ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಭಾರತದ ವಿವಿಧ ರಾಜ್ಯಗಳಲ್ಲಿರುವ ಪೊಲೀಸರು ಗಸ್ತು ತಿರುಗಲು ಹೆಚ್ಚಾಗಿ ಬೈಕುಗಳನ್ನು ಬಳಸುತ್ತಾರೆ. ಕಾರು ಅಥವಾ ಜೀಪುಗಳಲ್ಲಿ ಸಂಚರಿಸುವುದಕ್ಕಿಂತ ಸುಲಭವಾಗಿ ಬೈಕುಗಳಲ್ಲಿ ಸಂಚರಿಸಬಹುದು ಎಂಬ ಕಾರಣಕ್ಕೆ ಬೈಕುಗಳನ್ನು ಬಳಸುತ್ತಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಭಾರತದ ವಿವಿಧ ರಾಜ್ಯಗಳ ಪೊಲೀಸರು ವಿವಿಧ ರೀತಿಯ ಬೈಕುಗಳನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ಬಳಸುತ್ತಾರೆ. ಪೊಲೀಸರು ಹೆಚ್ಚಾಗಿ ಬಳಸುವ ಜನಪ್ರಿಯ ಬೈಕ್ ಎಂದರೆ ರಾಯಲ್ ಎನ್‍‍‍ಫೀಲ್ಡ್ ಬೈಕ್. ಯಾವ ಯಾವ ರಾಜ್ಯಗಳಲ್ಲಿ ಪೊಲೀಸರು ಯಾವ ಯಾವ ಬೈಕುಗಳನ್ನು ಬಳಸುತ್ತಾರೆ ಎಂಬುದನ್ನು ನೋಡೋಣ.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಉತ್ತರ ಪ್ರದೇಶ

ಹೋಂಡಾ ಸಿ‍‍ಬಿ‍ಆರ್ 250 ಆರ್

ಹೋಂಡಾ ಕಂಪನಿಯು 2013ರ ಸೆಕ್ಯೂರಿಟಿ ಎಕ್ಸ್ ಪೋದಲ್ಲಿ ಹೋಂಡಾ ಸಿಬಿ‍ಆರ್ 250 ಆರ್‍‍ನ ಪೊಲೀಸ್ ಎಡಿಷನ್ ಬೈಕ್ ಅನ್ನು ಪ್ರದರ್ಶಿಸಿತ್ತು. ಇದಾದ ಕೆಲವೇ ದಿನಗಳಲಿ ಉತ್ತರಪ್ರದೇಶ ಪೊಲೀಸರು, ಈ ಬೈಕುಗಳನ್ನು ತಮ್ಮ ಇಲಾಖೆಗೆ ಸೇರ್ಪಡೆಗೊಳಿಸಿಕೊಂಡರು. ಆದರೆ ಸೆಕ್ಯೂರಿಟಿ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಬೈಕಿನಲ್ಲಿದ್ದ ಫೀಚರ್‍‍ಗಳಾದ ಎಲ್‍ಇ‍‍ಡಿ ಲ್ಯಾಂಪ್ಸ್, ಬಿಕಾನ್ ಲೈಟ್ಸ್, ಪಬ್ಲಿಕ್ ಅನೌನ್ಸ್ ಮೆಂಟ್ ಸಿಸ್ಟಂ, ಹ್ಯಾಂಡ್ಸ್ ಫ್ರೀ ಮೈಕ್, ವಿಶೇಷ ವಿನ್ಯಾಸದ ಹೆಲ್ಮೆಟ್‍‍ಗಳನ್ನು ಪೊಲೀಸರು ಖರೀದಿಸಿದ ಬೈಕುಗಳು ಹೊಂದಿರಲಿಲ್ಲ. ಎಕ್ಸ್ ಪೋದಲ್ಲಿ ತೋರಿಸಿಲಾದ ವಿಭಿನ್ನವಾದ ಲಿವರಿ ಹಾಗೂ ಯುಟಿಲಿಟಿ ಬಾಕ್ಸ್ ಗಳನ್ನು ಮಾತ್ರ ನೀಡಲಾಯಿತು.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಕರ್ನಾಟಕ, ದೆಹಲಿ ಹಾಗೂ ಪಂಜಾಬ್ ಪೊಲೀಸ್

