Just In
- 17 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 1 day ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 1 day ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- Sports
ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್
- News
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
- Finance
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
- Movies
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!
ಖಾಸಗಿ ಜೆಟ್‍ಗಳಿಗೆ ಇರುವ ಬೇಡಿಕೆಯ ಬಗ್ಗೆ ಹೆಚ್ಚು ಹೇಳ ಬೇಕಿಲ್ಲ. ಖಾಸಗಿ ಜೆಟ್‍ಗಳು ಐಷಾರಾಮಿತನವನ್ನು ನೀಡುತ್ತವೆ. ಇದು ಸಾಮಾನ್ಯ ಜನರಿಗೆ ಕೈಗೆಟುಕದ ಸಂಗತಿಯಾಗಿದೆ. ಖಾಸಗಿ ಜೆಟ್‍ಗಳನ್ನು ಈ ಮೊದಲು ಶ್ರೀಮಂತರು ಹಾಗೂ ಸುಪ್ರಸಿದ್ಧ ವ್ಯಕ್ತಿಗಳ ಪ್ರತಿಷ್ಟೆಯ ಸಂಕೇತವಾಗಿ ಪರಿಗಣಿಸಲಾಗುತ್ತಿತ್ತು.

ಆದರೆ ವ್ಯವಹಾರಕ್ಕಾಗಿ ಪ್ರಯಾಣಿಸುವ ಜನರಿಗೆ ಖಾಸಗಿ ವಿಮಾನವು ಇವುಗಳೆಲ್ಲವನ್ನೂ ಮೀರಿದ್ದಾಗಿದೆ. ಐತಿಹಾಸಿಕವಾಗಿ, ಭಾರತದಲ್ಲಿ ಖಾಸಗಿ ವಿಮಾನ ಮಾರುಕಟ್ಟೆಯು ದೊಡ್ಡದಾಗಿರಲಿಲ್ಲ. ಆದರೆ ಭಾರತೀಯ ಆರ್ಥಿಕತೆಯ ಬೆಳವಣಿಗೆಯಿಂದಾಗಿ ಈಗ ಮಹತ್ವದ ಹಾದಿಯಲ್ಲಿದೆ.

ಖಾಸಗಿ ಜೆಟ್‌ಗಳು ವ್ಯಾಪಾರಸ್ಥರಿಗೆ ಅಪಾರ ವೇಗದಲ್ಲಿ, ಹೆಚ್ಚು ದಕ್ಷತೆಯೊಂದಿಗೆ ಆರಾಮದಾಯಕವಾದ, ರಹಸ್ಯವಾಗಿ ಪ್ರಯಾಣಿಸುವಂತೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಖಾಸಗಿ ಜೆಟ್‍ಗಳು ಪ್ರಯಾಣವನ್ನು ಸುಲಭ ಮಾಡುತ್ತವೆ. ಉದ್ಯಮಿಗಳ ದಿನ ನಿತ್ಯದ ಜೀವನವು ನಿರಂತರವಾದ ವೇಳಾಪಟ್ಟಿಗಳಿಂದ ತುಂಬಿರುತ್ತದೆ. ಖಾಸಗಿ ಜೆಟ್‌ಗಳು, ಅವರ ಚಟುವಟಿಕೆಗಳಿಗೆ ಹೊಂದಿಕೊಳ್ಳಲಿವೆ.

ಹೈ ಪ್ರೊಫೈಲ್ ಉದ್ಯಮಿಗಳು ಹಾಗೂ ಖಾಸಗಿ ಜೆಟ್‌ಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಭಾರತದಲ್ಲಿರುವ ಯಾವ ಉದ್ಯಮಿಗಳು ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮುಖೇಶ್ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರು
ಬೋಯಿಂಗ್ ಬಿಸಿನೆಸ್ ಜೆಟ್ 2
ಮುಖೇಶ್ ಅಂಬಾನಿ ಭಾರತದಲ್ಲಿ ಬಿಬಿಜೆ 2 ವಿಮಾನವನ್ನು ಹೊಂದಿರುವ ಏಕೈಕ ವ್ಯಕ್ತಿ. 73 ಮಿಲಿಯನ್ ಡಾಲರ್ ಬೆಲೆಯ, ಈ ಜೆಟ್ ಅನ್ನು ಮುಖೇಶ್ ಅಂಬಾನಿಯವರ ಖಾಸಗಿ ಬಳಕೆಗಾಗಿ ಖರೀದಿಸಲಾಗಿದೆ. ಬೋಯಿಂಗ್ ಈ ರೀತಿಯ ಜೆಟ್‌ಗಳನ್ನು ಕಾರ್ಪೊರೇಟ್ ಬಳಕೆಗಾಗಿ ತಯಾರಿಸಿದೆ.

