ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಮಹೀಂದ್ರಾ ಸಂಸ್ಥೆಯು ಮರಾಜೋ ಕಾರು ಮಾರಾಟದಲ್ಲಿ ಮುನ್ನಡೆ ಸಾಧಿಸಿದ್ದರೂ ಕಳೆದ ನಾಲ್ಕು ತಿಂಗಳಿನಿಂದ ತುಸು ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಾರು ಮಾರಾಟವನ್ನು ಹಳಿಗೆ ತರಲು ಯತ್ನಿಸುತ್ತಿರುವ ಮಹೀಂದ್ರಾ ಸಂಸ್ಥೆಯು ದೇಶದ ವಿವಿಧಡೆ ಮರಾಜೋ ಕಾರಿನ ಖರೀದಿ ಮೇಲೆ ಭರ್ಜರಿ ಪ್ರಮಾಣದ ಡಿಸ್ಕೌಂಟ್ ನೀಡುತ್ತಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಮರಾಜೋ ಎಂಪಿವಿ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಮಾದರಿಯ ಪ್ರತಿಸ್ಪರ್ಧಿಯಾಗಿ ಮಾರಾಟಗೊಳ್ಳುತ್ತಿದ್ದು, ಎರ್ಟಿಗಾಗಿಂತ ತುಸು ಹೆಚ್ಚಿನ ಆಸನ ಸೌಲಭ್ಯ ಮತ್ತು ದುಬಾರಿ ಬೆಲೆಯ ಇನೋವಾ ಕ್ರಿಸ್ಟಾ ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಮಹೀಂದ್ರಾ ಮರಾಜೋ ಅತ್ಯುತ್ತಮ ಆಯ್ಕೆಯಾಗಿದೆ.