ಬಜಾಜ್ ಪಲ್ಸರ್

ಬಜಾಜ್ ಪಲ್ಸರ್ ಭಾರತದ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ ಅನ್ನು ಕರ್ನಾಟಕ, ಪಂಜಾಬ್ ಹಾಗೂ ದೆಹಲಿ ಪೊಲೀಸರು ತಮ್ಮ ಅಧಿಕೃತ ಕೆಲಸ ಕಾರ್ಯಗಳಿಗಾಗಿ ಬಳಸುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಬಜಾಜ್ ಪಲ್ಸರ್ 150 ಬೈಕುಗಳನ್ನು ಚೀತಾ ಹೆಸರಿನಲ್ಲಿ ಬಳಸಲಾಗುತ್ತಿದೆ. ದೆಹಲಿ ಪೊಲೀಸರು ಬಳಸುತ್ತಿರುವ ಪಲ್ಸರ್ ಬೈಕುಗಳು ರೆವ್ ಲಿಮಿಟರ್‍‍ಗಳನ್ನು ಹೊಂದಿಲ್ಲ. ದೆಹಲಿ ಹಾಗೂ ಪಂಜಾಬ್ ಪೊಲೀಸರು ಬಳಸುತ್ತಿರುವ ಬೈಕುಗಳು ಪಲ್ಸರ್ 180 ಮಾದರಿಯ ಬೈಕುಗಳಾಗಿದ್ದು, ಉತ್ತಮವಾದ ಪರ್ಫಾಮೆನ್ಸ್, ಕಡಿಮೆ ವೆಚ್ಚದ ಮೆಂಟೆನೆನ್ಸ್ ಗಾಗಿ ಜನಪ್ರಿಯವಾಗಿವೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಗುಜರಾತ್ ಹಾಗೂ ಕೊಲ್ಕತ್ತಾ ಪೊಲೀಸ್

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750

ಗುಜರಾತ್ ಹಾಗೂ ಕೊಲ್ಕತ್ತಾ ಪೊಲೀಸರು ದೇಶದಲ್ಲಿಯೇ ದುಬಾರಿ ಬೆಲೆಯ ಪ್ರೀಮಿಯಂ ಬೈಕುಗಳನ್ನು ಬಳಸುತ್ತಿದ್ದಾರೆ. ಈ ಎರಡೂ ನಗರಗಳ ಪೊಲೀಸರು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕುಗಳನ್ನು ಬಳಸುತ್ತಿದ್ದಾರೆ. ಗುಜರಾತ್ ಪೊಲೀಸ್ ಮೊದಲಿಗೆ ಹಾರ್ಲೆ ಡೇವಿಡ್ಸನ್ ಬೈಕುಗಳನ್ನು ತನ್ನ ಇಲಾಖೆಗೆ ಸೇರ್ಪಡೆಗೊಳಿಸಿಕೊಂಡಿತ್ತು. ನಂತರ ಕೊಲ್ಕತ್ತಾ ಪೊಲೀಸರು ಈ ಬೈಕುಗಳನ್ನು ಖರೀದಿಸಿದರು. ಹಾರ್ಲೆ ಡೇವಿಡ್ಸನ್, ಪೊಲೀಸ್ ಬೈಕುಗಳು ವಿಶೇಷವಾದ ಲಿವರಿ, ಯುಟಿಲಿಟಿ ಬಾಕ್ಸ್, ಪಬ್ಲಿಕ್ ಅನೌನ್ಸ್ ಮೆಂಟ್ ಸಿಸ್ಟಂ ಹಾಗೂ ಬಿಕಾನ್‍‍ಗಳನ್ನು ಹೊಂದಿವೆ. ಕೊಲ್ಕತ್ತಾ ಹಾಗೂ ಗುಜರಾತ್ ಪೊಲೀಸರು ಈ ಹಾರ್ಲೆ ಡೇವಿಡ್ಸನ್ ಬೈಕುಗಳನ್ನು ವಿಶೇಷ ಕಾರ್ಯಗಳಿಗಾಗಿ ಬಳಸುತ್ತಾರೆ. ದಿನ ನಿತ್ಯದ ಗಸ್ತು ಕಾರ್ಯಕ್ಕಾಗಿ ಈ ಬೈಕುಗಳನ್ನು ಬಳಸುತ್ತಿಲ್ಲ.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ನೊಯಿಡಾ, ಕೇರಳ, ತಮಿಳುನಾಡು, ದೆಹಲಿ ಪೊಲೀಸ್