ಮುಖೇಶ್ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರು
ಬೋಯಿಂಗ್ ಬಿಸಿನೆಸ್ ಜೆಟ್ 2
ಮುಖೇಶ್ ಅಂಬಾನಿ ಭಾರತದಲ್ಲಿ ಬಿಬಿಜೆ 2 ವಿಮಾನವನ್ನು ಹೊಂದಿರುವ ಏಕೈಕ ವ್ಯಕ್ತಿ. 73 ಮಿಲಿಯನ್ ಡಾಲರ್ ಬೆಲೆಯ, ಈ ಜೆಟ್ ಅನ್ನು ಮುಖೇಶ್ ಅಂಬಾನಿಯವರ ಖಾಸಗಿ ಬಳಕೆಗಾಗಿ ಖರೀದಿಸಲಾಗಿದೆ. ಬೋಯಿಂಗ್ ಈ ರೀತಿಯ ಜೆಟ್‌ಗಳನ್ನು ಕಾರ್ಪೊರೇಟ್ ಬಳಕೆಗಾಗಿ ತಯಾರಿಸಿದೆ.

ಅನಿಲ್ ಅಂಬಾನಿ, ರಿಲಯನ್ಸ್ ಗ್ರೂಪ್ ಅಧ್ಯಕ್ಷರು
ಬೊಂಬಾರ್ಡಿಯರ್ ಗ್ಲೋಬಲ್ 6000
ಅನಿಲ್ ಅಂಬಾನಿ 38 ಮಿಲಿಯನ್ ಡಾಲರ್ ಬೆಲೆಯ, ಬೊಂಬಾರ್ಡಿಯರ್ ಗ್ಲೋಬಲ್ 6000 ಜೆಟ್ ಹೊಂದಿದ್ದಾರೆ. ಇದು ಭಾರತದಲ್ಲಿರುವ ಅತ್ಯಂತ ಜನಪ್ರಿಯ ಖಾಸಗಿ ಜೆಟ್‌ಗಳಲ್ಲಿ ಒಂದಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಪ್ರತಿಯೊಬ್ಬರಿಗೂ ಈ ಖಾಸಗಿ ಜೆಟ್ ಆರಾಮದಾಯಕ ಅನುಭವವನ್ನು ನೀಡುತ್ತದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

17 ಜನ ಕುಳಿತು ಕೊಳ್ಳಬಹುದಾದ ಸಾಮರ್ಥ್ಯ ಹಾಗೂ ಸಮಗ್ರವಾದ ಕ್ಯಾಬಿನ್ ಸಿಸ್ಟಂ ಹೊಂದಿರುವ ಈ ಜೆಟ್ ಎಲ್ಲಾ ವ್ಯವಹಾರ ಹಾಗೂ ವೈಯಕ್ತಿಕ ಅಗತ್ಯಗಳನ್ನು ಎಲ್ಲಾ ಸಮಯದಲ್ಲೂ ಪೂರೈಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಲಕ್ಷ್ಮಿ ಮಿತ್ತಲ್, ಅರ್ಸೆಲರ್‍ಮಿತ್ತಲ್ ಅಧ್ಯಕ್ಷರು ಹಾಗೂ ಸಿಇಒ
ಗಲ್ಫ್ ಸ್ಟ್ರೀಮ್ ಜಿ550
ಉಕ್ಕಿನ ದೊರೆ ಲಕ್ಷ್ಮಿ ಮಿತ್ತಲ್ ಗಲ್ಫ್ ಸ್ಟ್ರೀಮ್ ತಯಾರಿಸಿರುವ ಅತ್ಯುತ್ತಮ ವ್ಯವಹಾರ ವಿಮಾನಗಳಲ್ಲಿ ಒಂದಾದ ಗಲ್ಫ್ ಸ್ಟ್ರೀಮ್ ಜಿ550 ಹೊಂದಿದ್ದಾರೆ. ಖಾಸಗಿ ಜೆಟ್‌ಗಳ ರೋಲ್ಸ್ ರಾಯ್ಸ್ ಎಂದು ಕರೆಯಲಾಗುವ ಈ ಜೆಟ್‍ನ ಬೆಲೆ 38 ಮಿಲಿಯನ್ ಡಾಲರ್‍ಗಳಾಗುತ್ತದೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಕಾರ್ಪೋರೇಟ್ ಪ್ರಯಾಣದ ಉದ್ದೇಶಗಳಿಗಾಗಿ ತಯಾರಿಸಲಾಗಿರುವ ಈ ಜೆಟ್‍ನಲ್ಲಿ 19 ಪ್ರಯಾಣಿಕರು ಕುಳಿತುಕೊಳ್ಳ ಬಹುದು. ಎರಡು ರೋಲ್ಸ್ ರಾಯ್ಸ್ ಎಂಜಿನ್‌ಗಳನ್ನು ಹೊಂದಿರುವ ಗಲ್ಫ್ ಸ್ಟ್ರೀಮ್ ಜಿ550, 12 ಗಂಟೆಗಳ ಕಾಲ ತಡೆರಹಿತವಾಗಿ ಹಾರಬಲ್ಲದು. ಜೊತೆಗೆ ಶಾರ್ಟ್ ಫೀಲ್ಡ್ ಹಾಗೂ ಎತ್ತರದ ವಿಮಾನ ನಿಲ್ದಾಣಗಳಿಂದಲೂ ಕಾರ್ಯನಿರ್ವಹಿಸುತ್ತದೆ.

