ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ನಟಿ ತಾಪ್ಸಿ ಪನ್ನುರವರು ಜೀಪ್ ಕಂಪಾಸ್ ಡೆಲಿವರಿ ಪಡೆಯುವ ವೇಳೆಯಲ್ಲಿ, ಜೀಪ್‍‍ನ ಡೀಲರ್‍‍ಶಿಪ್‍‍ನ ಮಾರಾಟ ಸಿಬ್ಬಂದಿ ಡ್ಯಾನ್ಸ್ ಮಾಡಿದ್ದರು. ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍‍ಲೋಡ್ ಮಾಡಿದ ನಂತರ ವೈರಲ್ ಆಗಿ, ಸಾಕಷ್ಟು ಸದ್ದು ಮಾಡಿತ್ತು.

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಈ ವೀಡಿಯೊವನ್ನು ವೀಕ್ಷಿಸಿದ್ದರು. ಕಾರಿನ ಜೊತೆಗೆ ಡೀಲರ್ ಸಹ ಜನಪ್ರಿಯರಾದರು. ಈ ವೀಡಿಯೊವನ್ನು ವೀಕ್ಷಿಸಿದ ನಂತರ ಲಕ್ನೋದಲ್ಲಿರುವ ಹ್ಯುಂಡೈ ಡೀಲರ್ ಸಹ ಇದನ್ನು ಅನುಸರಿಸಿದ್ದಾರೆ. ಲಕ್ನೋದಲ್ಲಿರುವ ಎಸ್‍ಎ‍ಎಸ್ ಹ್ಯುಂಡೈ ಡೀಲರ್‍‍‍ಶಿಪ್‍‍ನ ಸಿಬ್ಬಂದಿ ತಮ್ಮ ಶೋರೂಂನಲ್ಲಿ ಮಾರಾಟ ಮಾಡಲಾದ ಮೊಟ್ಟ ಮೊದಲ ಎಲೆಕ್ಟ್ರಿಕ್ ವಾಹನವಾದ ಹ್ಯುಂಡೈನ ಕೋನಾ ಎಸ್‍‍ಯುವಿಯನ್ನು ವಿತರಿಸುವಾಗ ಡ್ಯಾನ್ಸ್ ಮಾಡಿದ್ದಾರೆ.

ಅಪ್‍‍ಲೋಡ್ ಮಾಡಲಾಗಿರುವ ವೀಡಿಯೊದಲ್ಲಿ ಶೋರೂಂನಲ್ಲಿರುವ ಇಡೀ ಸಿಬ್ಬಂದಿ ವಿವಿಧ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದು. ವೀಡಿಯೊದ ಜೊತೆಗೆ ಸಂದೇಶ ನೀಡಿರುವ ಡೀಲರ್, ಟೀಮ್ ಎಸ್ಎಎಸ್ ಹ್ಯುಂಡೈ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆದ ಕೋನಾವನ್ನು ಎಸ್‌ಎಎಸ್ ಹ್ಯುಂಡೈ ಟೆಲಿಬಾಗ್ ಶೋ ರೂಂನಲ್ಲಿ ವಿತರಿಸುವಲ್ಲಿ ಅದ್ಭುತ ಪ್ರದರ್ಶನ ನೀಡಿದೆ.

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಎಸ್‌ಎಎಸ್ ಹ್ಯುಂಡೈ ಸ್ಟೈಲ್‌ನಲ್ಲಿ ಎಲ್ಲವನ್ನೂ ಮಾಡುತ್ತದೆ ಎಂದು ಹೇಳಿಕೊಂಡಿದೆ. ಕೋನಾ ಬಗ್ಗೆ ಹೇಳುವುದಾದರೆ, ಈ ಕಾರು ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಹ್ಯುಂಡೈ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ.

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಸಿಕೆಡಿ ರೂಪದಲ್ಲಿ ಭಾರತಕ್ಕೆ ಬರುತ್ತದೆ. ಈ ಕಾರನ್ನು ಚೆನ್ನೈನಲ್ಲಿರುವ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗುತ್ತಿದೆ. ಈ ಕಾರ್ ಅನ್ನು ಫ್ಯಾಂಟಮ್ ಬ್ಲ್ಯಾಕ್, ಪೋಲಾರ್ ವೈಟ್, ಮರೀನಾ ಬ್ಲೂ ಹಾಗೂ ಟೈಫೂನ್ ಸಿಲ್ವರ್‌ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಫ್ಯಾಂಟಮ್ ಬ್ಲ್ಯಾಕ್ ರೂಫ್ ಡ್ಯುಯಲ್ ಟೋನ್ ಬಣ್ಣದೊಂದಿಗೆ ಪೋಲಾರ್ ವೈಟ್ ನೀಡಲಾಗುತ್ತದೆ. ಇದಕ್ಕೆ ರೂ.20,000 ಹೆಚ್ಚು ಪಾವತಿಸಬೇಕು. ಈ ಕಾರು ಸ್ಪ್ಲಿಟ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್ ಹಾಗೂ ಸನ್‌ರೂಫ್ ಜೊತೆಗೆ ಸ್ಲಿಮ್ ಬ್ರೇಕ್ ಲೈಟ್‌ಗಳು, ಟರ್ನ್ ಇಂಡಿಕೇಟರ್ಸ್ ಹಾಗೂ ರಿವರ್ಸ್ ಲ್ಯಾಂಪ್‌ಗಳನ್ನು ಹೊಂದಿದೆ.

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಇಂಟಿರಿಯರ್‍‍ನ ಬಗ್ಗೆ ಹೇಳುವುದಾದರೆ, ಟೆನ್ ವೇ ಪವರ್ಡ್ ಡ್ರೈವರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಹೊಂದಿದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, ಎಬಿಎಸ್, ಇಬಿಡಿ, ಸ್ಮಾರ್ಟ್ ಕೀ, ಆಟೋಮ್ಯಾಟಿಕ್ ಎಸಿ, ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್‌ ಹಾಗೂ ಎಲ್ಲಾ ವ್ಹೀಲ್‍‍ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ, 39.2 ಕಿ.ವ್ಯಾಟಿನ ಲಿಥಿಯಂ ಐಯಾನ್ ಪಾಲಿಮರ್ ಬ್ಯಾಟರಿಯ ಪರ್ಮನೆಂಟ್ ಮ್ಯಾಗ್ನೆಟ್ ಸಿಕ್ರೊನಸ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಈ ಎಂಜಿನ್ 134 ಬಿ‍‍ಹೆಚ್‍‍ಪಿ ಪವರ್ ಹಾಗೂ 395 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

9.7 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಆಕ್ಸೆಲೆರೇಟ್ ಮಾಡುತ್ತದೆ. ಈ ಕಾರಿನಲ್ಲಿ ಇಕೊ, ಇಕೊ ಪ್ಲಸ್, ಕಂಫರ್ಟ್ ಹಾಗೂ ಸ್ಪೋರ್ಟ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‍‍ಗಳಿವೆ. ಪ್ಯಾಡಲ್ ಶಿಫ್ಟರ್‌ಗಳು ಅಡ್ಜಸ್ಟಬಲ್ ರಿಜನರೇಟಿವ್ ಬ್ರೇಕಿಂಗ್‌ಗಾಗಿವೆ.

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಎಆರ್‌ಎಐ ಅಂದಾಜಿನ ಪ್ರಕಾರ ಈ ಕಾರನ್ನು ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀವರೆಗೂ ಚಲಿಸಬಹುದು. ವೇಗದ ಚಾರ್ಜರ್ ಮೂಲಕ 60 ನಿಮಿಷಗಳಲ್ಲಿ 80% ಚಾರ್ಜ್ ಮಾಡಬಹುದು. ಪೋರ್ಟಬಲ್ 2.8 ಕಿ.ವ್ಯಾಟ್ ಚಾರ್ಜರ್ ಮೂಲಕ ಸಹ ಇದನ್ನು ಚಾರ್ಜ್ ಮಾಡಬಹುದು.

ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಈ ಬ್ಯಾಟರಿಯನ್ನು ವಾಲ್ ಸಾಕೆಟ್‌ನಲ್ಲಿ 3 ಗಂಟೆಗಳ ಕಾಲ ಚಾರ್ಜ್ ಮಾಡಿದರೆ, ಹೆಚ್ಚುವರಿಯಾಗಿ 50 ಕಿ.ಮೀ ಚಲಿಸಬಹುದು. ಹ್ಯುಂಡೈ ಕೋನಾ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.23.7 ಲಕ್ಷಗಳಾಗಿದೆ.

More from DriveSpark

Article Published On: Thursday, August 22, 2019, 15:09 [IST]
English summary
Hyundai sales executives in Lucknow dance during Kona delivery - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+