ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಹುರಾಕನ್ ಇವೊ ಸ್ಪೈಡರ್

ಲ್ಯಾಂಬೊರ್ಗಿನಿ ಕಂಪನಿಯು ಹುರಾಕನ್ ಇವೊ ಸ್ಪೈಡರ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.1 ಕೋಟಿಗಳಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಹೊಸ ಕಾರಿನ ಬಿಡುಗಡೆಯ ಜೊತೆಗೆ ಲ್ಯಾಂಬೊರ್ಗಿನಿಯು ಮುಂಬೈನಲ್ಲಿ ಹೊಸ ಶೋರೂಂ ಒಂದನ್ನು ತೆರೆದಿದೆ. ಹುರಾಕನ್ ಇವೊ ಸ್ಪೈಡರ್ ಕಾರಿನಲ್ಲಿ ಕೂಪೆ ಕಾರಿನಲ್ಲಿರುವಂತಹ ಎಂಜಿನ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಹುರಾಕನ್ ಇವೊ ಸ್ಪೈಡರ್ ಕನ್ವರ್ಟಬಲ್ ಸಾಫ್ಟ್ ಟಾಪ್ ಹೊಂದಿರುವ ಕಾರಣಕ್ಕೆ ಸ್ಟಾಂಡರ್ಡ್ ಮಾದರಿಗಿಂತ 120 ಕೆ.ಜಿ ಹೆಚ್ಚು ತೂಕವನ್ನು ಹೊಂದಿದೆ. ರೂಫ್ ಫೊಲ್ಡಿಂಗ್ ಮೆಕಾನಿಸಂ ಹೊಂದಿರುವ ಕಾರಣಕ್ಕೆ ಅಧಿಕವಾದ ತೂಕವನ್ನು ಹೊಂದಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

