ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಆರ್ಥಿಕ ಹಿಂಜರಿತ ಸೇರಿದಂತೆ ವಿವಿಧ ಕಾರಣಗಳಿಂದ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಆಟೋ ಉತ್ಪಾದನಾ ಸಂಸ್ಥೆಗಳಿಗೆ ದಸರಾ ಮತ್ತು ದೀಪಾವಳಿ ಉತ್ಸವಗಳು ತುಸು ನೆಮ್ಮದಿಗೆ ಕಾರಣವಾಗಿದ್ದು, ಹೊಸ ವಾಹನಗಳ ಮಾರಾಟದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಳ ಕಂಡು ಬಂದಿದೆ.

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಹೌದು, ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ಈ ಬಾರಿ ಆಟೋ ಉತ್ಪಾದನಾ ಸಂಸ್ಥೆಗಳು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿದ್ದು, ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಮುನ್ನಡೆ ಕಾಯ್ದುಕೊಂಡಿವೆ. ಇದು ವರ್ಷದಲ್ಲಿ ಮೊದಲ ಬಾರಿಗೆ ಹೊಸ ವಾಹನಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದ್ದು, ಮಾರುತಿ ಸುಜುಕಿಯು ಸಹ ತನ್ನ ಜನಪ್ರಿಯ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿ ಇದೀಗ ಮತ್ತೆ ಗ್ರಾಹಕರ ಬೇಡಿಕೆ ಮುಂಚೂಣಿ ಸಾಧಿಸುತ್ತಿದೆ.

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಕಳೆದ ವರ್ಷ ಅಕ್ಟೋಬರ್ ಅವಧಿಯಲ್ಲಿ 1,46,766 ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿಯು ಪ್ರಸಕ್ತ ವರ್ಷದ ಅಕ್ಟೋಬರ್ ಅವಧಿಯಲ್ಲಿ 1,53,435 ಕಾರುಗಳನ್ನು ಮಾರಾಟ ಮಾಡಿದ್ದು, ಕಾರು ಮಾರಾಟವು ಕಳೆದ ವರ್ಷಕ್ಕಿಂತ ಶೇ.4.5 ರಷ್ಟು ಹೆಚ್ಚಳವಾಗಿದೆ.

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಇನ್ನು 2020ರ ಏಪ್ರಿಲ್ 1ರಿಂದ ಬಿಎಸ್-6 ವೈಶಿಷ್ಟ್ಯತೆಯ ವಾಹನ ಉತ್ಪಾದನೆ ಮತ್ತು ಮಾರಾಟವು ಕಡ್ಡಾಯವಾಗಲಿದ್ದು, ಬಿಎಸ್-4 ವಾಹನಗಳ ಮಾರಾಟವು ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ತದನಂತರ ಬಿಎಸ್-4 ವಾಹನ ಮಾರಾಟ ಮತ್ತು ನೋಂದಣಿ ಸಂಪೂರ್ಣ ನಿಷೇಧಗೊಳ್ಳಲಿದ್ದು, ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿಯು ಬಿಎಸ್-4 ಪೆಟ್ರೋಲ್ ಕಾರುಗಳ ಸ್ಟಾಕ್ ಪ್ರಮಾಣವನ್ನು ಪೂರ್ತಿಯಾಗಿ ಮಾರಾಟ ಮಾಡಿದೆ.

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಮಾರುತಿ ಸುಜುಕಿ ಈಗಾಗಲೇ ಪೆಟ್ರೋಲ್ ಕಾರುಗಳನ್ನು ಸಂಪೂರ್ಣವಾಗಿ ಬಿಎಸ್-6 ನಿಯಮ ಅನುಸಾರವಾಗಿಯೇ ಅಭಿವೃದ್ದಿಪಡಿಸಿ ಮಾರಾಟ ಮಾಡುತ್ತಿದ್ದು, ಈಗಾಗಲೇ 2 ಲಕ್ಷ ಪೆಟ್ರೋಲ್ ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಡೀಸೆಲ್ ಕಾರುಗಳನ್ನು ಮಾತ್ರವೇ ಬಿಎಸ್-4 ನಿಯಮದಂತೆ ಮಾರಾಟ ಮಾಡುತ್ತಿದ್ದು, 2020ರ ಫೆಬ್ರುವರಿ ನಂತರ ಡೀಸೆಲ್ ಕಾರುಗಳನ್ನು ಕೂಡಾ ಬಿಎಸ್-6 ನಿಯಮದಂತೆ ಮಾರಾಟ ಪ್ರಕ್ರಿಯೆ ಆರಂಭಿಸಲಿದೆ.

