಲಿಮಿಟೆಡ್ ಎಡಿಷನ್ ಕಾರು ಮಾದರಿಯಾಗಿದ್ದು, ಇದರಲ್ಲಿ ಒದಗಿಸಲಾಗಿರುವ ದುಬಾರಿ ಬೆಲೆಯ ಮೆಟಾಲಿಕ್ ಬ್ಲೂ ಬಣ್ಣದ ಆಯ್ಕೆಯೇ ಈ ಕಾರಿನ ಮೊದಲ ಹೈಲೈಟ್ಸ್ ಎನ್ನಬಹುದು.

ಅಂದಹಾಗೆ ಈ ಕಾರುನ್ನು ಖರೀದಿ ಮಾಡಿದವರು ಉದ್ಯಮಿ ಭೂಪೇಶ್ ರೆಡ್ಡಿ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಭೂಪೇಶ್ ರೆಡ್ಡಿ ಕೇವಲ ಅವೆಂಟಡೊರ್ ಎಸ್‌ವಿಜೆ ಕಾರನ್ನೇ ಅಷ್ಟೇ ಅಲ್ಲದೇ ಹತ್ತಕ್ಕೂ ಹೆಚ್ಚು ಸೂಪರ್ ಕಾರುಗಳ ಮೊದಲ ಮಾಲೀಕರಾಗಿದ್ದಾರೆ.

ಕಳೆದ ಅಗಸ್ಟ್‌ನಲ್ಲೂ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರಿನ ಮೊದಲ ಮಾಲೀಕರಾಗಿದ್ದ ಭೂಪೇಶ್ ರೆಡ್ಡಿ ಸೂಪರ್ ಕಾರ್ ಗ್ಯಾರೇಜ್ ಕೂಡಾ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಕೆಲವೇ ಕೆಲವು ಸೂಪರ್ ಕಾರು ಗ್ಯಾರೇಜ್ ಪಟ್ಟಿಯಲ್ಲಿ ಭೂಪೇಶ್ ರೆಡ್ಡಿ ಒಡೆತನದ ಬ್ರೆನ್ ಗ್ಯಾರೇಜ್ ಕೂಡಾ ಒಂದು.

ಸದ್ಯ ಬ್ರೆನ್ ಗ್ಯಾರೇಜ್‌ಗೆ ಎಂಟ್ರಿ ನೀಡಿರುವ ಲಂಬೋರ್ಗಿನಿ ಸ್ಪೆಷಲ್ ಎಡಿಷನ್ ಅವೆಂಟಡೊರ್ ಎಸ್‌ವಿಜೆ ಕಾರು ಯುರೋಪ್ ಸೇರಿದಂತೆ ಭಾರತದಲ್ಲೂ ಬಿಡುಗಡೆಯಾಗಿದ್ದು, ಈಗಾಗಗಲೇ ಖರೀದಿಗೆ ಲಭ್ಯವಿರುವ 63 ಅವೆಂಟಡೊರ್ ಎಸ್‌ವಿಜೆ ಕಾರುಗಳನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟಗೊಂಡಿವೆ ಎನ್ನಲಾಗಿದೆ.

ಇನ್ನು ಬಿಡುಗಡೆಗೊಂಡಿರುವ ಹೊಸ ಕಾರಿನ ಬೆಲೆಗಳ ಬಗ್ಗೆ ಯಾವುದೇ ನಿಖರ ಮಾಹಿತಿಗಳಿಲ್ಲವಾದರೂ ಅವೆಂಟಡೊರ್ ವರ್ಷನ್‌ಗಳಲ್ಲಿ ಟಾಪ್ ಎಂಡ್ ಮಾದರಿಯಾಗಿರುವ ಈ ಕಾರು ಭಾರತದಲ್ಲಿ ಸುಮಾರು 8.5 ಕೋಟಿಗೂ ಅಧಿಕ ಆನ್-ರೋಡ್ ಬೆಲೆಯನ್ನು ಪಡೆದುಕೊಂಡಿರಲಿದೆ.
MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಅದರಲ್ಲೂ ಇದು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿರುವ ಕಾರು ಮಾದರಿಯಾಗಿರುವುದರಿಂದ ಕಾರಿನ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಯುರೋ 6(ಲೆವಲ್ 3) ಎಂಜಿನ್ ವೈಶಿಷ್ಟ್ಯತೆಯನ್ನು ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರುಗಳು ಪರ್ಫಾಮೆನ್ಸ್ ವಿಚಾರಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

6.5-ಲೀಟರ್(6498 ಸಿಸಿ) ವಿ12 ನ್ಯಾಚುರಲಿ ಆಸ್ಪೈರೆಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರು, 7-ಸ್ಪೀಡ್ ಐಎಸ್ಆರ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 770-ಬಿಎಚ್‌ಪಿ ಮತ್ತು 720-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.
MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ಟೂ ಸೀಟರ್ ಕೂಪೆ ವಿನ್ಯಾಸ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರಿನಲ್ಲಿ ಬೆಲೆ ತಕ್ಕಂತೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೀರಿಂಗ್ ವೀಲ್ಹ್, ಕಾರ್ಬನ್ ಪೈಬರ್ ಎಂಜಿನ್ ಬ್ಯಾನೆಟ್, ಅಲ್ಯುಮಿನಿಯಂ ಫ್ರಂಟ್ ಬ್ಯಾನೆಟ್ ಜೋಡಣೆ ಹೊಂದಿರುವ ಈ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಾಸರಿ 4 ಕಿ.ಮಿ ಮೈಲೇಜ್ ನೀಡುತ್ತೆ ಅಂದ್ರೆ ನಂಬಲೇಬೇಕು.


Click it and Unblock the Notifications








