ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಿಎನ್‍ಜಿ
ಭಾರತೀಯ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹ್ಯಾಚ್‍ಬ್ಯಾಕ್ ಕಾರ್ ಅನ್ನು ಹೊಸ ಸಿಎನ್‍ಜಿ ರೂಪಾಂತರದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಅಧಿಕೃತ ಪ್ರಕಟಣೆಯ ಮೊದಲು ಕಂಪನಿಯು ಭಾರತದಲ್ಲಿ ಸಿಎನ್‍ಜಿ ಎಂಜಿನ್‍ನೊಂದಿಗೆ ತಮ್ಮ ಎಸ್-ಪ್ರೆಸ್ಸೊ ಹ್ಯಾಚ್‍ಬ್ಯಾಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಿದೆ.

ಎಸ್-ಪ್ರೆಸ್ಸೊ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ವೇಳೆಯಲ್ಲಿ ಬಿಎಸ್-6 ಸಿಎನ್‍ಜಿ ಎಂಜಿನ್‍ನ ಎಮಿಷನ್ ಟೆಸ್ಟ್ ನಡೆಸುವ ಉಪಕರಣವನ್ನು ಬಳಸಿರುವುದು ಬಹಿರಂಗವಾಗಿದೆ. ಕಂಪನಿಯು ಹಲವಾರು ಮಾದರಿಗಳಲ್ಲಿ ಸಿಎನ್‍ಜಿ ಎಂಜಿನ್ ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ವಿಭಿನ್ನ ಮಾದರಿಗಳಲ್ಲಿ ಪವರ್ ಅನ್ನು ನೀಡುತ್ತದೆ.

ಪ್ರಸ್ತುತ, ಆಲ್ಟೋ 800, ಆಲ್ಟೊ ಕೆ 10, ವ್ಯಾಗನ್ಆರ್, ಸೆಲೆರಿಯೊ ಮತ್ತು ಎರ್ಟಿಗಾವನ್ನು ಮಾರುತಿ-ಸುಜುಕಿಯಿಂದ ಸಿಎನ್‌ಜಿ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಆಲ್ಟೋ ಕೆ10 ಮತ್ತು ಸೆಲೆರಿಯೊನಲ್ಲಿರುವ 1.0 ಲೀಟರ್ ಸಿಎನ್‍ಜಿ ಎಂಜಿನ್ ಅನ್ನು ಎಸ್-ಪ್ರೆಸ್ಸೊ ಹ್ಯಾಚ್‍ಬ್ಯಾಕ್‍ನಲ್ಲಿಯೂ ಅಳವಡಿಸುವ ಸಾಧ್ಯತೆಗಳಿವೆ.

ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಸಣ್ಣ ಹ್ಯಾಚ್‍ಬ್ಯಾಕ್ ಮಾದರಿಗಳಲ್ಲೂ ಸಿಎನ್‍ಜಿ ಆಯ್ಕೆಯನ್ನು ನೀಡುವುದಾಗಿ ತಿಳಿಸಿತ್ತು. ಕಂಪನಿಯ ಕಾರುಗಳ ಇಂಧನ ದಕ್ಷತೆಯನ್ನು ನೋಡುವ ಗ್ರಾಹಕರನ್ನು ಗುರಿಯಾಗಿಸಿ ಈ ಆಯ್ಕೆಯನ್ನು ನೀಡಲಾಗುತ್ತಿದೆ.

ಮಾರುತಿ ಸುಜುಕಿಯಾ ಈ ಹ್ಯಾಚ್‍ಬ್ಯಾಕ್ 1.0 ಲೀಟರ್ ಸಿಎನ್‍ಜಿ ಎಂಜಿನ್ ಹೊಂದಿದ್ದು, 6000 ಆರ್‍ಪಿಎಂನಲ್ಲಿ 58.3 ಬಿಹೆಚ್‍ಪಿ ಪವರ್ ಮತ್ತು 3500 ಆರ್‍ಪಿಎಂನಲ್ಲಿ 78 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಸಿಎನ್‍ಜಿ ಎಂಜಿನ್ ಮಾರುತಿ ಎಸ್-ಪ್ರೆಸ್ಸೊ ಹ್ಯಾಚ್‍ಬ್ಯಾಕ್‍ಗೆ ಹೆಚ್ಚು ಪವರ್ ಅನ್ನು ನೀಡಲಿದೆ. ಈ ಹ್ಯಾಚ್‍ಬ್ಯಾಕ್ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ದೊಡ್ಡ 1.2 ಲೀಟರ್ ಎಂಜಿನ್ ಅನ್ನು ಹೊಂದಿರಲಿದೆ.

