Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರುತಿ ಸುಜುಕಿ ಬ್ರೆಝಾಗಿಂತ ಮಹೀಂದ್ರಾ ಎಕ್ಸ್‌ಯುವಿ300 ಆಯ್ಕೆ ಉತ್ತಮವೇ?
ನಿನ್ನೆಯಷ್ಟೇ ಮಹೀಂದ್ರಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಅತಿ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಿರುವ ಅತ್ಯುತ್ತಮ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ಮಹೀಂದ್ರಾ ಸಂಸ್ಥೆಯು ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಭಾರತದಲ್ಲಿ ಸದ್ಯ ರೂ.8 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಉತ್ತಮ ಸುರಕ್ಷತೆಯುಳ್ಳ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಇದೇ ನಿಟ್ಟಿನಲ್ಲಿ ತನ್ನ ಹೊಸ ಎಕ್ಸ್‌ಯುವಿ300 ಕಾರನ್ನು ನಿರ್ಮಾಣಗೊಳಿಸುವಲ್ಲಿ ಯಶಸ್ವಿಯಾಗಿರುವ ಮಹೀಂದ್ರಾ ಸಂಸ್ಥೆಯು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ತ್ರೀವ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಸುರಕ್ಷತೆಯ ವಿಚಾರವಾಗಿ ಕಾರು ಖರೀದಿದಾರರ ಮೆಚ್ಚುಗೆಗೆ ಪಾತ್ರವಾಗಿರುವ ಎಕ್ಸ್‌ಯುವಿ300 ಕಾರುಗಳು ಈಗಾಗಲೇ 5 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಸ್ವಿಕರಿಸಿರುವುದು ಮಹೀಂದ್ರಾ ಯಶಸ್ಸಿಗೆ ಮೊದಲ ಹೆಜ್ಜೆ ಎನ್ನಬಹುದು.

ಸದ್ಯ ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಕಾರು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಸ್ಯಾಂಗ್‌ಯಾಂಗ್ ನಿರ್ಮಾಣದ ಜನಪ್ರಿಯ ಟಿವೊಲಿ ಕಾರಿನ ಮಾದರಿಯಲ್ಲೇ ದೇಶಿಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಕ್ಸ್‌ಯುವಿ300 ಕಾರುನ್ನು ಮರು ನಿರ್ಮಾಣ ಮಾಡಿದೆ.

ಎಕ್ಸ್‌ಯುವಿ300 ಕಾರುಗಳು ಒಟ್ಟು ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ವೆರಿಯೆಂಟ್‌ಗಳನ್ನು ಸಹ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಖರೀದಿಸಬಹುದಾಗಿದೆ. ಹೀಗಾಗಿ ಕಾರಿನಲ್ಲಿ ನೀಡಲಾಗಿರುವ ಫೀಚರ್ಸ್‌ಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದ್ದು, ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.7.90 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯು ರೂ. 10.80 ಲಕ್ಷ ಬೆಲೆ ಪಡೆದುಕೊಂಡಿವೆ.

ವೆರಿಯೆಂಟ್‌ಗಳು - ಪೆಟ್ರೋಲ್ ವರ್ಷನ್ - ಡೀಸೆಲ್ ವರ್ಷನ್
ಡಬ್ಲ್ಯು4 - ರೂ. 7,90,000 - ರೂ. 8,49,000
ಡಬ್ಲ್ಯು6- ರೂ. 8,75,000 - ರೂ. 9,30,000
ಡಬ್ಲ್ಯು8- ರೂ. 10,25,000 -ರೂ. 10,80,000

ಇದರಲ್ಲಿ ಮತ್ತೊಂದು ಗಮನಿಸಬೇಕಾದ ಪ್ರಮುಖ ಅಂಶ ಅಂದ್ರೆ, ಡಬ್ಲ್ಯು8 ವೆರಿಯೆಂಟ್‌ನಲ್ಲಿ ಆಪ್ಷನಲ್ ಎನ್ನುವ ಹೊಸ ಆಯ್ಕೆ ನೀಡಲಾಗಿದ್ದು, ಉಳಿದ ಮಾದರಿಗಳಿಂತ ತುಸು ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಈ ಕಾರಿಗೆ ಹೆಚ್ಚುವರಿಯಾಗಿ ರೂ.1.19 ಲಕ್ಷ ಪಾವತಿಸಬೇಕಾಗುತ್ತೆ.

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು 5 ಆಸನವುಳ್ಳ ಕಾರು ಮಾದರಿಯಾಗಿದ್ದು, ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯಬಲ್ಲ ಬಹುತೇಕ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರಿನಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ.

ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳು ಇದರಲ್ಲಿವೆ.

ಹಾಗೆಯೇ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್
ಹೊಸ ಎಕ್ಸ್‌ಯುವಿ300 ಡಿಸೇಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿದ್ದು, ಪೆಟ್ರೋಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಎಂಜಿನ್‌ನೊಂದಿಗೆ 110-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಉತ್ತಮ ಇಂಧನ ಕ್ಷಮತೆ ಹೊಂದಿವೆ.

ಖರೀದಿಗೆ ಲಭ್ಯವಿರುವ ಬಣ್ಣಗಳು
ಹೊಸ ಎಕ್ಸ್‌ಯುವಿ300 ಕಾರುಗಳು ಒಟ್ಟು ಆರು ಬಣ್ಣಗಳಲ್ಲಿ ಲಭ್ಯವಿದ್ದು, ರೆಡ್ ರೆಜ್, ಸನ್ ಬರ್ಸ್ಟ್ ಆರೇಂಜ್, ಪರ್ಲ್ ವೈಟ್, ನಪೊಲಿ ಬ್ಲ್ಯಾಕ್, ಡಿ ಸ್ಯಾಟ್ ಸಿಲ್ವರ್, ಅಕ್ವಾಮರಿಯನ್ ಎನ್ನುವ ಬಣ್ಣಗಳ ಆಯ್ಕೆ ಹೊಂದಿದೆ.

ಎಕ್ಸ್‌ಯುವಿ300 ಕಾರಿನ ಉದ್ದಳತೆ(ಎಂಎಂ ಗಳಲ್ಲಿ)
ಉದ್ದ- 3,995 ಎಂಎಂ
ಅಗಲ- 1,821 ಎಂಎಂ
ಎತ್ತರ- 1,617 ಎಂಎಂ
ವೀಲ್ಹ್ ಬೆಸ್- 2,600 ಎಂಎಂ
ಬೂಟ್ ಸ್ಪೆಸ್- 265 ಲೀಟರ್
ಫ್ಯೂಲ್ ಟ್ಯಾಂಕ್ ಸಾಮರ್ಥ್ಯ- 42 ಲೀಟರ್

ಒಟ್ಟಿನಲ್ಲಿ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಕ್ಸ್‌ಯುವಿ300 ಮಾದರಿಯು ಬೆಲೆ ಮತ್ತು ಸುರಕ್ಷತೆಯ ದೃಷ್ಠಿಯಿಂದ ಆಯ್ಕೆಗೆ ಉತ್ತಮವಾಗಿದ್ದು, ಇದು ನೇರವಾಗಿ ಮಾರುತಿ ಸುಜುಕಿ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.