ಟಿವಿ‍ಎಸ್ ಅಪಾಚೆ

ಟಿವಿಎಸ್ ಅಪಾಚೆ ಭಾರತದಲ್ಲಿ ಜನಪ್ರಿಯವಾಗಿರುವ ಮತ್ತೊಂದು ಬೈಕ್ ಆಗಿದೆ. ಬಜಾಜ್ ಪಲ್ಸರ್‍‍ನಂತೆ ಈ ಬೈಕ್ ಅನ್ನು ಸಹ ಹಲವಾರು ರಾಜ್ಯಗಳ ಪೊಲೀಸರು ಬಳಸುತ್ತಿದ್ದಾರೆ. ದೆಹಲಿ, ನೊಯಿಡಾ, ಕೇರಳ ಹಾಗೂ ತಮಿಳುನಾಡು ಪೊಲೀಸರು ಟಿವಿ‍ಎಸ್ ಅಪಾಚೆ ಬೈಕುಗಳನ್ನು ಬಳಸುತ್ತಿದ್ದಾರೆ. ಈ ರಾಜ್ಯಗಳ ಪೊಲೀಸರು ಅಪಾಚೆಯ ಆರ್‍‍ಟಿ‍ಆರ್ 160 ಹಾಗೂ 180 ಬೈಕುಗಳನ್ನು ಇಂಟರ್‍‍ಸೆಪ್ಟರ್ ಆಗಿ ಬಳಸಿ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಮುಂಬೈ, ಕೊಲ್ಕತ್ತಾ, ದೆಹಲಿ, ಉತ್ತರ ಪ್ರದೇಶ, ರಾಜಸ್ತಾನ ಪೊಲೀಸ್

ರಾಯಲ್ ಎನ್‍‍ಫೀಲ್ಡ್ ಬೈಕ್

ಭಾರತದಲ್ಲಿರುವ ಬಹುತೇಕ ನಗರ ಹಾಗೂ ರಾಜ್ಯಗಳ ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಬೈಕ್ ರಾಯಲ್ ಎನ್‍‍ಫೀಲ್ಡ್ ಆಗಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಮೊದಲ ಬಾರಿಗೆ ಭಾರತೀಯ ಸೇನೆಗಾಗಿ ದ್ವಿ ಚಕ್ರ ವಾಹನಗಳನ್ನು ಪೂರೈಸಿತ್ತು. ನಂತರ ಅನೇಕ ರಾಜ್ಯಗಳ ಪೊಲೀಸರು ಈ ಬೈಕ್ ಅನ್ನು ಬಳಸಲು ಶುರು ಮಾಡಿದರು. ಈಗ ಅನೇಕ ರಾಜ್ಯಗಳು ರಾಯಲ್ ಎನ್‍‍ಫೀಲ್ಡ್ ಬೈಕುಗಳ ಬದಲಿಗೆ ಆಧುನಿಕವಾದ, ವೇಗದ, ವಿಶ್ವಾಸಾರ್ಹ ಬೈಕುಗಳನ್ನು ಬಳಸುತ್ತಿವೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಗೋವಾ ಪೊಲೀಸ್

ಹೀರೋ ಸ್ಪ್ಲೆಂಡರ್

ಗೋವಾ ಪೊಲೀಸರು ಭಾರತದ ಜನಪ್ರಿಯ ಪ್ರವಾಸಿ ಸ್ಥಳವಾದ ಗೋವಾದ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಯನ್ನು ಹೊತ್ತಿದ್ದಾರೆ. ಗೋವಾದ ಪೊಲೀಸರು ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಬಳಸಿ ಗೋವಾದ ರಸ್ತೆಗಳಲ್ಲಿ ಗಸ್ತು ತಿರುಗುತ್ತಾರೆ. ಹೆಚ್ಚಿನ ಮೈಲೇಜ್ ನೀಡುವ ಸ್ಪ್ಲೆಂಡರ್ ವಿಶ್ವಾಸಾರ್ಹವಾದ ಬೈಕ್ ಸಹ ಆಗಿದೆ. ಈ ಬೈಕ್ ಯಾವಾಗಲೂ ಬಿಜಿಯಾಗಿರುವ ಗೋವಾದ ರಸ್ತೆಗಳಲ್ಲಿ ನಿಧಾನವಾಗಿ ಚಲಿಸಲು ನೆರವಾಗಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಮುಂಬೈ ಪೊಲೀಸ್

ಹೀರೋ ಅಚೀವರ್

ಮುಂಬೈನ ಪುರುಷ ಪೊಲೀಸರು, ರಾಯಲ್ ಎನ್‍‍‍ಫೀಲ್ಡ್ ಬೈಕುಗಳನ್ನು ಬಳಸಿದರೆ, ಮಹಿಳಾ ಪೊಲೀಸರು ಹೀರೋ ಅಚೀವರ್ ಬೈಕ್ ಅನ್ನು ತಮ್ಮ ಅಧಿಕೃತ ಕಾರ್ಯಗಳಿಗಾಗಿ ಬಳಸುತ್ತಿದ್ದಾರೆ. ಅಚೀವರ್ ಬೈಕ್ ವಿಶ್ವಾಸಾರ್ಹವಾದ ಹಾಗೂ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಆಗಿದ್ದು, ಯಾರೂ ಬೇಕಾದರೂ ಬಳಸಬಹುದಾಗಿದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಜೈಪುರ ಪೊಲೀಸ್

