ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಫೋರ್ಡ್ ಮುಸ್ಟಾಂಗ್ ಹಾಗೂ ಕ್ರಿಸ್ಲರ್ ಮಿನಿವ್ಯಾನ್‍‍ಗಳನ್ನು ಜಗತ್ತಿಗೆ ಪರಿಚಯಿಸಿದ, ಕ್ರೈಸ್ಲರ್ ಕಂಪನಿಯ ವ್ಯವಹಾರವು ಸ್ಥಗಿತವಾಗದಂತೆ ನೋಡಿಕೊಂಡು ಗೌರವಿಸಲ್ಪಟ್ಟ, ಪ್ರೀತಿಸಲ್ಪಟ್ಟ ಅಮೆರಿಕಾದ ಆಟೋ ಉದ್ಯಮದ ಕಾರ್ಯನಿರ್ವಾಹಕ ಹಾಗೂ ದೂರದೃಷ್ಟಿಯ ಚಿಂತಕ, ಲೀ ಇಕೊಕಾ, ಅವರು ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಪುತ್ರಿ ಲಿಯಾ ಇಕೊಕಾ ಅಸ್ಸಾದ್‍‍‍ರವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆ ಕ್ಯಾಲಿಫೋರ್ನಿಯಾದ ಬೆಲ್-ಏರ್‍‍ನಲ್ಲಿರುವ ಅವರ ಮನೆಯಲ್ಲಿ ಅವರು ಮಂಗಳವಾರ ನಿಧನರಾದರು ಎಂದು ತಿಳಿಸಿದ್ದಾರೆ.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಲೀರವರು 1946ರಲ್ಲಿ ತಮ್ಮ ವೃತ್ತಿ ಜೀವನವನ್ನು ಫೋರ್ಡ್ ಮೋಟಾರ್ ಕಂಪನಿಯಿಂದ ಶುರು ಮಾಡಿದರು. ಟೈಮ್, ನ್ಯೂಸ್‌ವೀಕ್ ಹಾಗೂ ನ್ಯೂಯಾರ್ಕ್ ಟೈಮ್ಸ್ ಸಂಡೇ ಮ್ಯಾಗಜೀನ್‌‍‍ಗಳ ಮುಖಪುಟಗಳಲ್ಲಿ ಅವರನ್ನು ಅಮೇರಿಕನ್ ಆಟೋ ಯುಗದ ಮಹಾಪುರುಷನೆಂದು ಚಿತ್ರಿಸಲಾಗಿತ್ತು. ಅವರು ಸೆಲೆಬ್ರಿಟಿಯಾದ ಆಟೋ ಉದ್ಯಮದ ಮೊದಲ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು. ಅವರ ಆತ್ಮಚರಿತ್ರೆ 1980 ರ ದಶಕದ ಮಧ್ಯಭಾಗದಲ್ಲಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಯಲ್ಲಿ ಸೇರಿತ್ತು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಇಕೊಕಾ ಅದ್ಭುತ ಮಾರಾಟದ ಕಲೆಯನ್ನು ಹೊಂದಿದ್ದರು. ಅವರು ತಮ್ಮ ವಿನ್ಯಾಸ ತಂಡಗಳನ್ನು ವಿಭಿನ್ನವಾದ ಮಾದರಿಗಳನ್ನು ವಿನ್ಯಾಸಗೊಳಿಸುವಂತೆ ಪ್ರೋತ್ಸಾಹಿಸಿದರು. ಅವರ ತಂಡವು ಸ್ಪೋರ್ಟ್ಸ್ ಕಾರುಗಳೊಂದಿಗೆ 1960 ರ ದಶಕದ ಹಿಪ್ಪಿ ಪೀಳಿಗೆಯನ್ನು ಆಕರ್ಷಿಸಿತ್ತು. 