ಈ ಅಜಾನುಬಾಹು ಶೆರ್ಪ್ ಎನ್1200 ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ವಿಶ್ವಾದ್ಯಂತ ಹಲವಾರು ಆಫ್ ರೋಡ್ ವಾಹನಗಳು ಭಾರೀ ಜನಪ್ರಿಯತೆಯೊಂದಿಗೆ ಮಾರುಕಟ್ಟೆಯಲ್ಲಿ ಬಹುದೊಡ್ಡ ಪಾಲು ತಮ್ಮದಾಗಿಸಿಕೊಳ್ಳುತ್ತಿದ್ದು, ಆಫ್ ರೋಡ್ ವಾಹನ ವಿಭಾಗದಲ್ಲಿ ಶೆರ್ಪ್ ಎಟಿವಿ ಸದ್ಯ ಹೊಸ ಟ್ರೆಂಡ್ ಹುಟ್ಟುಹಾಕುತ್ತಿದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಭಾರತದಲ್ಲಿ ಆಫ್ ರೋಡ್ ಮಾರಾಟವು ವರ್ಷದಿಂದ ವರ್ಷಕ್ಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಆಫ್ ರೋಡ್ ಪ್ರಿಯರ ಬೇಡಿಕೆ ಅನುಸಾರವಾಗಿ ಹಲವಾರು ಹೊಸ ಮಾದರಿಯ ಆಫ್ ರೋಡ್ ವಾಹನಗಳು ದೇಶಿಯ ಮಾರುಕಟ್ಟೆ ಪ್ರವೇಶಿಸಿವೆ. ಇದೀಗ ಮತ್ತೊಂದು ಜನಪ್ರಿಯ ಆಫ್ ರೋಡ್ ವಾಹನ ತಯಾರಿಕಾ ಕಂಪನಿ ಭಾರತವನ್ನು ಪ್ರವೇಶಿಸಲು ಸಿದ್ದತೆ ನಡೆಸಿದ್ದು, ಜಗತ್ತಿನ ಆಕ್ರಮಕಾರಿ ಆಫ್ ರೋಡ್ ವಾಹನವೊಂದು ಭಾರತದಲ್ಲೂ ಮಾರಾಟಕ್ಕಾಗಿ ಸಿದ್ದವಾಗುತ್ತಿದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಹೌದು, ಭಾರತದಲ್ಲಿ ಸದ್ಯ ಪ್ರಮುಖ ವಾಹನ ಕಂಪನಿಗಳ ವಿವಿಧ ಮಾದರಿಯ ಆಫ್ ರೋಡ್ ವಾಹನಗಳು ಖರೀದಿಗೆ ಲಭ್ಯವಿದ್ದರೂ ಶೆರ್ಪ್ ಕಂಪನಿಯ ನಿರ್ಮಾಣದ ಆಫ್ ರೋಡ್ ವಾಹನಗಳು ಹೊಸ ಸಂಚಲನಕ್ಕೆ ಕಾರಣವಾಗುತ್ತಿದ್ದು, ಕಂಪನಿಯು ಶೀಘ್ರದಲ್ಲೇ ಭಾರತದಲ್ಲೂ ಹೊಸ ಬಗೆಯ ಆಫ್ ರೋಡ್ ವಾಹನವನ್ನು ಬಿಡುಗಡೆ ಮಾಡಲು ಯೋಜನೆಯಲ್ಲಿದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಯುಕ್ರೆನ್ ಮೂಲದ ಶೆರ್ಪ್ ಕಂಪನಿಯು ವಿವಿಧ ಉದ್ದೇಶಗಳಿಗಾಗಿ ಹಲವು ಆಲ್ ಟೆರೈನ್ ಆಂಫಿಬಿಯಸ್ ವಾಹನಗಳನ್ನು ನಿರ್ಮಾಣ ಮಾಡುವಲ್ಲಿ ಜನಪ್ರಿಯತೆ ಸಾಧಿಸುತ್ತಿದ್ದು, ಅಮೆರಿಕ, ಕೆನಾಡಾ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಫ್ ರೋಡ್ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಇದೀಗ ಭಾರತದಲ್ಲೂ ಹೊಸ ಆಫ್ ರೋಡ್ ವಾಹನವನ್ನು ಬಿಡುಗಡೆ ಮಾಡುವ ಉದ್ದೇಶದೊಂದಿಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಖಾತೆ ತೆರೆಯುವ ಮೂಲಕ ಡೊಮೊ ಟೂರ್‌ಗೆ ಚಾಲನೆ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಶೆರ್ಪ್ ಎನ್ 1200 ಆಫ್ ರೋಡ್ ಮಾರಾಟಕ್ಕೆ ಚಾಲನೆ ನೀಡುವ ಸಿದ್ದತೆಯಲ್ಲಿದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಒರಟು ಭೂಪ್ರದೇಶಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ನುಗ್ಗಬಲ್ಲ ಶೆರ್ಪ್ ಎನ್ 1200 ಎಟಿವಿ ವಾಹನವು ಕೇವಲ ಭೂ ಪ್ರದೇಶದ ಮೇಲೆ ಮಾತ್ರವನ್ನು ನೀರಿನಲ್ಲೂ ಯಾವುದೇ ಅಡೆತಡೆಯಿಲ್ಲದೆ ನುಗ್ಗಬಲ್ಲದು.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಅಸ್ತಿತ್ವದಲ್ಲಿರುವ ಅತಿ ಬಲಶಾಲಿ ಡರ್ಟ್ ಎಟಿವಿಯಾಗಿರುವ ಶೆರ್ಪ್ ವಾಹನವು 71 ಇಂಚಿನ ದೈತ್ಯವಾದ ಟಯರ್‌ಗಳಿಂದಲೇ ಆಫ್ ರೋಡ್ ಪ್ರಿಯರನ್ನು ಗಮನಸೆಳೆಯಲಿದ್ದು, ಬಾಕ್ಸ್ ಶೇಪ್ ಬಾಡಿ ವಿನ್ಯಾಸದೊಂದಿಗೆ ವಿಚಿತ್ರ ಎನ್ನಿಸದೇ ಇರಲಾರದು.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಶೆರ್ಪ್ ವಾಹನದಲ್ಲಿರುವ ದೊಡ್ಡ ಗಾತ್ರದ ಟಯರ್‌ಗಳ ಮಧ್ಯದಲ್ಲಿ ಸಣ್ಣದಾದ ಕ್ಯಾಬಿನ್ ಸಹ ಜೋಡಿಸಲಾಗಿದ್ದು, ಈ ಟಯರ್‌ಗಳು ಚಕ್ರದ ಹೊರಮೈ ಮಾದರಿಯನ್ನು ಹೆಚ್ಚು ಟ್ರಾಕ್ಷನ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಈ ಕಾರಣಕ್ಕೆ ಶೆರ್ಪ್ ವಾಹನವು ಕಠಿಣ ಹಾದಿ ಹೊಂದಿರುವ ಬೆಟ್ಟ ಗುಡ್ಡಗಳನ್ನು ಹೆಚ್ಚು ತೊಂದರೆ ಇಲ್ಲದೆ ಎರುವ ಸಾಮರ್ಥ್ಯ ಹೊಂದಿದ್ದು, ಈ ವಾಹನವು ಕೇವಲ 3,400 ಎಂಎಂ ಉದ್ದ, 2,300 ಎಂಎಂ ಅಗಲ, 2,520 ಎಂಎಂ ಎತ್ತರದೊಂದಿಗೆ ಅತಿಹೆಚ್ಚು ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಕಠಿಣ ಭೂಪ್ರದೇಶಗಳಲ್ಲಿ ಸಾಗುವಾಗ ಹಿಂದಕ್ಕೆ ಬರಬಾರದು ಎಂಬ ಕಾರಣಕ್ಕೆ ಟಯರ್ ಇನ್ ಪ್ಲೇಷನ್ ಸಿಸ್ಟಂನಂತಹ ಹಲವಾರು ಗ್ಯಾಜೆಟ್‌ಗಳನ್ನು ನೀಡಲಾಗಿದ್ದು, ಹೊಸ ವಾಹನದಲ್ಲಿರುವ 1.8-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಮಾದರಿಯು 55-ಬಿಎಚ್‌ಪಿ ಉತ್ಪಾದನೆ ಮಾಡುತ್ತದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಜೊತೆಗೆ 190 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಒಟ್ಟು 95 ಲೀಟರ್ ಇಂಧನ ಸಂಗ್ರಹ ಟ್ಯಾಂಕ್ ಒದಗಿಸಲಾಗಿದೆ. ಹೊಸ ವಾಹನವು ರಸ್ತೆಗಳಲ್ಲಿ ಗಂಟೆಗೆ ಗರಿಷ್ಠ 40 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ನೀರಿನ ಮೇಲೆ ಗಂಟೆಗೆ 6 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಈ ಅಜಾನುಬಾಹು ಶೆರ್ಪ್ ಎಟಿವಿ ಬಲಿಷ್ಠತೆಯನ್ನು ನೀವು ಒಮ್ಮೆ ನೋಡಲೇಬೇಕು!

