ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಭಾರತೀಯ ಆಟೋ ಉದ್ಯಮದವು ಸದ್ಯಕ್ಕೆ ಸುಧಾರಿಸಿಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಇದರಿಂದ ಭಾರೀ ಪ್ರಮಾಣದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಉತ್ಪಾದನಾ ವಲಯದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ತಲೆದೊರಿದೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಸದ್ಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದ್ದು, ಬಹುತೇಕ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನಗಳ ಮಾರಾಟ ಮಾಡಲು ಕೂಡಾ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಅರೆಕಾಲಿಕ ಉದ್ಯೋಗಿಗಳ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸುತ್ತಿರುವ ಕಾರು ಮತ್ತು ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯುಗಳು ದಿನದ ಮೂರು ಶಿಫ್ಟ್‌ಗಳ ಬದಲಾಗಿ ಒಂದೇ ಶಿಫ್ಟ್ ಮೂಲಕ ವಾಹನಗಳ ಉತ್ಪಾದನೆಯನ್ನು ಮುಂದುವರಿಸುತ್ತಿವೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಆಟೋ ಉದ್ಯಮದಲ್ಲಿನ ಕೆಲವು ಮಹತ್ವದ ಬದಲಾವಣೆಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಹೊಸ ವಾಹನಗಳ ಮಾರಾಟದಲ್ಲಿ ತಿಂಗಳಿನಿಂದ ತಿಂಗಳಿಗೆ ತೀವ್ರ ಹಿನ್ನಡೆ ಅನುಭವಿಸುತ್ತಿವೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಮಹೀಂದ್ರಾ ನಿರ್ಮಾಣದ ಎಕ್ಸ್‌ಯುವಿ300, ಬಲೆರೊ ಮತ್ತು ಸ್ಕಾರ್ಪಿಯೋಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳ ಮಾರಾಟದಲ್ಲಿ ಗಣನೀಯವಾಗಿ ಬೇಡಿಕೆ ತಗ್ಗಿದೆ. ಈ ಹಿನ್ನೆಲೆಯಲ್ಲಿ 1500 ಉದ್ಯೋಗಿಗಳನ್ನು ಕಡಿತ ಮಾಡಲಾಗಿರುವ ಮಹೀಂದ್ರಾ ಸಂಸ್ಥೆಯು ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮತ್ತಷ್ಟು ಉದ್ಯೋಗ ಕಡಿತ ಮಾಡುವ ಸುಳಿವು ನೀಡಿದೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಹೆಚ್ಚುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಿರುವುದು ಹೊಸ ವಾಹನ ಮಾರಾಟದ ಮೇಲೆ ಪ್ರತಿಕೂಲಕರ ಪರಿಣಾಮ ಬೀರಿದೆ. ಇದರಿಂದ ಕಳೆದ 19 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ವಲಯವು ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದ್ದು, ಹೊಸ ಕಾರುಗಳ ಉತ್ಪಾದನೆಯಲ್ಲಿ ತಾತ್ಕಲಿಕವಾಗಿ ಬಂದ್ ಮಾಡಲಾಗುತ್ತಿದೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಜಿಎಸ್‌ಟಿ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ತಿಂಗಳ ಹಿಂದಷ್ಟೇ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಮೇಲೆ ಶೇ.18ರಷ್ಟಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇ.28ಕ್ಕೆ ಏರಿಕೆ ಮಾಡಲಾಗಿದ್ದು, ಹೊಸ ವಾಹನಗಳ ಬೆಲೆಯು ಸತತ ಏರಿಕೆಯಿಂದಾಗಿ ಮಾರಾಟ ಪ್ರಮಾಣವು ಕೂಡಾ ಅಷ್ಟೇ ವೇಗದಲ್ಲಿ ಕುಸಿತ ಕಾಣುತ್ತಿದೆ.