1970 ರ ದಶಕದಲ್ಲಿ ಇಂಧನ ಆಧಾರಿತ ಕಾರುಗಳನ್ನು ಹಾಗೂ 1980ರ ದಶಕದಲ್ಲಿ, 25 ವರ್ಷಗಳ ಕಾಲ ತನ್ನ ಸೆಗ್‍‍ಮೆಂಟಿನ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದ ಕುಟುಂಬ ಆಧಾರಿತ ಮಿನಿವ್ಯಾನ್‍‍ಗಳನ್ನು ಬಿಡುಗಡೆಗೊಳಿಸಿದ್ದರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಈಗ ನಿಷ್ಕ್ರಿಯವಾಗಿರುವ ಯುನೈಟೆಡ್ ಆಟೋ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಡಗ್ಲಾಸ್ ಫ್ರೇಸರ್ ಹಿಂದೊಮ್ಮೆ ಮಾತನಾಡಿ, ಅಮೇರಿಕನ್ ಗ್ರಾಹಕರ ಬಗ್ಗೆ ಅವರ ರೀತಿಯಲ್ಲಿ ಭಾವನೆಯನ್ನು ಹೊಂದಿರುವ ಬೇರೊಬ್ಬ ಆಟೋ ಎಕ್ಸಿಕ್ಯೂಟಿವ್ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ಅಮೇರಿಕಾ ಆಟೋ ಉದ್ಯಮದ ಇತಿಹಾಸದಲ್ಲಿ ಅವರಷ್ಟು ಅತ್ಯುತ್ತಮ ಸಂವಹನವನ್ನು ಹೊಂದಿದ್ದ ಬೇರೆ ವ್ಯಕ್ತಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಈಗ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್‌ನ ಭಾಗವಾಗಿರುವ ಕ್ರೈಸ್ಲರ್ ಕಂಪನಿಯನ್ನು 1980ರ ದಶಕದಲ್ಲಿ ಕುಸಿತದ ಅಂಚಿನಿಂದ ಹೊರ ತಂದಿದ್ದರು. ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್‌ನಿಂದ 1.2 ಬಿಲಿಯನ್ ಡಾಲರ್‌ಗಳ ಸಾಲ ಖಾತರಿಗಳನ್ನು ಸಂಗ್ರಹಿಸಿ, ಸರಬರಾಜುದಾರರು, ವಿತರಕರು ಹಾಗೂ ಒಕ್ಕೂಟದ ಮನವೊಲಿಸಿದ ಇಕೊಕಾರವರು ವ್ಯವಹಾರ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನ ಪಡೆದರು. ಆ ಸಮಯದಲ್ಲಿ ಅವರು ತಮ್ಮ ವೇತನವನ್ನು ವರ್ಷಕ್ಕೆ 1 ಡಾಲರ್‍‍ಗೆ ಇಳಿಸಿಕೊಂಡರು.

ಇಕೊಕಾ ಅವರನ್ನು ಬೇಡಿಕೆಯ ಹಾಗೂ ವಿಶಿಷ್ಟ ಬಾಸ್ ಎಂದು ಕರೆಯಲಾಗುತ್ತಿತ್ತು. ಅವರು ಕೆಲವೊಮ್ಮೆ ತಮ್ಮ ಸಹವರ್ತಿ ಅಧಿಕಾರಿಗಳೊಂದಿಗೆ ಹೋರಾಡುತ್ತಿದ್ದರು. ಇಕೊಕಾ ತನ್ನ ವಲಸೆ ಬೇರುಗಳ ಬಗ್ಗೆ ಹಾಗೂ ಅಮೇರಿಕಾದ ಕಠಿಣ ಪರಿಶ್ರಮಕ್ಕೆ ಹೇಗೆ ಪ್ರತಿಫಲ ನೀಡಿತು ಎಂಬುದರ ಕುರಿತು ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಸ್ಟ್ಯಾಚ್ಯೂ ಆಫ್ ಲಿಬರ್ಟಿ ಹಾಗೂ ಎಲ್ಲಿಸ್ ದ್ವೀಪವನ್ನು ಪುನಃಸ್ಥಾಪಿಸುವ ಅಭಿಯಾನದ ಅಧ್ಯಕ್ಷರಾಗಿ ಅವರನ್ನು 1982 ರಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್‍‍ರವರು ನೇಮಕ ಮಾಡಿದರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಅವರು ಈ ಕೆಲಸವನ್ನು ತಮ್ಮ ಹೆತ್ತವರನ್ನು ಗೌರವಿಸುವ ಮಾರ್ಗವಾಗಿ ತೆಗೆದುಕೊಂಡರು. ಈ ಅಭಿಯಾನದಲ್ಲಿ ನಿಗದಿಪಡಿಸಲಾಗಿದ್ದ 150 ದಶಲಕ್ಷ ಡಾಲರ್‍‍ಗಿಂತ ಎರಡು ಪಟ್ಟು ಅಂದರೆ 350 ದಶಲಕ್ಷ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲಾಯಿತು. ಲಿಡೋ ಆಂಥೋನಿ ಲೀ ಇಕೊಕಾರವರು, 1924ರ ಅಕ್ಟೋಬರ್24 ರಂದು ಪೆನ್ಸಿಲ್ವೇನಿಯಾ ಪಟ್ಟಣದ ಅಲೆನ್‍‍‍ಟೌನಿನಲ್ಲಿ ಜನಿಸಿದರು. ಅವರು ಪ್ರೌಢಶಾಲೆಯಲ್ಲಿ ಹೊಸ ವಿದ್ಯಾರ್ಥಿ ವರ್ಗದ ಅಧ್ಯಕ್ಷರಾಗಿದ್ದರು. ಆದರೆ ಅವರು ತಮ್ಮ ಸಹಪಾಠಿಗಳ ಕೈಕುಲುಕುವುದನ್ನು ನಿಲ್ಲಿಸಿದಾಗ ಮರು ಚುನಾವಣೆಯಲ್ಲಿ ಸೋತರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಅದು ನಾಯಕತ್ವದ ಪ್ರಮುಖ ಪಾಠ ಎಂದು ಇಕೊಕಾ ಅಭಿಪ್ರಾಯಪಟ್ಟಿದ್ದರು. ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದಿದ್ದರೂ, ಫೋರ್ಡ್ ಕಂಪನಿಗೆ ಸೇರಿದ ನಂತರ ತಾನು ಮಾರ್ಕೆಟಿಂಗ್‌ನಲ್ಲಿ ಉತ್ತಮ ಎಂದು ಇಕೊಕಾ ಅರಿತುಕೊಂಡರು. ಅವರ ಜಿಲ್ಲೆಯು ದೇಶದಲ್ಲಿ ಕಳಪೆ ಮಾರಾಟವನ್ನು ಹೊಂದಿದ್ದಾಗ, ಅವರು 56ಕ್ಕೆ 56 ಎಂಬ ಮಾರ್ಕೆಟಿಂಗ್ ಯೋಜನೆಯನ್ನು ಶುರು ಮಾಡಿದರು. ಖರೀದಿದಾರರು 1956 ರ ಫೋರ್ಡ್ ಕಾರ್ ಅನ್ನು 20% ಡೌನ್ ಪಾವತಿ ಮಾಡಿ, ಮೂರು ವರ್ಷಗಳ ಕಾಲ ತಿಂಗಳಿಗೆ 56 ಡಾಲರ್ ಪಾವತಿಸುವ ಯೋಜನೆಯನ್ನು ಜಾರಿಗೆ ತಂದರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಈ ಯೋಜನೆ ಯಶಸ್ಸನ್ನು ಕಂಡಿತು. ಆ ಸಮಯದಲ್ಲಿ ಫೋರ್ಡ್ ಕಂಪನಿಯ ಶಾಟ್-ಕಾಲರ್ ಆಗಿದ್ದ, ರಾಬರ್ಟ್ ಮೆಕ್‌ನಮರಾ ಈ ಯೋಜನೆಯನ್ನು ಫೋರ್ಡ್ ರಾಷ್ಟ್ರೀಯ ಮಾರಾಟ ತಂತ್ರದ ಭಾಗವಾಗಿಸಿದರು. 1964ರ ಏಪ್ರಿಲ್‍‍ನಲ್ಲಿ ಟೈಮ್ ಹಾಗೂ ನ್ಯೂಸ್‌ವೀಕ್ ಪತ್ರಿಕೆಗಳಲ್ಲಿ ಇಕೊಕಾ ಹಾಗೂ ಮುಸ್ಟಾಂಗ್ ಕಾರಿನ ಚಿತ್ರಗಳನ್ನು ಈ ಪತ್ರಿಕೆಗಳ ಕವರ್‌ನ ಮೇಲೆ ಚಿತ್ರಿಸಿದಾಗ ಮುಸ್ಟಾಂಗ್‌ನೊಂದಿಗಿನ ಇಕೊಕಾ ಅವರ ಸಂಬಂಧವು ಬಹಿರಂಗಗೊಂಡಿತು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಆ ಸಮಯದಲ್ಲಿ ಫೋರ್ಡ್ ಕಂಪನಿಯ ವಿನ್ಯಾಸ ಕಾರ್ಯನಿರ್ವಾಹಕರಾಗಿದ್ದ ಜೀನ್ ಬೋರ್ಡಿನಾಟ್‍‍ರವರು ನಾವು ಕಾರನ್ನು ಸೃಷ್ಟಿಸಿದೆವು. ಆದರೆ ಇಕೊಕಾ ಅದನ್ನು ಅಪಹರಣ ಮಾಡಿದರು ಎಂದು ಹೇಳಿದ್ದರು. 