ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ನಿನ್ನೆ ಮಹೀಂದ್ರಾ ಕಾರುಗಳನ್ನು ಚಂದಾದಾರಿಕೆಯಲ್ಲಿ ನೀಡುವಂತಹ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯನ್ನು ರೀಟೆಲ್ ಗ್ರಾಹಕರನ್ನು ಗುರಿಯಾಗಿಟ್ಟು ಕೊಂಡು ಘೋಷಿಸಲಾಗಿದೆ. ರೆವ್ ಸಹಭಾಗಿತ್ವದಲ್ಲಿ ಮಹೀಂದ್ರಾ ಕಂಪನಿಯ 7 ಕಾರುಗಳನ್ನು ತಿಂಗಳ ಚಂದಾದಾರಿಕೆ ಆಧಾರದಲ್ಲಿ ನೀಡಲಾಗುವುದು.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಈ ವಿಶಿಷ್ಟ, ವಿಭಿನ್ನವಾದ ಯೋಜನೆಯಿಂದಾಗಿ ಗ್ರಾಹಕರು ಮಹೀಂದ್ರಾದ ಹೊಸ ಕಾರುಗಳನ್ನು ಖರೀದಿ ಮಾಡದೇ ಬಳಸಬಹುದಾಗಿದೆ. ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಬಯಸುವ ಗ್ರಾಹಕರು ಮಹೀಂದ್ರಾ ಕಂಪನಿಯ ವೆಬ್‍‍ಸೈಟ್‍‍ಗೆ ಭೇಟಿ ನೀಡಿ ಈ ಯೋಜನೆಯ ಭಾಗವಾಗಿರುವ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಈ ಯೋಜನೆಯಿಂದ ಮಹೀಂದ್ರಾ ಕಂಪನಿಯ ವಾಹನಗಳನ್ನು ಗ್ರಾಹಕರು ಹೆಚ್ಚು ಸುಲಭವಾಗಿ, ಕೈಗೆಟುಕುವಂತ ದರದಲ್ಲಿ ಪಡೆಯಬಹುದು. ಈ ಕೊಡುಗೆಯು ಆಕರ್ಷಕ ಚಂದಾದಾರಿಕೆ ಬೆಲೆಯಲ್ಲಿ ಲಭ್ಯವಿದೆ. ಪ್ರತಿ ತಿಂಗಳು ಇನ್ಶೂರೆನ್ಸ್ ಹಾಗೂ ಮೆಂಟೆನೆನ್ಸ್ ಸೇರಿದಂತೆ ರೂ.19,720 ಪಾವತಿಸಬೇಕಾಗುತ್ತದೆ.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಡಿವಿಷನ್‍‍ನ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥರಾದ ವಿಜಯ್ ರಾಮ್ ನಕ್ರಾರವರು ಮಾತನಾಡಿ, ನಮ್ಮ ವಾಹನಗಳನ್ನು ರೀಟೆಲ್ ಗ್ರಾಹಕರಿಗೆ ಎಲ್ಲಾ ಹೊಸ ಚಂದಾದಾರಿಕೆ ಪದ್ದತಿಯಲ್ಲಿ ನೀಡಲು ನಮಗೆ ಖುಷಿಯಾಗುತ್ತಿದೆ.