ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 'ಡರ್ಟ್ ಅಟ್ಯಾಕ್ 2020' ಆಫ್ ರೋಡ್ ಡ್ರೈವ್

ಆಫ್ ರೋಡ್ ಡ್ರೈವಿಂಗ್ ಕೌಶಲ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಮ್ಮ ಬೆಂಗಳೂರಿನ ಡರ್ಟಿ ಡ್ರೈವ್ಜ್ ಹಮ್ಮಿಕೊಂಡಿದ್ದ 'ಡರ್ಟ್ ಅಟ್ಯಾಕ್ 2020' ಆಫ್ ರೋಡ್ ಡ್ರೈವ್ ಸ್ಪರ್ಧೆಯು ಆಫ್-ರೋಡಿಂಗ್ ಸಮುದಾಯದ ಪ್ರಮುಖ ಆಕರ್ಷಣೆಯಾಗಿದ್ದು, ಡರ್ಟ್ ಅಟ್ಯಾಕ್ 2020ರ ಸ್ಪರ್ಧೆಯು ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಭಾರತದಲ್ಲಿ ಅತಿ ಹೆಚ್ಚು ಆಫ್ ರೋಡ್ ಅಡ್ವೆಂಚರ್‌ ಡ್ರೈವ್ ಕ್ಲಬ್‌ಗನ್ನು ಹೊಂದಿರುವ ನಮ್ಮ ಬೆಂಗಳೂರಿನಲ್ಲಿ ಡರ್ಟಿ ಡ್ರೈವ್ಜ್ ತಂಡವು ಕೂಡಾ ಮುಂಚೂಣಿಯಲ್ಲಿದ್ದು, ವಿವಿಧ ಮಾದರಿಯ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲಿ ಜನಪ್ರಿಯವಾಗಿರುವ ಡರ್ಟಿ ಡ್ರೈವ್ಜ್ ತಂಡವು ತನ್ನದೆ ಟ್ರ್ಯಾಕ್ ಮೂಲಕ ಈ ಬಾರಿ ಹೊಸ ಪ್ರಯತ್ನಕ್ಕೆ ಯಶಸ್ವಿಯಾಗಿದೆ. ನಮ್ಮ ಬೆಂಗಳೂರಿನ ಹೊರವಲಯದಲ್ಲಿ ಮೊದಲ ಬಾರಿಗೆ ಡರ್ಟ್ ಅಟ್ಯಾಕ್ 2020 ಆಫ್ ರೋಡಿಂಗ್ ಡ್ರೈವ್ ಆಯೋಜಿಸುವ ಮೂಲಕ ಆಫ್ ರೋಡ್ ಸಮುದಾಯದ ಮೆಚ್ಚುಗೆಗೆ ಕಾರಣವಾಗಿದ್ದು, ಸೆಪ್ಟೆಂಬರ್ 19ರಂದು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಡರ್ಟ್ ಅಟ್ಯಾಕ್ 2020ರ ಆಫ್ ರೋಡಿಂಗ್ ಸ್ಪರ್ಧೆಯಲ್ಲಿ ಸುಮಾರು 15ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದಲ್ಲದೆ ವಿವಿಧ ಮಾದರಿಯ ಆಫ್ ರೋಡಿಂಗ್ ಕೌಶಲ್ಯಗಳ ಮೂಲಕ ಸಮಗ್ರ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ್ದು ರೋಚಕವಾಗಿತ್ತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ನಮ್ಮ ಬೆಂಗಳೂರಿನ ಹೊರವಲಯದಲ್ಲಿರುವ ಮಂಚನಬೆಲೆ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಮತ್ತು ಗಿಡ್ಡೆನಹಳ್ಳಿ ಒಟ್ಟು ನಾಲ್ಕು ಹಂತದ ಆಫ್ ರೋಡಿಂಗ್ ಸ್ಪರ್ಧೆಗಳನ್ನು ಆಯೋಜಿಸಿದ್ದ ಡರ್ಟಿ ಡ್ರೈವ್ಜ್ ತಂಡವು ಮೊದಲ ಎರಡು ಹಂತದ ಸ್ಪರ್ಧೆಗಳನ್ನು ಮಂಚನಬೆಲೆ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಆಯೋಜನೆ ಮಾಡಿತ್ತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ತದನಂತರ ಕೊನೆಯ ಎರಡು ಹಂತದ ಆಫ್ ರೋಡಿಂಗ್ ಕೌಶಲ್ಯಗಳನ್ನು ಗಿಡ್ಡೆನಹಳ್ಳಿರುವ ಡರ್ಟಿ ಡ್ರೈವ್ಜ್ ಟ್ರ್ಯಾಕ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಒಂದೇ ದಿನದಲ್ಲಿ ನಾಲ್ಕು ಮಾದರಿಯ ಆಫ್ ರೋಡ್ ಕೌಶಲ್ಯಗಳನ್ನು ಪೂರ್ಣಗೊಳಿಸಲಾಯಿತು. ಮಂಚನಬೆಲೆ ಹಿನ್ನೀರಿನಲ್ಲಿ ನಡೆದ ಮೊದಲ ಎರಡು ಹಂತದ ಸ್ಪರ್ಧೆಗಳು ತಾಂತ್ರಿಕವಾಗಿದ್ದು, ಮೂರನೇ ಮತ್ತು ನಾಲ್ಕನೇ ಹಂತದ ಸ್ಪರ್ಧೆಗಳು ಕೆಸರು ಹೊಂದಿರುವ ಟ್ರ್ಯಾಕ್‌ನಲ್ಲಿ ವೇಗದ ಚಾಲನೆಯ ಸ್ಪರ್ಧೆಯಾಗಿರುತ್ತದೆ.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಮೊದಲ ಎರಡು ಹಂತಗಳಲ್ಲಿ ಸ್ಪರ್ಧಿಗಳ ಕೌಶಲ್ಯ ಮತ್ತು ನಿಖರತೆಯನ್ನು ಹಾಗೂ ಚಾಲಕನ ಜೊತೆಗಿರುವ ನ್ಯಾವಿಗೇಟರ್ ನಡುವಿನ ಸಮನ್ವಯವನ್ನು ತಿಳಿಸಲಿದ್ದರೆ ಡರ್ಟಿ ಡ್ರೈವ್ಜ್ ಟ್ರ್ಯಾಕ್‌ನಲ್ಲಿ ನಡೆದ ಅಂತಿಮ ಎರಡು ಹಂತದ ಸ್ಪರ್ಧೆಗಳಲ್ಲಿ ಹೆಚ್ಚಿನ ವೇಗ ಮತ್ತು ಸ್ಲಶ್ ಟ್ರ್ಯಾಕ್ ಆಗಿದ್ದು, ಟ್ರ್ಯಾಕ್ ಅನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದರ ಆಧಾರದ ಮೇಲೆ ಅಂಕಗಳು ನಿರ್ಧಾರವಾಗುತ್ತವೆ.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಸ್ಪರ್ಧೆಯ ಆಯಾ ತಂಡಗಳು ಆಯಕಟ್ಟಿನ ಪ್ರದೇಶಗಳಲ್ಲಿ ನೆಟ್ಟ ವಿವಿದ ಬಣ್ಣಗಳ ಧ್ವಜಗಳನ್ನು ಸಹ ಸಂಗ್ರಹಿಸಬೇಕಿದ್ದು, ಹಸಿರು, ಹಳದಿ ಮತ್ತು ಕೆಂಪು ಬಣ್ಣದ ಧ್ವಜಗಳನ್ನು ಸಂಗ್ರಹಿಸಿ ತಂಡಗಳಿಗೆ ಕ್ರಮವಾಗಿ 5, 10 ಮತ್ತು 15 ಅಂಕಗಳನ್ನು ನೀಡಲಾಗುತ್ತದೆ.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಪ್ರತಿ ಸ್ಪರ್ಧೆಯನ್ನು ಪೂರ್ಣಗೊಳಿಸಲು ಒಂದು ನಿಗದಿತ ಸಮಯವನ್ನು ನಿರ್ಧರಿಸುವ ಆಯೋಜಕ ತಂಡವು ನಿಗದಿತ ಸಮಕ್ಕಿಂತ ಮೊದಲ ಸ್ಪರ್ಧೆ ಪೂರ್ಣಗೊಳಿಸಿದ್ದಲ್ಲಿ 5 ಅಂಕಗಳನ್ನು ಹೆಚ್ಚುವರಿಯಾಗಿ ನೀಡಲಿದ್ದು, ಆಯೋಜಕ ತಂಡವು ನಿಗದಿ ಪಡಿಸಿದ ಸ್ಥಳಗಳಲ್ಲಿ ನಿಯಮ ಮೀರಿ ಡ್ರೈವ್ ಮಾಡಿದ್ದಲ್ಲಿ 5 ಅಂಕಗಳು ಕಡಿತಗೊಳ್ಳತ್ತದೆ.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