1978 ರಲ್ಲಿ, ಹೆನ್ರಿ ಫೋರ್ಡ್2ರವರು ಇಕೊಕಾರವರನ್ನು ಕೆಲಸದಿಂದ ಕಿತ್ತು ಹಾಕಲು ನಿರ್ಧರಿಸಿದರು. ಇಕೊಕಾರವರು ಕಾರಣ ಕೇಳಿ, ತಾನು ಎರಡು ವರ್ಷಗಳಲ್ಲಿ 1.8 ಬಿಲಿಯನ್ ಡಾಲರ್‍‍ಗಳಷ್ಟು ಲಾಭವನ್ನು ಗಳಿಸಲು ಕಂಪನಿಗೆ ಸಹಾಯ ಮಾಡಿದೆ ಎಂದು ತಮ್ಮ ಬಾಸ್‌ಗೆ ನೆನಪಿಸಿದ್ದರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಆದರೂ ಸಹ ಫೋರ್ಡ್‍‍ರವರು ಇಕೊಕಾರವರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಫೋರ್ಡ್ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಕೆಲವೇ ವಾರಗಳಲ್ಲಿ ಇಕೊಕಾ ಕ್ರೈಸ್ಲರ್ ಕಂಪನಿಯ ಅಧ್ಯಕ್ಷರಾಗಲು ಒಪ್ಪಿಕೊಂಡರು. 1979 ರಲ್ಲಿ ಕ್ರೈಸ್ಲರ್ ಕಂಪನಿಯು ಹೆಚ್ಚುತ್ತಿರುವ ಬಡ್ಡಿದರಗಳ ಸವಾಲನ್ನು ಎದುರಿಸುತ್ತಿತ್ತು. ಪೆಟ್ರೋಲ್ ಬೆಲೆಯಲ್ಲಿಯೂ ಏರಿಕೆಯಾಗಿತ್ತು. ಇಕೊಕಾರವರು ವಿಲೀನಕ್ಕಾಗಿ ಪಾಲುದಾರರನ್ನು ಹುಡುಕಿದರು, ಆದರೆ ಯಾರೂ ಮುಂದೆ ಬರದಿದ್ದಾಗ ಸರ್ಕಾರದ ಕಡೆಗೆ ಮುಖ ಮಾಡಿದರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಇಕೊಕಾ ರವರು 1.5 ಬಿಲಿಯನ್ ಡಾಲರ್ ಸಾಲ ಖಾತರಿಗಾಗಿ ಹುಡುಕುತ್ತಿದ್ದರು. ಕೊನೆಗೂ ಸಾಲ ಖಾತರಿಗಳನ್ನು ಪಡೆದರು. ಆದರೆ ಸರ್ಕಾರವು ವೆಚ್ಚಗಳನ್ನು ಕಡಿತಗೊಳಿಸಲು ಕೆಲವು ಸಿಬ್ಬಂದಿಗಳನ್ನು ವಜಾಗೊಳಿಸಲು ಬಯಸಿತ್ತು. ಇಕೊಕಾರವರು ತಮ್ಮ ವೈಯಕ್ತಿಕ ಪ್ರತಿಷ್ಟೆಯನ್ನು ಬದಿಗಿಟ್ಟು ಸುಮಾರು 500,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಉಳಿಸಿದ್ದರು. ಲಿಬ್ಲರ್‍‍ರವರು ಮಾತನಾಡಿ ಜನರು ಅವರನ್ನು ಹಗಲು ರಾತ್ರಿ ಎನ್ನದೆ ಕಂಪನಿಗಾಗಿ ಕೆಲಸ ಮಾಡಿರುವುದನ್ನು ನೋಡಿದ್ದಾರೆ. ಕ್ರೈಸ್ಲರ್ ಕಂಪನಿಯ ಭಾಗವಾಗಿರುವ ಪ್ರತಿಯೊಬ್ಬರಿಗೂ ಇದು ಗೊತ್ತು ಎಂದು