ಪ್ರವಾಹದಲ್ಲೂ ತನ್ನ ಸಾಮರ್ಥ್ಯ ತೋರಿದ ಮಹಿಂದ್ರಾ ಥಾರ್

ಮಹೀಂದ್ರಾ ಥಾರ್ ಕಾರು ಭಾರತದಲ್ಲಿ ಮಾರಾಟವಾಗುವ ಅಧಿಕ ಸಾಮರ್ಥ್ಯದ ಆಫ್ ರೋಡ್ ವಾಹನಗಳಲ್ಲಿ ಒಂದಾಗಿದೆ. ಇದು ಭಾರತದ ಆಫ್ ರೋಡ್ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿದ್ದು ಕಠಿಣ ಪರಿಸ್ಥಿತಿಗಳಲ್ಲೂ ತನ್ನ ಸಾಮರ್ಥ್ಯವನ್ನು ತೋರ ಬಲ್ಲದು ಎನ್ನುವುದಕ್ಕೆ ಈ ಘಟನೆಯೇ ಒಂದು ಉದಾಹರಣೆಯಾಗಿದೆ.

ಪ್ರವಾಹದಲ್ಲೂ ತನ್ನ ಸಾಮರ್ಥ್ಯ ತೋರಿದ ಮಹಿಂದ್ರಾ ಥಾರ್

ಮಳೆಗಾಲದಲ್ಲಿ ದೇಶದ ಬಹುತೇಕ ರಸ್ತೆಗಳಲ್ಲಿ ಸಂಚರಿಸುವುದು ಬಹು ತ್ರಾಸದಾಯಕವಾಗಿದ್ದು ಇಂತಹ ಸಂದರ್ಭಗಳಲ್ಲಿ ಆಫ್ ರೋಡ್ ಕೌಶಲ್ಯವನ್ನು ಹೊಂದಿರುವ ವಾಹನಗಳು ಘಾಟಿ ಪ್ರದೇಶಗಳಲ್ಲಿ ಸಂಚರಿಸುವಾಗ ಸಾಕಷ್ಟು ಅನುಕೂಲಕರವಾಗಿರುತ್ತವೆ. ನೀವು ಈ ವೀಡಿಯೋದಲ್ಲೂ ಕೂಡ ಉಕ್ಕಿ ಹರಿಯುತ್ತಿರುವ ನದಿಯನ್ನು ದಾಟುತ್ತಿರುವ ಥಾರ್ ಸಾಮರ್ಥ್ಯವನ್ನು ನೋಡಬಹುದು.

ಪ್ರವಾಹದಲ್ಲೂ ತನ್ನ ಸಾಮರ್ಥ್ಯ ತೋರಿದ ಮಹಿಂದ್ರಾ ಥಾರ್

ಈ ವೀಡಿಯೋದಲ್ಲಿ ಸ್ನಾರ್ಕೆಲ್ ಹೊರತುಪಡಿಸಿ ಹೆಚ್ಚೆನು ಮಾಡಿಫೈ ಆಗದ ಮಹಿಂದ್ರ ಥಾರ್ ಕಾರು ನದಿಯಲ್ಲಿ ಇಳಿಯುತ್ತಿರುವುದನ್ನು ನೋಡಬಹುದು. ಮಹೀಂದ್ರಾ ಥಾರ್ ಕಾರು ನದಿಗೆ ಇಳಿದ ಕಾರನ್ನು ಉಕ್ಕುತ್ತಿರುವ ನದಿಯು ತನ್ನತ್ತ ಸೆಳೆಯುತ್ತಿರುವುದನ್ನು ಮತ್ತು ಕಾರಿನ ಬಾನೆಟ್ ಮುಳುಗುತ್ತಿರುವುದನ್ನು ನೋಡಬಹುದು.

ಪ್ರವಾಹದಲ್ಲೂ ತನ್ನ ಸಾಮರ್ಥ್ಯ ತೋರಿದ ಮಹಿಂದ್ರಾ ಥಾರ್

ಆದರೆ ಇದ್ಯಾವುದನ್ನು ಲೆಕ್ಕಿಸದೇ ನದಿಯನ್ನು ದಾಟಿದ ಥಾರ್ ಕಾರು ಅಲ್ಲಿ ನೆರೆದಿದ್ದ ಜನರಿಗೆ ಅಚ್ಚರಿ ಮೂಡಿಸಿದಲ್ಲದೇ ಯಾವುದೇ ತೊಂದರೆ ಇಲ್ಲದಂತೆ ನುಗ್ಗಿ ಹೊರ ಬಂದಿತು.

