ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಮಹೀಂದ್ರಾ ಸಂಸ್ಥೆಯು ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಮೂರು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಸದ್ಯ ಮಾರುಕಟ್ಟೆಯಲ್ಲಿ ಇ-ವೆರಿಟೋ ಹೊರತುಪಡಿಸಿ ಯಾವುದೇ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡದ ಮಹೀಂದ್ರಾ ಸಂಸ್ಥೆಯು ಈ ಹಿಂದಿನ ಇ2ಒ ಪ್ಲಸ್ ಮಾದರಿಯನ್ನು ಹೊಸ ಸುರಕ್ಷಾ ನಿಯಮಗಳಿಂದಾಗಿ ಉತ್ಪಾದನೆಯನ್ನ ಸ್ಥಗಿತಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆ ಮತ್ತು ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳ ಅನ್ವಯದಂತೆ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಮಹೀಂದ್ರಾ ಸಂಸ್ಥೆಯು ಇದೇ ವರ್ಷಾಂತ್ಯಕ್ಕೆ ತನ್ನ ಜನಪ್ರಿಯ ಕೆಯುವಿ100 ಕಾರಿನ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡಲಿದ್ದು, ತದನಂತರ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಮತ್ತು ಫೋರ್ಡ್ ಜೊತೆಗಿನ ಸಹಭಾಗಿತ್ವದ ಯೋಜನೆ ಅಡಿಯಲ್ಲಿ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಇದಕ್ಕಾಗಿಯೇ ಮಹೀಂದ್ರಾ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಅತ್ಯತ್ತಮ ಮೈಲೇಜ್ ನೀಡಬಲ್ಲ ಬ್ಯಾಟರಿ ಬಳಕೆಯನ್ನು ಮಾಡುತ್ತಿದೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕೆಯುವಿ100 ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಎಲೆಕ್ಟ್ರಿಕ್ ಕೆಯುವಿ100 ಕಾರುಗಳು ಸಾಮಾನ್ಯ ಕೆಯುವಿ100 ಮಾದರಿಯ ಹೋಲಿಕೆ ಇದ್ದರೂ ಎಂಜಿನ್ ವಿಭಾಗದಲ್ಲಿ ಮಹತ್ವರ ಬದಲಾವಣೆ ಮಾಡುತ್ತಿದೆ. ಈ ಮೂಲಕ ಮಧ್ಯಮ ಗಾತ್ರದ ಮೈಕ್ರೊ ಎಸ್‌ಯುವಿ ಆಯ್ಕೆ ಮಾಡುವ ಗ್ರಾಹಕರಿಗೆ ಉತ್ತಮ ಆಯ್ಕೆಯನ್ನು ನೀಡುತ್ತಿರುವ ಮಹೀಂದ್ರಾ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು, ಹೊಸ ಕಾರು ಲೀಥಿಯಂ ಅಯಾನ್ 16 kWh ಬ್ಯಾಟರಿ ಸೌಲಭ್ಯವನ್ನು ಪಡೆದುಕೊಂಡಿರಲಿದೆಯೆಂತೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಸದ್ಯ ಮಹೀಂದ್ರಾ ಸಂಸ್ಥೆಯು ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಉತ್ಪನ್ನಗಳ ಮೇಲೆ ಗಮನಹರಿಸುತ್ತಿದೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಅಕ್ಟೋಬರ್ 1ರಿಂದ ಪ್ರತಿಯೊಂದು ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಹೊಸ ವಾಹನಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷತೆಯನ್ನು ನೀಡಬೇಕಿದ್ದು, ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಿದೆ.

MOST READ: ಸಂಕಷ್ಟದಲ್ಲಿ ಆಟೋ ಉದ್ಯಮ- ಕಾರು ಉತ್ಪಾದನೆಗೆ ಬ್ರೇಕ್ ಹಾಕಿದ ಮಾರುತಿ ಸುಜುಕಿ..!

