ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಕಳೆದ ಕೆಲ ತಿಂಗಳಿನಿಂದ ಹೊಸ ವಾಹನಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿರುವ ಬಗ್ಗೆ ಈಗಾಗಲೇ ನಾವು ಸಾಕಷ್ಟು ವರದಿಗಳನ್ನು ಮಾಡಿದ್ದೇವೆ. ಆದ್ರೆ ಅಚ್ಚರಿ ಎಂಬಂತೆ ಮಹೀಂದ್ರಾ ಸಂಸ್ಥೆ ಮಾತ್ರವೇ ಜೂನ್ ಅವಧಿಯಲ್ಲಿನ ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸಿರುವ ಎಕ್ಸ್‌ಯುವಿ 300 ಮತ್ತು ಮರಾಜೋ ಕಾರುಗಳು ಮಹೀಂದ್ರಾ ಸಂಸ್ಥೆಗೆ ಹೊಸ ತಿರುವು ನೀಡಿವೆ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಹೌದು, ಕಳೆದ ಐದಾರು ತಿಂಗಳಿನಿಂದ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ನಿಗದಿತ ಮಟ್ಟದ ಕಾರು ಮಾರಾಟಕ್ಕಾಗಿ ಹರಸಾಹಸಪಡುತ್ತಿದ್ದು, ಮಹೀಂದ್ರಾ ಸಂಸ್ಥೆ ಮಾತ್ರವೇ ಇತರೆ ಎಲ್ಲಾ ಸಂಸ್ಥೆಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ. ಕಳೆದ ವರ್ಷದ ಜೂನ್ ಅವಧಿಯ ಕಾರು ಮಾರಾಟಕ್ಕೂ ಮತ್ತು 2019ರ ಜೂನ್ ಅವಧಿಯ ಕಾರು ಮಾರಾಟಕ್ಕೂ ಶೇ.4 ರಷ್ಟು ಏರಿಕೆ ಕಂಡುಬಂದಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್‌ಯುವಿ300 ಮತ್ತು ಮರಾಜೊ ಕಾರುಗಳು ಮಹೀಂದ್ರಾ ಸಂಸ್ಥೆಗೆ ಮರುಜೀವ ನೀಡಿವೆ ಎಂದ್ರೆ ತಪ್ಪಾಗುವುದಿಲ್ಲ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಕಳೆದ 2018ರ ಜೂನ್ ಅವಧಿಯಲ್ಲಿ ಒಟ್ಟು 16,408 ಕಾರುಗಳನ್ನು ಮಾರಾಟಮಾಡಿದ್ದ ಮಹೀಂದ್ರಾ ಸಂಸ್ಥೆಯು 2019ರ ಜೂನ್ ಅವಧಿಯಲ್ಲಿ 17,723 ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇ. 8 ರಷ್ಟು ಮುನ್ನಡೆ ಸಾಧಿಸಿದ್ದು, ಇದೇ ಅವಧಿಯಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಸೇರಿದಂತೆ ಬಹುತೇಕ ಕಾರು ಸಂಸ್ಥೆಗಳು ಶೇ.5 ರಿಂದ ಶೇ.20ರಷ್ಟು ಕುಸಿತ ಕಂಡಿವೆ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಇನ್ನು ಮಹೀಂದ್ರಾ ಸಂಸ್ಥೆಗೆ ಎಕ್ಸ್‌ಯುವಿ300 ಮಾದರಿಯು ವರದಾನವಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಮೂಲಕ ಮಾಸಿಕವಾಗಿ 5 ಸಾವಿರದಿಂದ 6 ಸಾವಿರ ಕಾರುಗಳು ಮಾರಾಟವಾಗುತ್ತಿವೆ. 2019ರ ಫೆಬ್ರುವರಿಯಲ್ಲಿ ಬಿಡುಗಡೆಯಾದ ಎಕ್ಸ್‌ಯುವಿ300 ಮಾದರಿಯು ಇದೀಗ ಆಟೋಮ್ಯಾಟಿಕ್ ಆವೃತ್ತಿಯಲ್ಲೂ ಕೂಡಾ ಲಭ್ಯವಾಗಿದ್ದು, ಮತ್ತಷ್ಟು ಬೇಡಿಕೆ ಕಂಡುಬರಲಿದೆ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಮಾರುಕಟ್ಟೆಯಲ್ಲಿ ಸದ್ಯಕ್ಕೆ ಎಕ್ಸ್‌ಯುವಿ300 ಕಾರುಗಳು ಒಟ್ಟು ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ವೆರಿಯೆಂಟ್‌ಗಳನ್ನು ಸಹ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ಟಾಪ್ ಎಂಡ್ ಆವೃತ್ತಿಯಲ್ಲಿ ಮಾತ್ರವೇ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಇನ್ನುಳಿದ ಎರಡು ವೆರಿಯೆಂಟ್‌ಗಳಲ್ಲಿ 6 -ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಹೀಗಾಗಿ ಕಾರಿನಲ್ಲಿ ನೀಡಲಾಗಿರುವ ಫೀಚರ್ಸ್‌ಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದ್ದು, ಮ್ಯಾನುವಲ್ ಕಾರುಗಳು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.7.90 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯು ರೂ. 10.80 ಲಕ್ಷ ಬೆಲೆ ಪಡೆದುಕೊಂಡಿವೆ. ಇದರಲ್ಲಿ ಇದೀಗ ಬಿಡುಗಡೆಯಾಗಿರುವ ಎಎಂಟಿ ವರ್ಷನ್ ತುಸು ದುಬಾರಿ ಎನ್ನಿಸಲಿದ್ದು, ಆರಂಭಿಕವಾಗಿ ರೂ.11.05 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.12.70 ಲಕ್ಷ ಬೆಲೆ ಹೊಂದಿದೆ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ವಿಶೇಷ ಎನ್ನಿಸುವ ಎಕ್ಸ್‌ಯುವಿ300 ಮಾದರಿಯು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ. ಜೊತೆಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್‌ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳು ಇದರಲ್ಲಿವೆ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಹಾಗೆಯೇ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್‌ಯುವಿ300 ಡಿಸೇಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಎಎಂಟಿ ಆಯ್ಕೆಯ 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿದೆ.

ಜೂನ್ ಅವಧಿಯ ಹೊಸ ಕಾರು ಮಾರಾಟದಲ್ಲಿ ಮಹೀಂದ್ರಾ ಈ ಬಾರಿ ನಂ.1

ಇದರಲ್ಲಿ ಪೆಟ್ರೋಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಎಂಜಿನ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಉತ್ತಮ ಇಂಧನ ಕ್ಷಮತೆ ಹೊಂದಿವೆ.

Most Read Articles

Kannada
English summary
Mahindra June Sales Report. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X