ಸೆಪ್ಟೆಂಬರ್ ತಿಂಗಳ ಕೊನೆಯ ದಿನದಂದು ಬಿಡುಗಡೆಯಾಗಿದ್ದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ನಿರೀಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ ಅಧಿಕೃತ ಮಾರಾಟ ಆರಂಭವಾದ ನಂತರ ಬರೋಬ್ಬರಿ 10 ಸಾವಿರ ಕ್ಕೂ ಹೆಚ್ಚು ಯುನಿಟ್‍ಗಳು ಮಾರಾಟವಾಗಿದೆ. ಅಕ್ಟೋಬರ್ ತಿಂಗಳ ಮಾರಾಟದಲ್ಲಿ ವಿಟಾರಾ ಬ್ರಿಝಾವನ್ನು ಹಿಂದಿಕ್ಕಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಬಿಎಸ್-6 ಮೂರು ಸಿಲಿಂಡರ್ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 68 ಬಿಹೆಚ್‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅಥವಾ ಆಟೋಮ್ಯಾಟಿಕ್ ಎಜಿಎಸ್ ಗೇರ್‍ಬಾಕ್ಸ್ ಅನ್ನು ಹೊಂದಿರಲಿದೆ. 1.0 ಲೀಟರ್ ಬಿಎಸ್-6 ಎಂಜಿನ್ ಶೀಘ್ರದಲ್ಲೇ ಅಲ್ಟೋ ಕೆ10 ಹ್ಯಾಚ್‍ಬ್ಯಾಕ್‍ನಲ್ಲೂ ಅಳವಡಿಸಲಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಎಸ್-ಪ್ರೆಸ್ಸೊ ಹ್ಯಾಚ್‍ಬ್ಯಾಕ್ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ 14-ಇಂಚಿನ ಅಲಾಯ್ ವ್ಹೀಲ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್ ಮತ್ತು ಎಲ್‍ಇಡಿ ಟೇಲ್ ಲ್ಯಾಂಪ್ ಅನ್ನು ಹೊಂದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಎಸ್-ಪ್ರೆಸ್ಸೊ ಕಾರಿನ ಇಂಟಿರಿಯರ್‍ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಆಕರ್ಷಕ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇನ್ಸ್ ಟ್ರೂಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ, ಮಾರುತಿ ಕಂಪನಿಯ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ ಮತ್ತು ಆಂಡ್ರಾಯ್ಡ್ ಆಟೋವನ್ನು ಹೊಂದಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಎಸ್-ಪ್ರೆಸ್ಸೊ ಕಾರಿನಲ್ಲಿ ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರೇರ್ ವೀವ್ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್, ಯುಎಸ್‌ಬಿ ಕನೆಕ್ಟ್, ಕೀ ಲೆಸ್ ಎಂಟ್ರಿ, ಬ್ಲೂಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಹೊಂದಿದೆ.

ಹ್ಯಾಚ್‍ಬ್ಯಾಕ್‍ನ ಸಿಎನ್‍ಜಿ ರೂಪಾಂತರವನ್ನು ಹೊಂದಿರುವುದರಿಂದ ಇದರ ಪ್ರತಿಸ್ಪರ್ಧಿಗಳಾದ ರೆನಾಲ್ಟ್ ಕ್ವಿಡ್ ಮತ್ತು ದಟ್ಸನ್ ರೆಡಿ-ಗೋ ಹೆಚ್ಚಿನ ಪೈಪೋಟಿಯನ್ನು ನೀಡಲಿದೆ. 1.2 ಲೀಟರ್ ಎಂಜಿನ್ ಅನ್ನು ಈ ಹ್ಯಾಚ್‍ಬ್ಯಾಕ್‍ನಲ್ಲಿ ಅಳವಡಿಸುವುದರಿಂದ ಎಸ್-ಪ್ರೆಸ್ಸೊವಿನ ಪರ್ಫಾಮೆನ್ಸ್ ಗಮನಾರ್ಹವಾಗಿ ಹೆಚ್ಚಳವಾಗಿ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಬಹುದು.


Click it and Unblock the Notifications