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಈ ಹಿನ್ನೆಲೆಯಲ್ಲಿ ಮಹೀಂದ್ರಾ ಕೂಡಾ ಹೊಸ ನಿಯಮ ಪಾಲಿಸಲು ಸಾಧ್ಯವಾಗದ ಇ2ಒ ಪ್ಲಸ್ ಕಾರನ್ನು ಉತ್ಪಾದನೆಯಿಂದ ಕೈಬಿಟ್ಟಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಕೆಯುವಿ 100 ಎಲೆಕ್ಟ್ರಿಕ್ ಸೇರಿದಂತೆ ಇನ್ನು ಹಲವು ಕಾರುಗಳನ್ನು ಬಿಡುಗಡೆ ಮಾಡಲಿದೆ.

MOST READ: ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಸದ್ಯಕ್ಕೆ ಇ-ವೆರಿಟೊ ಸೆಡಾನ್ ಕಾರನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಕೆಯುವಿ100 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, 40ಕೆವಿ ಮೋಟಾರ್ ಮೂಲಕ 120-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲ ವೈಶಿಷ್ಟ್ಯತೆಯನ್ನು ಅಳವಡಿಸುತ್ತಿದೆ.

MOST READ: ನಮ್ಮ ಬೆಂಗಳೂರಿನಲ್ಲಿ ಅನಾವರಣಗೊಂಡ ಬಹುನೀರಿಕ್ಷಿತ ಕಿಯಾ ಸೆಲ್ಟೊಸ್!

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಇದರಿಂದ ಕೆಯುವಿ100 ಎಲೆಕ್ಟ್ರಿಕ್ ಹೊಸ ಕಾರು ಪ್ರತಿ ಚಾರ್ಜ್‌ಗೆ 120 ಕಿ.ಮಿ ಮೈಲೇಜ್ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಸಾಮಾನ್ಯ ಕಾರಿನ ಮಾದರಿಯಲ್ಲೇ ವೇಗ ಮತ್ತು ಎಂಜಿನ್ ಕಾರ್ಯಕ್ಷಮತೆ ಒದಗಿಸಲು ಇದು ಸಹಕಾರಿಯಾಗಿದೆ. ಜೊತೆಗೆ ಇ-ವೆರಿಟೊ ಕಾರಿಗಿಂತಲೂ ಉತ್ತಮ ಫೀಚರ್ಸ್‌ಗಳನ್ನು ಹೊಂದರಲಿದ್ದು, ಡಿಸಿ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಮಾರುತಿ ಸುಜುಕಿ ಸಂಸ್ಥೆಯ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿಗೆ ಇದು ಪೈಪೋಟಿಯಾಗಲಿದೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಕಾರಿನ ಒಳವಿನ್ಯಾಸದ ಕುರಿತಾಗಿ ಹೇಳುವುದಾದರೇ ಹೊಸ ಕಾರು ಸಾಮಾನ್ಯ ಕಾರಿನ ಮಾದರಿಯಲ್ಲೇ ಆಸನ ಸೌಲಭ್ಯವನ್ನು ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣಗಾಗಿ ಗುಣಮಟ್ಟದ ಸುರಕ್ಷಾ ಸೌಲಭ್ಯಗಳು ಮತ್ತು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರಲಿದೆ.

ಮಹೀಂದ್ರಾದಿಂದ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಪಕ್ಕಾ

ಬಿಡುಗಡೆ ಮತ್ತು ಬೆಲೆ(ಅಂದಾಜು)

ಮಹೀಂದ್ರಾ ಸಂಸ್ಥೆಯು ಹೊಸ ಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೊಬರ್ ಹೊತ್ತಿಗೆ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಹೊಸ ಕಾರಿನ ಬೆಲೆಯು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.

Article Published On: Thursday, August 8, 2019, 13:51 [IST]
English summary
Mahindra to launch 3 new EVs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+