MOST READ: ರೆನಾಲ್ಟ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಜೊತೆಗೆ ಸಾಂಪ್ರಾದಾಯಿಕ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಳದಿಂದ ಹೊಸ ವಾಹನ ಮಾರಾಟದ ಮೇಲೆ ಅಷ್ಟೇ ಅಲ್ಲದೇ ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಸಣ್ಣ ಉದ್ಯಮಗಳ ಮೇಲೂ ಇದು ಪರಿಣಾಮ ಬೀರುತ್ತಿದೆ. ಹೊಸ ವಾಹನಗಳ ಮಾರಾಟ ಪ್ರಮಾಣವು 2019ರ ಆರಂಭದಿಂದಲೇ ಕುಸಿತ ಕಾಣುತ್ತಿದ್ದು, ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಮಾಣಿಕರ ವಾಹನಗಳ ಮಾರಾಟ ಪ್ರಮಾಣವು ಶೇ.30ಕ್ಕೆ ಕುಸಿತ ಕಂಡಿದೆ.

MOST READ: ವಾರಾಂತ್ಯದಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಟಾಪ್ 4 ಕಾರುಗಳಿವು..!

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

2018ರ ಜುಲೈ ಅವಧಿಗೂ 2019ರ ಜುಲೈ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದ್ದಲ್ಲಿ, ಕಳೆದ ವರ್ಷದ ಜುಲೈನಲ್ಲಿ ಒಟ್ಟು 2,90,931 ಪ್ರಯಾಣಿಕ ವಾಹನಗಳು ಮಾರಾಟವಾದರೇ ಪ್ರಸಕ್ತ ವರ್ಷದ ಜುಲೈ ಅವಧಿಯಲ್ಲಿ ಕೇವಲ 2,00,790 ಪ್ರಯಾಣಿಕ ವಾಹನಗಳು ಮಾರಾಟವಾಗಿವೆ.

MOST READ: ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಅಂದರೆ, ಕಳೆದ ವರ್ಷದ ಜುಲೈ ಅವಧಿಗೂ ಮತ್ತು 2019ರ ಜುಲೈ ಅವಧಿಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟಕ್ಕೂ ಶೇ.30.98ರಷ್ಟು ಇಳಿಕೆ ಕಂಡು ಬಂದಿದ್ದು, ಸಣ್ಣ ಕಾರುಗಳ ಮಾರಾಟದಲ್ಲೂ ಬರೋಬ್ಬರಿ ಶೇ.35.95ರಷ್ಟು ಇಳಿಕೆ ದಾಖಲಾಗಿದೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಸದ್ಯದ ಪರಿಸ್ಥಿತಿಯಲ್ಲಿ ಇನ್ನು ಅಧಿಕ ಪ್ರಮಾಣದಲ್ಲಿ ವಾಹನಗಳ ಮಾರಾಟ ಪ್ರಮಾಣವು ಇಳಿಕೆ ಕಾಣುವ ಸಾಧ್ಯತೆಗಳಿದ್ದು,ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಹ ಬಹುತೇಕ ಆಟೋ ಕಂಪನಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಇದರ ಪರಿಣಾಮವಾಗಿ ಆಟೋ ಉತ್ಪಾದನಾ ವಲಯದಲ್ಲಿ ಇದುವರೆಗೆ ಸುಮಾರು 3.30 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಪರೋಕ್ಷವಾಗಿ ಆಟೋ ಉತ್ಪಾದನಾ ವಲಯವನ್ನೇ ನಂಬಿಕೊಂಡಿರುವ ಬಿಡಿಭಾಗಗಳ ಉತ್ಪಾದನಾ ವಲಯದಲ್ಲೂ ಸುಮಾರು 10 ಲಕ್ಷ ಉದ್ಯೋಗಿಗಳನ್ನು ಕೆಲಸ ಕಳೆದುಕೊಂಡಿದ್ದಾರೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಮಾರುತಿ ಸುಜುಕಿ ನಂತರ ಮಹೀಂದ್ರಾದಿಂದಲೂ ಉದ್ಯೋಗ ಕಡಿತ

ಆದರೂ ಕೂಡಾ ವಾಹನ ಮಾರಾಟ ಪ್ರಮಾಣವು ಸತತ ಇಳಿಕೆ ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ವಾಹನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಬೇಡಿಕೆಯ ಆಧಾರ ಮೇಲೆ ಹೊಸ ವಾಹನಗಳನ್ನು ಉತ್ಪಾದನೆ ಮಾಡುತ್ತಿರುವುದು ಭಾರೀ ಪ್ರಮಾಣದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

Article Published On: Tuesday, August 20, 2019, 11:18 [IST]
English summary
Mahindra Cuts 1500 Jobs As Slowdown Crisis Worsens. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+