ಎಕ್ಸ್‌ಯುವಿ 300 ಉತ್ಪಾದನೆಯಲ್ಲಿ ಮಹೀಂದ್ರಾ ಹೊಸ ಮೈಲಿಗಲ್ಲು

2019 ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್‌ಯುವಿ300 ಕಾರು ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿ ಉತ್ತಮವಾದ ಪ್ರಗತಿಯನ್ನು ದಾಖಲಿಸುತ್ತಿದೆ. ಈಗ ಎಕ್ಸ್‌ಯುವಿ 300 ಕಾರು ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಮಹೀಂದ್ರಾ ಎಕ್ಸ್‌ಯುವಿ300 ಕಾರು ಈಗ ತನ್ನ ಉತ್ಪಾದನೆಯ 25,000ದ ಹೊಸ ಕಾರ್ ಅನ್ನು ಹೊರತಂದಿದೆ. ಮಹೀಂದ್ರಾ ಕಂಪನಿಯು, ಎಕ್ಸ್‌ಯುವಿ300 ಸರಣಿಯಲ್ಲಿ ಡಬ್ಲ್ಯು4, ಡಬ್ಲ್ಯು6, ಡಬ್ಲ್ಯು 8 ಹಾಗೂ ಡಬ್ಲ್ಯು8(ಒ) ಮಾದರಿಯ ಕಾರುಗಳನ್ನು ಉತ್ಪಾದಿಸುತ್ತದೆ.

ಎಕ್ಸ್‌ಯುವಿ 300 ಉತ್ಪಾದನೆಯಲ್ಲಿ ಮಹೀಂದ್ರಾ ಹೊಸ ಮೈಲಿಗಲ್ಲು

ಈ ಕಾರಿನ ಮೂಲ ಮಾದರಿಯ ಬೆಲೆಯು ರೂ.7.90 ಲಕ್ಷಗಳಾಗಿದ್ದರೆ, ಟಾಪ್ ಮಾದರಿಯ ಬೆಲೆಯು ರೂ.11.99 ಲಕ್ಷಗಳಾಗಿದೆ. ಎಕ್ಸ್‌ಯುವಿ300, ಟಾಟಾ ನೆಕ್ಸಾನ್ ಕಾರ್ ಅನ್ನು ಹಿಂದಿಕ್ಕಿ, ಸಬ್ 4 ಮೀಟರ್ ಸೆಗ್‍‍ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಎಸ್‍‍ಯುವಿಯಲ್ಲಿ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 5,000 ಆರ್‍‍ಪಿಎಂನಲ್ಲಿ 110 ಬಿಹೆಚ್‍‍ಪಿ ಹಾಗೂ 2,000-3,500 ಆರ್‍‍ಪಿಎಂನಲ್ಲಿ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಕ್ಸ್‌ಯುವಿ 300 ಉತ್ಪಾದನೆಯಲ್ಲಿ ಮಹೀಂದ್ರಾ ಹೊಸ ಮೈಲಿಗಲ್ಲು

1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ 3,750 ಆರ್‌ಪಿಎಂನಲ್ಲಿ 115 ಬಿಹೆಚ್‌ಪಿ ಹಾಗೂ 1,500-2,500 ಆರ್‌ಪಿಎಂನಲ್ಲಿ 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ 6 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಳವಡಿಸಲಾಗಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 300ನ ಎಎಂಟಿ ಮಾದರಿಯ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಎ‍ಎಂ‍‍ಟಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಇನ್ನೂ ಬಿಡುಗಡೆಯಾಗದೇ ಇದ್ದರೂ, ಡೀಲರ್‍‍ಶಿಪ್‍‍ರವರ ಬಳಿ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ.