ಮಹೀಂದ್ರಾ ಥಾರ್ ಕಾರು ಭಾರತದಲ್ಲಿರುವ ಅಧಿಕ ಸಾಮರ್ಥ್ಯದ ಕಾರುಗಳಲ್ಲಿ ಒಂದಾಗಿದೆ. ಈ ಥಾರ್ ಕಾರು 105 ಬಿಹೆಚ್‍ಪಿ ಉತ್ಪಾದನಾ ಸಾಮರ್ಥ್ಯದ 2.5 ಲೀಟರ್ ಡೀಸೆಲ್ ಇಂಜಿನ್ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಮತ್ತು 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ಥಾರ್ ಕಾರು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲದು.

ಪ್ರವಾಹದಲ್ಲೂ ತನ್ನ ಸಾಮರ್ಥ್ಯ ತೋರಿದ ಮಹಿಂದ್ರಾ ಥಾರ್

ಈಗ ಮಾರಾಟವಾಗುತ್ತಿರುವ ಥಾರ್ ಕಾರಿನಲ್ಲಿ ಸುಧಾರಿತ ಮಾಲಿನ್ಯ ತಡೆ ಮತ್ತು ಸುರಕ್ಷಾ ಮಾನದಂಡಗಳನ್ನು ಅಳವಡಿಸಲಾಗಿಲ್ಲ. ಆದ ಕಾರಣ 2020ರ ಅವೃತ್ತಿಯ ಕಾರುಗಳಲ್ಲಿ ಮಹತ್ವದ ಬದಲಾವಣೆ ತರಲು ಮಹೀಂದ್ರ ಕಂಪನಿಯು ಚಿಂತನೆ ನಡೆಸುತ್ತಿದೆ.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಪ್ರವಾಹದಲ್ಲೂ ತನ್ನ ಸಾಮರ್ಥ್ಯ ತೋರಿದ ಮಹಿಂದ್ರಾ ಥಾರ್

ಸುಧಾರಿತ ಮಾದರಿಯ ಥಾರ್ ಕಾರನ್ನು ಭಾರತದ ರಸ್ತೆಗಳಲ್ಲಿ ಈಗಾಗಲೇ ಪರೀಕ್ಷೆ ಮಾಡಲಾಗುತ್ತಿದ್ದು, ಹೊಸ ಎಸ್.ಯು.ವಿ ಕಾರು ಈಗಿರುವ ಕಾರಿಗಿಂತ ದೊಡ್ಡ ಗಾತ್ರ ಹೊಂದಿದೆ. ಜೊತೆಗೆ 140 ಬಿ‍ಹೆಚ್‍ಪಿ. ಉತ್ಪಾದಿಸಬಲ್ಲ 2.0 ಲೀಟರ್ ಡೀಸೆಲ್ ಸಾಮರ್ಥ್ಯವಿರುವ ಹೊಸ ಥಾರ್ ಕಾರು ಬಿ.ಎಸ್ 6 ಮಾನದಂಡಕ್ಕೆ ತಕ್ಕಂತೆ ಇರಲಿದೆ. ಹೀಗಾಗಿ ಏಪ್ರಿಲ್ 1, 2020ಕ್ಕೆ ಜಾರಿಗೆ ಬರಲಿರುವ ಬಿಎಸ್ 6 ನಿಯಮ ಜಾರಿಗೂ ಮುನ್ನ ಹೊಸ ಅವೃತ್ತಿಯ ಮಹೀಂದ್ರ ಥಾರ್ ಕಾರು ಮಾರುಕಟ್ಟೆಗೆ ಪ್ರವೇಶ ಪಡೆಯುವ ತವಕದಲ್ಲಿದೆ.

Source: Shantonil Nag

Most Read Articles

Kannada
English summary
Mahindra Thar Crosses Raging River — Shows Its Fording Skills. Read in Kannada.
Story first published: Monday, April 15, 2019, 17:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X