ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಬಿ‍ಎಸ್ 6 ಮಾಲಿನ್ಯ ನಿಯಮಗಳ ಗಡುವು ಇನ್ನೇನು ಕೆಲವೇ ತಿಂಗಳುಗಳಲ್ಲಿ ಬರಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಕಾರು ತಯಾರಕ ಕಂಪನಿಗಳು ತಮ್ಮ ಬಳಿಯಿರುವ ಬಿ‍ಎಸ್ 4 ವಾಹನಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿ ನಿರತವಾಗಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಭಾರತದ ನಂ 1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ಈಗಾಗಲೇ ತನ್ನ ಸರಣಿಯಲ್ಲಿ ಅನೇಕ ಬಿ‍ಎಸ್ 6 ಕಾರುಗಳನ್ನು ಬಿಡುಗಡೆಗೊಳಿಸಿದೆ. ಮಾರುತಿ ಸುಜುಕಿ ಕಂಪನಿಯು ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಬಿ‍ಎಸ್ 6 ಕಾರುಗಳನ್ನು ಮಾರಾಟ ಮಾಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯ ಆಲ್ಟೋ ಕೆ10 ಕಾರ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿದೆ. ಕಾರು ಪ್ರಿಯರೊಬ್ಬರು ಮಾರುತಿ ಸುಜುಕಿ ಕಂಪನಿಯ ಮಾನೆಸಾರ್ ಘಟಕದ ಬಳಿ ಸ್ಪಾಟ್ ಟೆಸ್ಟ್ ಮಾಡುತ್ತಿರುವ ಆಲ್ಟೋ ಕೆ 10 ಕಾರಿನ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಈ ಆಲ್ಟೋ ಕೆ 10 ಮಾದರಿಯನ್ನು ಬಿ‍ಎಸ್ 6 ಮಾಲಿನ್ಯ ನಿಯಮದ ಟೆಸ್ಟ್ ಎಕ್ವಿಪ್‍‍ಮೆಂಟ್ ಹಾಗೂ ಕೆಂಪು ಬಣ್ಣದ ನಂಬರ್ ಪ್ಲೇಟ್‍‍ನೊಂದಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಇವುಗಳ ಹೊರತಾಗಿ, ಈ ಮಾದರಿಯಲ್ಲಿ ಬೇರೆ ಯಾವುದೇ ಬದಲಾವಣೆಗಳು ಕಾಣುತ್ತಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಗಮನಿಸಬೇಕಾದ ಸಂಗತಿಯೆಂದರೆ, ಮಾರುತಿ ಸುಜುಕಿ ಕಂಪನಿಯ ಆಲ್ಟೋ 800 ಕಾರಿನಲ್ಲಿ ಈಗಾಗಲೇ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯ ಮತ್ತೊಂದು ಕಾರ್ ಆದ ವ್ಯಾಗನ್‍ಆರ್ ಕಾರಿನಲ್ಲಿ ಕಳೆದ ವಾರವಷ್ಟೇ 1 ಲೀಟರಿನ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

1.2 ಲೀಟರ್ ಬಿಎಸ್ 6 ಎಂಜಿನ್ ಹೊಂದಿರುವ ವ್ಯಾಗನ್‍ಆರ್ ಕಾರ್ ಅನ್ನು ಈ ವರ್ಷದ ಜೂನ್‍‍ನಿಂದ ಮಾರಾಟ ಮಾಡಲಾಗುತ್ತಿದೆ. ಬಿ‍ಎಸ್ 6 ಎಂಜಿನ್ ಅಳವಡಿಸಿರುವ ಹಿನ್ನೆಲೆಯಲ್ಲಿ ಆಲ್ಟೋ ಕೆ 10 ಕಾರಿನ ಬೆಲೆಯನ್ನು ಸುಮಾರು ರೂ.10,000 ದಿಂದ 12,000ಗಳವರೆಗೆ ಏರಿಸಲಾಗುವುದು. ಬಿ‍ಎಸ್ 6 ಎಂಜಿನ್‍‍ನ ಹೊರತಾಗಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

