ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಆಫ್ ರೋಡ್‌ಗಳಲ್ಲಿ ವಾಹನ ಚಾಲನೆ ಮಾಡುವುದು ಒಂದು ಕೌಶಲ್ಯ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಆನ್ ರೋಡ್‌ಗಳಲ್ಲಿ ಕೈಗೊಳ್ಳುವ ವಾಹನ ಚಾಲನೆಗಿಂತ ಆಫ್ ರೋಡ್‌ಗಳಲ್ಲಿನ ವಾಹನ ಚಾಲನೆಯು ಸಖತ್ ಥ್ರೀಲ್ ನೀಡುತ್ತದೆ. ಆದ್ರೆ ಸ್ಪಲ್ಪವೇ ಯಾಮಾರಿದ್ರು ಸಂಕಷ್ಟ ಎದರಿಸಬೇಕಾಗುತ್ತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಭಾರತದಲ್ಲಿ ರಸ್ತೆಗಳಿಗೆ ಅನುಗುಣವಾಗಿ ವಿವಿಧ ಮಾದರಿಯ ವಾಹನಗಳ ಬಳಕೆಯು ಚಾಲ್ತಿಯಲ್ಲಿದ್ದರೂ ಕೆಲವು ವಾಹನ ಸವಾರರು ಎಲ್ಲಾ ಪ್ರದೇಶಗಳ ರಸ್ತೆಗಳನ್ನು ಒಂದೇ ರೀತಿಯಾಗಿ ನೋಡಬಯಸುತ್ತಾರೆ. ಹೀಗಿರುವಾಗ ಕೆಲವೊಮ್ಮೆ ಚಾಲಕರ ಲೆಕ್ಕಾಚಾರ ತಪ್ಪಾಗುವುದುದಲ್ಲದೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಿಸಬೇಕಾಗುತ್ತೆ. ಇಲ್ಲೂ ಕೂಡಾ ಆಫ್ ರೋಡ್ ಒಂದರಲ್ಲಿ ತಪ್ಪಾದ ಚಾಲನಾ ಪದ್ದತಿಯಿಂದಾಗಿ ಇನೋವಾ ಕ್ರಿಸ್ಟಾ ಕಾರೊಂದು ಹಿಮಾಲಯದ ಕಡಿದಾದ ಹಾದಿಯಲ್ಲಿ ಸಿಲುಕಿದ ಘಟನೆ ನಡೆದಿದೆ.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಹಿಮಾಲಯದ ಸ್ಲ್ಪಿಟಿ ವ್ಯಾಲಿಯಲ್ಲಿ ಸಾಗುತ್ತಿದ್ದ ಇನೋವಾ ಕ್ರಿಸ್ಟಾ ಟೂರಿಸ್ಟ್ ಕಾರು ಮಾದರಿಯು ತಪ್ಪಾದ ಲೆಕ್ಕಾಚಾರದಿಂದ ಕೆಸರಿ ಸಿಲುಕಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಮಾರುತಿ ಬ್ರೆಝಾ ಕಾರು ಕೆಸರಿನಲ್ಲಿ ಸಿಲುಕಿ ಮೇಲಕ್ಕೆ ಬರಲು ಪ್ರಯತ್ನಿಸುತ್ತದ್ದ ಇನೋವಾ ಕ್ರಿಸ್ಟಾ ನೆರವಿಗೆ ಬಂದಿದೆ.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಅತಿಯಾದ ಕೆಸರು ಇದ್ದ ಕಾರಣ ಸಂಪೂರ್ಣವಾಗಿ ಕೆಸರಿನಲ್ಲಿ ಸಿಲುಕಿದ್ದ ಇನೋವಾ ಕ್ರಿಸ್ಟಾ ಕಾರು ಬಲಿಷ್ಠ ಎಂಜಿನ್ ಹೊಂದಿದ್ದರೂ ಸಹ ಕೆಸರಿನಿಂದ ಮೇಲೆಳಲೂ ಕಷ್ಟಪಡುವಂತಾಯಿತು. ಈ ವೇಳೆ ಇನೋವಾ ಕ್ರಿಸ್ಟಾ ಕಾರಿನ ನೆರವಿಗೆ ಬಂದ ಮಾರುತಿ ಬ್ರೆಝಾ ಕಾರು ಇನೋವಾ ಕ್ರಿಸ್ಟಾ ಕಾರನ್ನು ಕೆಲವೇ ಸೇಕೆಂಡುಗಳಲ್ಲಿ ಕೆಸರಿನಿಂದ ಮೇಲೆ ಎಳೆಯಲು ಯಶಸ್ವಿಯಾಯ್ತು.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

