ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ಬಹುತೇಕ ಕಾರು ತಯಾರಕ ಕಂಪನಿಗಳು ಫಣಿ ಚಂಡಮಾರುತದಿಂದ ಹಾನಿಗೊಳಗಾದ ಸಂತ್ರಸ್ತ ಗ್ರಾಹಕರಿಗೆ ಸಹಾಯ ಹಸ್ತ ನೀಡುವ ಬಗ್ಗೆ ಚಿಂತಿಸುತ್ತಿದ್ದರೆ, ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಂಪನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ.

ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ಮಾರುತಿ ಸುಜುಕಿ ಕಂಪನಿಯು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿರುವ ತನ್ನ ಗ್ರಾಹಕರಿಗೆ ಸೈಕ್ಲೋನ್ ಅಪ್ಪಳಿಸುವ ಮುನ್ನವೇ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿ ಅವರ ಕಾರುಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರದಿಂದಿರಲು ಸೂಚಿಸಿತ್ತು. ಸೈಕ್ಲೋನ್ ನಂತರದ ಸನ್ನಿವೇಶವನ್ನು ಎದುರಿಸಲು ಮಾರುತಿ ಸುಜುಕಿಯು ಪ್ರತಿ ಜಿಲ್ಲೆಗೊಂದರಂತೆ ತಂಡಗಳನ್ನು ರಚಿಸಿ ಹಾನಿಯನ್ನು ನಿಭಾಯಿಸಲು ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ತಂಡಗಳನ್ನು ಕಳುಹಿಸಿದೆ.

ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ಈ ಕಾರ್ಯಾಗಾರಗಳು ಸೈಕ್ಲೋನ್ ಅಪ್ಪಳಿಸಿದ ಮರುದಿನದಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದವು. ಈ ಕಾರ್ಯಗಾರಗಳಿಗಾಗಿ ಬಿಡಿಭಾಗಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯಲಾಗಿದ್ದರಿಂದ, ಗ್ರಾಹಕರ ವಾಹನಗಳನ್ನು ತಕ್ಷಣವೇ ಸರಿಪಡಿಸಲಾಯಿತು.

ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ವಾಹನಗಳ ಟೋವಿಂಗ್ ಮಾಡಬೇಕಾಗಬಹುದೆಂಬ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಥಳಿಯ ವಾಹನ ಟೋವಿಂಗ್ ಏಜೆನ್ಸಿಗಳ ಜೊತೆಯಲ್ಲಿ ಟೈ ಅಪ್ ಮಾಡಿಕೊಂಡಿತ್ತು. ಇದರ ಜೊತೆಯಲ್ಲಿ ಗ್ರಾಹಕರಿಗೆ ಲೋನ್ ಕಾರುಗಳನ್ನು ಸಹ ನೀಡಲಾಯಿತು.

ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ಮಾರುತಿ ಸುಜುಕಿ ಕಂಪನಿಯು ಕ್ಯಾಬ್ ಸರ್ವಿಸ್‍ ಕಂಪನಿಗಳ ಜೊತೆಗೂಡಿ ಗ್ರಾಹಕರ ವಾಹನಗಳ ರಿಪೇರಿ ಸಮಯದಲ್ಲಿ, ಗ್ರಾಹಕರಿಗೆ ಪಿಕ್ ಅಪ್ ಡ್ರಾಪ್ ಸೌಲಭ್ಯಗಳನ್ನು ಒದಗಿಸಿತು. ಹ್ಯುಂಡೈ ಮೋಟಾರ್‍ ಸಹ ಈ ರೀತಿಯ ಕಾರ್ಯಾಗಾರವನ್ನು ಹಮ್ಮಿಕೊಂಡು ಫಣಿ ಸೈಕ್ಲೋನ್‍‍ನಿಂದ ಹಾನಿಗೊಳಗಾದ ಗ್ರಾಹಕರಿಗೆ ಸಹಾಯ ನೀಡಿತು. ಹ್ಯುಂಡೈ ಕಂಪನಿಯು ವಾಹನಗಳ ಸರ್ವಿಸ್ ಮಾಡಿದ್ದಲ್ಲದೇ, ಅವಶ್ಯಕತೆಯಿದ್ದ ವಾಹನಗಳ ಬಿಡಿಭಾಗಗಳನ್ನು ಬದಲಿಸಿ, ಹಾನಿಗೊಳಗಾದ ಹ್ಯುಂಡೈ ಕಾರುಗಳಿಗೆ ಇನ್ಶೂರೆನ್ಸ್ ಗಳನ್ನು ಒದಗಿಸಿತು.

