ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಯಾವುದೇ ಒಂದು ವಾಹನವಾಗಿರಲಿ, ಅದರಲ್ಲಿ ಹಾರ್ನ್‍‍ಗಳು ಇದ್ದೇ ಇರುತ್ತವೆ. ಕೆಲವರು ತಮಗಿಷ್ಟವಾದ ಹಾರ್ನ್‍‍ಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಕಾರು ಹಾಗೂ ಬೈಕುಗಳಲ್ಲಿ ಹಾರ್ನ್‍‍ಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿರುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ವಾಹನಗಳಲ್ಲಿ ಹಾರ್ನ್ ಅಳವಡಿಸುವ ಮುಖ್ಯ ಉದ್ದೇಶವೆಂದರೆ ಯಾವುದಾದರೂ ವಾಹನ ಅಥವಾ ಯಾರಾದರೂ ಪಾದಚಾರಿಗಳು ಅಡ್ಡ ಬಂದರೆ ಅವರನ್ನು ಎಚ್ಚರಿಸುವುದು. ಭಾರತದ ವಾಹನ ಸವಾರರ ಕೆಟ್ಟ ಅಭ್ಯಾಸವೆಂದರೆ ಅವಶ್ಯಕತೆ ಇಲ್ಲದಿದ್ದರೂ ಸುಮ್ಮನೆ ಹಾರ್ನ್‍‍ಗಳನ್ನು ಮಾಡುವುದು.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಈ ರೀತಿಯಾಗಿ ಸುಮ್ಮನೆ ಹಾರ್ನ್ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗುವುದರ ಜೊತೆಗೆ ರಸ್ತೆಯಲ್ಲಿರುವ ಇತರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕಿರಿಕಿರಿಯಾಗುತ್ತದೆ. ಸುಮ್ಮನೇ ಹಾರ್ನ್ ಮಾಡುವುದರಿಂದ ಉಂಟಾಗುವ ಕಿರಿಕಿರಿಯಿಂದ ಗಲಾಟೆಯಾದ ಅನೇಕ ಘಟನೆಗಳು ನಡೆದಿವೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ನೆಲದ ಮೇಲೆ ಚಲಿಸುವ ಬಸ್, ಟ್ರಕ್, ಕಾರ್, ಆಟೋ, ಬೈಕ್ ಸೇರಿದಂತೆ ಅನೇಕ ವಾಹನಗಳಿಗೆ ಹಾರ್ನ್ ಅವಶ್ಯಕತೆಯಿದೆ. ರೈಲುಗಳಲ್ಲಿಯೂ ಸಹ ಹಾರ್ನ್‍‍ಗಳನ್ನು ಅಳವಡಿಸಲಾಗಿರುತ್ತದೆ. ನೆಲದ ಮೇಲೆ ಚಲಿಸುವ ಪ್ರತಿ ವಾಹನಗಳಿಗೂ ಹಾರ್ನ್‍‍ನ ಅವಶ್ಯಕತೆಯಿದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಅದರಂತೆ ಆಕಾಶದಲ್ಲಿ ಹಾರಾಡುವ ವಿಮಾನಗಳಲ್ಲಿಯೂ ಸಹ ಹಾರ್ನ್‍ಗಳನ್ನು ಅಳವಡಿಸಲಾಗಿರುತ್ತದೆ. ವಿಮಾನಗಳಲ್ಲಿ ಏಕೆ ಹಾರ್ನ್‍‍ಗಳನ್ನು ಅಳವಡಿಸಲಾಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ವಿಮಾನಗಳಲ್ಲಿ ಹಾರ್ನ್ ಇರುತ್ತವೆಯೇ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿದ್ದೆಯೇ? ಹಲವರಿಗೆ ಈ ರೀತಿಯ ಅನುಮಾನಗಳಿರುವುದುಂಟು. ವಿಮಾನಗಳಲ್ಲಿಯೂ ಹಾರ್ನ್‍‍ಗಳಿರುತ್ತವೆ. ಆದರೆ ಅವುಗಳಿರುವುದು