ಎಕ್ಸ್‌ಯುವಿ 300 ಉತ್ಪಾದನೆಯಲ್ಲಿ ಮಹೀಂದ್ರಾ ಹೊಸ ಮೈಲಿಗಲ್ಲು

ಎಎಂಟಿ ಗೇರ್‌ಬಾಕ್ಸ್ ಗಳನ್ನು ಟಾಪ್ ಮಾದರಿಯ ಡಬ್ಲ್ಯು 6 ಹಾಗೂ ಡಬ್ಲ್ಯು 8 ಮಾದರಿಗಳಲ್ಲಿ ಮಾತ್ರ ನೀಡಲಾಗುವುದು. ಈ ಗೇರ್‍‍ಬಾಕ್ಸ್ ಗಳನ್ನು ಸಾಮಾನ್ಯ ಮಾದರಿಯ ಆಟೋಶಿಫ್ಟ್ ಬ್ಯಾಡ್ಜ್‌ನೊಂದಿಗೆ ಬೇರ್ಪಡಿಸಬಹುದು. ಈ ಎಸ್‍‍ಯು‍‍ವಿಯಲ್ಲಿ ಡ್ಯುಯಲ್ ಜೋನ್ ಎಸಿ, ಸನ್ ರೂಫ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌, ಹೀಟೆಡ್ ಮಿರರ್‍‍ಗಳ ಜೊತೆಗೆ ಸ್ಟೀರಿಂಗ್ ಮೋಡ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಹಾಗೂ 7 ಏರ್‌ಬ್ಯಾಗ್‌ಗಳಂತಹ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ.

ಎಎಂಟಿಯನ್ನು ಮಹೀಂದ್ರಾ ಎಕ್ಸ್‌ಯುವಿ300ಯ 1.5 ಲೀಟರ್‍‍ನ ಡೀಸೆಲ್ ಎಂಜಿನ್ ವಾಹನಗಳಲ್ಲಿ ಮಾತ್ರ ನೀಡಲಾಗುವುದು. 1.5 ಲೀಟರ್‍‍ನ, 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್, 115 ಬಿ‍‍ಹೆಚ್‍‍ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಆಟೋಮೆಟೇಡ್ ಮ್ಯಾನುಯಲ್ ಟ್ರಾನ್ಸ್ಮಿಷನ್ (ಎಎಂಟಿ) ಅಳವಡಿಸಲಾಗಿದೆ. ಮಹೀಂದ್ರಾ ಎಕ್ಸ್‌ಯುವಿ 300, 5 ಸ್ಪೀಡ್ ಎಎಂಟಿ ಆಟೋಮ್ಯಾಟಿಕ್ ಡೀಸೆಲ್ ಎಂಜಿನ್‌ ಹೊಂದಿರುವ ಮಾರುತಿ ಸುಜುಕಿಯ ವಿಟಾರಾ ಬ್ರಿಝಾ ಹಾಗೂ ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಎಕ್ಸ್‌ಯುವಿ 300 ಉತ್ಪಾದನೆಯಲ್ಲಿ ಮಹೀಂದ್ರಾ ಹೊಸ ಮೈಲಿಗಲ್ಲು

ಇದೇ ಸೆಗ್‍‍ಮೆಂಟಿನಲ್ಲಿರುವ ಫೋರ್ಡ್ ಕಂಪನಿಯ ಇಕೋಸ್ಪೋರ್ಟ್ ಹಾಗೂ ಹ್ಯುಂಡೈ ವೆನ್ಯೂ ಕಾರುಗಳು, ಪೆಟ್ರೋಲ್ ಎಂಜಿನ್ ಹೊಂದಿವೆ. ಮಹೀಂದ್ರಾ ಎಕ್ಸ್‌ಯುವಿ 300 ಎಎಂಟಿ ಕಾರಿನ ಬೆಲೆಯು ಮ್ಯಾನುವಲ್ ಮಾದರಿಯ ಕಾರುಗಳಿಗಿಂತ ರೂ.20,000 - ರೂ.50,000ಗಳವರೆಗೆ ಹೆಚ್ಚಾಗಲಿದೆ. ಮಹೀಂದ್ರಾ ಎಕ್ಸ್‌ಯುವಿ 300 ಎಎಂಟಿಯ ಬುಕ್ಕಿಂಗ್ ಈಗಾಗಲೇ ಶುರುವಾಗಿದ್ದು, ಈ ತಿಂಗಳ ಕೊನೆಯಲ್ಲಿ ಮಾರುಕಟ್ಟೆಗೆ ಬರಲಿದೆ.

Most Read Articles

Kannada
English summary
Mahindra XUV300 production – 25,000 units milestone - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X