ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಕಳೆದ ಕೆಲ ತಿಂಗಳಿನಿಂದ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಆಟೋ ಉತ್ಪಾದನಾ ಸಂಸ್ಥೆಗಳಿಗೆ ದಸರಾ ಮತ್ತು ದೀಪಾವಳಿ ಹಬ್ಬವು ಸಂಭ್ರಮಕ್ಕೆ ಕಾರಣವಾಗಿದ್ದು, ಹಬ್ಬದ ಪ್ರಯುಕ್ತ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ನೀರಿಕ್ಷೆಗೂ ಮೀರಿ ಹೊಸ ವಾಹನಗಳನ್ನು ಮಾರಾಟ ಮಾಡಿವೆ.

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ದೇಶದ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಸಹ ದೀಪಾವಳಿ ಮತ್ತು ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸುವ ಧಂತೇರಾಸ್ ಸಂಭ್ರಮದ ದಿನದಂದು ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 45 ಸಾವಿರ ಕಾರುಗಳನ್ನು ದೇಶದ ವಿವಿಧಡೆ ವಿತರಣೆ ಮಾಡಲಾಗಿದೆ. ಕಳೆದ ವರ್ಷದ ಇದೇ ಸಂದರ್ಭದಲ್ಲಿ ಬರೋಬ್ಬರಿ 60 ಸಾವಿರ ಕಾರುಗಳನ್ನು ಒಂದೇ ದಿನದಲ್ಲಿ ವಿತರಣೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಈ ಬಾರಿ ಕಾರು ಮಾರಾಟದಲ್ಲಿ ಹಿನ್ನಡೆಯ ನಡುವೆಯೂ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದೆ.

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಹಬ್ಬಕ್ಕೂ ಮುನ್ನ ಭಾರೀ ರಿಯಾಯ್ತಿ ಮತ್ತು ವಿವಿಧ ಆಕರ್ಷಕ ಆಫರ್‌ಗಳ ಹೊರತಾಗಿಯೂ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ವರ್ಷದ ಆರಂಭದಿಂದಲೂ ಸತತ ಹಿನ್ನಡೆಯ ನಡುವೆ ಇದೀಗ ದೀಪಾವಳಿ ಸಂಭ್ರಮವು ತುಸು ಸಮಾಧಾನಕ್ಕೆ ಕಾರಣವಾಗಿದೆ.

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಈ ಬಾರಿ ಹೊಸ ಕಾರು ಮಾರಾಟದಲ್ಲಿ ಸುಧಾರಣೆ ತರುವ ಉದ್ದೇಶದಿಂದಲೇ ಎಸ್-ಪ್ರೆಸ್ಸೊ ಬಿಡುಗಡೆ ಮಾಡಿದ್ದಲ್ಲದೇ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ತೀವ್ರ ಪೈಪೋಟಿ ನೀಡುರುವುದಲ್ಲದೇ ಇತರೆ ಕಾರುಗಳ ಮಾರಾಟಕ್ಕಿಂತಲೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ದೀಪಾವಳಿ ಮತ್ತು ಧಂತೇರಾಸ್ ಸಂಭ್ರಮಾಚರಣೆಗಾಗಿ ಒಂದೇ ದಿನದಲ್ಲಿ 10 ಸಾವಿರ ಎಸ್-ಪ್ರೆಸ್ಸೊ ಕಾರುಗಳನ್ನು ವಿತರಣೆ ಮಾಡಲಾಗಿದ್ದು, ತದನಂತರದ ಸ್ಥಾನಗಳಲ್ಲಿ ಆಲ್ಟೊ 800, ಆಲ್ಟೋ ಕೆ10, ವ್ಯಾಗನ್ಆರ್, ಬಲೆನೊ, ಬ್ರೆಝಾ, ಡಿಜೈರ್, ಎರ್ಟಿಗಾ ಕಾರುಗಳು ಕೂಡಾ ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಹೀಗಾಗಿ ದೀಪಾವಳಿ ಸಂಭ್ರಮದಲ್ಲಿ ಇನ್ನಷ್ಟು ಹೊಸ ಕಾರುಗಳನ್ನು ಮಾರಾಟ ಮಾಡಲು ಯತ್ನಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಬಿಎಸ್-4 ಕಾರುಗಳ ಸ್ಟಾಕ್ ಹೊರೆಯನ್ನು ತಗ್ಗಿಸಲು ಹರಸಾಹಸ ಮಾಡುತ್ತಿವೆ.

