ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆಯೆಂತೆ ಮಹೀಂದ್ರಾ ಹೊಸ ಎಲೆಕ್ಟ್ರಿಕ್ ಕಾರು..!
ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ಖರೀದಿ ಮೇಲೆ ಆಕರ್ಷಕ ಸಬ್ಸಡಿ ದರಗಳನ್ನು ಘೋಷಣೆ ಮಾಡುತ್ತಿದ್ದಂತೆ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದು, ಗ್ರಾಹಕರನ್ನು ತಮ್ಮತ್ತ ಸೆಳೆಯಲು ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ತವಕದಲ್ಲಿವೆ.

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಸಹ ಕಾರು ಮಾರಾಟದಲ್ಲಿ ಹೊಸ ಮುನ್ನಡೆ ಬರೆಯುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸ್ಯಾಂಗ್‌ಯಾಂಗ್ ಜೊತೆಗೂಡಿ ಅಭಿವೃದ್ಧಿಪಡಿಸಲಾಗಿರುವ ಹೊಸ ಎಲೆಕ್ಟ್ರಿಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಬಿಡುಗಡೆಗೂ ಮುನ್ನವೇ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ದೇಶದ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತಷ್ಟು ವಿನೂತನ ಎಲೆಕ್ಟ್ರಿಕ್ ಕಾರುಗಳನ್ನು ಹೊರತರುವ ಯೋಜನೆಯಲ್ಲಿದ್ದು, ದಕ್ಷಿಣ ಕೊರಿಯಾದ ಆಟೋ ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರು ಒಂದನ್ನು ಸಿದ್ದಗೊಳಿಸಿದೆ.

ಮಹೀಂದ್ರಾ ಸಂಸ್ಥೆಯು ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಕೆಯುವಿ100 ಎಲೆಕ್ಟ್ರಿಕ್ ವರ್ಷನ್ ಪರಿಚಯಿಸುವ ಯೋಜನೆಯಲ್ಲಿದ್ದು. ತದನಂತರ ಸ್ಯಾಂಗ್‌ಯ್ಯಾಂಗ್ ಜೊತೆಗೂಡಿ ನಿರ್ಮಾಣ ಮಾಡಲಾಗಿರುವ ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಎಲೆಕ್ಟ್ರಿಕ್ ಮಾದರಿಯನ್ನು ಹೊರತರುವ ಯೋಜನೆಯಲ್ಲಿದೆ.

ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ಸಂಸ್ಥೆಯು ಸದ್ಯ ಹೊಸ ಕಾರಿನ ಹೆಸರನ್ನು ಬಹಿರಂಗ ಮಾಡಿಲ್ಲವಾದರೂ ಹೊಸ ಕಾರಿಗೆ ಎಸ್201 ಎನ್ನುವ ಕೋಡ್ ಆಧಾರ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಫೆಬ್ರುವರಿ 14ರಂದು ಬಿಡುಗಡೆಯಾದ ಎಕ್ಸ್‌ಯುವಿ300 ಹೆಸರನ್ನೇ ಹೊಸ ಎಲೆಕ್ಟ್ರಿಕ್ ಕಾರಿಗೂ ಮುಂದುವರಿಸುವ ಸಾಧ್ಯತೆಗಳಿವೆ.

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದೆ.

ಇದರಲ್ಲಿ ಮೊದಲ ಬಾರಿಗೆ ಎಸ್‌ಯುವಿ ಆವೃತ್ತಿಗಳನ್ನು ಎಲೆಕ್ಟ್ರಿಕ್ ಮಾದರಿಯಾಗಿಸಲು ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಮೊದಲು ಕೆಯುವಿ100 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿ ತದನಂತರವಷ್ಟೇ ಸ್ಯಾಂಗ್‌ಯಾಂಗ್ ಜೊತೆಗಿನ ಎಕ್ಸ್‌ಯುವಿ300 ಎಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ.

ಬ್ಯಾಟರಿ ವೈಶಿಷ್ಟ್ಯತೆ
ಈ ಹಿಂದೆ ಹೊಸ ಎಸ್201 ಹೆಸರಿನ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಮಾಹಿತಿಯನ್ನು ಹಂಚಿಕೊಂಡಿದ್ದ ಮಹೀಂದ್ರಾ ಸಂಸ್ಥೆಯು 380ವಿ ಬ್ಯಾಟರಿ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 250ಕಿ.ಮಿ ಮೈಲೇಜ್ ರೇಂಜ್ ನೀಡುವುದಾಗಿ ಭರವಸೆ ನೀಡಿತ್ತು.
MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಇದೀಗ ಹೊಸ ಕಾರಿನ ಬ್ಯಾಟರಿ ಬಳಕೆ ಕುರಿತಾಗಿ ಮತ್ತಷ್ಟು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿರುವ ಮಹೀಂದ್ರಾ ಸಂಸ್ಥೆಯು 250ಕಿ.ಮಿ ಬದಲಾಗಿ 450ಕಿ.ಮಿ ಮತ್ತು 500 ಕಿ.ಮಿ ಮೈಲೇಜ್ ಸಾಮರ್ಥ್ಯದ ಬ್ಯಾಟರಿ ಒದಗಿಸುವ ಬಗ್ಗೆ ಸುಳಿವು ನೀಡಿದೆ.

ಇದಕ್ಕಾಗಿಯೇ ದಕ್ಷಿಣ ಕೊರಿಯಾದ ಎಲ್‌ಜಿ ಕೆಮಿಕಲ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಮಹೀಂದ್ರಾ ಸಂಸ್ಥೆಯು ಸ್ಮಾರ್ಟ್ ಲೀಥಿಯಂ-ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದು, ಮಹೀಂದ್ರಾ ಸಂಸ್ಥೆಯ ಎಲೆಕ್ಟ್ರಿಕ್ ಕಾರುಗಳಿಗಾಗಿ ಎಲ್‌ಜಿ ಕೆಮೆಕಲ್ಸ್ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿಗಳನ್ನು ನಿರ್ಮಾಣ ಮಾಡಲಿದೆ.
MOST READ: ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಕಾರಿನ ಬೆಲೆ ಮತ್ತು ಬಿಡುಗಡೆ(ಅಂದಾಜು)
ಅತ್ಯುತ್ತಮ ಮೈಲೇಜ್ ರೇಂಜ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಬೆಲೆಯು ಆನ್ ರೋಡ್ ಪ್ರಕಾರ ರೂ.18 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
Soucre: Motoroctane


Click it and Unblock the Notifications








