ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಅದು 2014ರ ಸಮಯ. ಡಿಎಸ್‌ಕೆ ಎನ್ನುವ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಸ್ವಂತ ಮನೆ ಕನಸು ಕಂಡಿದ್ದ ಸಾವಿರಾರು ಜನರನ್ನು ವಂಚಿಸಿ ನೂರಾರು ಕೋಟಿ ಸಂಪಾದನೆ ಮಾಡಿ ಮೆರೆದಾಡುತ್ತಿತ್ತು. ಆದ್ರೆ ಜನ ಸಾಮಾನ್ಯರಿಗೆ ವಂಚಿಸಿ ಸಂಪಾದನೆ ಮಾಡಿದ ಆಸ್ತಿ ಎಷ್ಟು ದಿನ ಇರುತ್ತೆ ಹೇಳಿ. ವಂಚನೆ ಮಾಡಿ ಮೆರೆದಾಡಿವರಿಗೆ ಒಂದಿಲ್ಲಾ ಒಂದು ದಿನ ಮಣ್ಣುಮುಕ್ಕುವ ಪರಿಸ್ಥಿತಿ ಬಂದೇ ಬರುತ್ತೆ ಅನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಹೌದು, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನೂರಾರು ಕೋಟಿ ವಂಚಿಸಿ ಮೆರೆದಾಡುತ್ತಿದ್ದ ಪುಣೆ ಉದ್ಯಮಿ ದೀಪಕ್ ಸಾಖಾರಾಮ್ ಕುಲಕರ್ಣಿ ಸದ್ಯ ಜೈಲು ಕಂಬಿ ಎಣಿಸುತ್ತಿದ್ದು, ಡಿಎಸ್‌ಕೆ ಸಂಸ್ಥೆಗೆ ಸೇರಿದ್ದ ಸುಮಾರು 19 ಕಾರುಗಳು ಇದೀಗ ಪೊಲೀಸರ ವಶದಲ್ಲಿವೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವುದರಿಂದ ಡಿಎಸ್‌ಕೆ ಸಂಸ್ಥೆಗೆ ಸೇರಿದ ಕಾರುಗಳು ಪೊಲೀಸ್ ಠಾಣೆ ಮುಂಭಾಗದಲ್ಲಿ ತುಕ್ಕು ಹಿಡಿಯುತ್ತಿದ್ದು, ವಂಚನೆ ಒಳಗಾದವರಿಗೆ ಪರಿಹಾರ ನೀಡಲು ಈ ಕಾರುಗಳನ್ನು ಹರಾಜು ಹಾಕಲು ಸಿದ್ದತೆ ನಡೆಸಲಾಗಿದೆ.

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

2001ರಿಂದ 2018ರ ಅವಧಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನದೆ ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುತ್ತಿದ್ದ ಡಿಎಸ್‌ಕೆ ಸಂಸ್ಥೆಯು ಪುಣೆ, ಮುಂಬೈ ಸೇರಿದಂತೆ ದೇಶದ ವಿವಿಧಡೆ ಸಾವಿರಾರು ಜನರಿಗೆ ಮೋಸ ಮಾಡಿ ಸಿಕ್ಕಿಬಿದ್ದಿದ್ದು, ಸ್ವಂತ ಮನೆ ಖರೀದಿ ಮಾಡಬೇಕೆಂಬ ಅದೆಷ್ಟೋ ಕುಟಂಬಗಳ ಕನಸನ್ನು ನೂಚ್ಚುನೂರು ಮಾಡಿತ್ತು.

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಬೋಗಸ್ ದಾಖಲೆಗಳು ಮತ್ತು ಇಲ್ಲದೆ ಇರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಜನರಿಗೆ ತೋರಿಸಿ ಲಕ್ಷ-ಲಕ್ಷ ಹಣವನ್ನು ಪಡೆದು ಕೊನೆಗೆ ನೀವು ಹಣವನ್ನು ನೀಡಿಯೇ ಇಲ್ಲವೆಂದು ಉಲ್ಟಾ ಹೊಡೆದಿತ್ತು. ಕೊನೆಗೂ ಪ್ರಕರಣವನ್ನು ಬೆನ್ನತ್ತಿದ್ದ ಪುಣೆ ಪೊಲೀಸರು ಕಳೆದ ವರ್ಷ ಕುಲಕರ್ಣಿ ದಂಪತಿಯನ್ನು ಯರವಾಡ ಜೈಲಿಗಟ್ಟಿತ್ತು.