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಲಿರುವ ಬಿಎಸ್-6 ನಿಯಮದಿಂದಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಮುಂಬರುವ ಜನವರಿ ಹೊತ್ತಿಗೆ ಪೂರ್ಣಪ್ರಮಾಣದಲ್ಲಿ ಬಿಎಸ್-4 ವಾಹನಗಳ ಸ್ಟಾಕ್ ಕರಗಿಸುವ ಯೋಜನೆಯಲ್ಲಿದ್ದು, ಬಿಎಸ್-6 ಕಾರುಗಳ ಮಾರಾಟಕ್ಕೆ ಭರ್ಜರಿ ಸಿದ್ದತೆ ನಡೆಸಿವೆ.

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಈಗಾಗಲೇ ಬಿಎಸ್-6 ವೈಶಿಷ್ಟ್ಯತೆ ಪೆಟ್ರೋಲ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, 2020ರ ಫೆಬ್ರುವರಿ ನಂತರ ಬಿಎಸ್-6 ಡಿಸೇಲ್ ಕಾರುಗಳ ಮಾರಾಟಕ್ಕೆ ಚಾಲನೆ ನೀಡಲಿದೆ. ಅಲ್ಲಿಯ ತನಕ ಬಿಎಸ್-6 ಪೆಟ್ರೋಲ್ ಮತ್ತು ಬಿಎಸ್-4 ಡಿಸೇಲ್ ಎಂಜಿನ್ ಕಾರುಗಳ ಮಾರಾಟವನ್ನೇ ಮುಂದುವರಿಸಲಿರುವ ಮಾರುತಿ ಸುಜುಕಿಯು ಎಂಟ್ರಿ ಲೆವಲ್ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಕೈಬಿಡಲಿದೆ.

MOST READ: ದೀಪಾವಳಿ ಹಿನ್ನಲೆ ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಇದಕ್ಕಾಗಿಯೇ ಎಂಟ್ರಿ ಲೆವಲ್ ಕಾರುಗಳಲ್ಲಿ ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳನ್ನು ಹೆಚ್ಚಿಸುತ್ತಿದ್ದು, ಹೈ ಎಂಡ್ ಕಾರು ಮಾದರಿಗಳಾದ ಎಸ್-ಕ್ರಾಸ್, ಎರ್ಟಿಗಾ ಮತ್ತು ಡಿಜೈರ್ ಕಾರುಗಳಲ್ಲಿ ಮಾತ್ರವೇ ಹೊಸ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಲಭ್ಯವಾಗಲಿದೆ.

MOST READ: ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿ ಹ್ಯುಂಡೈ ಎಂಪಿವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಇದರ ಹೊರತಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಬಹುತೇಕ ಪೆಟ್ರೋಲ್ ಕಾರುಗಳು ಬಿಎಸ್-6 ವೈಶಿಷ್ಟ್ಯತೆಯನ್ನು ಹೊಂದಿದ್ದು, ಡೀಸೆಲ್ ಎಂಜಿನ್ ಕಾರುಗಳು ಮಾತ್ರವೇ ಉನ್ನತೀಕರಣ ಹೊಂದಬೇಕಿರುವ ಕಾರಣಕ್ಕೆ ಸ್ಟಾಕ್ ಇರುವ ಬಿಎಸ್-4 ಡೀಸೆಲ್ ಕಾರುಗಳನ್ನು ಭರ್ಜರಿ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

MOST READ: ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಜೊತೆಗೆ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಗ್ರಾಹಕರನ್ನು ಆಕರ್ಷಿಸಲು ಬಿಡುಗಡೆ ಮಾಡಲಾದ ಎಸ್-ಪ್ರೆಸ್ಸೊ ಕಾರು ಕೂಡಾ ಮಾರುತಿ ಸುಜುಕಿ ಕಾರು ಮಾರಾಟ ಸುಧಾರಣೆಗೆ ಸಹಕಾರಿಯಾಗಿದ್ದು, ಆಕರ್ಷಕ ಬೆಲೆಗಳೊಂದಿಗೆ ಬಿಡುಗಡೆಯಾದ ಮೊದಲ ತಿಂಗಳಿನಲ್ಲಿಯೇ ಭರ್ಜರಿ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಒಂದೇ ದಿನದಲ್ಲಿ 45 ಸಾವಿರ ಕಾರುಗಳನ್ನು ವಿತರಣೆ ಮಾಡಿದ ಮಾರುತಿ ಸುಜುಕಿ

ಎಸ್-ಪ್ರೆಸ್ಸೊ ಕಾರು 998 ಸಿಸಿ ತ್ರಿ-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಆರಂಭಿಕ ವೆರಿಯೆಂಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.3.69 ಲಕ್ಷ ಖರೀದಿಗೆ ಲಭ್ಯವಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ ಬೆಲೆಯನ್ನು ರೂ. 4.91 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

Article Published On: Monday, October 28, 2019, 16:33 [IST]
English summary
Maruti Suzuki delivered over 45,000 cars on Dhaneras. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+