ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್‍‍ಗಳಿಗೆ ಹೈಕೋರ್ಟ್ ಆದೇಶ

ಗುಜರಾತ್ ಹೈಕೋರ್ಟ್ ಮಾಲ್ ಹಾಗೂ ಮಲ್ಟಿಫ್ಲೆಕ್ಸ್ ಗಳಿಗೆ ಭೇಟಿ ನೀಡುವವರಿಂದ ಯಾವುದೇ ಪಾರ್ಕಿಂಗ್ ಶುಲ್ಕವನ್ನು ವಿಧಿಸುವಂತಿಲ್ಲವೆಂದು ಆದೇಶ ನೀಡಿದೆ. ಮಾಲ್ ಹಾಗೂ ಮಲ್ಟಿಫ್ಲೆಕ್ಸ್ ಗಳ ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ, ಮುಖ್ಯ ನ್ಯಾಯಮೂರ್ತಿ ಎ ಎಸ್ ದಾವೆ ಹಾಗೂ ನ್ಯಾಯಮೂರ್ತಿ ಬಿರೆನ್ ವೈಷ್ಣವ್‍‍ರವರನ್ನು ಒಳಗೊಂಡ ಪೀಠವು ಈ ಆದೇಶ ನೀಡಿದ್ದು, ಈ ನಿಟ್ಟಿನಲ್ಲಿ ನಿಯಮಗಳನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್‍‍ಗಳಿಗೆ ಹೈಕೋರ್ಟ್ ಆದೇಶ

ಸಮಗ್ರ ಸಾಮಾನ್ಯ ಅಭಿವೃದ್ಧಿ ನಿಯಂತ್ರಣ 2017ರ (ಜಿಡಿಸಿಆರ್) ನಿಬಂಧನೆಗಳ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒದಗಿಸು ಎಂಬ ಪದದ ಅರ್ಥವು, ಯಾವುದೇ ಶುಲ್ಕವನ್ನು ವಿಧಿಸದೆ ಈ ಸೌಲಭ್ಯವನ್ನು ನೀಡು ಎಂಬುದಾಗಿದೆ. ಮಾಲ್ ಮಾಲೀಕರು ಸಲ್ಲಿಸಿದ ಅರ್ಜಿ ವಿಚಾರಣೆಯ ನಂತರ ಈ ನಿರ್ದೇಶನ ನೀಡಲಾಗಿದೆ. ಮಾಲ್‍ ಹಾಗೂ ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ನ್ಯಾಯಾಲಯವು ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್‍‍ಗಳಿಗೆ ಹೈಕೋರ್ಟ್ ಆದೇಶ

ಈ ಹಿಂದಿನ ಆದೇಶದಲ್ಲಿ ನ್ಯಾಯಾಲಯವು ಮಾಲ್‌ಗಳಿಗೆ ಭೇಟಿ ನೀಡುವ ಎಲ್ಲಾ ಸಂದರ್ಶಕರಿಂದ ಮೊದಲ ಒಂದು ಘಂಟೆಗೆ ಯಾವುದೇ ಪಾರ್ಕಿಂಗ್ ಶುಲ್ಕವನ್ನು ವಿಧಿಸದಂತೆ ಆದೇಶ ನೀಡಿತ್ತು. ಮಾಲ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ಎಫ್‌ಎಸ್‌ಐ ಅನ್ನು ವಾಹನ ನಿಲುಗಡೆಯ ಹೊರಗಿಡುವುದರಿಂದ ಪ್ರಯೋಜನ ಪಡೆಯುತ್ತಿವೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿಗಳನ್ನು ಪಡೆಯುವಾಗ ಸಂದರ್ಶಕರಿಗೆ ಉಚಿತ ಪಾರ್ಕಿಂಗ್ ನೀಡಲಾಗುವುದೆಂದು ತಿಳಿಸಿ ಅನುಮತಿ ಪಡೆಯಲಾಗಿರುತ್ತದೆ.

ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್‍‍ಗಳಿಗೆ ಹೈಕೋರ್ಟ್ ಆದೇಶ

ಆದ ಕಾರಣ ಈ ಪ್ರಯೋಜನವನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಜಿಡಿಸಿಆರ್‍ ಅಡಿಯಲ್ಲಿ ಅನುಮತಿ ಇಲ್ಲದ ಕಾರಣ ಪಾರ್ಕಿಂಗ್ ಶುಲ್ಕವನ್ನು ವಿಧಿಸಬಾರದೆಂದು ಕಳೆದ ವರ್ಷ ಮಾಲ್‍ ಹಾಗೂ ಮಲ್ಟಿಫ್ಲೆಕ್ಸ್ ಗಳ ಮಾಲೀಕರಿಗೆ ಟ್ರಾಫಿಕ್ ಪೊಲೀಸರು ಆದೇಶ ನೀಡಿದ ನಂತರದಲ್ಲಿ ಈ ಸಮಸ್ಯೆ ಪ್ರಾರಂಭವಾಯಿತು. ಈ ಆದೇಶವನ್ನು ಪ್ರಶ್ನಿಸಿ ಮಾಲ್ ಮಾಲೀಕರು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್‍‍ಗಳಿಗೆ ಹೈಕೋರ್ಟ್ ಆದೇಶ