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಮಾಹಿತಿಗಳ ಪ್ರಕಾರ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅಗ್ಗದ ಬೆಲೆಯ ಮಾರುತಿ ಸುಜುಕಿ ಕಾರುಗಳಲ್ಲಿ ಏಪ್ರಿಲ್ 1ರ ನಂತರ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆ ಮಾತ್ರವೇ ಲಭ್ಯವಾಗಲಿದ್ದು, ಡಿಸೇಲ್ ಎಂಜಿನ್ ಆಯ್ಕೆಯನ್ನು ಕೈಬಿಡಲಾಗುತ್ತಿದೆ.

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಕಾರುಗಳಲ್ಲಿ ಮಾರಾಟವಾಗುತ್ತಿರುವ 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯು ಬಿಎಸ್-6 ನಿಯಮ ಜಾರಿ ನಂತರ ಸ್ಥಗಿತವಾಗಲಿದ್ದು, ಆಸಕ್ತ ಗ್ರಾಹಕರಿಗಾಗಿ ಮಾತ್ರವೇ ಹೈ ಎಂಡ್ ಕಾರುಗಳಾದ ಎಸ್-ಕ್ರಾಸ್, ಎಕ್ಸ್ಎಲ್6 ಮತ್ತು ಬಿಡುಗಡೆಗೆ ಸಿದ್ದವಾಗುತ್ತಿರುವ ವಿಟಾರಾ ಎಸ್‌ಯುವಿ ಕಾರಿನಲ್ಲಿ ಮಾತ್ರವೇ ಬಿಎಸ್-6 ವೈಶಿಷ್ಟ್ಯತೆಯ 1.6-ಲೀಟರ್ ಡೀಸೆಲ್ ಎಂಜಿನ್ ಮಾರಾಟ ಮಾಡಲಿದೆ.

MOST READ: ಕೆಲವೇ ವರ್ಷಗಳ ಹಿಂದೆ ಟ್ಯಾಕ್ಸಿ ಡ್ರೈವರ್ ಆಗಿದ್ದ ಇವರು ಇದೀಗ ರೋಲ್ಸ್ ರಾಯ್ಸ್ ಕಾರಿಗೆ ಮಾಲೀಕ..!

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಇನ್ನುಳಿದ ಕಾರುಗಳಲ್ಲಿ 1-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರವೇ ಮಾರಾಟ ಮಾಡಲಿದ್ದು, ಮಾಲಿನ್ಯ ಉತ್ಪಾದನೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಡುತ್ತಿದೆ.

MOST READ: ನಮ್ಮ ಬೆಂಗಳೂರಿನಲ್ಲಿ ಮೊದಲ ಡಿಜಿಟಲ್ ಶೋರೂಂ ಆರಂಭಿಸಿದ ಎಂಜಿ ಮೋಟಾರ್

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಇದರಲ್ಲಿ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿರುವ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ನಿಯಮದಂತೆ ಉನ್ನತೀಕರಣ ಕಷ್ಟಸಾಧ್ಯ ಎನ್ನಲಾಗುತ್ತಿದ್ದು, ಒಂದು ವೇಳೆ ಹೊಸ ನಿಯಮ ಅನುಸಾರ ಎಂಜಿನ್ ಉನ್ನತೀಕರಣ ಮಾಡಿದರೂ ಸಹ ದುಬಾರಿ ಬೆಲೆ ವಿಧಿಸಬೇಕಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಬಿಎಸ್-6 ಎಂಜಿನ್ ಬೆಲೆಯು ಕನಿಷ್ಠ 1 ಲಕ್ಷದಿಂದ ರೂ.2 ಲಕ್ಷದ ತನಕ ದುಬಾರಿಯಾಗಲಿದ್ದು, ಇದು ಕಾರು ಮಾರಾಟದ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ.

MOST READ: ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಇದೇ ಕಾರಣಕ್ಕೆ 1.3-ಲೀಟರ್ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಮಾರುತಿ ಸುಜುಕಿಯು ಡೀಸೆಲ್ ಕಾರುಗಳ ಇಂಧನ ದಕ್ಷತೆಗೆ ಸರಿಸಮನಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸುತ್ತದೆ.

ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಮುನ್ನಡೆ

ಒಂದು ವೇಳೆ ಬೆಲೆ ದುಬಾರಿಯಾದರೂ ಸರಿ ಡೀಸೆಲ್ ಎಂಜಿನ್ ಕಾರುಗಳನ್ನೇ ಖರೀದಿ ಬಯಸುವ ಗ್ರಾಹಕರಿಗೆ ಹೈ ಎಂಡ್ ಮಾದರಿಗಳಲ್ಲಿ 1.6-ಲೀಟರ್ ಸಾಮಾರ್ಥ್ಯದ ಎಂಜಿನ್ ಆಯ್ಕೆ ದೊರೆಯಲಿದ್ದು, ಮಧ್ಯಮ ವರ್ಗದ ಕಾರು ಖರೀದಿದಾರರಿಗೆ ಬೆಲೆ ಹೊರೆಯಾಗದಂತೆ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ.

Most Read Articles

Kannada
English summary
October 2019 Sales Report: Maruti Suzuki Registers 4.5 Per cent Growth. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X