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಈ ಕೈಗೆಟುಕುವ ಕೊಡುಗೆಯನ್ನು, ನಮ್ಮ ಗ್ರಾಹಕರು ತಾವು ಬಯಸಿದ ವಾಹನಗಳನ್ನು ಖರೀದಿಸದೇ ಚಾಲನೆ ಮಾಡುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದೆಂದು ನಾವು ಭಾವಿಸುತ್ತೇವೆ. ಇದರಿಂದಾಗಿ ಮಹೀಂದ್ರಾ ಕಂಪನಿಯು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ. ಭಾರತದಲ್ಲಿ ಹೊಸ ಕ್ರಾಂತಿಯನ್ನು ಮಾಡುವ ನಮ್ಮ ದೊಡ್ಡ ದೃಷ್ಟಿಯೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಹೇಳಿದರು.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಈ ಯೋಜನೆಯಿಂದ ಗ್ರಾಹಕರಿಗೆ ಸಂಪೂರ್ಣ ಅನುಕೂಲವಾಗಲಿದ್ದು, ಯಾವುದೆ ಡೌನ್ ಪೇಮೆಂಟ್ ಇರುವುದಿಲ್ಲ, ರಸ್ತೆ ತೆರಿಗೆಯೂ ಇರುವುದಿಲ್ಲ, ವಾಹನದ ರಿಸೇಲ್ ವ್ಯಾಲ್ಯೂವಿನ ಭಯವಿರುವುದಿಲ್ಲ. ಕೇವಲ ನಿಗದಿ ಪಡಿಸಲಾಗಿರುವ ಮೆಂಟೆನೆನ್ಸ್ ವೆಚ್ಚಗಳನ್ನು ನೀಡಬೇಕಾಗುತ್ತದೆ. ಮುಖ್ಯವಾಗಿ ನಿಗದಿಪಡಿಸಿದ ಚಂದಾ ಅವಧಿ ಮುಗಿದ ನಂತರ ಬೇರೆ ವಾಹನವನ್ನು ಪಡೆಯಬಹುದು.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಈ ಯೋಜನೆಯಿಂದಾಗಿ ಗ್ರಾಹಕರು ತಾವು ಬಯಸಿದ ಮಹೀಂದ್ರಾ ವಾಹನವನ್ನು ಡೌನ್ ಪೇಮೆಂಟ್ ಇಲ್ಲದೆ ಪಡೆಯಬಹುದಾಗಿದೆ. ಕಾಲ ಕಾಲಕ್ಕೆ ತಮ್ಮ ವಾಹನಗಳನ್ನು ಅಪ್‍‍ಗ್ರೇಡ್ ಮಾಡಿಕೊಳ್ಳಬಹುದು. ಚಂದಾ ಅವಧಿ ಮುಗಿದ ನಂತರ ಮಾರಾಟ ಮಾಡಬೇಕೆಂಬ ಚಿಂತೆಯಿಲ್ಲದೇ ಈ ವಾಹನಗಳನ್ನು ಕಂಪನಿಗೆ ಹಿಂದುರಿಗಿಸಿ, ಬೇಕಾದರೆ ಹೊಸ ವಾಹನವನ್ನು ಪಡೆಯಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಮಹೀಂದ್ರಾ ಅವರ ಹೊಸ ವಾಹನ ಚಂದಾದಾರಿಕೆ ಮಾದರಿ ಬಗ್ಗೆ

