ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಹಲವಾರು ಮಹತ್ವದ ಯೋಜನೆ ಜಾರಿಗೆ ತಂದಿದ್ದರು ಕೂಡಾ ಎಲೆಕ್ಟ್ರಿಕ್ ವಾಹನಗಳಿಗೆ ಮುಖ್ಯವಾಗಿ ಬೇಕಿರುವ ಚಾರ್ಜಿಂಗ್ ಸ್ಟೆಷನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ತುರ್ತಾಗಿ ನಿರ್ಮಾಣವಾಗದಿರುವುದು ಭವಿಷ್ಯದ ಯೋಜನೆಗಳಿಗೆ ಹಿನ್ನಡೆಯಾಗುತ್ತಿದೆ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ನಂತರ ಗ್ರಾಹಕರ ಬೇಡಿಕೆಯೆಂತೆ ಅಗತ್ಯ ಪ್ರಮಾಣದಲ್ಲಿ ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆ ಬಗೆಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಮಾರುತಿ ಸುಜುಕಿ ಸೇರಿದಂತೆ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯ ಅವಧಿಯನ್ನು ಮತ್ತೆ ಮುಂದೂಡುವ ಸುಳಿವು ನೀಡಿವೆ. 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋ ನಂತರ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದ ಆಟೋ ಉತ್ಪಾದನಾ ಸಂಸ್ಥೆಗಳು ಚಾರ್ಜಿಂಗ್ ಸ್ಟೆಷನ್ ಕೊರತೆ ಹಿನ್ನಲೆಯಲ್ಲಿ ಇವಿ ವಾಹನಗಳ ಬಿಡುಗಡೆಗೆ ಹಿಂದೇಟು ಹಾಕುತ್ತಿವೆ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇದೇ ಕಾರಣಕ್ಕೆ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೆ ಬಿಡುಗಡೆಯ ಕುರಿತಂತೆ ಮತ್ತೊಂದು ನಿರ್ಧಾರಕ್ಕೆ ಬಂದಿದ್ದು, 2020ರ ಬದಲಾಗಿ 2021ರ ಆರಂಭದಲ್ಲಿ ಹೊಸ ಕಾರನ್ನು ಬಿಡುಗಡೆಗೊಳಿಸಲು ಚಿಂತನೆ ನಡೆಲಿದೆ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳು ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿವೆ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಚಾರ್ಚಿಂಗ್ ಸ್ಟೆಷನ್‌ಗಳ ನಿರ್ಮಾಣ ಮೇಲೆ ನೀಡಲಾಗುತ್ತಿರುವ ವಿಶೇಷ ವಿನಾಯ್ತಿಗಳನ್ನು ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳಿಗೂ ನೀಡುವಂತೆ ಒತ್ತಡ ಕೇಳಿಬರುತ್ತಿವೆ. ಆದರೆ ಆಟೋ ಉತ್ಪಾದನಾ ಸಂಸ್ಥೆಗಳ ಬೇಡಿಕೆಗೆ ಜಗ್ಗದ ಕೇಂದ್ರ ಸರ್ಕಾರವು ನಿಧಾನಗತಿಯಲ್ಲೇ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸಲು ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದ ಚಾರ್ಜಿಂಗ್ ಸ್ಟಷನ್‌ಗಳ ನಂತರವೇ ವ್ಯಾಗನ್‌ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮಾರುತಿ ಸುಜುಕಿ ಯೋಜನೆ ರೂಪಿಸಿದೆ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಸದ್ಯ ಬಿಡುಗಡೆಗಾಗಿ ಎಲ್ಲಾ ಸಿದ್ದತೆಯಲ್ಲಿರುವ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ವಿಶೇಷ ತಂತ್ರಜ್ಞಾನದೊಂದಿಗೆ ಅಭಿವೃದ್ದಿ ಹೊಂದಿದ್ದು, ಹೊಸ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿ ಹೊಂದಿದೆ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ವ್ಯಾಗನ್‍ ಆರ್ ಎಲೆಕ್ಟ್ರಿಕ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದ್ದು, ಟೊಯೊಟಾ ಈಗಾಗಲೇ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‌ಟ್ರೈನ್ ಬ್ಯಾಟರಿಯನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಲೀಥಿಯಂ ಅಯಾನ್ ಪ್ರೇರಿತ 72 ವೊಲ್ಟ್, 25kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜಿಂಗ್ ಮಾಡಿದ್ದಲ್ಲಿ ಗರಿಷ್ಠವಾಗಿ 150 ರಿಂದ 160 ಕಿ.ಮಿ ಮೈಲೇಜ್ ಪಡೆಯಬಹುದು.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಆದ್ರೆ ವಾಸ್ತಾಂಶಕ್ಕೆ ಬಂದಲ್ಲಿ ವ್ಯಾಗನ್ ಆರ್ ಕಾರನ್ನು ನಗರಪ್ರದೇಶದಲ್ಲಿ ಬಳಕೆಗಾಗಿ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಟ್ರಾಫಿಕ್ ದಟ್ಟಣೆ ಸಮಸ್ಯೆಯ ನಡುವೆ ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಷ್ಟು ಮೈಲೇಜ್ ಸಿಗುವುದು ಕಷ್ಟಸಾಧ್ಯವಾದರ ಹೊಸ ಕಾರು ಪ್ರತಿ ಚಾರ್ಜ್‌ಗೆ 130 ರಿಂದ 140ಕಿ.ಮಿ ಮೈಲೇಜ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಮೂಲಕ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಸಾಮಾನ್ಯ ಕಾರು ಮಾದರಿಗಿಂತಲೂ ಹಲವು ಹೊಸ ಪ್ರಿಮಿಯಂ ಫೀಚರ್ಸ್‌ಗಳೊಂದಿಗೆ ನೆಕ್ಸಾ ಶೋರೂಂನಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿದ್ದು, ಹೊಸ ಕಾರಿನ ಬೆಲೆಯು ರೂ.9 ಲಕ್ಷದಿಂದ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Maruti WagonR electric launch delayed, will not launch in 2020. Read in Kannada.
Story first published: Friday, October 25, 2019, 16:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X