ಆದರೆ ಹೈಕೋರ್ಟ್, ಸಂವಿಧಾನದ 226 ನೇ ವಿಧಿ ಅನ್ವಯ ಪಾರ್ಕಿಂಗ್ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ತೀರ್ಪು ನೀಡಿದೆ. ಮಾಲ್ ಹಾಗೂ ಮಲ್ಟಿಪ್ಲೆಕ್ಸ್ ಗಳ ಮಾಲೀಕರು ಅತಿಯಾದ ಪಾರ್ಕಿಂಗ್ ಶುಲ್ಕವನ್ನು ವಿಧಿಸುತ್ತಿರುವುದರಿಂದ, ಸಂದರ್ಶಕರು ಮಾಲ್‍‍ಗಳ ಹೊರಗಡೆ ಪಾರ್ಕಿಂಗ್ ಮಾಡಿ ಟ್ರಾಫಿಕ್ ಜಾಮ್‍ ಹಾಗೂ ವಾಹನ ದಟ್ಟಣೆಗೆ ಕಾರಣರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಮಾಲ್‌ಗಳು ನೀಡುವ ಪಾರ್ಕಿಂಗ್ ರಶೀದಿಗಳಲ್ಲಿ, ಪಾರ್ಕಿಂಗ್ ಮಾಡುವುದು ವಾಹನ ಮಾಲೀಕರ ಸ್ವಂತ ಜವಾಬ್ದಾರಿಯಾಗಿದೆ ಎಂದು ನಮೂದಿಸಲಾಗಿರುತ್ತದೆ.

ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್‍‍ಗಳಿಗೆ ಹೈಕೋರ್ಟ್ ಆದೇಶ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಮಾಲ್‍‍ಗಳು ವಿಧಿಸುತ್ತಿರುವ ಪಾರ್ಕಿಂಗ್ ಶುಲ್ಕವನ್ನು, ಪಾರ್ಕಿಂಗ್ ಪ್ರದೇಶದ ನಿರ್ವಹಣೆಗಾಗಿ ಹಾಗೂ ಸುರಕ್ಷತೆಗಾಗಿ ಸಂಗ್ರಹಿಸಲಾಗುತ್ತಿದೆಯೇ ಹೊರತು, ವಾಹನಗಳ ಸುರಕ್ಷತೆಗಾಗಿ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಾಜ್ಯ ಸರ್ಕಾರವು, ಮಾಲ್‍‍ಗಳ ಆಡಳಿತ ಮಂಡಳಿಯು ಪಾರ್ಕಿಂಗ್ ಜಾಗಗಳ ನಿರ್ವಹಣೆಗಾಗಿ ಮಾಲ್‍‍ಗಳಲ್ಲಿರುವ ಅಂಗಡಿಗಳ ಮಾಲೀಕರಿಂದ ಶುಲ್ಕ ವಸೂಲಿ ಮಾಡಬೇಕೆ ಹೊರತು, ಮಾಲ್‍‍ಗಳಿಗೆ ಭೇಟಿ ನೀಡುವ ಗ್ರಾಹಕರಿಂದ ಅಲ್ಲವೆಂದು ವಾದ ಮಂಡಿಸಿತು.

ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್‍‍ಗಳಿಗೆ ಹೈಕೋರ್ಟ್ ಆದೇಶ

ಈ ಆದೇಶದ ನಂತರ ಮಾಲ್ ಹಾಗೂ ಮಲ್ಟಿಫ್ಲೆಕ್ಸ್ ಗಳ ಪಾರ್ಕಿಂಗ್ ಜಾಗಗಳಲ್ಲಿ ವಾಹನಗಳ ಸಂಖ್ಯೆ ಜಾಸ್ತಿಯಾಗಿದೆ. ಈ ಆದೇಶದ ಬಗ್ಗೆ ಇನ್ನಷ್ಟು ಜನರಿಗೆ ತಿಳಿದ ನಂತರ ಮಾಲ್‍‍ಗಳಲ್ಲಿ ಪಾರ್ಕಿಂಗ್ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

Most Read Articles

Kannada
English summary
Malls and multiplexes cannot charge parking – Gujarat High Court - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X