ದೋಷಪೂರಿತ ವ್ಯಾಗನ್ ಆರ್ ರಿಕಾಲ್ ಮಾಡಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ತನ್ನ 1 ಲೀಟರಿನ 40,168 ವ್ಯಾಗನ್ ಆರ್ ಕಾರುಗಳನ್ನು ರಿಕಾಲ್ ಮಾಡಿದೆ. 2018ರ ನವೆಂಬರ್ 15ರಿಂದ 2019ರ ಆಗಸ್ಟ್ 12ರವರೆಗೆ ತಯಾರಿಸಲಾದ ದೋಷಪೂರಿತ ವ್ಯಾಗನ್ ಆರ್ ಕಾರುಗಳನ್ನು ರಿಕಾಲ್ ಮಾಡಲಾಗಿದೆ.

ಈ ಕಾರುಗಳಲ್ಲಿರುವ ಫ್ಯೂಯಲ್ ಹೋಸ್‍ಗಳನ್ನು ಪರೀಕ್ಷಿಸುವ ಸಲುವಾಗಿ ಈ ಕಾರುಗಳನ್ನು ರಿಕಾಲ್ ಮಾಡಲಾಗಿದೆ. ಮಾರುತಿ ಕಂಪನಿಯು ತನ್ನ ಹೊಸ ತಲೆಮಾರಿನ ವ್ಯಾಗನ್ ಆರ್ ಕಾರ್ ಅನ್ನು 2019ರ ಜನವರಿಯಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರುಗಳಲ್ಲಿ 1 ಲೀಟರ್ ಹಾಗೂ 1.2 ಲೀಟರಿನ ಎಂಜಿನ್‍ಗಳನ್ನು ಅಳವಡಿಸಲಾಗಿತ್ತು. ಹಿಂದಿನ ತಲೆಮಾರಿನ ವ್ಯಾಗನ್ ಆರ್ ಕಾರ್ ಅನ್ನು ಟ್ಯಾಕ್ಸಿ ಸೇವೆಯನ್ನು ಬಳಸುವ ಗ್ರಾಹಕರಿಗಾಗಿ ಮುಂದುವರೆಸಲಾಗಿದೆ.

ಹಳೆಯ ತಲೆಮಾರಿನ ವ್ಯಾಗನ್ ಆರ್ ಕಾರ್ ಅನ್ನು 1 ಲೀಟರ್ ಎಂಜಿನ್‍ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ತಯಾರಾದ ದಿನವನ್ನು ಪರಿಗಣಿಸುವುದಾದರೆ, ಹಳೆಯ ಹಾಗೂ ಹೊಸ ತಲೆಮಾರಿನ ಕಾರುಗಳೆರಡನ್ನೂ ರಿಕಾಲ್ ಮಾಡಲಾಗಿದೆ.

ಆಗಸ್ಟ್ 24 ಅಂದರೆ ನಾಳೆಯಿಂದ, ಮಾರುತಿ ಸುಜುಕಿ ಕಂಪನಿಯ ಡೀಲರ್‍ಗಳು ದೋಷ ಪೂರಿತ ವಾಹನಗಳ ಮಾಲೀಕರನ್ನು ಸಂಪರ್ಕಿಸಲಿದ್ದಾರೆ. ವಾಹನಗಳನ್ನು ಪರೀಕ್ಷಿಸಿ, ದೋಷಪೂರಿತ ಬಿಡಿಭಾಗಗಳನ್ನು ಬದಲಿಸಿ ಕೊಡಲಿದ್ದಾರೆ. ಈ ಪರೀಕ್ಷೆ ಹಾಗೂ ಬದಲಾವಣೆ ಉಚಿತವಾಗಿರಲಿದೆ.

