ಆರ್‌ಇ ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಖರೀದಿಗೆ ಬುಕ್ಕಿಂಗ್ ಸ್ಟಾರ್ಟ್..!
ಬೆನೆಲ್ಲಿ ಇಂಡಿಯಾ ಸಂಸ್ಥೆಯು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮತ್ತು ಜಾವಾ ಬೈಕ್‍ಗಳಿಗೆ ಪೈಪೋಟಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಇಂಪೀರಿಯಲ್ 400 ಕ್ಲಾಸಿಕ್ ಬೈಕ್ ಬಿಡುಗಡೆಗೊಳಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಬೈಕ್ ಖರೀದಿಗೆ ಆಸಕ್ತ ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸುತ್ತಿದೆ.

ರೆಟ್ರೋ ಸ್ಟೈಲ್ ಮಾದರಿಯ ಹೊಸ ಇಂಪೀರಿಯಲ್ 400 ಬೈಕ್ ಮಾದರಿಯನ್ನು ಮೊದಲ ಬಾರಿಗೆ 2017ರ ಮಿಲಾನ್ ಇಐಸಿಎಮ್ಎ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದ್ದ ಬೆನೆಲ್ಲಿ ಸಂಸ್ಥೆಯು ಇದೀಗ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಮಾರಾಟಕ್ಕಾಗಿ ಮಹಾವೀರ್ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡುವ ಯೋಜನೆಯಲ್ಲಿದೆ. ಹೀಗಾಗಿ ಹೊಸ ಬೈಕ್ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಕ್ಲಾಸಿಕ್ ಬೈಕ್ ಮಾರಾಟ ಹೊಸ ಸಂಚಲನ ಕಾರಣವಾಗಲಿದೆ.

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ರೆಟ್ರೊ ಹಾಗೂ ಹೊಸ ಶೈಲಿಯ ಟ್ವಿನ್ ಪವರ್ ಕ್ಲಸ್ಟರ್ ಅನ್ನು ಪಡೆದಿರಲಿದ್ದು, ರೋಡ್ ಟೆಸ್ಟಿಂಗ್ ವೇಳೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಮತ್ತು ಡಬಲ್ ಕ್ರೆಡಲ್ ಸ್ಟೀಲ್ ಫ್ರೇಮ್ ಅನ್ನು ಪಡೆದುಕೊಂಡಿರುವುದು ಖಚಿತವಾಗಿದೆ.

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್‍ನಲ್ಲಿ ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಿಂದ ರೈಡರ್‌ಗಳಿಗೆ ಗರಿಷ್ಠ ಸುರಕ್ಷತೆ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆಯ ಎಂಜಿನ್ ಕೂಡಾ ಹೊಂದಿರಲಿದೆ.

ಮತ್ತೊಂದು ಪ್ರಮುಖ ಆಕರ್ಷಣೆ ಅಂದ್ರೆ, ಇಂಪೀರಿಯಲ್ 400 ಬೈಕ್‌ಗಳು ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಆವೃತ್ತಿಯ ಜೊತೆಗೆ ಸ್ಪೋರ್ಟ್ ಆವೃತ್ತಿಯು ಕೂಡಾ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದ್ದು, ದಿನಬಳಕೆಗಾಗಿ ಸಾಮಾನ್ಯ ಆವೃತ್ತಿಯನ್ನು ಮತ್ತು ಅಡ್ವೆಂಚರ್ ಉದ್ದೇಶಗಳಿಗಾಗಿ ಸ್ಪೋರ್ಟ್ ಆವೃತ್ತಿಯನ್ನು ಖರೀದಿ ಮಾಡಬಹುದಾಗಿದೆ. ಇದಕ್ಕಾಗಿ ಎಂಜಿನ್‌ನಲ್ಲೂ ಹಲವಾರು ಬದಲಾವಣೆಗಳನ್ನು ಕೂಡಾ ಪರಿಚಯಿಸಿದೆ.

ಎಂಜಿನ್ ಸಾಮರ್ಥ್ಯ
ಇಂಪೀರಿಯಲ್ 400 ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 346ಸಿಸಿ ಎಂಜಿನ್‌ನೊಂದಿಗೆ 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ, ಸ್ಪೋರ್ಟ್ ಇಂಪೀರಿಯಲ್ 400 ಮಾದರಿಯು 373-ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.7-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇನ್ನು ರಾಯಲ್ ಎನ್‌ಫೀಲ್ಡ್ 350 ಬೈಕ್‌ಗಳಿಂತಲೂ ತೂಕದಲ್ಲಿ ತುಸು ಭಾರ ಎನ್ನಿಸುವ ಇಂಪೀರಿಯಲ್ 400 ಬೈಕ್‌ಗಳು 200 ಕೆ.ಜಿ ಭಾರ ಹೊಂದಿದ್ದು, 12-ಲೀಟರ್ ಸಾಮರ್ಥ್ಯದ ಫ್ಯುಲ್ ಟ್ಯಾಂಕ್ ಜೊತೆ ಪ್ರತಿ ಲೀಟರ್‌ಗೆ 35 ಕಿ.ಮಿ ಮೈಲೇಜ್ ಹಿಂದಿರುಗಿಸಲಿವೆ.

ಬೈಕ್ ಬಿಡುಗಡೆಯ ಅವಧಿ ಮತ್ತು ಬೆಲೆಗಳು(ಅಂದಾಜು)
ಬೆನೆಲ್ಲಿ ಇಂಪೀರಿಯಲ್ 400 ಬೈಕ್‌ಗಳು ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಾಣವಾಗುತ್ತಿರುವುದರಿಂದ ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗಿದ್ದು, ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳ ಬೆಲೆ ಮಾದರಿಯಲ್ಲೇ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.50 ಲಕ್ಷದಿಂದ ರೂ. 1.70 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಹೀಗಾಗಿ ಹೊಸ ಇಂಪೀರಿಯಲ್ ಬೈಕ್‌ಗಳು ಸಂಪೂರ್ಣವಾಗಿ ರಾಯಲ್ ಎನ್‌ಫೀಲ್ಡ್ ಮತ್ತು ಜಾವಾ ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದ್ದು, ಇದೇ ವರ್ಷಾಂತ್ಯಕ್ಕೆ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ.


Click it and Unblock the Notifications