ರತನ್ ಟಾಟಾ, ಟಾಟಾ ಸಮೂಹದ ಮಾಜಿ ಅಧ್ಯಕ್ಷರು, ಕೈಗಾರಿಕೋದ್ಯಮಿ
ಡಸಾಲ್ಟ್ ಫಾಲ್ಕನ್ 2000
ರತನ್ ಟಾಟಾರವರು ಡಸಾಲ್ಟ್ ಫಾಲ್ಕನ್ 2000 ಜೆಟ್ ಅನ್ನು ಹೊಂದಿದ್ದಾರೆ. ಟಾಟಾರವರು ತಮ್ಮ ಜೆಟ್ ಅನ್ನು ಸ್ವತಃ ತಾವೇ ಹಾರಾಟ ನಡೆಸುತ್ತಾರೆ. 22 ಮಿಲಿಯನ್ ಡಾಲರ್ ಬೆಲೆಯ, ಈ ಸುಂದರವಾದ ಐಷಾರಾಮಿ ವ್ಯಾಪಾರ ಜೆಟ್ ಪರ್ಫಾಮೆನ್ಸ್ ಹಾಗೂ ಎಕಾನಮಿ ಎರಡನ್ನೂ ಬ್ಯಾಲೆನ್ಸ್ ಮಾಡುತ್ತದೆ.

6 ಜನರು ಕುಳಿತುಕೊಳ್ಳುವ ಆಸನ ಸಾಮರ್ಥ್ಯವನ್ನು ಹೊಂದಿರುವ ಈ ಜೆಟ್ ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಕೈಗೆಟುಕುವ ಪ್ರಯಾಣ ದರವನ್ನು ಹೊಂದಿದೆ. ಕಡಿಮೆ ಬೆಲೆಯಲ್ಲಿ ಪೂರ್ಣ ಗಾತ್ರದ ಜೆಟ್‌ನ ಕಾರ್ಯನಿರ್ವಹಣೆಯ ದಕ್ಷತೆ ಹಾಗೂ ಫೀಚರ್‍ಗಳನ್ನು ಪಡೆಯಬಹುದು.

ಭಾರತದ ಅತಿದೊಡ್ಡ ಉದ್ಯಮಿಗಳ ಖಾಸಗಿ ಜೆಟ್‌ಗಳನ್ನು ನೋಡುವಾಗ, ಉದ್ಯಮಿಗಳು ನಿರಂತರವಾಗಿ ತಮ್ಮ ಕೆಲಸಗಳಿಗೆ ನಿರ್ವಹಿಸುವಲ್ಲಿ ಖಾಸಗಿ ಜೆಟ್ ವಹಿಸುವ ದೊಡ್ಡ ಪಾತ್ರವನ್ನು ಕಾಣಬಹುದು. ಇಂದು, ಖಾಸಗಿ ಜೆಟ್ ಬುಕಿಂಗ್ ಸೇವೆಗಳು ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿವೆ.

ಇದರಿಂದಾಗಿ ಈ ಜೆಟ್‌ಗಳನ್ನು ಹೆಚ್ಚಿನ ವೆಚ್ಚದಲ್ಲಿ ಬಾಡಿಗೆಗೆ ಪಡೆಯಲು ಸಾಧ್ಯವಾಗಿದೆ. ಸುಲಭವಾದ ಬಾಡಿಗೆ ವಿಧಾನಗಳೊಂದಿಗೆ, ಉದ್ಯಮಿಗಳಂತೆ ಖಾಸಗಿಯಾಗಿ ಜೆಟ್‍ನಲ್ಲಿ ಪ್ರಯಾಣಿಸುವುದು ಈಗ ದೊಡ್ಡ ಸಂಗತಿಯಾಗಿ ಉಳಿದಿಲ್ಲ.