ಹಕ್ಕಿಗಳನ್ನು ಅಥವಾ ಬೇರೊಂದು ವಿಮಾನಗಳನ್ನು ಎಚ್ಚರಿಸಲು ಅಲ್ಲ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ವಿಮಾನಗಳಲ್ಲಿರುವ ಹಾರ್ನ್‍‍ಗಳನ್ನು ಸಂಪರ್ಕಕ್ಕಾಗಿ ಬಳಸಲಾಗುತ್ತದೆ. ವಿಮಾನಗಳಲ್ಲಿರುವ ವಾರ್ನಿಂಗ್ ಅಥವಾ ಸಿಗ್ನಲ್ ಸಿಸ್ಟಂಗಳನ್ನು ಸಾಮಾನ್ಯವಾದ ವಾಹನಗಳಲ್ಲಿರುವ ಹಾರ್ನ್‍‍ಗಳಿಗೆ ಹೋಲಿಸಲಾಗುತ್ತದೆ. ವಿಮಾನವು ಮೇಲೆರುವ ಮುನ್ನ ಹಲವಾರು ಪರೀಕ್ಷೆಗಳನ್ನು ಎದುರಿಸುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಎಂಜಿನಿಯರ್‍‍ಗಳು ವಿಮಾನಗಳ ಕಾಕ್‍‍ಪೀಟ್‍‍ನಲ್ಲಿ ಕೆಲಸ ಮಾಡುತ್ತಾರೆ. ಇದಾದ ನಂತರ ತಮ್ಮ ಸಹೊದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಲು ಈ ಸಿಗ್ನಲ್‍‍ಗಳನ್ನು ಬಳಸುತ್ತಾರೆ. ಅವುಗಳನ್ನೇ ವಿಮಾನಗಳ ಹಾರ್ನ್‍‍ಗಳೆಂದು ಕರೆಯಲಾಗುತ್ತದೆ. ಇದಕ್ಕಾಗಿ ವಿಮಾನಗಳ ಕಾಕ್‍‍ಪೀಟ್‍‍ನಲ್ಲಿರುವ ಇನ್ಸ್ ಟ್ರೂಮೆಂಟ್ ಪ್ಯಾನೆಲ್‍‍ನಲ್ಲಿ ಚಿಕ್ಕ ಬಟನ್‍‍ವೊಂದನ್ನು ನೀಡಲಾಗಿರುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಇದರ ಮೇಲೆ ಇಂಗ್ಲೀಷ್‍‍ನಲ್ಲಿ ಜಿ‍ಎನ್‍‍ಡಿ ಎಂದು ಬರೆದಿರಲಾಗಿರುತ್ತದೆ. ಇದನ್ನು ಒತ್ತಿದರೆ ಹಾರ್ನ್‍‍ನಂತೆ ಕೆಲಸ ಮಾಡಲಿದೆ. ಇದರಿಂದ ಕಾಕ್‍‍ಪೀಟ್‍‍ನಲ್ಲಿರುವ ಎಂಜಿನಿಯರ್‍‍ಗಳು ತಮ್ಮ ಸಹೋದ್ಯೋಗಿಗಳನ್ನು ಸಂಪರ್ಕಿಸಬಹುದು.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ವಿಮಾನದ ಮುಂಭಾಗದಲ್ಲಿರುವ ನೋಸ್ ವ್ಹೀಲ್‍ ಬಳಿಯಿರುವ ಚಿಕ್ಕ ಕಂಪಾರ್ಟ್‍‍ಮೆಂಟ್‍‍ನಲ್ಲಿನ ಬಟನ್ ಒತ್ತುವ ಮೂಲಕ ಅವರು ಕಾಕ್‍‍ಪೀಟ್‍‍ನಲ್ಲಿರುವ ಎಂಜಿನಿಯರ್‍‍ಗಳನ್ನು ಸಂಪರ್ಕಿಸುತ್ತಾರೆ. ಹೆಡ್‍‍ಸೆಟ್‍‍ಗಳನ್ನು ಬಳಸಿ ಕಾಕ್‍‍ಪೀಟ್‍‍ನಲ್ಲಿರುವವರನ್ನು ಸಂಪರ್ಕಿಸುತ್ತಾರೆ. ವಿಮಾನಗಳಲ್ಲಿರುವ ವಾರ್ನಿಂಗ್ ಸಿಸ್ಟಂ ಅಥವಾ ಹಾರ್ನ್‍‍ಗಳನ್ನು ಸಂಪರ್ಕಕ್ಕಾಗಿ ಬಳಸಲಾಗುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ವಿಮಾನದ ಹಾರ್ನ್‍‍ಗಳ ಬಗ್ಗೆ ತಿಳಿದ ಮೇಲೆ, ವಿಮಾನದ ಕ್ಯಾಬಿನ್‍‍ಗಳ ಬಗ್ಗೆ ತಿಳಿಯೋಣ. ವಿಮಾನ ಪ್ರಯಾಣ ಪ್ರತಿಯೊಬ್ಬರಿಗೂ ಹೊಸ ಅನುಭವವನ್ನು ನೀಡುತ್ತದೆ. ವಿಮಾನಗಳಲ್ಲಿ ಪ್ರಯಾಣಿಸುವಾಗ, ನಾವು ವಿಶ್ರಾಂತಿ ಪಡೆಯಬಹುದು. ಆಯಾಗಿ ಮಲಗಬಹುದು.