1 ಲೀಟರಿನ ಮಾರುತಿ ವ್ಯಾಗನ್ ಆರ್ ಕಾರ್ ಅನ್ನು ಹೊಂದಿರುವ ಗ್ರಾಹಕರು ಮಾರುತಿ ಕಂಪನಿಯ ವೆಬ್‍ಸೈಟಿಗೆ ಭೇಟಿ ನೀಡಿ, ತಮ್ಮ ಕಾರಿನ ಚಾಸೀಸ್ ನಂಬರ್ ಅನ್ನು ನಮೂದಿಸಿ, ತಮ್ಮ ಕಾರಿಗೂ ಈ ರಿಕಾಲ್ ಅನ್ವಯಿಸಲಿದೆಯೇ ಎಂಬುದನ್ನು ಪರಿಶೀಲಿಸಬಹುದು.

ಮಾರುತಿ ವ್ಯಾಗನ್ ಆರ್ ಕಾರ್ ಅನ್ನು 1999ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದಾಗಿನಿಂದ ಈ ಕಾರು ಮಾರುತಿ ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಇತ್ತೀಚಿಗೆ ಬಿಡುಗಡೆಯಾಗಿರುವ ಹೊಸ ತಲೆಮಾರಿನ ವ್ಯಾಗನ್ ಆರ್ ಕಾರು, ಇದುವರೆಗೂ ತಯಾರಾಗಿರುವ ವ್ಯಾಗನ್ ಆರ್‍ನ ದೊಡ್ಡ ಗಾತ್ರದ ಹಾಗೂ ಅತ್ಯಾಧುನಿಕವಾದ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದುವರೆಗಿನ ಬಲಶಾಲಿಯಾದ ವ್ಯಾಗನ್ ಆರ್ ಸಹ ಆಗಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹೊಸ ವ್ಯಾಗನ್ ಆರ್ ಕಾರಿನಲ್ಲಿ ಮೊದಲ ಬಾರಿಗೆ 1.2 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಸ್ವಿಫ್ಟ್ ಕಾರುಗಳಲ್ಲೂ ಅಳವಡಿಸಲಾಗಿದೆ. ಈ ಎಂಜಿನ್ 82 ಬಿಹೆಚ್‍ಪಿ ಪವರ್ ಹಾಗೂ 113 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಈ ಎಂಜಿನ್‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗುವುದು. ಇದರ ಜೊತೆಗೆ ಹೊಸ ವ್ಯಾಗನ್ ಆರ್ ಕಾರ್ ಅನ್ನು 1 ಲೀಟರಿನ ಪೆಟ್ರೋಲ್ ಎಂಜಿನ್‍ನೊಂದಿಗೂ ಮಾರಾಟ ಮಾಡಲಾಗುತ್ತದೆ.
MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಈ ಎಂಜಿನ್ 67 ಬಿಹೆಚ್‍ಪಿ ಪವರ್ ಹಾಗೂ 90 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. 2019ರ ಜುಲೈ ತಿಂಗಳಿನಲ್ಲಿ ವ್ಯಾಗನ್ ಆರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರ್ ಆಗಿದೆ.

2018ರ ಜುಲೈನಲ್ಲಿ 14,339 ವ್ಯಾಗನ್ ಆರ್ ಕಾರುಗಳ ಮಾರಾಟವಾಗಿದ್ದರೆ, 2019ರ ಜುಲೈ ತಿಂಗಳಿನಲ್ಲಿ 15,062 ಕಾರುಗಳ ಮಾರಾಟವಾಗಿವೆ. ಮಾರಾಟದಲ್ಲಿ 5%ನಷ್ಟು ಹೆಚ್ಚಳವಾಗಿದೆ. 2019ರ ಜೂನ್ ತಿಂಗಳಿಗೆ ಹೋಲಿಸಿದರೆ, ವ್ಯಾಗನ್ ಆರ್ ಮಾರಾಟವು 47%ನಷ್ಟು ಹೆಚ್ಚಳವಾಗಿದೆ.


Click it and Unblock the Notifications