ಹೀರೋ ಡ್ಯುಯೆಟ್

ಪಿಂಕ್ ಸಿಟಿ ಎಂದೇ ಖ್ಯಾತವಾಗಿರುವ ಜೈಪುರದ ಮಹಿಳಾ ಪೊಲೀಸರು, ತಮ್ಮ ಕರ್ತವ್ಯ ನಿರ್ವಹಿಸಲು, ಗಸ್ತು ತಿರುಗಲು ಹೀರೋ ಡ್ಯುಯೆಟ್ ಸ್ಕೂಟರ್ ಬಳಸುತ್ತಾರೆ. ಈ ಸ್ಕೂಟರ್‍‍ಗಳು ಕಪ್ಪು ಬಣ್ಣದಲ್ಲಿದ್ದು, ಪಬ್ಲಿಕ್ ಅನೌನ್ಸ್ ಮೆಂಟ್ ಸಿಸ್ಟಂ ಹಾಗೂ ಡೆಕಾಲ್‍‍ಗಳ ಮೇಲೆ ಪೊಲೀಸ್ ಲಿವರಿಗಳನ್ನು ಹೊಂದಿವೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ದೆಹಲಿ ಹಾಗೂ ಗುರುಗ್ರಾಮ ಪೊಲೀಸ್

ಹೋಂಡಾ ಆಕ್ಟಿವಾ

ರಾಷ್ಟ್ರ ರಾಜಧಾನಿಯಲ್ಲಿರುವ ಮಹಿಳಾ ಪೊಲೀಸರು, ತಮ್ಮ ಅಧಿಕೃತ ಕೆಲಸಕ್ಕಾಗಿ ಹೋಂಡಾ ಆಕ್ಟಿವಾ ಸ್ಕೂಟರ್ ಬಳಸುತ್ತಾರೆ. ಕಾರ್ಯದಕ್ಷತೆ ಹಾಗೂ ವಿಶ್ವಾಸಾರ್ಹತೆಗೆ ಹೆಸರಾಗಿರುವ ಹೋಂಡಾ ಆಕ್ಟಿವಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಸ್ಕೂಟರಿನಲ್ಲಿರುವ ಎಂಜಿನ್ ದೆಹಲಿಯ ಬಿಜಿ ರಸ್ತೆಗಳಲ್ಲಿ ಸರಾಗವಾಗಿ ಚಲಿಸಲು ನೆರವು ನೀಡುತ್ತದೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಉದಯಪುರ ಪೊಲೀಸ್

ಹೀರೋ ಮೋಟಾರ್‍‍ಸೈಕಲ್ಸ್

ಮುಂಬೈನ ಮಹಿಳಾ ಪೊಲೀಸರ ನಂತರ ಉದಯಪುರ ಮಹಿಳಾ ಪೊಲೀಸರು ಸಹ ಹೀರೋ ಕಂಪನಿಯ ದ್ವಿ ಚಕ್ರ ವಾಹನಗಳನ್ನು ಬಳಸುತ್ತಿದ್ದಾರೆ. ಉದಯಪುರದ ಮಹಿಳಾ ಪೊಲೀಸರು, ವಿಶೇಷವಾಗಿ ಮಾಡಿಫೈ ಮಾಡಲಾದ ಹೀರೋ ಮೋಟಾರ್‍‍ಸೈಕಲ್‍‍ಗಳನ್ನು ಬಳಸಿ, ಭಾರತದ ವೈಟ್ ಸಿಟಿ ಎಂಬ ಖ್ಯಾತಿಯನ್ನು ಹೊಂದಿರುವ ಉದಯಪುರದಲ್ಲಿ ಗಸ್ತು ತಿರುಗುತ್ತಿದ್ದಾರೆ. ಈ ಬೈಕುಗಳಲ್ಲಿ ಬಿಕಾನ್, ಪೊಲೀಸ್ ಸ್ಟಿಕ್ಕರ್ ಹಾಗೂ ಪಿ‍ಎ ಸಿಸ್ಟಂಗಳನ್ನು ಅಳವಡಿಸಲಾಗಿದೆ.

Image Courtesy: 1,2,3,4

More from DriveSpark

Article Published On: Wednesday, August 21, 2019, 18:16 [IST]
English summary
Various motorcycles used by state police across India - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+