ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

2019ರ ಆರಂಭದಿಂದಲೂ ಹೊಸ ಕಾರುಗಳ ಮಾರಾಟದಲ್ಲಿ ಬಹುತೇಕ ಕಾರು ಸಂಸ್ಥೆಗಳು ಸತತ ಹಿನ್ನಡೆ ಅನುಭವಿಸುತ್ತಲೇ ಇದ್ದು, ಮಾರುತಿ ಸುಜುಕಿಯೂ ಸಹ ಸೆಪ್ಟೆಂಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಸೆಪ್ಟೆಂಬರ್ ಅವಧಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು 1,22,640 ಕಾರುಗಳನ್ನು ಮಾರಾಟ ಮಾಡಿದ್ದು, ಇದು ಕೆಳೆದ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ ಕಾರು ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದ್ದಲ್ಲಿ ಶೇ.27 ರಷ್ಟು ಕುಸಿತ ಕಂಡಿದೆ. ಮಾರಾಟವಾಗಿರುವ 1,22,640 ಯುನಿಟ್‌ಗಳಲ್ಲಿ 7,188 ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡಿದ್ದು, ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.34 ರಷ್ಟು ಕುಸಿತ ಕಂಡಿತ್ತು.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಗೆ ಅತಿ ಹೆಚ್ಚು ಲಾಭ ತಂದುಕೊಡುತ್ತಿದ್ದ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟವೇ ಹೆಚ್ಚು ಕುಸಿತ ಕಂಡಿದ್ದು, ಜನಪ್ರಿಯ ಕಾರು ಮಾದರಿಗಳ ಮಾರಾಟದಲ್ಲೇ ಶೇ.42 ರಷ್ಟು ಹಿನ್ನಡೆ ಅನುಭವಿಸಿದೆ.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಇಂಧನ ಆಧರಿತ ಕಾರು ಬೆಲೆಯಲ್ಲಿ ಹೆಚ್ಚಳ, ಜಿಎಸ್‌ಟಿ ಏರಿಕೆ, ದುಬಾರಿ ವಿಮಾ ದರಗಳು ಮತ್ತು ಜಾರಿಗೆ ಬರಲಿರುವ ಬಿಎಸ್-6 ನಿಯಮ ಜಾರಿಯಿಂದಾಗಿ ಕಾರು ಮಾರಾಟವು ಸತತ ಕುಸಿತಕ್ಕೆ ಕಾರಣವಾಗಿದ್ದು, ಕಳೆದ ತಿಂಗಳು ಕಾರ್ಪೊರೇಟ್ ತೆರಿಗೆ ಹೊರೆ ಇಳಿಕೆ ಮಾಡಿರುವುದು ಸದ್ಯ ಆಟೋ ಉತ್ಪಾದನಾ ಸಂಸ್ಥೆಗಳು ನಿಟ್ಟುಸಿರು ಬಿಡುವಂತಾಗಿದೆ.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಹೊಸ ಕಾರುಗಳ ಮಾರಾಟವು ಸತತ ಕುಸಿತ ಕಾಣುತ್ತಿರುವುದಕ್ಕೆ ಜಿಎಸ್‌ಟಿ ತಗ್ಗಿಸುವಂತೆ ಮನವಿ ಮಾಡಿದ್ದ ಆಟೋ ಉತ್ಪಾದನಾ ಸಂಸ್ಥೆಗಳ ಮನವಿಯನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರವು ತದನಂತರದಲ್ಲಿ ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ಬದಲಾಗಿ ಕಾರ್ಪೊರೇಟ್ ತೆರಿಗೆ ಹೊರೆ ಇಳಿಕೆ ಮಾಡಿತ್ತು.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಅಕ್ಟೋಬರ್ 1ರಿಂದಲೇ ಜಾರಿಗೆ ಬರುವಂತೆ ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು ಶೇ.21.55ರಿಂದ ಶೇ.17.16ಕ್ಕೆ ಇಳಿಕೆ ಮಾಡಿದ್ದು, ಇದು ಸತತ ನಷ್ಟದಲ್ಲಿರುವ ಕಾರು ಉತ್ಪಾದನಾ ಸಂಸ್ಥೆಗಳಿಗೆ ಬೆಂಬಲ ಬೆಲೆ ನೀಡಿದಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟವನ್ನು ಹೆಚ್ಚಿಸಲು ಬೆಲೆ ಇಳಿಕೆ ಮಾಡಿದ್ದು, ಹೊಸ ತೆರಿಗೆ ಜಾರಿಗೆ ಬರುವುದಕ್ಕೂ ಮುನ್ನವೇ ಕಾರುಗಳ ಬೆಲೆ ಇಳಿಕೆ ಮಾಡಿ ಆದೇಶ ಹೊರಡಿಸಿತ್ತು.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಹೀಗಾಗಿ ಕೇಂದ್ರ ಸರ್ಕಾರದ ಕಾರ್ಪೊರೇಟ್ ತೆರಿಗೆ ಇಳಿಕೆಯಿಂದ ಮುಂಬರುವ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಹೊಸ ಕಾರುಗಳ ಮಾರಾಟವು ಸರಿದಾರಿಗೆ ಬರುವ ಮುನ್ಸೂಚನೆ ನೀಡಿದ್ದು, ಭಾರೀ ಪ್ರಮಾಣದಲ್ಲಿ ಕಾರು ಮಾರಾಟ ಹಿನ್ನಡೆ ಅನುಭವಿಸಿರುವ ಮಾರುತಿ ಸುಜುಕಿ ಸಂಸ್ಥೆಗೆ ಬಲಬಂದಂತಾಗಿದೆ.

