15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಮಹೀಂದ್ರಾ ಕಂಪನಿಯು ಮುಂಬೈನಲ್ಲಿರುವ ತನ್ನ ಕಂಡಿವೇಲಿ ಉತ್ಪಾದನಾ ಘಟಕದಿಂದ ಬೊಲೆರೊ ಸರಣಿಯ 15ನೇ ಲಕ್ಷದ ವಾಹನವನ್ನು ಹೊರತಂದಿದೆ. ಮಹೀಂದ್ರಾ ಬೊಲೆರೊ ಪಿಕ್ ಅಪ್ ವಾಹನವನ್ನು ಕೃಷಿ ಉತ್ಪನ್ನ, ಡೈರಿ, ಗ್ರಾಹಕ ವಸ್ತುಗಳು, ನಿರ್ಮಾಣ ಉಪಕರಣಗಳು, ಲಾಜಿಸ್ಟಿಕ್ಸ್, ಮೀನುಗಾರಿಕೆ, ನಗದು ಸಾಗಿಸುವ ವ್ಯಾನ್‌ಗಳು ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಲಾಗುತ್ತಿದೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಬೊಲೆರೊ ಪಿಕ್ ಅಪ್ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ಕಂಪನಿ ಹೇಳಿದೆ. ಇದರ ಬಗ್ಗೆ ಮಾತನಾಡಿದ ಮಹೀಂದ್ರಾ ಅಂಡ್ ಮಹೀಂದ್ರಾದ ಆಟೋಮೋಟಿವ್ ಸೆಕ್ಟರ್‍‍ನ ಅಧ್ಯಕ್ಷರಾದ ರಾಜನ್ ವಧೇರಾರವರು, ಬೊಲೆರೊ ಪಿಕ್ ಅಪ್ ವಾಹನವು 15ನೇ ಲಕ್ಷದ ಉತ್ಪಾದನಾ ಮೈಲಿಗಲ್ಲನ್ನು ದಾಟಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ನಮಗೆ ಬೆಂಬಲ ನೀಡಿದ ಗ್ರಾಹಕರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಕಂಪನಿಯು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯು ಕಾರಣವಾಗಿದೆ. ಮಹೀಂದ್ರಾ ಈ ಸೆಗ್‍‍ಮೆಂಟಿನಲ್ಲಿ ವಿಸ್ತಾರವಾದ ಶ್ರೇಣಿಯನ್ನು ಹೊಂದಿದೆ. ಶೈಲಿ, ಕಂಫರ್ಟ್, ಅನುಕೂಲತೆ, ತಂತ್ರಜ್ಞಾನದಲ್ಲಿ ಹೊಸ ಮಾನದಂಡಗಳನ್ನು ಹೊಂದಿದೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ನಮ್ಮ ಗ್ರಾಹಕರಿಗೆ ಗುಣಮಟ್ಟದ ಮೌಲ್ಯ ಹಾಗೂ ಎಫಿಶಿಯನ್ಸಿಯನ್ನು ನೀಡುತ್ತಿದ್ದೇವೆ. ಎರಡು ದಶಕಗಳಿಂದ ಪಿಕ್ ಅಪ್ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿರುವ ನಾವು, ನಮ್ಮ ಗ್ರಾಹಕರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುತ್ತಾ ಬಂದಿದ್ದೇವೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಗ್ರಾಹಕರ ಅವಶ್ಯಕತೆಗಳನ್ನು ಪರಿಹರಿಸಲು ದೃಢವಾದ ಯೋಜನೆಗಳನ್ನು ಹೊಂದಿದ್ದೇವೆ. ಹೊಸ ಉತ್ಪನ್ನಗಳನ್ನು, ಹೊಸ ತಂತ್ರಜ್ಞಾನಗಳಿಗೆ ತಕ್ಕಂತೆ ಕಾಲ ಕಾಲಕ್ಕೆ ನಿರಂತರವಾಗಿ ಪರಿಚಯಿಸುತ್ತ ಬಂದಿದ್ದೇವೆ ಎಂದು ಹೇಳಿದರು.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಮಹೀಂದ್ರಾ ಬೊಲೊರೊ ಎಸ್‍ಯುವಿಯನ್ನು ಇತ್ತೀಚಿಗಷ್ಟೆ ನವೀಕರಣಗೊಳಿಸಿ ಬಿಡುಗಡೆಗೊಳಿಸಲಾಗಿತ್ತು. ಅಪ್‍‍ಡೇಟ್ ಮಾಡಲಾದ ಎಸ್‍‍ಯು‍‍ವಿ ಎಬಿಎಸ್, ಡ್ರೈವರ್‍‍ಸೈಡ್ ಏರ್‍‍ಬ್ಯಾಗ್, ಓವರ್ ಸ್ಪೀಡಿಂಗ್ ಅಲಾರಂ, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಡ್ರೈವರ್, ಕೋ ಪ್ಯಾಸೆಂಜರ್‍‍ಗಳಿಗೆ ಸೀಟ್ ಬೆಲ್ಟ್ ವಾರ್ನಿಂಗ್‍‍ಗಳನ್ನು ಹೊಂದಿದೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಬೊಲೆರೊ ಎಸ್‍‍ಯು‍‍ವಿಯನ್ನು ಎರಡು ಮಾದರಿಯ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. 2.5 ಲೀಟರಿನ ಎಂ2ಡಿಸಿಆರ್ ಡೀಸೆಲ್ ಎಂಜಿನ್ ಮಾದರಿಯು 63 ಬಿಎಚ್‌ಪಿ ಪವರ್ ಹಾಗೂ 195 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಬೊಲೆರೊ ಪವರ್ ಪ್ಲಸ್ 1.5 ಲೀಟರ್ ಎಂಹ್ವಾಕ್‌ಡಿ70 ಡೀಸೆಲ್ ಎಂಜಿನ್ ಮಾದರಿಯು 71 ಬಿಎಚ್‌ಪಿ ಪವರ್ ಹಾಗೂ 195 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 19 ವರ್ಷಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಬೊಲೆರೊ ಕಾರುಗಳು ಅಂದಿನಿಂದ ಇಂದಿನವರೆಗೂ ಒಂದೇ ರೀತಿಯ ಬೇಡಿಕೆಯನ್ನು ಹೊಂದಿವೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತ್ತು. 2000ನೇ ಇಸವಿಯ ಆಗಸ್ಟ್ 10ರಂದು ಮೊದಲ ಬಾರಿಗೆ ಬಿಡುಗಡೆಯಾದ ಬೊಲೆರೊ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಹೊಂದುತ್ತಲೇ ಇದೆ.

MOST READ: ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಮಹೀಂದ್ರಾ ಪಿಕ್ ಅಪ್ ಸರಣಿಯಲ್ಲಿ, ಬೊಲೆರೊ ಪಿಕ್-ಅಪ್, ಬೊಲೆರೊ ಮ್ಯಾಕ್ಸಿ ಟ್ರಕ್ ಪ್ಲಸ್, ಬೊಲೆರೊ ಕ್ಯಾಂಪರ್ ಹಾಗೂ ಇಂಪಿರಿಯೊ ಎಂಬ ನಾಲ್ಕು ಮಾದರಿಗಳಿವೆ. ಬೊಲೆರೊ ಪಿಕ್ ಅಪ್‍ ಬೊಲೆರೊ ಮಾದರಿಯ ಪ್ರಮುಖ ಮಾದರಿಯಾಗಿದೆ. ಬೊಲೆರೊ ಪಿಕ್ ಅಪ್‍‍ನಲ್ಲಿ 2 ಡಬ್ಲ್ಯುಡಿ, 4 ಡಬ್ಲ್ಯುಡಿ, ಸಿಬಿಸಿ ಹಾಗೂ ಸಿ‍ಎನ್‍‍ಜಿ ಮಾದರಿಗಳಿವೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಬೊಲೆರೊ ಮ್ಯಾಕ್ಸಿ ಟ್ರಕ್ ಪ್ಲಸ್ ಎಂಟ್ರಿ ಲೆವೆಲ್‍‍ನ ಪಿಕ್ ಅಪ್ ವಾಹನವಾಗಿದೆ. ಈ ಮಾದರಿಯನ್ನು ಲೋಡ್‍‍ಗಳನ್ನು ಸಾಗಿಸಲು ಹಾಗೂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಈ ಮಾದರಿಯಲ್ಲಿ ಬಲಿಷ್ಟವಾದ ಎಂ2‍‍ಡಿ‍ಐ‍‍ಸಿ‍ಆರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 63 ಬಿ‍‍ಹೆಚ್‍‍ಪಿ ಪವರ್ ಹಾಗೂ 195 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಬೊಲೆರೊ ಕ್ಯಾಂಪರ್ ಡಬಲ್ ಕ್ಯಾಬಿನ್ ಹೊಂದಿರುವ ಪಿಕ್ ಅಪ್ ವಾಹನವಾಗಿದ್ದು, ಮಹೀಂದ್ರಾ ಡಿ‍ಐ ಎಂಜಿನ್ ಹೊಂದಿದ್ದು, 2 ಡಬ್ಲ್ಯುಡಿ, 4 ಡಬ್ಲ್ಯುಡಿ ಹಾಗೂ ಗೋಲ್ಡ್ ಎಂಬ ಆವೃತ್ತಿಗಳಲ್ಲಿ ಲಭ್ಯವಿದೆ. ಈ ವಾಹನವನ್ನು ಲೋಡ್‍‍ಗಳನ್ನುಸಾಗಿಸಲು ಹಾಗೂ ಜನರ ಪ್ರಯಾಣಕ್ಕಾಗಿ ಬಳಸಲಾಗುತ್ತದೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಈ ಮಾದರಿಯ ವಾಹನವನ್ನು ಮೂಲ ಸೌಕರ್ಯ ನೀಡುವ ಕಂಪನಿಗಳಲ್ಲಿ, ನಗದು ಸಾಗಿಸುವ ವಾಹನಗಳಲ್ಲಿ ಹಾಗೂ ನಿರ್ಮಾಣ ಕಾರ್ಯಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇಂಪಿರಿಯೊ ತನ್ನ ನೋಟದಿಂದಾಗಿ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ.

15 ಲಕ್ಷ ವಾಹನ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಬೊಲೆರೊ

ಇದರಲ್ಲಿರುವ ಡಿ‍ಐ ಎಂಜಿನ್ 75 ಬಿ‍‍ಹೆಚ್‍‍ಪಿ ಪವರ್ ಹಾಗೂ 220 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ವಾಹನದಲ್ಲಿ ಫ್ಯೂಯಲ್ ಸ್ಮಾರ್ಟ್ ಟೆಕ್ನಾಲಜಿ, ಎಲ್‍ಎಸ್‍‍ಪಿ‍‍ವಿ ಬ್ರೇಕ್ ಸೇರಿದಂತೆ ಹಲವು ವಿಶ್ವ ದರ್ಜೆಯ ಟೆಕ್ನಾಲಜಿಗಳಿವೆ.

Most Read Articles

Kannada
English summary
Mahindra rolls out 15th lakh Bolero Pick up range from Kandivali plant - Read in kannada
Story first published: Monday, August 19, 2019, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X