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ವಂಚನೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ಸದ್ಯ ನೂರಾರು ಕೋಟಿ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದು ಕೋರ್ಟ್‌ಗೆ ಒಪ್ಪಿಸಿದ್ದಾರೆ. ತನಿಖೆ ವೇಳೆ ಡಿಎಸ್‌ಕೆ ಸಂಸ್ಥೆಗೆ ಸೇರಿದ 19 ಐಷಾರಾಮಿ ಕಾರುಗಳನ್ನು ಸಹ ವಶಕ್ಕೆ ಪಡೆಯಲಾಗಿದ್ದು, ವಂಚನೆಗೆ ಒಳಗಾದವರ ಪರಿಹಾರಕ್ಕಾಗಿ ವಶಪಡಿಸಿಕೊಳ್ಳಲಾದ ಎಲ್ಲಾ ಕಾರುಗಳನ್ನು ಹರಾಜು ಹಾಕಲಾಗುತ್ತಿದೆ.

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಇದಕ್ಕಾಗಿ ಕೋರ್ಟ್ ಅನುಮತಿಗಾಗಿ ಎದುರು ನೋಡುತ್ತಿರುವ ಪುಣೆ ಪೊಲೀಸರು ಕೋರ್ಟ್ ಅನುಮತಿ ನಂತರ ಹರಾಜು ಹಾಕಲಿದ್ದು, ಇದರಲ್ಲಿ ಪೋರ್ಷೆ ಮತ್ತು ಬಿಎಂಡಬ್ಲ್ಯು ಎರಡು ಕಾರುಗಳು ಬರೋಬ್ಬರಿ ಎರಡೂವರೆ ಕೋಟಿ ಬೆಲೆ ಬಾಳುತ್ತವೆ ಎನ್ನಲಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಇನ್ನುಳಿದಂತೆ 19 ಕಾರುಗಳಲ್ಲಿ ಬಿಎಂಡಬ್ಲ್ಯು ಮತ್ತು ಪೋರ್ಷೆ ಸೇರಿ 1 ಆಡಿ, 2 ಫಾರ್ಚೂನರ್, 6 ಟೊಯೊಟಾ ಇನೋವಾ ಕ್ರಿಸ್ಟಾ, 1 ಫೋರ್ಕ್ಸ್‌ವ್ಯಾಗನ್ ಟಿಗ್ವಾನ್, 1 ಸ್ಕೋಡಾ ಕರೋಕ್, 1 ಕ್ವಾಲಿಸ್, 1 ಬೆನೆಲಿ ಬೈಕ್, 1 ಸ್ಯಾಂಟ್ರೋ ಕಾರು ಕೂಡಾ ಪೊಲೀಸರ ವಶದಲ್ಲಿದ್ದು, ಮಾಲೀಕ ಜೈಲು ಪಾಲಾಗಿದ್ದರಿಂದ ಠಾಣೆಯ ಮುಂದೆ ಧೂಳು ಹಿಡಿಯುತ್ತಿವೆ.

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಕೆಲವು ಮೂಲಗಳ ಪ್ರಕಾರ, ಡಿಎಸ್‌ಕೆ ಒಡೆತನದಲ್ಲಿ ಒಟ್ಟು 46 ಕಾರುಗಳಿವೆ ಎಂದು ಹೇಳಲಾಗಿದ್ದು, 459 ಆಸ್ತಿ ಪತ್ರಗಳು ಮತ್ತು 276 ಬ್ಯಾಂಕ್ ಅಕೌಂಟ್‌ಗಳ ಮೂಲಕ ಭಾರೀ ಪ್ರಮಾಣದಲ್ಲಿ ವಂಚನೆ ಮಾಡಿರುವುದನ್ನು ಪುಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಹೀಗಾಗಿ ಡಿಎಸ್‌ಕೆ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ಇನ್ನು ಕೂಡಾ ನಡೆಯುತ್ತಲೇ ಇದ್ದು, ಮುಂದಿನ ಕೆಲವೇ ದಿನಗಳಲ್ಲಿ ವಶಪಡಿಸಿಕೊಳ್ಳಲಾದ ಆಸ್ತಿ ಮತ್ತು ಕಾರುಗಳನ್ನು ಹರಾಜು ಹಾಕುವ ಮೂಲಕ ವಂಚನೆ ಒಳಗಾದವರಿಗೆ ಪರಿಹಾರ ನೀಡಲು ಸಿದ್ದತೆ ನಡೆಸಲಾಗುತ್ತಿದೆ.

Source: hindustantimes

Most Read Articles

Kannada
English summary
Seized DSK vehicles worth crores gather dust at Pune police grounds. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X