ಕೆಲವೇ ವರ್ಷಗಳ ಹಿಂದೆ ಟ್ಯಾಕ್ಸಿ ಡ್ರೈವರ್ ಆಗಿದ್ದ ಇವರು ಇದೀಗ ರೋಲ್ಸ್ ರಾಯ್ಸ್ ಕಾರಿಗೆ ಮಾಲೀಕ..!

ಕ್ಷೌರಿಕ ವೃತ್ತಿಯನ್ನು ಮಾಡುವ ಬೆಂಗಳೂರಿನ ರಮೇಶ್ ಬಾಬುರವರು ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವುದು ಗೊತ್ತಿರುವ ಸಂಗತಿ. ಇದೇ ರೀತಿಯಲ್ಲಿ ಐಷಾರಾಮಿ ಕಾರುಗಳನ್ನು ಹೊಂದಿರುವವರ ಸಂಖ್ಯೆ ಹೆಚ್ಚೇನೂ ಇಲ್ಲ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಆದರೆ ಈ ಟ್ಯಾಕ್ಸಿ ಡ್ರೈವರ್ ಕಥೆಯೇ ಬೇರೆ. ಈ ಟ್ಯಾಕ್ಸಿ ಡ್ರೈವರ್ ಟ್ಯಾಕ್ಸಿ ಕಂಪನಿಯೊಂದನ್ನು ಸ್ಥಾಪಿಸಿ, ಅದರ ಯಶಸ್ಸಿಗಾಗಿ ಶ್ರಮಿಸಿದರು. ಕೊನೆಗೆ ಈಗ ರೋಲ್ಸ್ ರಾಯ್ಸ್ ಘೋಸ್ಟ್ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇದು ಅಫ್ಜಲ್ ಎಂಬ ಟ್ಯಾಕ್ಸಿ ಡ್ರೈವರ್ ಕಥೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಅಫ್ಜಲ್‍‍ರವರು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಚೆನ್ನಾಗಿ ಸಂಪಾದನೆ ಮಾಡಿ, ಭಾರತದಲ್ಲಿಯೇ ದುಬಾರಿ ಎನ್ನಬಹುದಾದ ಕಾರ್ ಅನ್ನು ಖರೀದಿಸಿದ್ದಾರೆ. ಈ ಕಥೆ ಶುರುವಾಗುವುದು ಅಲ್ಲಾ ಭಕ್ಷ್ ಎಂಬುವವರಿಂದ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಈ ಅಲ್ಲಾ ಭಕ್ಷ್ ಅಫ್ಜಲ್‍‍ರವರ ತಂದೆ. ಅವರು 1967ರಲ್ಲಿ ಟ್ಯಾಕ್ಸಿ ಸೇವೆಯನ್ನು ಎರಡು ಕಾರುಗಳೊಂದಿಗೆ ಶುರು ಮಾಡಿದರು. 1980ರಲ್ಲಿ ಅಫ್ಜಲ್‍‍ರವರು ಪರ್ವಿನ್ ಟ್ರಾವೆಲ್ಸ್ ಅನ್ನು ಆರಂಭಿಸಿ, ಈ ವ್ಯವಹಾರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರು.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಐದು ಜನ ಒಡಹುಟ್ಟಿದವರನ್ನು ಹೊಂದಿರುವ ಅಫ್ಜಲ್ ತಮ್ಮ 15ನೇ ವಯಸ್ಸಿನಿಂದಲೇ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು. ತಮ್ಮ ಟ್ಯಾಕ್ಸಿಯ ಗ್ರಾಹಕರಿಗೆ ಇನ್ವಾಯ್ಸ್ ಗಳನ್ನು ವಿತರಿಸುವುದರಿಂದ ಹಿಡಿದು ಅವರ ಬಳಿ ಹಣವನ್ನು ಪಡೆಯುವವರೆಗೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ದಿ ವೀಕೆಂಡ್ ಲೀಡರ್ ವರದಿಯಂತೆ ಪರ್ವಿನ್ ಟ್ರಾವೆಲ್ಸ್ ಈಗ ರೂ.400 ಕೋಟಿಗೂ ಹೆಚ್ಚಿನ ವ್ಯವಹಾರವನ್ನು ನಡೆಸುತ್ತದೆ. ಈ ಟ್ರಾವೆಲ್ಸ್ ಅನ್ನು ಏಕೈಕ ಟ್ಯಾಕ್ಸಿ ಟೂರಿಸ್ಟ್ ಆಪರೇಟರ್ ಆಗಿ ಶುರುಮಾಡಲಾಗಿತ್ತು. ಈಗ ಈ ಟ್ರಾವೆಲ್ಸ್ ನಲ್ಲಿ 1,300 ಕ್ಕೂ ಹೆಚ್ಚು ವಾಹನಗಳಿದ್ದು, 4,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಭಾರತದ ದಕ್ಷಿಣ ಭಾಗದಲ್ಲಿ ಪರ್ವಿನ್ ಟ್ರಾವೆಲ್ಸ್ ಹಲವಾರು ಕಾರು ಹಾಗೂ ಐಷಾರಾಮಿ ಬಸ್ಸುಗಳ ಸೇವೆಯನ್ನು ನೀಡುತ್ತದೆ. 1981ರಲ್ಲಿ ಮೊದಲ ಇಂಟರ್ ಸಿಟಿ ಬಸ್ ಸೇವೆಯನ್ನು ಆರಂಭಿಸಲಾಯಿತು. ಗ್ರಾಹಕರ ಅಗತ್ಯತೆ ಹಾಗೂ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸ್ವತಃ ಅಫ್ಜಲ್‍‍ರವರೇ ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ವರ್ಷಗಳು ಕಳೆದಂತೆ ಈ ವ್ಯವಹಾರವು ಭಾರೀ ಪ್ರಮಾಣದ ಬೆಳವಣಿಗೆಯನ್ನು ಕಂಡಿತು. ಕಳೆದ ವರ್ಷ, ಪರ್ವಿನ್ ಟ್ರಾವೆಲ್ಸ್ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ಸೇರಿಸುವ ಮೂಲಕ, ಐಷಾರಾಮಿ ಕಾರ್ ಅನ್ನು ಬಾಡಿಗೆಗೆ ನೀಡುವ ಮೊದಲ ಟ್ಯಾಕ್ಸಿ ಸೇವಾ ಸಂಸ್ಥೆಯೆಂಬ ಹೆಗ್ಗಳಿಕೆಯನ್ನು ಪಡೆಯಿತು.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಬೆಲೆಯು ರೂ.6 ಕೋಟಿಗಳಾಗುತ್ತದೆ. ಪರ್ವಿನ್ ಟ್ರಾವೆಲ್ಸ್ ಹೊಂದಿರುವ ರೋಲ್ಸ್ ರಾಯ್ಸ್ ಘೋಸ್ಟ್ ಹೊಸ ತಲೆಮಾರಿನ ಕಾರ್ ಆಗಿದ್ದು, ಗಂಟೆಗಳ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತದೆ. ಈ ಕಾರಿನ ಬಾಡಿಗೆಯ ಕಡಿಮೆ ಬೆಲೆಯೆಂದರೆ ರೂ.25,000. ಈ ಬೆಲೆಗೆ ಕಾರ್ ಅನ್ನು 2 ಗಂಟೆ ಹಾಗೂ 20 ಕಿ.ಮೀವರೆಗೆ ಬಾಡಿಗೆಗೆ ನೀಡಲಾಗುವುದು.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಪ್ರತಿ ಹೆಚ್ಚುವರಿ ಕಿ.ಮೀ.ಗೆ ರೂ.750 ಶುಲ್ಕ ವಿಧಿಸಲಾಗುತ್ತದೆ. ಪ್ರತಿ ಹೆಚ್ಚುವರಿ ಗಂಟೆಗೆ ರೂ.7,500 ಶುಲ್ಕ ವಿಧಿಸಲಾಗುತ್ತದೆ. ಹೆಚ್ಚಿನ ಅವಧಿಗೆ ಕಾರು ಬಯಸುವ ಗ್ರಾಹಕರು ಹೆಚ್ಚಿನ ಶ್ರೇಣಿಯ ಯೋಜನೆಗೆ ಹೋಗಬಹುದು. ಇದರ ಪ್ರಕಾರ 80 ಕಿ.ಮೀ ಹಾಗೂ 8 ಗಂಟೆಗಳ ಕಾಲ ಬಾಡಿಗೆಗೆ ನೀಡಲಾಗುತ್ತದೆ. ಅದಕ್ಕಾಗಿ ರೂ.80,000 ಶುಲ್ಕ ವಿಧಿಸಲಾಗುತ್ತದೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಈ ಎರಡು ಯೋಜನೆಗಳನ್ನು ಹೊರತುಪಡಿಸಿ ಗ್ರಾಹಕರು ಇತರ ಬಾಡಿಗೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪರ್ವಿನ್ ಟ್ರಾವೆಲ್ಸ್ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್, ಫೋರ್ಡ್ ಎಂಡೀವರ್‍‍ನ ಲಿಮೋಸಿನ್, ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಮುಂತಾದ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡುತ್ತದೆ.

ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ಟ್ಯಾಕ್ಸಿ ಡ್ರೈವರ್

ಇವುಗಳ ಜೊತೆಗೆ ಇಟಿಯೋಸ್, ಇನೊವಾ, ಎಸ್‌ಎಕ್ಸ್ 4 ಕಾರುಗಳನ್ನು ಸಹ ನೀಡುತ್ತದೆ. ಗ್ರಾಹಕರು ವಿವಿಧ ಬಸ್ ಸೇವೆಗಳಿಂದ ಆಯ್ಕೆ ಮಾಡಿಕೊಳ್ಳುವುದರ ಜೊತೆಗೆ ಪೂರ್ಣ ಬಸ್ ಅನ್ನು ಸಹ ಬಾಡಿಗೆಗೆ ಪಡೆಯಬಹುದು. ಅಫ್ಜಲ್‍‍ರವರು ಬಿಎಂಡಬ್ಲ್ಯು ಎಕ್ಸ್ 5 ಕಾರ್ ಅನ್ನು ಚಲಾಯಿಸುತ್ತಾರೆ. ಕಠಿಣ ಪರಿಶ್ರಮದ ಯಶಸ್ಸಿನ ಕಥೆಗಳಲ್ಲಿ ಇದು ಒಂದು.

Most Read Articles

Kannada
English summary
Taxi driver buys rolls royce ghost worth crores - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X