ಗ್ರಾಹಕರು ಮಹೀಂದ್ರಾ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ, ಮಹೀಂದ್ರಾ ಕಂಪನಿಯ 6 ಕ್ಕೂ ಹೆಚ್ಚು ಮಹೀಂದ್ರಾ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಚಂದಾದಾರಿಕೆ ಪಡೆಯಲು ಅರ್ಹರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಬೇಕಾಗುತ್ತದೆ.

MOST READ: ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಗ್ರಾಹಕರು ತಾವು ಬಯಸುವ ಮಾಡೆಲ್ ಹಾಗೂ ಎಷ್ಟು ಅವಧಿಯವರೆಗೆ ವಾಹನ ಬೇಕು ಎಂಬುದರ ಆಧಾರದ ಮೇಲೆ ರಿಫಂಡಬಲ್ ಮಾಡಲಾಗುವ ಮೊತ್ತವನ್ನು ಡಿಪಾಸಿಟ್ ಮಾಡಬೇಕು. ಇದಾದ ನಂತರ ಕಂಪನಿಯು ವಾಹನದ ಆರ್ಡರ್ ತೆಗೆದುಕೊಳ್ಳುತ್ತದೆ. ಒಂದು ತಿಂಗಳೊಳಗಾಗಿ ವಾಹನವನ್ನು ಗ್ರಾಹಕರಿಗೆ ವಿತರಿಸಲಾಗುವುದು.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ವಾಹನದ ಡೆಲಿವರಿ ಪಡೆಯುವ ಮುನ್ನ ಗ್ರಾಹಕರು ಮೊದಲ ತಿಂಗಳ ಶುಲ್ಕವನ್ನು ಅಡ್ವಾನ್ಸ್ ಆಗಿ ನೀಡಬೇಕು. ಎರಡನೇ ತಿಂಗಳಿನಿಂದ ಗ್ರಾಹಕರು ಪ್ರತಿ ತಿಂಗಳು ಚಂದಾ ಅವಧಿ ಮುಗಿಯುವವರೆಗೂ ಶುಲ್ಕವನ್ನು ಪಾವತಿಸಬೇಕು.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಕೆಯುವಿ100, ಎಕ್ಸ್ ಯುವಿ500, ಎಕ್ಸ್ ಯುವಿ300, ಸ್ಕಾರ್ಪಿಯೋ, ಟಿಯುವಿ300, ಮರಾಜೊ ಹಾಗೂ ಅಲ್ತುರಾಸ್ ಜಿ 4 ವಾಹನಗಳನ್ನು ಚಂದಾದಾರಿಕೆ ಮೇಲೆ ನೀಡಲಾಗುವುದು. ಚಂದಾ ಅವಧಿಯು ಹೊಸ ಕಾರ್ ಆದರೆ ಒಂದರಿಂದ 4 ವರ್ಷಗಳವರೆಗೆ ಇರಲಿದೆ. ಹಳೆಯ ಕಾರುಗಳಿಗೆ ಮೂರು ತಿಂಗಳಿನಿಂದ ಮೂವತ್ತಾರು ತಿಂಗಳುಗಳವರೆಗೆ ಇರಲಿದೆ.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಚಂದಾ ಅವಧಿ ಮುಗಿದ ನಂತರ, ಗ್ರಾಹಕರು ವಾಹನವನ್ನು ಮಾರಾಟ ಮಾಡಬೇಕಾದ ಚಿಂತೆಯಿಲ್ಲದೆ ಕಂಪನಿಗೆ ಹಿಂದಿರುಗಿಸಬಹುದು ಹಾಗೂ ಹೊಸ ವಾಹನವನ್ನು ಪಡೆಯಬಹುದು. ಒಂದು ವೇಳೆ ಈ ವಾಹನವನ್ನು ಗ್ರಾಹಕರೇ ಖರೀದಿಸ ಬಯಸಿದಲ್ಲಿ, ಕಂಪನಿಯು ನಿಗದಿಪಡಿಸುವ ಶುಲ್ಕವನ್ನು ಪಾವತಿಸಿ ಖರೀದಿಸ ಬಹುದು.

ಕಾರು ಖರೀದಿಸದೇ ಕಾರು ಮಾಲೀಕರಾಗಿ..!

ಮಹೀಂದ್ರಾ ಕಂಪನಿಯ ಚಂದಾದಾರಿಕೆ ಯೋಜನೆಯಿಂದ ವೃತ್ತಿಪರರಿಗೆ ಅನುಕೂಲವಾಗಲಿದೆ. ಈ ಯೋಜನೆಯು ಮೊದಲ ಹಂತದಲ್ಲಿ ದೆಹಲಿ (ಎನ್‌ಸಿಆರ್), ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಚಂಡೀಗಢ, ಅಹಮದಾಬಾದ್ ಸೇರಿದಂತೆ 8 ನಗರಗಳಲ್ಲಿ ಲಭ್ಯವಿರಲಿದೆ.

Article Published On: Friday, September 13, 2019, 11:33 [IST]
English summary
Mahindra subscription based service introduced for its select range - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+