2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

2020ರ ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಇತ್ತೀಚೆಗೆ ಎಂಜಿನ್ ಕ್ಷಮತೆಯ ಪರೀಕ್ಷೆ ನಡೆಸುತ್ತಿರುವ ವೇಳೆ ಕಾಣಿಸಿಕೊಂಡಿದೆ. 2020ರ ಮಹೀಂದ್ರಾ ಟಿಯುವಿ 300 ಪ್ಲಸ್ ಟಿಯುವಿ300 ಪ್ಲಸ್ ತನ್ನ ಪ್ಲಾಟ್‌ಫಾರ್ಮ್‍‍ನಲ್ಲಿ 2020 ಥಾರ್ ಮತ್ತು ನೆಕ್ಸ್ಟ್ ಜನರೇಷನ್ ಸ್ಕಾರ್ಪಿಯೋದೊಂದಿಗೆ ಮಾರಾಟವಾಗಲಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ಟಿಯುವಿ 300 ಪ್ಲಸ್ ಕಾರು ಹೊಸ ಎಮಿಷನ್ ನಿಯಮವನ್ನು ಅನುಸರಿಸಲು ಬಿಎಸ್-6 ಎಂಜಿನ್ ಅನ್ನು ಹೊಂದಿರುತ್ತದೆ. ಇದು ವಿಭಿನ್ನವಾದ ವೈಶಿಷ್ಟ್ಯಗಳೊಂದಿಗೆ ಮುಂಭಾಗದಲ್ಲಿ ಹೊಸ ಆಕರ್ಷಕ ವಿನ್ಯಾಸವನ್ನು ಸಹ ಹೊಂದಿರುತ್ತದೆ. ಮುಂದಿನ ವರ್ಷ ಹೊಸ ಎಮಿಷನ್ ನಿಯಮ ಜಾರಿಗೆ ಬರುವ ಮೊದಲು ಹೊಸ ಟಿಯುವಿ 300 ಪ್ಲಸ್ 2020 ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆ ಇದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ಹಳೆಯ ಸ್ಪೈ ಚಿತ್ರಗಳಲ್ಲಿ ಇರುವ ಕಾರಿನ ಮಾದರಿಯಲ್ಲೇ ಕಪ್ಪು ಕನಿಕಾಂಬ್ ಗ್ರಿಲ್ ಮಾದರಿಯ ಜೊತೆಗೆ ಮರು-ವಿನ್ಯಾಸದೊಂದಿಗೆ ಆರು-ಸ್ಲಾಟ್ ಗ್ರಿಲ್ ಮೂಲಕ ವಿಭಿನ್ನವಾಗಿ ಕಣ್ಣಿಗೆ ಕುಕ್ಕುವ ರೀತಿಯಲ್ಲಿಇದರ ವಿನ್ಪ್ಯಾಸವಿದೆ. ಮುಂಭಾಗದಲ್ಲಿನ ಇತರ ಬದಲಾವಣೆಗಳೊಂದಿಗೆ ಪವರ್‍‍ಫುಲ್ ಹೆಡ್‍‍ಲೈಡ್ ಜೊತೆಯಲ್ಲಿ ಫಾಗ್ ಲೈಟ್ ಅನ್ನು ಅಳವಡಿಸಲಾಗಿದೆ. ಕಾರಿನ ಮುಂಭಾಗದಲ್ಲಿ ಬಂಪರ್ ಸುತ್ತ ಮುತ್ತ ವಿಭಿನ್ನ ಶೈಲಿಯೊಂದಿಗೆ ಕೂಡಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ಕಾರಿನ ವಿನ್ಯಾಸ

ಕಾರಿನ ಹಳೆಯ ಶೈಲಿಯ ಸ್ಪೈಡ್ ಟೆಸ್ಟ್-ಮ್ಯೂಲ್ ಅನ್ನು ಸಂಪೂರ್ಣವಾಗಿ ಮರೆಮಾಚಿದ್ದಾರೆ. ಎಸ್‍‍ಯುವಿಯ ಸೈಡ್ ಪ್ರೊಫೈಲ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹಿಂಭಾಗದಲ್ಲಿ, ಟಿಯುವಿ 300 ಪ್ಲಸ್ ಮಾದರಿಯ ಅದೇ ಟೈಲ್‌ಗೇಟ್-ಮೌಂಟಡ್ ಸ್ಪ್ರೇ ಟೈರನ್ನು ಜೋಡಿಸಲಾಗಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ಎಂಜಿನ್ ಸಾರ್ಮಾಥ್ಯ

