ಬಹಿರಂಗವಾಯ್ತು 2020ರ ಸ್ಕಾರ್ಪಿಯೋ ಇಂಟಿರಿಯರ್ ಮಾಹಿತಿ
ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಸ್ಕಾರ್ಪಿಯೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. 2020ರ ಮಹೀಂದ್ರಾ ಸ್ಕಾರ್ಪಿಯೋ ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಮಹೀಂದ್ರಾ ಕಾರು ಉತ್ಪಾದನಾ ಕಂಪನಿಯು ಸದ್ಯ ಎಸ್‌ಯುವಿ ಸೆಗ್‍ಮೆಂಟಿನ ಮಾರಾಟದಲ್ಲಿ ಅಧಿಪತ್ಯ ಸಾಧಿಸುತ್ತಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ಕಾರುಗಳ ಮೂಲಕ ಭಾರೀ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತನ್ನ ಜನಪ್ರಿಯ ಕಾರುಗಳಾದ ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳನ್ನು ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಅಪ್‍ಗ್ರೇಡ್ ಮಾಡಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಮಹೀಂದ್ರಾ ಕಂಪನಿಯು ತನ್ನ ಸ್ಕಾರ್ಪಿಯೋ, ಥಾರ್ ಮತ್ತು ಎಕ್ಸ್‌ಯುವಿ500 ಸೇರಿದಂತೆ ಹಲವು ಎಸ್‍ಯುವಿಗಳನ್ನು ಸ್ಪಾಟ್ ಟೆಸ್ಟ್ ಮಾಡಲು ಯೋಜಿಸಿದೆ. ಇದರಲ್ಲಿ ಈ ಮೂರು ಎಸ್‍ಯುವಿಗಳನ್ನು ಈಗಾಗಲೇ ದೇಶಾದ್ಯಂತ ಸ್ಪಾಟ್ ಟೆಸ್ಟ್ ಮಾಡಲಾಗಿದೆ. 2020ರ ಮಹೀಂದ್ರಾ ಸ್ಕಾರ್ಪಿಯೋ ಮತ್ತು ಥಾರ್ ಮುಂದಿನ ವರ್ಷ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಮಹೀಂದ್ರಾ ಸರಣಿಯ ಮಾದರಿಗಳ ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍ಯುವಿಯ ಕೊಡುಗೆಯು ದೊಡ್ಡದು. 2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಎರಡು ಬಾರಿ ನವೀಕರಣಗೊಳಿಸಿದೆ. ಕಂಪನಿಯು ಸ್ಕಾರ್ಪಿಯೋ ಎಸ್‍ಯುವಿಯನ್ನು 2006ರಲ್ಲಿ ಮತ್ತು 2014ರಲ್ಲಿ ನವೀಕರಣಗೊಳಿಸಿತ್ತು.

ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಕಾರ್ಪಿಯೋವಿನ ಸ್ಪೈ ಚಿತ್ರವನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಸ್ಪೈ ಚಿತ್ರದಿಂದ ಹೊಸ ಸ್ಕಾರ್ಪಿಯೋ ಎಸ್‍ಯುವಿಯ ಇಂಟಿರಿಯರ್‍ನ ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ. ಇದರಲ್ಲಿ ಸೆಂಟರ್ ಕನ್ಸೋಲ್ ಮತ್ತು ಕಂಟ್ರೋಲ್ ಡಯಲ್ ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿದೆ. ಮೌಂಟಡ್ ಕಂಟ್ರೋಲ್‍ನೊಂದಿಗೆ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಹೊಸ ಸ್ಕಾರ್ಪಿಯೋ ಇಂಟಿರಿಯರ್‍ನಲ್ಲಿ ಹೆಚ್ಚು ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಇಂಟಿರಿಯರ್ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಹೈ ಎಂಡ್ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ದೊಡ್ದ ಟಚ್‍ಸ್ಕ್ರೀನ್ ಇನ್ಪೋಟೈನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಹೊಸ ಕ್ರ್ಯಾಶ್ ನಿಯಮಗಳಿಗೆ ಅನುಗುಣವಾಗಿ ಸ್ಕಾರ್ಪಿಯೋದ ಮೂರನೇ ಸಾಲಿನಲ್ಲಿ ಫಾರ್ವರ್ಡ್ ಫೇಸಿಂಗ್ ಸೀಟ್ ಸೆಟಪ್ ಅನ್ನು ಅಳವಡಿಸಲಾಗಿದೆ. ಹೊಸ ಸ್ಕಾರ್ಪಿಯೋದ ಇಂಟಿರಿಯರ್‍ನಲ್ಲಿ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ದೂರ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದು.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹೊಸ ಸ್ಕಾರ್ಪಿಯೋ 2.0 ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಹೊಸ ಸ್ಕಾರ್ಪಿಯೋದಲ್ಲಿ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್‍ನೊಂದಿಗೆ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಭಾರತದ ಎಕ್ಸ್ ಶೋರೂಂ ಪ್ರಕಾರ ಸ್ಕಾರ್ಪಿಯೋ ಕಾರುಗಳ ಆರಂಭಿಕ ಬೆಲೆಯು ರೂ. 10 ಲಕ್ಷಗಳಾದರೆ, ಹೈ ಎಂಡ್ ಮಾದರಿಗಳ ಬೆಲೆಯು ರೂ. 16.45 ಲಕ್ಷಗಳಾಗುತ್ತವೆ. ಹಳೆಯ ಮಾದರಿಗಿಂತ ವಿನೂತನ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರಿನ ಆರಂಭಿಕ ಬೆಲೆಯು ರೂ.11.50 ಲಕ್ಷಗಳಾದರೆ, ಹೈ ಎಂಡ್ ಮಾದರಿಯ ಬೆಲೆಯು ರೂ.18 ಲಕ್ಷಗಳಾಗುವ ನಿರೀಕ್ಷೆಗಳಿವೆ.
Source: Gaadiwaadi


Click it and Unblock the Notifications