ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಮಹೀಂದ್ರಾ ಕಂಪನಿಯು, ಟಾಟಾ ಮೋಟಾರ್ಸ್ ಕಂಪನಿಯನ್ನು ಹಿಂದಿಕ್ಕಿ, ಭಾರತದಲ್ಲಿ ಕಾರು ತಯಾರಕ ಕಂಪನಿಗಳಲ್ಲಿ 3ನೇ ಸ್ಥಾನಕ್ಕೇರಿದೆ. ಎಕ್ಸ್ ಯುವಿ 300, ಮೊರಾಜೋ ಹಾಗೂ ಅಲ್ಟುರಾಸ್‍‍ನಂತಹ ಹೊಸ ಕಾರುಗಳನ್ನು ಬಿಡುಗಡೆಗೊಳಿಸಿ ಮಹೀಂದ್ರಾ ಕಂಪನಿಯು ಈ ಸಾಧನೆ ಮಾಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಒಟ್ಟಾರೆಯಾಗಿ ಮಹೀಂದ್ರಾ ಕಂಪನಿಯ ಮಾರಾಟದಲ್ಲಿ ಬೇರೆ ಕಂಪನಿಗಳ ಮಾರಾಟದಂತೆ ಹೆಚ್ಚಿನ ಕುಸಿತ ಉಂಟಾಗಿಲ್ಲ. ಮಾರಾಟದಲ್ಲಿನ ಕುಸಿತವು ತಾತ್ಕಾಲಿಕವಾಗಿರುವುದರಿಂದ, ಮಹೀಂದ್ರಾ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಅನೇಕ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಮಹೀಂದ್ರಾ ತನ್ನ ಆರ್ ಅಂಡ್ ಡಿ ಸೌಲಭ್ಯವನ್ನು ಹೊಂದಿರುವ ಚೆನ್ನೈನಲ್ಲಿ 4×4 ಬ್ಯಾಡ್ಜ್ ಹೊಂದಿರುವ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಸ್ಪಾಟ್ ಟೆಸ್ಟ್ ಮಾಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಈಗ ಸ್ಪಾಟ್ ಟೆಸ್ಟ್ ಮಾಡಲಾಗಿರುವ ವಾಹನವು ಹೊಸ ತಲೆಮಾರಿನ ಥಾರ್ ಎಸ್‍‍ಯುವಿಯಲ್ಲ. ಹೊಸ ತಲೆಮಾರಿನ ಥಾರ್ ಎಸ್‍‍ಯುವಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೊಸ ಎಸ್‍‍ಯುವಿಯನ್ನು ಸಹ ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಸ್ಪಾಟ್ ಟೆಸ್ಟ್ ಮಾಡುವಾಗೆಲ್ಲಾ ಮರೆ ಮಾಚಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಆದರೆ, ಸ್ಪಾಟ್ ಟೆಸ್ಟ್ ಮಾಡಲಾಗಿರುವ 2020ರ ಥಾರ್‌ನ ಮಾದರಿಗಳು ಮಾರುಕಟ್ಟೆಯಲ್ಲಿರುವ ಥಾರ್‌ಗಿಂತ ಹೆಚ್ಚು ಅಗಲವಾಗಿರಲಿದೆ ಎಂದು ಖಚಿತಪಡಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಈಗ ಮಾರುಕಟ್ಟೆಯಲ್ಲಿರುವ ಥಾರ್‍ ಎಸ್‍‍ಯುವಿಯ ಹಿಂಭಾಗದಲ್ಲಿ ಎದುರು ಬದುರಾಗಿರುವ ಸೀಟುಗಳಿದ್ದರೆ, ಹೊಸ ತಲೆಮಾರಿನ ಥಾರ್‍‍ನಲ್ಲಿ ಮುಂದೆ ಮುಖ ಮಾಡಿರುವ ಸೀಟುಗಳಿವೆ. ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ವಾಹನದ ಚಿತ್ರಗಳನ್ನು ಯೂಟ್ಯೂಬ್ ಚಾನೆಲ್ ಟೆಕ್ ಆಟೋಗ್ರಾಂ ಸೆರೆ ಹಿಡಿದು ಅಪ್‍‍ಲೋಡ್ ಮಾಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಮಾರುಕಟ್ಟೆಯಲ್ಲಿರುವ ಥಾರ್ ಸಿಆರ್‌ಡಿಇ 4×4 ಬಿಎಸ್ 6 ಸ್ಟಿಕ್ಕರ್‌ಗಳೊಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ಏಕೆಂದರೆ, ಮಹೀಂದ್ರಾ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಹೆಚ್ಚು ಸುರಕ್ಷತಾ ಫೀಚರ್ ಹಾಗೂ ಬಿಎಸ್ 6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲು ಮಹೀಂದ್ರಾ ಯೋಜಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಬಿಡುಗಡೆಯ ನಂತರ ಈ ಎಸ್‍‍ಯುವಿ ಹೊಸ ತಲೆಮಾರಿನ ಮಹೀಂದ್ರಾ ಥಾರ್ 2020 ಕೆಳಗಿನ ಸರಣಿಯಲ್ಲಿರಲಿದೆ. ಹಾಗೂ ಮಾರುಕಟ್ಟೆಯಲ್ಲಿರುವ ಥಾರ್‍‍ಗಿಂತ ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಬಿಎಸ್ 6 ಎಂಜಿನ್ ಅನ್ನು ಪರೀಕ್ಷಿಸಲು ಮಹೀಂದ್ರಾ ಮಾರುಕಟ್ಟೆಯಲ್ಲಿರುವ ಥಾರ್ ಎಸ್‍‍ಯುವಿಯ ಬಾಡಿಯನ್ನು ಬಳಸಿ ಸ್ಪಾಟ್ ಟೆಸ್ಟ್ ಮಾಡುತ್ತಿರುವ ಸಾಧ್ಯತೆಗಳಿವೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಈಗಿರುವ ಥಾರ್ ಅನ್ನು ಬಿಎಸ್ 6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಚಿತ್ರಗಳಲ್ಲಿ ಕಾಣುತ್ತಿರುವ ವಾಹನವು ಕಪ್ಪು ಬಣ್ಣವನ್ನು ಹೊಂದಿದೆ. ಬಿ 242 ಹಾಗೂ ಪಿ 73 ಎಂಬ ಕೋಡ್‍‍ಗಳನ್ನು ಹೊಂದಿದೆ. ಈ ಎಸ್‍‍ಯುವಿಯ ಮೇಲೆ ಬಿಎಸ್ 6 ಟೆಸ್ಟಿಂಗ್ ಸ್ಟಿಕ್ಕರ್ ಸಹ ಇದೆ. ಎಲ್ಲಾ ಪ್ರಯಾಣಿಕ ಸೀಟುಗಳ ಮೇಲೆ ನಕಲಿ ತೂಕವನ್ನು ಇಟ್ಟು ಪರೀಕ್ಷಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