ಹೇಳಿದರು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಸಣ್ಣ ಹಾಗೂ ಇಂಧನ ದಕ್ಷತೆಯ ಕೆ ಕಾರುಗಳನ್ನು ಕ್ರೈಸ್ಲರ್ ಪರಿಚಯಿಸಿದರು. ಟೆಲಿವಿಷನ್ ಜಾಹೀರಾತುಗಳ ಸರಣಿಯಲ್ಲಿ, ಇಕೊಕಾರವರು ನೀವು ಉತ್ತಮವಾದ ಕಾರನ್ನು ಕಂಡರೆ ಅದನ್ನು ಖರೀದಿಸಿ ಎಂದು ಹೇಳಿದರು. ಅವರು ಸಾಲಗಳನ್ನು ಏಳು ವರ್ಷ ಮುಂಚಿತವಾಗಿ ತೀರಿಸಿದರು. ಅವರು ಎಷ್ಟು ಜನಪ್ರಿಯರಾಗಿದ್ದರೆಂದರೆ 1983ರಲ್ಲಿ ಕಾರ್ಟೂನ್ ಒಂದರಲ್ಲಿ ತೊಂದರೆಗೆ ಸಿಲುಕಿ ಹತಾಶೆಗೊಳಗಾಗಿದ್ದ ಯುನೈಟೆಡ್ ಸ್ಟೇಟ್ಸ್ ವಿಮಾನಯಾನ ಉದ್ಯಮವೊಂದು ಫೋನ್‌‍‍ನಲ್ಲಿ ಇಕೊಕಾರವರನ್ನು ನನ್ನ ಬಳಿ ಕಳುಹಿಸಿ ಎಂದು ಕಿರುಚುವುದನ್ನು ಚಿತ್ರಿಸಲಾಗಿತ್ತು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಕ್ರೈಸ್ಲರ್ ಕಂಪನಿಯು 1990-1991ರ ಆರ್ಥಿಕ ಸ್ಥಗಿತದ ವೇಳೆ 800 ಮಿಲಿಯನ್ ಅಮೇರಿಕನ್ ಡಾಲರ್‍‍ನಷ್ಟು ನಷ್ಟ ಅನುಭವಿಸಿತ್ತು. ಲೀ ಇಕೊಕಾ ಹೊಸ ಉತ್ಪನ್ನ ವೆಚ್ಚವನ್ನು ಕಡಿತಗೊಳಿಸಲು ನಿರಾಕರಿಸಿದರು. 1992ರ ಹೊತ್ತಿಗೆ, ಹೊಸ ಜೀಪ್ ಗ್ರ್ಯಾಂಡ್ ಚೆರೋಕೀ ಹಾಗೂ ಎಲ್‍‍ಹೆಚ್ ಸೆಡಾನ್‍‍ಗಳಿಂದ 732 ಮಿಲಿಯನ್ ಅಮೇರಿಕನ್ ಡಾಲರ್ ಲಾಭ ತರಲು ಕಾರಣರಾದರು. ಈ ವೇಳೆ ಫೋರ್ಡ್ ಹಾಗೂ ಜನರಲ್ ಮೋಟಾರ್ಸ್ ಕಂಪನಿಗಳು ನಷ್ಟದಿಂದ ಹೊರಬರಲು ಒದ್ದಾಡುತ್ತಿದ್ದವು.

ಫೋರ್ಡ್-ಕ್ರೈಸ್ಲರ್ ಕಂಪನಿಯ ಹಿಂದಿದ್ದ ಶಕ್ತಿ ಇನ್ನಿಲ್ಲ

ಕ್ರೈಸ್ಲರ್ ಲಾಭದ ಹಾದಿಗೆ ಹಿಂದುರಿಗಿದ ನಂತರ 1992ರ ಕೊನೆಯಲ್ಲಿ ಇಕೊಕಾ ಕೆಲಸವನ್ನು ತೊರೆದು, ಕ್ಯಾಲಿಫೋರ್ನಿಯಾದ ಬೆಲ್-ಏರ್‍‍ನಲ್ಲಿ ವಿಶ್ರಾಂತಿ ಜೀವನವನ್ನು ಕಳೆದರು. ಆಟೋ ಉದ್ಯಮಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಲೀ ಇಕೊಕಾರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.

Most Read Articles

Kannada
Read more on ಫೋರ್ಡ್ ford
English summary
Ford And Chrysler Lose The Man Who Helped Sell Them To The World - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more