ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಮಹೀಂದ್ರಾ ಕಂಪಮಿಯು ತನ್ನ 2020ರ ಥಾರ್ ಅನ್ನು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. 2020ರ ಥಾರ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ಟೀಮ್ ಬಿ‍ಹೆಚ್‍‍ಪಿ ಬಹಿರಂಗಪಡಿಸಿದೆ. ಮಹೀಂದ್ರಾ ಥಾರ್ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

2020ರ ಏಪ್ರಿಲ್ ತಿಂಗಳಿನಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಜಾರಿಯಾಗುವುದರಿಂದ ಎಲ್ಲಾ ಕಂಪನಿಯು ತನ್ನ ಸರಣಿಯಲ್ಲಿರುವ ವಾಹನಗಳನ್ನು ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಅದರಂತೆ ಮಹೀಂದ್ರಾ ಕಂಪನಿಯು ತನ್ನ ಥಾರ್ ಎಸ್‍‍ಯುವಿಯನ್ನು ಬಿಎಸ್-6 ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗುತ್ತಿದೆ ಎಂದು ನಿರೀಕ್ಷಿಸುತ್ತೇವೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

2020ರ ಮಹೀಂದ್ರಾ ಥಾರ್ ಎಸ್‍‍ಯುವಿಯ ಇಂಟಿರಿಯರ್‍‍ನ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಮೊದಲ ನೋಟದಲ್ಲಿ ಮುಂಬರುವ ಥಾರ್ ಹಲವಾರು ಹೊಸ ಫೀಚರ್ಸ್‍ಗಳನ್ನು ಅಳವಡಿಸಿರುವುದು ತಿಳಿದು ಬರುತ್ತದೆ. ಮಹೀಂದ್ರಾ ಸ್ಕಾರ್ಪಿಯೋ ಮಾದರಿಯ ಹಲವಾರು ಫೀಚರ್ಸ್‍‍ಗಳನ್ನು ಹೊಸ ಥಾರ್ ಎಸ್‍‍ಯುವಿಯಲ್ಲಿ ಅಳವಡಿಸಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

2020 ಮಹೀಂದ್ರಾ ಥಾರ್ ಬಗ್ಗೆ ಹೇಳುವುದಾದರೆ, ಈ ಎಸ್‍‍ಯುವಿಯನ್ನು ಸಾಫ್ಟ್ ಟಾಪ್ ಹಾಗೂ ಹಾರ್ಡ್ ಟಾಪ್ - ಎಂಬ ಎರಡು ಡೋರ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು. ಎಸ್‍‍ಯುವಿಯ ಹೊರಭಾಗವು ಜೀಪ್ ಶೈಲಿಯ ವಿನ್ಯಾಸವನ್ನು ಹೊಂದಿದ್ದರೆ, ಇಂಟಿರಿಯರ್ ಅನ್ನು ಹೆಚ್ಚು ಅಪ್‍‍ಡೇಟ್ ಮಾಡಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

ಹೊಸ ಥಾರ್ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡಾಯ್ಡ್ ಆಟೋವನ್ನು ಹೊಂದಿದೆ. ಹೊಸ ಸ್ಟೀರಿಂಗ್ ವ್ಹೀಲ್‍‍ನ ಹಿಂದೆ ಡಿಜಿ‍ಟಲ್ ಎಂಐಡಿ(ಮಲ್ಟಿ-ಇನ್ಫಾರ್ಮಶನ್ ಡಿಸ್‍‍ಪ್ಲೇಯೊಂದಿಗೆ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

ಹೊಸ ಮಹೀಂದ್ರಾ ಥಾರ್‍‍ನ 4×4 ಲಿವರ್ ವಿಭಿನ್ನವಾಗಿದೆ. ಇದರಲ್ಲಿ 2ಡಬ್ಲ್ಯುಡಿ(ಆರ್‍‍ಡಬ್ಲ್ಯುಡಿ) ಹೈ, 4ಡಬ್ಲ್ಯುಡಿ ಹೈ ಮತ್ತು 4 ಡಬ್ಲ್ಯು ಡಿ ಲೋ ಎಂಬ ಮೂರು ಮೋಡ್‍‍ಗಳಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

ಮಾರುಕಟ್ಟೆಯಲ್ಲಿರುವ ಥಾರ್ 2.5 ಲೀಟರ್ ಡೀಸೆಲ್ ಬಿಎಸ್ 4 ಎಂಜಿನ್‌ ಹೊಂದಿದೆ. ಈ ಎಂಜಿನ್ 105 ಬಿ‍‍ಹೆಚ್‌ಪಿ ಪವರ್ ಹಾಗೂ 247 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ಎಸ್‍‍ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.64 ಲಕ್ಷದಿಂದ 10.1 ಲಕ್ಷಗಳಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

ಹೊಸ ಥಾರ್ ಹೆಚ್ಚು ಬಲಶಾಲಿಯಾದ 120 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಹೊಸ ಫೀಚರ್, ದೊಡ್ಡ ಗಾತ್ರದ ಬಾಡಿ, ಬಲಶಾಲಿಯಾದ ಬಿಎಸ್ 6 ಡೀಸೆಲ್ ಎಂಜಿನ್ ಹೊಂದಲಿರುವ ಹೊಸ ಥಾರ್‌ನ ಬೆಲೆಯು ಮಾರುಕಟ್ಟೆಯಲ್ಲಿರುವ ಥಾರ್‌ಗಿಂತ ಹೆಚ್ಚಿರುವ ಸಾಧ್ಯತೆಗಳಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್

ಬಿಡುಗಡೆಯ ನಂತರ ಈ ಎಸ್‍‍ಯುವಿ ಹೊಸ ತಲೆಮಾರಿನ ಮಹೀಂದ್ರಾ ಥಾರ್ 2020 ಕೆಳಗಿನ ಸರಣಿಯಲ್ಲಿರಲಿದೆ. ಹಾಗೂ ಮಾರುಕಟ್ಟೆಯಲ್ಲಿರುವ ಥಾರ್‍‍ಗಿಂತ ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಹೊ‍‍ಸ ಮಹೀಂದ್ರಾ ಎಸ್‍‍ಯುವಿಯು ಬಿಎಸ್-6 ಎಂಜಿನ್ ಅನ್ನು ಹೊಂದೊರಲಿದೆ.

Article Published On: Saturday, December 21, 2019, 11:49 [IST]
English summary
2020 Mahindra Thar front seats spied - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+