2.4-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಇನೋವಾ ಕ್ರಿಸ್ಟಾ ಕಾರನ್ನು 1.3-ಲೀಟರ್ ಡಿಸೇಲ್ ಎಂಜಿನ್ ಹೊಂದಿರುವ ಮಾರುತಿ ಬ್ರೆಝಾ ಕಾರು ನೆರವಿಗೆ ಬರುವ ಮೂಲಕ ಆಫ್ ರೋಡ್‌ಗಲ್ಲಿ ಬಲಿಷ್ಠ ಎಂಜಿನ್‌ಗಿಂತ ಕೌಶಲ್ಯಭರಿತ ಕಾರು ಚಾಲನಾ ವೈಶಿಷ್ಟ್ಯತೆಯೇ ಮುಖ್ಯ ಎಂಬುವುದನ್ನು ಸಾಬೀತುಪಡಿಸಿತು. ಹಾಗಾದ್ರೆ ಸ್ಲ್ಪಿಟಿ ವ್ಯಾಲಿಯಲ್ಲಿ ಇನೋವಾ ಕ್ರಿಸ್ಟಾ ಕಾರು ಕೆಸರಿನಿಂದ ಮೇಲೆಳಲೂ ಪ್ರಯತ್ನಿಸಿದ ರೀತಿ ಹೇಗಿತ್ತು ಎನ್ನುವುದನ್ನು ಈ ವಿಡಿಯೋ ನೋಡಿ.

ಇನ್ನು ಭಾರತದಲ್ಲಿ ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಬ್ರೆಝಾ ಕಾರು 1.3-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಕಾರು ಮಾರಾಟದಲ್ಲಿ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಬ್ರೆಝಾ ಮಾದರಿಯು ಕೇವಲ ಡೀಸೆಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 5-ಸ್ಪೀಡ್ ಆಟೋಮೆಟೆಡ್ ಮ್ಯಾನುವಲ್ ಟ್ರಾನ್‌ಮಿಷನ್ ಹೊಂದಿರುವ ಬ್ರೆಝಾ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.68 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.10.65 ಲಕ್ಷ ಬೆಲೆ ಹೊಂದಿದೆ.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಹಾಗೆಯೇ ಟೂರಿಸ್ಟ್ ಮತ್ತು ವ್ಯಯಕ್ತಿಯ ಬಳಕೆ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಗ್ರಾಹಕರ ಬೇಡಿಕೆಯಂತೆ 2.4-ಲೀಟರ್, 2.7-ಲೀಟರ್ ಮತ್ತು 2.8-ಲೀಟರ್ ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿವೆ.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಇವುಗಳಲ್ಲಿ 2.4-ಲೀಟರ್ ಡಿಸೇಲ್ ಎಂಜಿನ್ ಮಾದರಿಯು ಟೂರಿಸ್ಟ್ ವಿಭಾಗದ ಬಳಕೆಯಲ್ಲಿ ಅತಿಹೆಚ್ಚು ಮಾರಾಟವಾಗುವ ದುಬಾರಿ ಕಾರು ಮಾದರಿಯಾಗಿದ್ದು, 8-ಸೀಟರ್ ಸೌಲಭ್ಯ ಹೊಂದಿರುವ ಈ ಮಾದರಿಯು ದೂರದ ಪ್ರಯಾಣಕ್ಕೆ ಸಾಕಷ್ಟು ಸಹಕಾರಿಯಾಗಿದೆ.

ಆಫ್ ರೋಡ್‌ನಲ್ಲಿ ಸಿಲುಕಿದ್ದ ಟೊಯೊಟಾ ಇನೋವಾ ಕ್ರಿಸ್ಟಾ ನೆರವಿಗೆ ಬಂದ ಮಾರುತಿ ಬ್ರೆಝಾ..!

ಇನೋವಾ ಕ್ರಿಸ್ಟಾ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.93 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 23.47 ಲಕ್ಷ ಬೆಲೆ ಹೊಂದಿದ್ದು, ಅತ್ಯುತ್ತಮ ಎಂಜಿನ್ ದಕ್ಷತೆ, ಮೈಲೇಜ್ ವಿಚಾರವಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದೆ.

Source: Yatri Doctor

More from DriveSpark

Article Published On: Tuesday, June 11, 2019, 17:46 [IST]
English summary
Maruti Brezza rescues the Toyota Innova Crysta in the Himalayan region. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+