ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ದೇಶದ ನಂ.1 ಕಾರು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿಸ್ಪರ್ಧಿ ಕಾರು ಸಂಸ್ಥೆಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಇದೇ ಮೊದಲ ಬಾರಿಗೆ ಮನೆಬಾಗಿಲಿಗೆ ಸರ್ವಿಸ್ ಒದಗಿಸುವ ಯೋಜನೆಗೆ ಚಾಲನೆ ನೀಡಿದೆ.

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ಹೊಸ ಯೋಜನೆಯಿಂದಾಗಿ ಮಾರುತಿ ಸುಜುಕಿ ಗ್ರಾಹಕರಿಗೆ ಆದ್ಯತೆ ಮೇರೆಗೆ ಮನೆಬಾಗಿಲಿಗೆ ಸರ್ವಿಸ್ ಸೇವೆಗಳನ್ನು ಲಭ್ಯವಿದ್ದು, ಇದು ಕಾರು ಮಾರಾಟ ಮತ್ತು ಮಾರಾಟ ನಂತರ ಗ್ರಾಹಕರ ಸೇವೆಗಳ ವಿಶ್ವಾಸ ಹೆಚ್ಚಿಸಲು ಸಾಕಷ್ಟು ಸಹಕಾರಿಯಾಗಲಿದೆ. ಈಗಾಗಲೇ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಈ ಯೋಜನೆಯನ್ನು ಪರಿಚಯಿಸಿದ್ದು, ಇದೀಗ ಗ್ರಾಹಕರ ಬೇಡಿಕೆ ಮೇರೆಗೆ ಮಾರುತಿ ಸುಜುಕಿ ಸಹ ಸರ್ವಿಸ್ ಆನ್ ವೀಲ್ಹ್ ಎನ್ನುವ ಹೊಸ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ನುರಿತ ಆಟೋ ಮೊಬೈಲ್ ತಜ್ಞರ ತಂಡವನ್ನು ಒಳಗೊಂಡ ತಾಂತ್ರಿಕ ಸೌಲಭ್ಯಗಳ ಪ್ರೇರಿತ ಮೊಬೈಲ್ ವಾಹನವು ಡೀಲರ್ಸ್ ಮಟ್ಟದಲ್ಲಿ ಸೇವೆಗಳನ್ನು ನೀಡಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಕಾರುಗಳ ಜೊತೆಗೆ ಸಿಎನ್‌ಜಿ ವಾಹನಗಳಿಗೂ ಸರ್ವಿಸ್ ಒದಗಿಸಲಿದೆ.

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ 2020ರಿಂದ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಡುವ ಯೋಜನೆಯಲ್ಲಿದ್ದು ಇದಕ್ಕೂ ಮುನ್ನ ಜನಪ್ರಿಯ ಡೀಸೆಲ್ ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿದೆ.

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

2020ರ ಏಪ್ರಿಲ್ 1ರಿಂದ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಕಡ್ಡಾಯವಾಗಲಿದ್ದು, ಹೊಸ ನಿಯಮಗಳಿಗೆ ಅನ್ವಯವಾಗಿ ಉನ್ನತಿಕರಣ ಮಾಡಲು ಸಾಧ್ಯವಿಲ್ಲದ ಡೀಸೆಲ್ ಎಂಜಿನ್ ಮಾರಾಟವು ಸಂಪೂರ್ಣ ಬಂದ್ ಆಗಲಿದೆ. ಈ ಹಿನ್ನಲೆ ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಜನಪ್ರಿಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಡುವ ಯೋಜನೆ ರೂಪಿಸಿದ್ದು, ಡೀಸೆಲ್ ಕಾರು ಮಾರಾಟವನ್ನು ಬಂದ್ ಮಾಡುವುದಕ್ಕೂ ಮುನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ವಿಟಾರಾ ಬ್ರೆಝಾ, ಹ್ಯಾಚ್‌ಬ್ಯಾಕ್ ಮಾದರಿಯಾದ ಸ್ವಿಫ್ಟ್, ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಡಿಜೈರ್ ಮತ್ತು ಎಸ್ ಕ್ರಾಸ್ ಎಸ್‌ಯುವಿ ಮೇಲೆ ಆಫರ್ ಘೋಷಣೆ ಮಾಡಿದೆ.

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ಡೀಸೆಲ್ ಎಂಜಿನ್‌ನಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಬ್ರೆಝಾ, ಸ್ವಿಫ್ಟ್, ಡಿಜೈರ್ ಮತ್ತು ಎಸ್-ಕ್ರಾಸ್ ಖರೀದಿ ಮೇಲೆ 5 ವರ್ಷಗಳ ಗರಿಷ್ಠ ವಾರಂಟಿ ಆಫರ್ ಘೋಷಣೆ ಮಾಡಿದ್ದು, 2020ರಿಂದ ದುಬಾರಿಯಾಗಲಿರುವ ಡೀಸೆಲ್ ಕಾರುಗಳ ಖರೀದಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

MOST READ: ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ಇನ್ನು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕಾಗಿ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ಬಿಎಸ್-6 ಎಂಜಿನ್‌ನಿಂದಾಗಿ ಹೊಸ ವಾಹನ ಮಾಲಿನ್ಯ ಪ್ರಮಾಣದಲ್ಲಿ ಸಾಕಷ್ಟು ಇಳಿಕೆಯಾಗಲಿದ್ದು, ಸುಧಾರಿತ ಮಾದರಿಯ ಎಂಜಿನ್‌ನಿಂದಾಗಿ ಪೆಟ್ರೋಲ್‌ಗಿಂತ ಡೀಸೆಲ್ ಎಂಜಿನ್‌ಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಲಿದೆ.

MOST READ: ಆಕರ್ಷಕ ಬೆಲೆಗಳಲ್ಲಿ ಮಾರುತಿ ಸುಜುಕಿ 6 ಸೀಟರ್ ಎಕ್ಸ್ಎಲ್6 ಬಿಡುಗಡೆ

ಕಾರು ಮಾರಾಟ ಹೆಚ್ಚಳಕ್ಕೆ ಭರ್ಜರಿ ಪ್ಲ್ಯಾನ್- ಮಾರುತಿಯಿಂದ ಮನೆಬಾಗಿಲಿಗೆ ಸರ್ವಿಸ್ ಸೌಲಭ್ಯ

ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮದನ್ವಯ ತನ್ನ ಜನಪ್ರಿಯ ಡೀಸೆಲ್ ಎಂಜಿನ್ ಮಾದರಿಗಳನ್ನು ಉನ್ನತೀಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಹೆಚ್ಚಳವಾಗಲಿದ್ದು, ಇದೇ ಕಾರಣಕ್ಕೆ ಡೀಸೆಲ್ ಎಂಜಿನ್ ಉನ್ನತೀಕರಣ ಯೋಜನೆ ಕೈಬಿಟ್ಟು ಸಂಪೂರ್ಣವಾಗಿ ಪೆಟ್ರೋಲ್, ಹೈಬ್ರಿಡ್, ಸಿಎನ್‌ಜಿ, ಎಲೆಕ್ಟ್ರಿಕ್ ಕಾರುಗಳತ್ತ ಗಮನಹರಿಸುತ್ತಿದೆ.

Most Read Articles

Kannada
English summary
Maruti Suzuki Launches Service On Wheels Program: Get Your Car Serviced At Home.
Story first published: Wednesday, August 28, 2019, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X