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಅದೇ ರೀತಿಯಲ್ಲಿ, ವಿಮಾನದಲ್ಲಿರುವ ಪೈಲಟ್‌ಗಳು ಹಾಗೂ ಗಗನಸಖಿಯರಿಗೂ ಸಹ ವಿಶ್ರಾಂತಿ ಬೇಕು. ದೀರ್ಘಕಾಲ ಪ್ರಯಾಣಿಸುತ್ತಲೇ ಇರುವ ವಿಮಾನದ ನೌಕರರು, ನಿರ್ದಿಷ್ಟವಾಗಿ, ವಿಶ್ರಾಂತಿ ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಎಂದಾದರೂ ಫ್ಲೈಟ್ ಅಟೆಂಡೆಂಟ್ ವಿಶ್ರಾಂತಿಯನ್ನು ಪಡೆಯುವುದನ್ನು ನೋಡಿದ್ದೀರಾ? 14-15 ಗಂಟೆಗಳ ಕಾಲ ನಿರಂತರವಾಗಿ ಪ್ರಯಾಣಿಸುವ ವಿಮಾನಗಳಲ್ಲಿ ಪ್ರಯಾಣಿಸುವಾಗ ಪೈಲಟ್‌ಗಳು ಹಾಗೂ ಫ್ಲೈಟ್ ಅಟೆಂಡೆಂಟ್‌ಗಳ ಸಮವಸ್ತ್ರ ಸ್ವಲ್ಪ ಅಸ್ಥಿರವಾಗಿರುವುದನ್ನು ನೀವು ಕಾಣಬಹುದು.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಅವರು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆಂದು ಭಾವಿಸಬೇಡಿ. ಖಂಡಿತವಾಗಿಯೂ ಅವರೂ ವಿಶ್ರಾಂತಿ ಪಡೆಯುತ್ತಾರೆ. ಇದು ಪ್ರಯಾಣಿಕರಿಗೆ ತಿಳಿಯುವುದಿಲ್ಲ. ಇದಕ್ಕೆ ಕಾರಣ ವಿಮಾನಗಳಲ್ಲಿರುವ ರಹಸ್ಯ ಕೊಠಡಿ. ಹೌದು, ಪೈಲಟ್‌ಗಳು ಹಾಗೂ ಗಗನ ಸಖಿಯರಿಗೆ ವಿಶ್ರಾಂತಿ ಪಡೆಯಲು ವಿಶೇಷವಾದ ಸಿಕ್ರೇಟ್ ರೂಂ ಒದಗಿಸಲಾಗುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಈ ರಹಸ್ಯ ಮಲಗುವ ಕೋಣೆಯನ್ನು ಪೈಲಟ್‌ಗಳು ಹಾಗೂ ಫ್ಲೈಟ್ ಅಟೆಂಡೆಂಟ್‌ಗಳಿಗಾಗಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಫ್ಲೈಟ್ ಅಟೆಂಡೆಂಟ್‌ಗಳು ತರಾತುರಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂಬ ವರದಿಗಳಿವೆ. ಆದರೆ, ಪೈಲಟ್‌ಗಳು ಪ್ರತ್ಯೇಕವಾದ ಮಲಗುವ ಕಂಪಾರ್ಟ್‍‍ಮೆಂಟ್‍‍ಗಳನ್ನು ಹೊಂದಿದ್ದಾರೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಒಬ್ಬ ಪೈಲಟ್ ಚಲಾಯಿಸುವಾಗ ಮತ್ತೊಬ್ಬರು ವಿಶ್ರಾಂತಿ ಪಡೆಯುತ್ತಿರುತ್ತಾರೆ. ದೀರ್ಘಾವಧಿಯ ವಿಮಾನಗಳಲ್ಲಿರುವಾಗ ಅವರು ಅರ್ಧದಷ್ಟು ಸಮಯವನ್ನು ಇಲ್ಲಿ ಕಳೆಯುತ್ತಾರೆ ಎಂದು ವರದಿಗಳು ಸೂಚಿಸುತ್ತವೆ. ಪೈಲಟ್‌ಗಳನ್ನು ಕಾಕ್‌ಪಿಟ್‌ನ ಹಿಂದೆ ರೆಸ್ಟ್ ರೂಂ ಕಂಪಾರ್ಟ್‍‍ಮೆಂಟ್‍‍ನ ಪ್ರಥಮ ದರ್ಜೆಯ ಮೇಲೆ ಇರಿಸಲಾಗುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಇದನ್ನು ಹೆಚ್ಚಿನ ಪ್ರಯಾಣಿಕರು ಎಂದಿಗೂ ನೋಡುವುದಿಲ್ಲ. ಪೈಲಟ್‌ಗಳು ಮೆಟ್ಟಿಲು ಅಥವಾ ಏಣಿಯನ್ನು ಮೂಲಕ ರೆಸ್ಟ್ ರೂಂ ಪ್ರವೇಶಿಸುತ್ತಾರೆ. ಈ ಕಂಪಾರ್ಟ್‍‍ಮೆಂಟ್‍ನಲ್ಲಿ ಎರಡು ಬಿಸಿನೆಸ್ ಕ್ಲಾಸ್ ಸೀಟ್‍‍ಗಳು ಹಾಗೂ ಫ್ಲಾಟ್ ಬೆಡ್‍‍ಗಳಿರುತ್ತವೆ. ಅವುಗಳ ಮಧ್ಯೆ ಪರದೆಯನ್ನು ಹಾಕಿರಲಾಗುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಈ ಕೋಣೆಯಲ್ಲಿ ಫೋನ್ ಸಹ ಇರುತ್ತದೆ. ನಿಮಗೆ ಪೈಲಟ್‌ನ ಸಹಾಯ ಬೇಕಾದರೆ, ಕರೆ ಮಾಡಬಹುದು. ಕೆಲವು ರೆಸ್ಟ್ ರೂಂಗಳು ಟಿವಿಯನ್ನು ಹೊಂದಿವೆ. ಈ ಟಿವಿ ಎಕಾನಾಮಿ ಕ್ಲಾಸ್ ಟಿವಿಗಿಂತ ದೊಡ್ಡದಾಗಿರುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನೂ ಕೆಲವು ಐಷಾರಾಮಿ ವಿಮಾನಗಳಲ್ಲಿ ಬಾಥ್ ರೂಮ್ ಸೌಕರ್ಯಗಳಿರುತ್ತವೆ. ಸಿಂಗಾಪುರ್ ಏರ್‍‍ಲೈನ್ಸ್, ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚಾಂಗಿ ವಿಮಾನ ನಿಲ್ದಾಣಗಳ ನಡುವೆ ಐ-ಸ್ಟಾಪ್ ವಿಮಾನವನ್ನು ನಿರ್ವಹಿಸುತ್ತದೆ. ಇದು ವಿಶ್ವದ ಅತಿ ದೂರ ಪ್ರಯಾಣದ ವಿಮಾನಗಳಲ್ಲಿ ಒಂದಾಗಿದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಫ್ಲೈಟ್ ಅಟೆಂಡೆಂಟ್‌ಗಳಿಗೆ ನೀಡಲಾಗುವ ರೆಸ್ಟ್ ರೂಂ ತುಂಬಾ ಐಷಾರಾಮಿಯಾಗಿರುತ್ತದೆ. ಇಲ್ಲಿ 8 ಉದ್ಯೋಗಿಗಳು ರೆಸ್ಟ್ ಪಡೆಯಬಹುದು. ಇದು 5 ಬೆಡ್‍‍ಗಳು, ರೀಡಿಂಗ್ ಲೈಟ್ ಹಾಗೂ ಮನರಂಜನಾ ಸಿಸ್ಟಂಗಳನ್ನು ಹೊಂದಿರುತ್ತದೆ. ರೆಸ್ಟ್ ರೂಂನ ವಿನ್ಯಾಸವು ವಿಮಾನ ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಅನುಗುಣವಾಗಿ ಬದಲಾಗುತ್ತದೆ.

ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಕೆಲವು ವಿಮಾನಯಾನ ಸಂಸ್ಥೆಗಳು ತಮ್ಮ ಪೈಲಟ್‌ಗಳಿಗೆ ಐಷಾರಾಮಿ ರೆಸ್ಟ್ ರೂಂ ನೀಡುತ್ತವೆ. ಇನ್ನು ಕೆಲವು ವಿಮಾನಗಳಲ್ಲಿ, ರೆಸ್ಟ್ ರೂಂ ಅಷ್ಟು ದೊಡ್ಡದಾಗಿರುವುದಿಲ್ಲ. ರೆಸ್ಟ್ ರೂಂ ಆಗಿದ್ದರೂ, ಎಮರ್ಜೆನ್ಸಿ ಕರೆಗಳನ್ನು ಮಾಡಿದಾಗ ಫ್ಲೈಟ್ ಅಟೆಂಡೆಂಟ್‌ಗಳು ತಕ್ಷಣ ಕರೆಗಳಿಗೆ ಸ್ಪಂದಿಸುತ್ತಾರೆ ಎಂಬುದನ್ನು ಗಮನಿಸಬೇಕು.

Most Read Articles

Kannada
English summary
Facts about Aero plane's horn and cabin - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more