ಸಧ್ಯ ಇರುವ ಮಾದರಿಯಲ್ಲಿ ಕೆಲವು ಮೆಕ್ಯಾನಿಕಲ್ ಬದಲಾವಣೆಗಳೊಂದಿಗೆ 2020ರ ಟಿಯುವಿ 300 ಪ್ಲಸ್ ಅನ್ನು ಪರಿಚಯಿಸಬಹುದು. ಈಗೀರುವ ಮಾದರಿಯು 1.5 ಲೀಟರ್ ಎಮ್‍‍ಹೆಚ್‍‍ಎಡಬ್ಲ್ಯುಕೆ100 ಎರಡು ಹಂತದ ಟರ್ಬೋಚಾರ್ಜರ್ ಡೀಸೆಲ್ ಎಂಜಿನ್ 100ಬಿಹೆಚ್‍‍ಪಿ ಉತ್ಪಾದಿಸುವ ಗುಣವನ್ನು ಹೊಂದಿದೆ. ಇದೇ ಎಂಜಿನ್ ಬಿಎಸ್-6 ಎಮಿಷನ್ ನಿಯಮಗಳಿಗೆ ಅನುಸರವಾಗಿರುವ ಹಾಗೆ ಟಿಯುವಿ 300 ಪ್ಲಸ್‍ ಎಂಜಿನ್ ಅನ್ನು ಅಭಿವೃದ್ಧಿಗೊಳಲಾಗಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ಮಹೀಂದ್ರಾ ಟಿಯುವಿ 300 ಎಸ್‍ಯುವಿ ಕಾರು ಭಾರತದ ಮಾರುಕಟ್ಟೆಯಲ್ಲಿ 2015 ರಿಂದ ಮಾರಾಟವಾಗುತ್ತಿದ್ದು, ಟಿಯುವಿ 300 ಕಾರು ಇಷ್ಟು ವರ್ಷಗಳಲ್ಲಿ ಕೇವಲ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಪಡೆಯುತ್ತಾ ಬಂದಿದೆ. ಮಾರುಕಟ್ಟೆಯಲ್ಲಿನ ಇತರ ಕಾಂಪ್ಯಾಕ್ಟ್-ಎಸ್‌ಯುವಿಗಳ ವಿರುದ್ಧ ಸ್ಪರ್ಧಿಸಲು ಟಿಯುವಿ 300 ಪ್ಲಸ್ ಹೆಚ್ಚು ವೈಶಿಷ್ಟ್ಯ-ಸಮೃದ್ಧವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರಾ ಎರಡು ಮಾದರಿಗಳನ್ನು ಹೊಂದಿದೆ, ಟಿಯುವಿ 300 ಮತ್ತು ಎಕ್ಸ್‌ಯುವಿ 300. ಎಕ್ಸ್‌ಯುವಿ 300 ಅದರ ಆಕರ್ಷಕ ಲುಕ್ ಮತ್ತು ವೈಶಿಷ್ಟ್ಯ-ಐಷಾರಾಮಿ ಒಳಭಾಗದಿಂದ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದರೂ, ಟಿಯುವಿ300 ತನ್ನ ಬಾಕ್ಸಿ-ವಿನ್ಯಾಸದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿತಿದೆ. ಆದರೆ 2020 ರಲ್ಲಿ ಹೊಸ ಆವೃತ್ತಿಯನ್ನು ಪರಿಚಯಿಸುವ ಮೂಲಕ ಟಿಯುವಿ 300 ಅನ್ನು ಬಿಟ್ಟುಕೊಡಲು ಕಂಪನಿಯು ಸಿದ್ಧವಾಗಿಲ್ಲ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ವಾಹನದ ಬೇಡಿಕೆ ಕಡಿಮೆ ಇದ್ದರು ಕೂಡ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಹೊಸ ಮಾದರಿಗಳೊಂದಿಗೆ ಪರಿಚಯವಾಗುತ್ತಿದೆ. 2020ರ ಟಿಯುವಿ 300 ಪ್ಲಸ್ ಮತ್ತು ಎಕ್ಸ್‌ಯುವಿ 300 ಕಾರುಗಳು ಹ್ಯುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರುಗಳಿಗೆ ಪೈಪೋಟಿ ನೀಡಲಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಪ್ಲಸ್

ಟಿಯುವಿ 300 ಪ್ಲಸ್ ಕಾಂಪಿಟೇಟಿವ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಬಿಡುಗಡೆಯಾಗಲಿದೆ. ಹೊಸ ಬದಲಾವಣೆಯಿಂದಾಗಿ ಎಸ್‍‍ಯುವಿ ಕಾರುಗಳು ಉತ್ತಮವಾಗಿ ಮಾರಾಟವಾಗುವ ಭರವಸೆ ಸಂಸ್ಥೆಗೆ ಇದೆ. 2020 ಏಪ್ರಿಲ್ 1 ರಂದು ಬಿಎಸ್-6 ಎಮಿಷನ್ ಕಾಯ್ದೆಯ ನಿಯಮದ ಗಡುವಿನೊಂದಿಗೆ, ಮಹೀಂದ್ರಾ ಮುಂದಿನ ವರ್ಷದ ಆರಂಭದಲ್ಲಿ ತಮ್ಮ ಪ್ರಸ್ತುತ ಸಾಲಿನಿಂದ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

Source: Gaadiwaadi

Most Read Articles

Kannada
English summary
2020 Mahindra TUV300 Plus Spied Ahead Of Launch Early Next Year. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X