ಮತ್ತೊಂದು ಪ್ರಮುಖ ವಿಚಾರವೆಂದರೆ ಶೆರ್ಪ್ ಆಫ್ ರೋಡ್ ವಾಹನಗಳನ್ನು ವಿಶೇಷವಾಗಿ ರಕ್ಷಣಾ ಕಾರ್ಯಾಚರಣೆಗಳಿಗಾಗಿ, ಗಡಿಯಲ್ಲಿ ಗಸ್ತು ನಿರ್ವಹಣೆಗೆ, ವಿಪತ್ತು ನಿರ್ವಹಣೆಗಾಗಿ, ತೈಲ ಮತ್ತು ಗಣಿಗಾರಿಕೆಗಳಲ್ಲಿ ಬಳಕೆ ಮಾಡಲು ಸಿದ್ದಪಡಿಸಲಾಗಿದ್ದು, ಈ ವಾಹನವನ್ನು ಸಾಮಾನ್ಯ ರಸ್ತೆಗಳಲ್ಲಿ ಬಳಕೆ ಮಾಡಲು ಯಾವುದೇ ಅನುಮತಿಯನ್ನು ನೀಡಲಾದರೂ ಈ ವಾಹನದ ಬೆಲೆ ದೇಶಿಯ ಮಾರುಕಟ್ಟೆಯಲ್ಲಿ ರೂ. 1.30 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

Image Couresy: Vineet Mishra

Most Read Articles

Kannada
English summary
Most Capable Off-roader Sherp N1200 Video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X