MOST READ: ನಂಬರ್ ಪ್ಲೇಟ್ ಇಲ್ಲದೇ ವಾಹನ ಚಾಲನೆ ಮಾಡುವ ಸವಾರರೇ ಎಚ್ಚರ..!

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಹೀಗಾಗಿ ಕೇಂದ್ರ ಸರ್ಕಾರವು ನೀಡುತ್ತಿರುವ ತೆರಿಗೆ ವಿನಾಯ್ತಿಯ ಲಾಭವನ್ನು ಗ್ರಾಹಕರಿಗೂ ನೀಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಆಯ್ದ ಕಾರುಗಳ ಮೇಲೆ ನಿರ್ದಿಷ್ಟ ಪ್ರಮಾಣದ ದರ ಇಳಿಕೆ ಮಾಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು ಹೆಚ್ಚಾಗಿ ವಿದೇಶಿ ಮಾರುಕಟ್ಟೆಗಳಿಂದ ಲೀಥಿಯಂ ಅಯಾನ್ ಬ್ಯಾಟರಿ, ಏರ್‌ಬ್ಯಾಗ್, ಸೆನ್ಸಾರ್ ಮತ್ತು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಆಮದು ಬಿಡಿಭಾಗಗಳ ಮೇಲೆ ವಿಧಿಸಲಾಗುತ್ತಿದ್ದ ಕಾರ್ಪೊರೇಟ್ ತೆರಿಗೆ ಇಳಿಕೆಯಿಂದಾಗಿ ವಾಹನ ಬೆಲೆಯಲ್ಲೂ ಕಡಿತಗೊಳ್ಳಬಹುದು ಎಂದು ನೀರಿಕ್ಷಿಸಲಾಗಿತ್ತು.

MOST READ: 5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ನೀರಿಕ್ಷೆಯಂತೆ ಮಾರುತಿ ಸುಜುಕಿ ಸಂಸ್ಥೆಯು ತನ್ನ ಆಯ್ದ ಕಾರುಗಳ ಬೆಲೆಯಲ್ಲಿ ರೂ. 5 ಸಾವಿರ ತನಕ ಬೆಲೆ ಇಳಿಕೆ ಮಾಡಿದ್ದು, ಹೊಸ ದರಗಳ ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದರ ಪಟ್ಟಿ ಪ್ರಕಟಿಸಿದ್ದು, ಹೊಸ ದರ ಪಟ್ಟಿಯಲ್ಲಿ ಆಲ್ಟೋ 800, ಆಲ್ಟೋ ಕೆ10, ಸ್ವಿಫ್ಟ್ ಡೀಸೆಲ್, ಬಲೆನೊ ಡೀಸೆಲ್, ಇಗ್ನಿಸ್, ಡಿಜೈರ್ ಡೀಸೆಲ್, ಟೂರ್ ಎಸ್ ಡೀಸೆಲ್ ಮತ್ತು ಎಸ್-ಕ್ರಾಸ್ ಕಾರುಗಳ ಎಕ್ಸ್‌ಶೋರೂಂ ದರಗಳನ್ನು ಕಡಿತಗೊಳಿಸಲಾಗಿದೆ.

MOST READ: ಆರ್‌ಇ ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಖರೀದಿಗೆ ಬುಕ್ಕಿಂಗ್ ಸ್ಟಾರ್ಟ್..!

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಇದರಲ್ಲಿ ಬಲೆನೊ ಆರ್‌ಎಸ್ ಆವೃತ್ತಿಯ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದ್ದು, ಆಲ್ಟೋ 800, ಆಲ್ಟೋ ಕೆ10, ಸ್ವಿಫ್ಟ್ ಡೀಸೆಲ್, ಬಲೆನೊ ಡೀಸೆಲ್, ಇಗ್ನಿಸ್, ಡಿಜೈರ್ ಡೀಸೆಲ್, ಟೂರ್ ಎಸ್ ಡೀಸೆಲ್, ಎಸ್-ಕ್ರಾಸ್ ಕಾರುಗಳ ಬೆಲೆ ರೂ. 5 ಸಾವಿರ ಇಳಿಕೆ ಮಾಡಿದ್ದಲ್ಲಿ ಬಲೆನೊ ಆರ್‍‌ಎಸ್ ರೂ.1 ಲಕ್ಷ ಡಿಸ್ಕೌಂಟ್ ನೀಡಲಾಗಿದೆ.

ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಮಾರುತಿ ಸುಜುಕಿ

ಇನ್ನು ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿರುವ ಮಾರುತಿ ಸುಜುಕಿ ಸಂಸ್ಥೆಗೆ ಹೊಸದಾಗಿ ಬಿಡುಗಡೆಯಾಗಿರುವ ಎಸ್-ಪ್ರೆಸ್ಸೊ ಕಾರು ಮಾರಾಟ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗಲಿದ್ದು, ಹೊಸ ಕಾರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.69 ಲಕ್ಷ ಆರಂಭಿಕ ಬೆಲೆಯೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

Most Read Articles

Kannada
English summary
India's largest carmaker maruti suzuki reported that 27 percent of decline passenger vehicle sales in september 2019.
Story first published: Wednesday, October 2, 2019, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X