998 ಸಿಸಿಯ ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಹಾಗೂ ಎಎಂಟಿ ಎಂಬ ಎರಡು ರೀತಿಯ ಟ್ರಾನ್ಸ್ ಮಿಷನ್‍ಗಳನ್ನು ಅಳವಡಿಸಲಾಗಿದೆ. ಈ ಎಂಜಿನ್ 67.1 ಬಿ‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಬಿ‍ಎಸ್ 6ಗೆ ಅಪ್‍‍ಗ್ರೇಡ್‍‍ಗೊಳಿಸಿದ ನಂತರ ಪವರ್ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಸದ್ಯಕ್ಕೆ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ, ಎಕ್ಸ್ ಎಲ್ 6, ಡಿಜೈರ್, ಬಲೆನೊ, ಸ್ವಿಫ್ಟ್, ವ್ಯಾಗನ್‍ಆರ್, ಆಲ್ಟೋ 800 ಹಾಗೂ ಎಸ್ ಪ್ರೆಸ್ಸೊ ಸೇರಿದಂತೆ ಒಟ್ಟು 8 ಕಾರುಗಳನ್ನು ಬಿ‍ಎಸ್ 6 ಎಂಜಿನ್‍ನೊಂದಿಗೆ ಮಾರಾಟ ಮಾಡುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಬಿ‍ಎಸ್ 6 ನಿಯಮಗಳು ಜಾರಿಗೆ ಬಂದ ನಂತರ, ಮಾರುತಿ ಸುಜುಕಿ ಕಂಪನಿಯು ಚಿಕ್ಕ ಕಾರುಗಳ ಸೆಗ್‍‍ಮೆಂಟಿನಲ್ಲಿ ಪೆಟ್ರೋಲ್ ಕಾರುಗಳತ್ತ ಮಾತ್ರವೇ ಗಮನ ಹರಿಸಲಿದೆ. ಡೀಸೆಲ್ ಎಂಜಿನ್‍‍ಗಳನ್ನು ಬಿ‍ಎಸ್ 6ಗೆ ಅಪ್‍‍ಗ್ರೇಡ್‍‍ಗೊಳಿಸುವುದರಿಂದ ಆ ಕಾರುಗಳ ಬೆಲೆಯು ಹೆಚ್ಚಾಗಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಬೆಲೆ ಹೆಚ್ಚಳದ ಕಾರಣಕ್ಕೆ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಬಿದ್ದು, ಕಾರುಗಳ ಮಾರಾಟದಲ್ಲಿ ಕುಸಿತವಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಡೀಸೆಲ್ ಎಂಜಿನ್ ಕಾರುಗಳ ಮೇಲೆ ಹೆಚ್ಚುವರಿಯಾದ ಬಂಡವಾಳವನ್ನು ಹೂಡಿಕೆ ಮಾಡದಿರಲು ಮಾರುತಿ ಸುಜುಕಿ ಕಂಪನಿಯು ನಿರ್ಧರಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಮಾರುತಿ ಸುಜುಕಿ ಕಂಪನಿಯ ಜೊತೆಗೆ ಬೇರೆ ಕಂಪನಿಗಳೂ ಸಹ ಚಿಕ್ಕ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ರೆನಾಲ್ಟ್ ಕಂಪನಿಯು ಸಹ ತನ್ನ ಚಿಕ್ಕ ಪ್ರಮಾಣದ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಅಲ್ಟೋ ಕೆ10 ಕಾರು

ಸುಜುಕಿ ಕಂಪನಿಯ ಜಾಗತಿಕ ಪಾಲುದಾರ ಕಂಪನಿಯಾದ ಟೊಯೊಟಾ ಸಹ ತನ್ನ ಚಿಕ್ಕ ಡೀಸೆಲ್ ಎಂಜಿನ್ ಕಾರುಗಳಾದ ಇಟಿಯೊಸ್ ಹಾಗೂ ಲಿವಾ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

Most Read Articles

Kannada
English summary
Maruti alto k10 bs6 spy pics testing ahead of launch details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X