ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಆವೃತ್ತಿ ಬೊಲೆರೊ ಪಿಕ್ ಅಪ್ ಟ್ರಕ್ ಮಾದರಿಯಲ್ಲಿ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ಎನ್ನುವ ಹೊಸದೊಂದು ವೆರಿಯೆಂಟ್ ಬಿಡುಗಡೆ ಮಾಡಲಾಗಿದ್ದು, ಹೊಸ ಆವೃತ್ತಿಯು ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ಮಾದರಿಯು ಈ ಹಿಂದಿನ ಸಾಮಾನ್ಯ ಮಾದರಿಗಿಂತಲೂ ವಿಸ್ತರಿತ ಒಳಾಂಗಣ ಸೌಲಭ್ಯದ ಜೊತೆಗೆ ಸರಕು ಸಾಗಾಣಿಕೆಯ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲಾಗಿದೆ. ಹೀಗಾಗಿ ಪ್ಯಾಸೆಂಜರ್ ಜೊತೆಗೆ ಅಧಿಕ ಮಟ್ಟದ ಸರಕು ಸಾಗಾಣಿಕೆಗೂ ಅನೂಕಲಕರವಾಗಿರುವ ಹೊಸ ವಾಹನದ ಕ್ಯಾಬಿನ್ ಹೆಚ್ಚಿಸಲಾಗಿದ್ದು, ಈ ಬಾರಿ 1 ಸಾವಿರ ಕೆಜಿ ಸಾಗಾಣಿಕಾ ಸಾಮಾರ್ಥ್ಯವನ್ನು ಪಡೆದುಕೊಂಡಿದೆ.

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಹಾಗೆಯೇ ಬೊಲೆರೊ ಹೊಸ ಪಿಕ್ ಅಪ್ ಟ್ರಕ್‌ನಲ್ಲಿ ಇದೇ ಮೊದಲ ಬಾರಿಗೆ 4x4 ಡ್ರೈವ್ ಟೆಕ್ನಾಲಜಿಯನ್ನು ಬಳಕೆ ಮಾಡಲಾಗಿದ್ದು, ಸಾಮಾನ್ಯ ರಸ್ತೆಗಳಂತೆ ಆಫ್ ರೋಡ್‌ಗಳಲ್ಲೂ ಕೂಡಾ ಸರಾಗ ಚಾಲನೆಗಾಗಿ ಇದು ಸಹಕಾರಿಯಾಗಿದೆ.

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್‌ನಲ್ಲಿ ಒಟ್ಟು ನಾಲ್ಕು ವೆರಿಯೆಂಟ್‌ಗಳು ಖರೀದಿಗೆ ಲಭ್ಯವಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ ಗೋಲ್ಡ್ ವಿಎಕ್ಸ್, ಆಲ್ ವೀಲ್ಹ್ ಡ್ರೈವ್, ನಾನ್ ಎಸಿ ಮತ್ತು ಕ್ಯಾಶ್ ವ್ಯಾನ್ ಮಾದರಿಗಳನ್ನು ನೀಡಿದೆ.

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಪ್ಯಾಸೆಂಜರ್ ಜೊತೆಗೆ ವಾಣಿಜ್ಯ ಚಟುವಟಿಕೆಗೂ ಅನುಕೂಲಕವಾಗುವಂತೆ ಹೊಸ ಪಿಕ್ ಅಪ್ ವಾಹನವನ್ನು ಬಿಡುಗಡೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಉದ್ಯಮಿಗಳು, ಬೀಲ್ಡರ್‌ಗಳಿಗೆ ಹೆಚ್ಚಿನ ಅನುಕೂಲಕರ ಮಾಡಿಕೊಟ್ಟಿದ್ದು, ಹೊಸ ವಾಹನದ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.26 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 7.90 ಲಕ್ಷ ಬೆಲೆ ಪಡೆದುಕೊಂಡಿದೆ.

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಇನ್ನು ಹೊಸ ಬೊಲೆರೊ ವಾಹನದಲ್ಲಿ ಸುಧಾರಿತ ಮಾದರಿಯ ಬಾಡಿ ಕಿಟ್ ಜೋಡಣೆ ಮಾಡಲಾಗಿದ್ದು, ಹೊಸ ಡಿಸೈನ್ ಪ್ರೇರಿತ ಗ್ರೀಲ್, ನ್ಯೂ ರಿಪ್ಲೆಕ್ಟರ್ ಹೆಡ್‌ಲ್ಯಾಂಪ್, ಗಮನಸೆಳೆಯುವ ಬಾಡಿ ಗ್ರಾಫಿಕ್ಸ್‌ನೊಂದಿಗೆ ಒಳಭಾಗದ ತಾಂತ್ರಿಕ ಅಂಶದಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದೆ.

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್‌ನಲ್ಲಿ ಈ ಬಾರಿ ಡ್ಯೂಯಲ್ ಟೋನ್ ಬಣ್ಣದ ಆಯ್ಕೆಯ ಜೊತೆಗೆ ಹ್ವಾಕ್ ಸಿಸ್ಟಂ, ಪವರ್ ವಿಂಡೋ, ಸೇಂಟರ್ ಲಾಕಿಂಗ್, ಪವರ್ ಸ್ಟೀರಿಂಗ್, ಹೋಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು ಮತ್ತು ಎಲ್ಲಾ ವೆರಿಯೆಂಟ್‌ಗಳಲ್ಲೂ ಲೆದರ್ ಸೀಟುಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಎಂಜಿನ್ ಸಾಮಾರ್ಥ್ಯ ಮತ್ತು ಮೈಲೇಜ್

ಬೊಲೆರೊ ಪಿಕ್ ಅಪ್ ಮಾದರಿಯು ಬಿಎಸ್-4 ಪ್ರೇರಿತ 2.5-ಲೀಟರ್ ಎಂ2ಡಿಐಸಿಆರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 62-ಬಿಎಚ್‌ಪಿ ಮತ್ತು 195-ಎನ್ಎಂ ಟಾರ್ಕ್‌ನೊಂದಿಗೆ ಪ್ರತಿ ಲೀಟರ್‌ ಡೀಸೆಲ್‌ಗೆ ಗರಿಷ್ಠ 15.1 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ ಮಹೀಂದ್ರಾ

ಇದಲ್ಲದೇ ಬೊಲೆರೊ ಕ್ಯಾಂಪೆರ್ ಗೋಲ್ಡ್ ಜೆಡ್ಎಕ್ಸ್ ಖರೀದಿ ಮೇಲೆ ಮಹೀಂದ್ರಾ ಸಂಸ್ಥೆಯು 3 ವರ್ಷಗಳ ವಾರಂಟಿ ನೀಡುತ್ತಿದ್ದು, 3 ವರ್ಷಗಳ ವಾರಂಟಿ ಬೇಡವಾದಲ್ಲಿ 1 ಲಕ್ಷ ಕಿ.ಮೀ ಮೇಲೆ ವಾರಂಟಿ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ.

Article Published On: Friday, June 21, 2019, 11:36 [IST]
English summary
Mahindra Launches All New Bolero Camper Gold ZX. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+