MOST READ: ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ಹ್ಯುಂಡೈ 26 ಫ್ಲಾಟ್‍‍ಬೆಡ್ ಟ್ರಕ್‍‍ಗಳು ಮತ್ತು 21 ಟೋವಿಂಗ್ ಟ್ರಕ್‍‍ಗಳ ಜೊತೆಗೆ, ಡೀಲರ್‍‍ಗಳಲಿದ್ದ ಹಲವು ಮೊಬೈಲ್ ಸರ್ವಿಸ್ ಕಾರುಗಳನ್ನು ಸೇರಿಸಿ, ತುರ್ತು ರಸ್ತೆ ಸರ್ವಿಸ್ ಟೀಮ್ ರಚಿಸುವುದರ ಜೊತೆಗೆ, 40 ತಂತ್ರಜ್ಣರ ತಂಡವನ್ನು ರಚಿಸಿ ಫಣಿ ಸೈಕ್ಲೋನ್‍‍ನಿಂದ ಹಾನಿಗೊಳಗಾದ ಹ್ಯುಂಡೈ ಕಾರುಗಳ ನಿರ್ವಹಣೆಗೆ ಸೂಚಿಸಿತು.

ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ಈ ತುರ್ತು ತಂಡವನ್ನು ಸೈಕ್ಲೋನ್‍‍ನಿಂದ ಹಾನಿಗೊಳಗಾದ ಯಾವುದೇ ಗ್ರಾಹಕ ಕರೆ ಮಾಡಿ ಹ್ಯುಂಡೈ ಕಾರನ್ನು ಸರಿಪಡಿಸಲು ಕೋರಿದರೆ, ತಕ್ಷಣವೇ ಸಹಾಯ ಮಾಡಲು ಅಣಿಯಾಗಿರುವಂತೆ ಸೂಚಿಸಲಾಯಿತು.

ಫಣಿ ಸಂತ್ರಸ್ತ ಗ್ರಾಹಕರ ನೆರವಿಗೆ ಧಾವಿಸಿದ ಮಾರುತಿ ಮತ್ತು ಹ್ಯುಂಡೈ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮನುಷ್ಯತ್ವವು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಕಾಣಸಿಗುತ್ತದೆ. ಬಹುತೇಕ ಎಲ್ಲರೂ ಎಲ್ಲರಿಗೂ ಸಹಾಯ ಮಾಡುತ್ತಾರೆ, ಅವರುಗಳಲ್ಲಿ ಒಗ್ಗಟ್ಟನ್ನು ಕಾಣಬಹುದು. ಈ ನಿಟ್ಟಿನಲ್ಲಿ ಕಂಪನಿಗಳು ಸಹ ಭಾಗಿಯಾಗಿದ್ದು, ಲಾಭವನ್ನು ಮರೆತು ಮಾನವೀಯ ನೆಲೆಯಲ್ಲಿ ತಮ್ಮ ಗ್ರಾಹಕರಿಗೆ ಸಹಾಯ ಹಸ್ತ ಚಾಚಿವೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಂಪನಿಗಳ ಕಾರ್ಯ ಶ್ಲಾಘನೀಯ.

Most Read Articles

Kannada
English summary
Maruti And Hyundai Offer Support To Customers Affected By Cyclone Fani - Read in kannada
Story first published: Friday, May 10, 2019, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X