2020 ಮಹೀಂದ್ರಾ ಥಾರ್ ಬಗ್ಗೆ ಹೇಳುವುದಾದರೆ, ಈ ಎಸ್‍‍ಯುವಿಯನ್ನು ಸಾಫ್ಟ್ ಟಾಪ್ ಹಾಗೂ ಹಾರ್ಡ್ ಟಾಪ್ - ಎಂಬ ಎರಡು ಡೋರ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು. ಎಸ್‍‍ಯುವಿಯ ಹೊರಭಾಗವು ಜೀಪ್ ಶೈಲಿಯ ವಿನ್ಯಾಸವನ್ನು ಹೊಂದಿದ್ದರೆ, ಇಂಟಿರಿಯರ್ ಅನ್ನು ಹೆಚ್ಚು ಅಪ್‍‍ಡೇಟ್ ಮಾಡಲಾಗಿದೆ.

MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಒಳಭಾಗದಲ್ಲಿರುವ ಬಿಡಿಭಾಗಗಳೆಲ್ಲವೂ ಹೊಸದಾಗಿದ್ದು, ಹೆಚ್ಚು ವಿಶಾಲವಾಗಿ ಹಾಗೂ ಪ್ರೀಮಿಯಂ ಆಗಿವೆ. ಹೊಸ ಸೀಟುಗಳಿಂದ ಹೊಸ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್, ಇನ್ಸ್ ಟ್ರೂಮೆಂಟ್ ಕನ್ಸೋಲ್, ಟಚ್‌ಸ್ಕ್ರೀನ್‍‍ಗಳವರೆಗೆ ಹೊಸ ಥಾರ್ ಸಂಪೂರ್ಣವಾಗಿ ಹೊಸತನದಿಂದ ಕೂಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಮಾರುಕಟ್ಟೆಯಲ್ಲಿರುವ ಥಾರ್ 2.5 ಲೀಟರ್ ಡೀಸೆಲ್ ಬಿಎಸ್ 4 ಎಂಜಿನ್‌ ಹೊಂದಿದೆ. ಈ ಎಂಜಿನ್ 105 ಬಿ‍‍ಹೆಚ್‌ಪಿ ಪವರ್ ಹಾಗೂ 247 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ಎಸ್‍‍ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.64 ಲಕ್ಷದಿಂದ 10.1 ಲಕ್ಷಗಳಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಥಾರ್ ಬಿ‍ಎಸ್6

ಹೊಸ ಥಾರ್ ಹೆಚ್ಚು ಬಲಶಾಲಿಯಾದ 120 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಹೊಸ ಫೀಚರ್, ದೊಡ್ಡ ಗಾತ್ರದ ಬಾಡಿ, ಬಲಶಾಲಿಯಾದ ಬಿಎಸ್ 6 ಡೀಸೆಲ್ ಎಂಜಿನ್ ಹೊಂದಲಿರುವ ಹೊಸ ಥಾರ್‌ನ ಬೆಲೆಯು ಮಾರುಕಟ್ಟೆಯಲ್ಲಿರುವ ಥಾರ್‌ಗಿಂತ ಹೆಚ್ಚಿರುವ ಸಾಧ್ಯತೆಗಳಿವೆ.

Source: Tech Autogram/YouTube

Article Published On: Monday, September 9, 2019, 13:16 [IST]
English summary
Mahindra Thar BS6 SUV spied - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+