ಆದ್ರೆ ಕಳೆದ ಕೆಲದಿನಗಳಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಇದೀಗ ಮಾರುಕಟ್ಟೆಯು ಚೇತರಿಸಿಕೊಳ್ಳುತ್ತಿರುವುದರಿಂದ ಗ್ರಾಹಕರನ್ನು ಸೆಳೆಯಲು ಭಾರೀ ಪ್ರಮಾಣದ ಡಿಸ್ಕೌಂಟ್ ಆಫರ್‌ಗಳನ್ನ ನೀಡಲಾಗುತ್ತಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಮಹೀಂದ್ರಾ ಸಂಸ್ಥೆಯು ಮರಾಜೋ ಜೊತೆಗೆ ಕೆಲವು ಪ್ರಮುಖ ಕಾರುಗಳ ಮೇಲೂ ಆಕರ್ಷಕ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದು, ಮರಾಜೋ ಖರೀದಿಗೆ ಬರೋಬ್ಬರಿ ರೂ.1 ಲಕ್ಷದ ತನಕ ಡಿಸ್ಕೌಂಟ್ ಪಡೆಯಬಹುದಾಗಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಸದ್ಯ ಮಹೀಂದ್ರಾ ಮರಾಜೋ ಕಾರು ಎಂ2, ಎಂ4, ಎಂ6 ಮತ್ತು ಎಂ8 ಎಂಬ ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ಡಿಸ್ಕೌಂಟ್ ನೀಡಲಾಗುತ್ತಿದೆ. ಮಾಹಿತಿಗಳ ಪ್ರಕಾರ ಹೈ ಎಂಡ್ ಮಾದರಿಯಾದ ಎಂ6 ಮತ್ತು ಎಂ8 ವೆರಿಯೆಂಟ್‌ಗಳ ಮೇಲೆ ಹೆಚ್ಚು ಡಿಸ್ಕೌಂಟ್ ನೀಡಲಾಗುತ್ತಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಎಂ6 ಮತ್ತು ಎಂ8 ವೆರಿಯೆಂಟ್‌ಗಳ ಮೇಲೆ ರೂ.40 ಸಾವಿರ ಎಕ್ಸ್‌ಚೆಂಜ್ ಬೋನಸ್ ಜೊತೆ ರೂ.70 ಸಾವಿರ ಮೌಲ್ಯದ ಉಚಿತ ವಿಮೆ ನೀಡುತ್ತಿರುವುದಾಗಿ ಘೋಷಿಸಿದ್ದು, ಇನ್ನುಳಿದ ಎಂ2 ಮತ್ತು ಎಂ4 ಮೇಲೂ ಡೀಲರ್ಸ್ ಮಟ್ಟದಲ್ಲಿ ಕೆಲವು ಉಚಿತ ಆಕ್ಸೆರಿಸ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೀಗಾಗಿ ಎಂಪಿವಿ ಕಾರು ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಮರಾಜೋ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10.35ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು ರೂ. 14.76 ಲಕ್ಷ ಬೆಲೆ ಹೊಂದಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಇನ್ನು ಮಹೀಂದ್ರಾ ಸಂಸ್ಥೆಯು ಸದ್ಯ ಮರಾಜೋ ಎಂಪಿವಿ ಆವೃತ್ತಿಯನ್ನು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಪೆಟ್ರೋಲ್ ಮಾದರಿಯನ್ನು ಕೂಡಾ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಮರಾಜೋ ಪೆಟ್ರೋಲ್ ವರ್ಷನ್ ಕಾರುಗಳಿಗೆ ಉತ್ತಮ ಬೇಡಿಕೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಮಹೀಂದ್ರಾ ಸಂಸ್ಥೆಯು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಲಿರುವ ಬಿಎಸ್-6 ನಿಯಮದಂತೆಯೇ ಹೊಸ ಎಂಜಿನ್‌ನೊಂದಿಗೆಯೇ ಮಾರುಕಟ್ಟೆ ಪ್ರವೇಶಿಸುವ ತಯಾರಿ ನಡೆಸುತ್ತಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಬಿಎಸ್-6 ಎಂಜಿನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಎಂಜಿನ್‌ಗಿಂತ ಹೆಚ್ಚು ಬಲಿಷ್ಠತೆ ಹೊಂದಿರುವುದಲ್ಲದೇ ಅಧಿಕ ಮಟ್ಟದ ಇಂಧನ ಕಾರ್ಯಕ್ಷಮತೆ ಹಾಗೂ ಅತಿ ಕಡಿಮೆ ಪ್ರಮಾಣದ ಮಾಲಿನ್ಯ ಹೊರಸೂಸುವಿಕೆಯ ಗುಣವೈಶಿಷ್ಟ್ಯತೆ ಹೊಂದಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಇದಕ್ಕಾಗಿಯೇ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳಿಗೂ ಖಡಕ್ ಸೂಚನೆ ನೀಡಿದ್ದು, ಡೆಡ್‌ಲೈನ್ ಒಳಗಾಗಿಯೇ ಹೊಸ ವಾಹನಗಳನ್ನು ಬಿಎಸ್-6 ನಿಯಮಕ್ಕೆ ಅನುಸಾರ ಉನ್ನತಿಕರಿಸುವಂತೆ ಸೂಚಿಸಲಾಗಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ಮರಾಜೋ ಕಾರುಗಳು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪರ್ಯಾಯವಾಗಿ ಎಂಪಿವಿ ಕಾರು ಖರೀದಿದಾರರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಬಿಡುಗಡೆಗಾಗಿ ಸಿದ್ದವಾಗುತ್ತಿರುವ ಪೆಟ್ರೋಲ್ ವರ್ಷನ್ ಮಾದರಿ ಕೂಡಾ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ರಸ್ತೆಗಿಳಿಯಲು ಸಜ್ಜುಗೊಂಡಿದೆ.

ಮಹೀಂದ್ರಾ ಮರಾಜೋ ಕಾರು ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್

ದೀಪಾವಳಿ ಹೊತ್ತಿಗೆ ಮರಾಜೋ ಪೆಟ್ರೋಲ್ ಕಾರು ಮಾದರಿಯು ಖರೀದಿಗೆ ಲಭ್ಯವಿರಲಿದ್ದು, ಪ್ರಸ್ತುತ ಬೆಲೆಗಳಿಂತಲೂ ದುಬಾರಿಯಾಗಲಿರುವ ಬಿಎಸ್-6 ವೈಶಿಷ್ಟ್ಯತೆಯ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳಿಂತಲೂ ರೂ.1 ಲಕ್ಷದಿಂದ ರೂ.1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

Source:mycarhelpline

Most Read Articles

Kannada
English summary
Mahindra Marazzo Mpv Discounts of Up to Rs 1 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X