50 ಕಿ.ಮೀ ವೇಗದಲ್ಲಿ ಚಲಿಸುತ್ತ ಈ ಸಾಫ್ಟ್ ಟಾಪ್ ರೂಫ್ ಅನ್ನು ಕೇವಲ 15 ಸೆಕೆಂಡುಗಳಲ್ಲಿ ಮಡಚಬಹುದಾಗಿದೆ. ಆದರೂ ಹೆಚ್ಚುವರಿ ರೂಫ್ ಕಾರಿನ ಪರ್ಫಾಮೆನ್ಸ್ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್ 0 - 100 ಕಿ.ಮೀ ವೇಗವನ್ನು ಕೇವಲ 3.1 ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಈ ವೇಗವು ಕೂಪೆ ಕಾರಿಗಿಂತ 0.2 ಸೆಕೆಂಡು ಕಡಿಮೆಯಾಗಿದೆ. 0 - 200 ಕಿ.ಮೀ ವೇಗವನ್ನು 9.3 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಇದು ಕೂಪೆ ಕಾರಿಗಿಂತ 0.3 ಸೆಕೆಂಡು ಕಡಿಮೆ ವೇಗವಾಗಿದೆ. ಹುರಾಕನ್ ಇವೊ ಸ್ಪೈಡರ್ ಕಾರಿನ ಟಾಪ್ ಸ್ಪೀಡ್ ಅನ್ನು ಎಲೆಕ್ಟ್ರಾನಿಕ್ ಆಗಿ ಪ್ರತಿ ಗಂಟೆಗೆ 325 ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಹುರಾಕನ್ ಇವೊ ಸ್ಪೈಡರ್ ಕಾರಿನಲ್ಲಿ ಕೂಪೆ ಕಾರಿನಲ್ಲಿರುವಂತಹ ಎಂಜಿನ್ ಅಳವಡಿಸಲಾಗಿದೆ. 5.2 ಲೀಟರಿನ ವಿ10 ಪೆಟ್ರೋಲ್ ಎಂಜಿನ್ 8,000 ಆರ್‍‍ಪಿ‍ಎಂನಲ್ಲಿ 631 ಬಿ‍ಹೆಚ್‍‍‍ಪಿ ಪವರ್ ಹಾಗೂ 6,500 ಆರ್‍‍ಪಿ‍ಎಂನಲ್ಲಿ 600 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಈ ಎಂಜಿನ್‍‍ನಲ್ಲಿ 7 ಸ್ಪೀಡಿನ ಸ್ಟಾಂಡರ್ಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಗೇರ್‍‍ಬಾಕ್ಸಿಗೆ ಲ್ಯಾಂಬೊರ್ಗಿನಿ ಕಂಪನಿಯು ಲ್ಯಾಂಬೊರ್ಗಿನಿ ಡೊಪಿಯಾ ಫ್ರಿಜಿಯೊನ್ (ಎಲ್‍‍ಡಿ‍ಎಫ್) ಎಂಬ ಹೆಸರನ್ನಿಟ್ಟಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಈ ಎಂಜಿನ್‍‍‍ನಿಂದ ಪವರ್ ಅನ್ನು ಹುರಾಕನ್ ಇವೊ ಸ್ಪೈಡರ್ ಕಾರಿನಲ್ಲಿರುವ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಕಳುಹಿಸಲಾಗುತ್ತದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಹುರಾಕನ್ ಇವೊ ಸ್ಪೈಡರ್, ಫೋಲ್ಡೆಬಲ್ ರೂಫ್ ಅನ್ನು ಹೊರತುಪಡಿಸಿ ಕೂಪೆ ಕಾರಿನಲ್ಲಿರುವಂತಹ ವಿನ್ಯಾಸಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಆದರೆ ಹುರಾಕನ್ ಇವೊ ಸ್ಪೈಡರ್ ಕಾರಿನ ಬಂಪರ್‍, ಎ-ಪಿಲ್ಲರ್ ಹಾಗೂ ಹಿಂಭಾಗದಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್ ಕಾರ್ ಅನ್ನು ಕೂಪೆ ಕಾರಿಗಿಂತೆ ಹೆಚ್ಚು ಏರೋಡೈನಾಮಿಕ್ ಆಗಿಸಲು ತಳಭಾಗವನ್ನು ಅಪ್‍‍ಡೇಟ್ ಮಾಡಿದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಹುರಾಕನ್ ಇವೊ ಸ್ಪೈಡರ್ ಕಾರಿನಲ್ಲಿ ಕ್ರಿಯೆಚರ್ ಕಂಫರ್ಟ್ ಕಂಟ್ರೋಲ್ ಹೊಂದಿರುವ 8.4 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿ ಕ್ಲೈಮೆಟ್ ಕಂಟ್ರೊಲ್, ಆಪಲ್ ಕಾರ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಗಳು ಸೇರಿವೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಹುರಾಕನ್ ಇವೊ ಸ್ಪೈಡರ್ ಕಾರಿನ ಇಂಟಿರಿಯರ್‍‍ನಲ್ಲಿ ಲೆದರ್‍‍ನಿಂದ ತಯಾರಿಸಲಾದ ಪ್ರೀಮಿಯಂ ಅಪ್‍‍ಹೊಲೆಸ್ಟರಿ ಸೇರಿದಂತೆ ಹಲವು ಫೀಚರ್‍‍ಗಳಿವೆ. ಲ್ಯಾಂಬೊರ್ಗಿನಿ ಕಾರ್ಬನ್ ಫೈಬರ್ ಪ್ಯಾಕ್ ಅನ್ನು ಸಹ ನೀಡುತ್ತದೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಹುರಾಕನ್ ಇವೊ ಸ್ಪೈಡರ್ ಕಾರಿನಲ್ಲಿ ಡ್ಯುಯಲ್ ಕ್ಯಾಮರಾ ಟೆಲಿಮೆಟ್ರಿ, ಡೈನಾಮಿಕ್ ಸ್ಟೀಯರಿಂಗ್, ಆಲ್ ವ್ಹೀಲ್ ಸ್ಟೀಯರಿಂಗ್, ಇಂಟಿಗ್ರೆಟೆಡ್ ವೆಹಿಕಲ್ ಡೈನಾಮಿಕ್ಸ್, ಟಾರ್ಕ್ ವೆಕ್ಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್‍‍ಗಳಿವೆ.

ಬಿಡುಗಡೆಯಾಯ್ತು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹುರಾಕನ್ ಇವೊ ಸ್ಪೈಡರ್ ಕೂಪೆ ಕಾರಿನ ಕನ್ವರ್ಟಬಲ್ ಆವೃತ್ತಿಯಾಗಿದೆ. ಕೂಪೆ ಕಾರ್ ಅನ್ನು ಈ ವರ್ಷದ ಫ್ರೆಬ್ರವರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹುರಾಕನ್ ಇವೊ ಸ್ಪೈಡರ್ ಕೂಪೆ ಕಾರಿಗಿಂತ ರೂ.70 ಲಕ್ಷ ಹೆಚ್ಚು ಬೆಲೆಯನ್ನು ಹೊಂದಿದೆ.

More from DriveSpark

Article Published On: Thursday, October 10, 2019, 15:17 [IST]
English summary
Lamborghini Huracan Evo Spyder Launched In India: Priced At Rs 4.1 Crore - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+