1 ಮತ್ತು 2 ಹಂತದ ಸ್ಪರ್ಧೆಗಳು (ಮಂಚನಬೆಲೆ ಹಿನ್ನೀರು)

ಮೇಲೆ ಹೇಳಿದಂತೆ ಡರ್ಟ್ ಅಟ್ಯಾಕ್ ಸ್ಪರ್ಧೆಯ ಮೊದಲ ಎರಡು ಹಂತಗಳು ಆಫ್ ರೋಡಿಂಗ್ ವೇಳೆ ಸ್ಪರ್ಧಿಗಳ ಕೌಶಲ್ಯ ಮತ್ತು ನಿಖರತೆ ಹಾಗೂ ಚಾಲಕನ ಜೊತೆಗಿರುವ ನ್ಯಾವಿಗೇಟರ್ ನಡುವಿನ ಸಮನ್ವಯ ತಿಳಿಸಲಿದ್ದು, ಕಡಿಮೆ ಟ್ರ್ಯಾಕ್‌ನೊಂದಿಗೆ ತಾಂತ್ರಿಕವಾಗಿ ಮತ್ತು ಕಡಿದಾದ ಪ್ರದೇಶಗಳಲ್ಲಿ ಡ್ರೈವಿಂಗ್ ಕೌಶಲ್ಯತೆಯನ್ನು ತೊರಲು ಪ್ರಮುಖ ಹಂತಗಳಾಗಿದ್ದವು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಮೊದಲ ಹಂತದ ಸ್ಪರ್ಧೆಗೆ ಗರಿಷ್ಠ 35 ಅಂಕಗಳನ್ನು ಮತ್ತು ಎರಡನೇ ಹಂತದ ಸ್ಪರ್ಧೆಗೆ ಗರಿಷ್ಠ 60 ಅಂಕಗಳನ್ನು ನಿಗದಿಪಡಿಸಿದ್ದ ಆಯೋಜಕ ತಂಡವು ಸ್ಪರ್ಧಿಗಳಿಗೆ ಕಡಿದಾದ ಇಳಿಜಾರು, ಬೃಹತ್ ಬಂಡೆಗಳು, ಒರಟು ಭೂಪ್ರದೇಶಗಳ ಮೇಲೆ ತೀಕ್ಷ್ಣವಾದ ತಿರುವುಗಳನ್ನು ತೆಗೆದುಕೊಳ್ಳುವುದರ ಮೇಲೆ ಅಂಕಗಳನ್ನು ನಿರ್ಧರಿಸಿತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

3ನೇ ಮತ್ತು 4ನೇ ಹಂತದ ಸ್ಪರ್ಧೆ(ಡರ್ಟಿ ಡ್ರೈವ್ಜ್)

ಡರ್ಟಿ ಡ್ರೈವ್ಜ್ ತಂಡವು 3ನೇ ಮತ್ತು 4ನೇ ಹಂತದ ಸ್ಪರ್ಧೆಗಳನ್ನು ಗಿಡ್ಡೆನಹಳ್ಳಿರುವ ಟ್ರ್ಯಾಕ್‌ನಲ್ಲಿ ಹಮ್ಮಿಕೊಂಡಿತ್ತು. 1ನೇ ಮತ್ತು 2ನೇ ಹಂತದ ಸ್ಪರ್ಧೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತಂಡಗಳನ್ನು ಅಂತಿಮ ಹಂತದ ಸ್ಪರ್ಧೆಗೆ ಆಹ್ವಾನಿಸಿದ ಆಯೋಜಕ ತಂಡವು ಮತ್ತೊಂದು ಹಂತದ ರೋಚಕತೆಗೆ ಚಾಲನೆ ನೀಡಿತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಸ್ಪರ್ಧೆಯ ವೇಳೆ ಭಾರೀ ಮಳೆ ಹಿನ್ನಲೆಯಲ್ಲಿ 3ನೇ ಹಂತದ ಸ್ಪರ್ಧೆಯನ್ನು ಮೊಟಕು ಮಾಡಿದ ಆಯೋಜಕ ತಂಡವು ನೇರವಾಗಿ ನಾಲ್ಕನೇ ಹಂತದ ಸ್ಪರ್ಧೆಯನ್ನು ನಡೆಸಿತು. 3ನೇ ಹಂತದ ಸ್ಪರ್ಧೆಯನ್ನು ಮೊಟಕುಗೊಳಿಸಿದರು ನಿಗದಿತ ಅಂಕಗಳನ್ನು ನೀಡಿ ನಾಲ್ಕನೇ ಹಂತದ ಸ್ಪರ್ಧೆಯನ್ನು ಶುರುಮಾಡಿತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಕೆಸರು ತುಂಬಿರುವ ಟ್ರ್ಯಾಕ್‌ನಲ್ಲಿ ನಾಲ್ಕನೇ ಹಂತದಲ್ಲಿ ಭಾಗಿಯಾದ ತಂಡಗಳು ಎಲ್ಲಾ ಅಡೆತಡೆಯನ್ನು ಮೀರಿ ತಮ್ಮ ಕೌಶಲ್ಯವನ್ನು ಪ್ರದರ್ಶನ ಮಾಡಿದವು. ತಡರಾತ್ರಿಯ ವೇಳೆಗೂ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವಿವಿಧ ತಂಡಗಳು ಕೌಶಲ್ಯ ಪ್ರದರ್ಶನದ ಆಧಾರದ ಪ್ರಶಸ್ತಿ ತಮ್ಮದಾಗಿಸಿಕೊಂಡವು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

'ಡರ್ಟ್ ಅಟ್ಯಾಕ್ 2020' ಆಫ್ ರೋಡಿಂಗ್ ಪ್ರದರ್ಶನದ ಎಲ್ಲಾ ವಿಭಾಗಗಳನ್ನು ಅತ್ಯುತ್ತಮ ಪ್ರದರ್ಶನ ತೋರಿದ ನಮ್ಮ ಬೆಂಗಳೂರಿನ ಬೋಡಾ(ಬೆಂಗಳೂರು ಆಫ್ ರೋಡ್ ಡ್ರೈವರ್ಸ್ ಅಸೋಸಿಯೇಷನ್) ತಂಡದ ಪ್ರದೀಪ್ ಮತ್ತು ಕೋ-ಡ್ರೈವರ್ ಸತೀಶ್ 140 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಲ್ಲಿ ಕೇರಳದ ನಿಖೀಲ್ ಮತ್ತು ಸಿರ್ಜಾ ತಂಡವು 135 ಅಂಕಗಳೊಂದಿಗೆ ರನ್ನರ್-ಅಪ್ ಆಗಿ ಹೊರಹೊಮ್ಮಿತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ವಿಜೇತ ತಂಡಕ್ಕೆ ಟ್ರೋಫಿ ಜೊತೆ ರೂ. 50 ಸಾವಿರ ನಗದು ಬಹುಮಾನ ಮತ್ತು ರನ್ನರ್ ಅಪ್‌ ತಂಡಕ್ಕೆ ಟ್ರೋಫಿ ಜೊತೆ ರೂ. 25 ಸಾವಿರ ನಗದು ಬಹುಮಾನ ನೀಡಿದ ಆಯೋಜಕ ತಂಡವು ಭಾಗಿಯಾದ ಎಲ್ಲಾ ತಂಡಗಳಿಗೆ ನೆನಪಿನ ಕಾಣಿಕೆ ಜೊತೆಗೆ ಪ್ರಮಾಣಪತ್ರ ವಿತರಣೆ ಮಾಡಿತು.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಡ್ರೈವ್ಜ್ ತಂಡದ ಬಗ್ಗೆ ಒಂದಿಷ್ಟು

ಬೆಂಗಳೂರಿನ ಹೊರವಲಯದಲ್ಲಿರುವ ನೆಲೆಗೊಂಡಿರುವ ಡರ್ಟಿ ಡ್ರೈವ್ಜ್ ಟ್ರ್ಯಾಕ್ ಆಫ್ ರೋಡಿಂಗ್ ಕೌಶಲ್ಯಕ್ಕಾಗಿ ನಿರ್ಮಾಣದ ಮೊದಲ ಟ್ರ್ಯಾಕ್ ಮಾದರಿಯಾಗಿದ್ದು, ಈ ಟ್ರ್ಯಾಕ್‌ನಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗುತ್ತದೆ. ಆಸಕ್ತರು ತಮ್ಮದೆ ಆಫ್ ರೋಡ್ ಕಾರು ಮಾದರಿಗಳೊಂದಿಗೆ ಕೌಶಲ್ಯ ಪ್ರದರ್ಶನ ಮಾಡಬಹುದಾಗಿದ್ದು, ಆಫ್ ರೋಡ್ ವಾಹನವಿಲ್ಲದ ಆಸಕ್ತರು ಡರ್ಟಿ ಡ್ರೈವ್ಜ್ ತಂಡದಿಂದಲೂ ಆಫ್ ರೋಡ್ ವಾಹನಗಳನ್ನು ನಿಗದಿತ ಅವಧಿಗೆ ಪಡೆದುಕೊಳ್ಳಬಹುದಾಗಿದೆ.

ನಮ್ಮ ಬೆಂಗಳೂರಿನಲ್ಲಿ 'ಡರ್ಟ್ ಅಟ್ಯಾಕ್ 2020' ಸದ್ದು

ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರಿಗೆ ಫೋರ್ ವೀಲ್ಹರ್ ಆಫ್-ರೋಡಿಂಗ್ ಅನ್ನು ಪರಿಚಯಿಸುವ ಮತ್ತು ಕಲಿಕೆ ನೆರವಾಗುವ ಉದ್ದೇಶದಿಂದ ಹೊಸ ಮಾದರಿಯ ಟ್ರ್ಯಾಕ್ ತೆರಿದಿರುವ ಆಫ್ ರೋಡ್ ಉತ್ಸಾಹಿಗಳಾದ ಸಂತೋಷ್ ಕುಮಾರ್, ಸುಜಿತ್ ಜೋಸ್ ಮತ್ತು ಮೆಲ್ಬಿನ್ ಮೈಕೆಲ್ ಅವರು ತಜ್ಞರ ಮಾರ್ಗದರ್ಶನದೊಂದಿಗೆ ಆಫ್-ರೋಡ್ ಡ್ರೈವಿಂಗ್ ಕೌಶಲ್ಯ ಅಭಿವೃದ್ದಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Most Read Articles

Kannada
English summary
Dirty Drivez: Bangalore’s First Four-Wheeler Off-Road Track Holds Inaugural ‘Dirt Attack 2020’ Event. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X