ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ಭಾರತೀಯ ಜನಪ್ರಿಯ ವಾಹನ ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ಇದೀಗ ತನ್ನ ಗ್ರಾಹಕರಿಗೆ ಹೊಸ ವಿಂಟರ್ ಸರ್ವಿಸ್ ಕ್ಯಾಂಪ್ ಅನ್ನು ಪ್ರಾರಂಭಿಸಿದೆ. ಕ್ರಿಸ್‍‍ಮಸ್ ರಜಾದಿನಗಳ ಮೊದಲು ತಮ್ಮ ಗ್ರಾಹಕರ ಕಾರುಗಳನ್ನು ಪರಿಶೀಲಿಸಿ ಮತ್ತು ಸರ್ವಿಸ್ ನೀಡಲಾಗುತ್ತದೆ.

ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ವಿಂಟರ್ ಸರ್ವಿಸ್ ಕ್ಯಾಂಪ್ ಈಗಾಗಲೇ ಪ್ರಾರಂಭವಾಗಿದೆ. ಮಾರುತಿ ಸುಜುಕಿ ಕಂಪನಿಯು ಡಿಸೆಂಬರ್ 20ರವರೆಗೆ ಸರ್ವಿಸ್ ಕ್ಯಾಂಪ್ ಅನ್ನು ಆಯೋಜಿಸಿದೆ. ಸರ್ವಿಸ್ ಕ್ಯಾಂಪ್‍ ಸಮಗ್ರ 27 ಪಾಯಿಂಟ್ ಚೆಕ್ ಅನ್ನು ಒಳಗೊಂಡಿದೆ. ಇದರಲ್ಲಿ ವಾಹನಗಳ ಬಿಡಿ ಭಾಗ ಮತ್ತು ಪರಿಕರಗಳ ಮೇಲೆ ವಿಶೇಷ ಆಫರ್ ಮತ್ತು ರಿಯಾಯಿತಿಗಳಿದ್ದು, ಡ್ರೈವ್ ವಾಶ್/ಟಾಪ್ ವಾಶ್ ನೀಡಿದೆ ಮತ್ತು ಸರ್ವಿಸ್ ಮತ್ತು ಲೇಬರ್ ವೆಚ್ಚಗಳ ಮೇಲೆ ಹೆಚ್ಚಿನ ರಿಯಾಯಿತಿಗಳಿವೆ.

ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ವಿಂಟರ್ ಸರ್ವಿಸ್ ಕ್ಯಾಂಪ್ ದೇಶದ ಎಲ್ಲಾ ಮಾರುತಿ ಸುಜುಕಿ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿದೆ. ಮಾರುತಿ ಸುಜುಕಿ ಅಧಿಕೃತ ಸರ್ವಿಸ್ ಕೇಂದ್ರಗಳಲ್ಲಿ ಮಾತ್ರ ಈ ಕ್ಯಾಂಪ್‍‍ನ ಸೌಲಭ್ಯವಿರುತ್ತದೆ. ಸರ್ವಿಸ್ ಕ್ಯಾಂಪ್ ಅಧಿಕೃತವಾಗಿ ನವೆಂಬರ್ 11ರಿಂದ ಆರಂಭವಾಗಿದೆ.

ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ವಿಂಟರ್ ಸರ್ವಿಸ್ ಕ್ಯಾಂಪ್‍‍ನಿಂದ ಕಾರು ಮಾಲೀಕರು ರಜಾದಿನಗಳಲ್ಲಿ ಮತ್ತು ಚಳಿಗಾಲದ ಉಳಿದ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಮತ್ತು ಅನುಕೂಲಕ್ಕೆ ತಕ್ಕಂತೆ ತಮ್ಮ ವಾಹನವನ್ನು ಚಲಾಯಿಸಲು ನೆರವಾಗುತ್ತದೆ. ಚಳಿಗಾಲದ ಹೆಚ್ಚು ತಾಪಮಾನದ ಪರಿಣಾಮ ವಾಹನದ ಮೇಲೆ ಆಗದಂತೆ ನೋಡಿಕೊಳ್ಳಲು ಕ್ಯಾಂಪ್ ನೆರವಾಗಲಿದೆ ಎಂದು ಕಂಪನಿ ಹೇಳಿದೆ.

ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ಮಾರುತಿ ಸುಜುಕಿ ಕಂಪನಿಯು ಈ ಸರ್ವಿಸ್ ಕ್ಯಾಂಪ್ ದೇಶಾದ್ಯಂತ ಗ್ರಾಹಕರನ್ನು ತಲಪಲು ತನ್ನ ಬೃಹತ್ ನೆಟರ್ವಕ್ ಅನ್ನು ಬಳಸುತ್ತದೆ. ಕಂಪನಿಯು ಗ್ರಾಹಕರಿಗೆ ಉಚಿತ ಅಳವಾದ ತಪಾಸಣೆಯನ್ನು ನೀಡುತ್ತಿದೆ, ಇದು ವಾಹನದ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ.

ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ಗ್ಲೋಬಲ್ ಎನ್‍ಸಿಎಪಿಯಲ್ಲಿ ಎರ್ಟಿಗಾ ಮೂರು ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಎರ್ಟಿಗಾದ ಡ್ಯುಯಲ್ ಏರ್‍‍ಬ್ಯಾಗ್ ರೂಪಾಂತರವನ್ನು ಏಜಿನ್ಸಿ ಪರೀಕ್ಷಿಸಿತ್ತು, ಇದು ಎ‍‍ಬಿಎಸ್, ಸೀಟ್ ಬೆಲ್ಟ್ ಅಲಾರ್ಮ್ ಸಿಸ್ಟಂ, ಡ್ರೈವರ್ ಸೀಟ್ ಬೆಲ್ಟ್ ಪ್ರಿ-ಟೆನ್ಷನರ್, ಪ್ರಯಾಣಿಕರ ಏರ್‌ಬ್ಯಾಗ್, ಮತ್ತು ಐಎಸ್‌ಒಫಿಕ್ಸ್ ಆ್ಯಂಕಾರೇಜ್‌‍‍ಗಳೊಂದಿಗೆ ಇತರ ಸುರಕ್ಷತಾ ಫೀಚರ್‍‍ಗಳನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ಮಾರುತಿ ಎರ್ಟಿಗಾ ಐದು ಡೋರ್ ಮತ್ತು ಏಳು ಸೀಟ್‍ಗಳನ್ನು ಹೊಂದಿರುವ ಎಂಪಿವಿಯಾಗಿದೆ. ಕ್ರ್ಯಾಶ್ ಟೆಸ್ಟಿಂಗ್‍‍ನಲ್ಲಿ ವಾಹನವು ಒಟ್ಟು 1,363 ಕೆಜಿ ತೂಕವನ್ನು ಹೊಂದಿದೆ. ಮಾರುತಿ ಸುಜುಕಿ ಎರ್ಟಿಗಾ ಕ್ರ್ಯಾಶ್ ಟೆಸ್ಟ್ ವೇಳೆಯಲ್ಲಿ ಸರಾಸರಿ 64.ಕಿ.ಮೀ ವೇಗದಲ್ಲಿ ಚಲಿಸಿತ್ತು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮಾರುತಿ ಸುಜುಕಿ ಗ್ರಾಹಕರಿಗಾಗಿ ವಿಂಟರ್ ಸರ್ವಿಸ್ ಕ್ಯಾಂಪ್

ಭಾರತದ ಜನಪ್ರಿಯ ವಾಹನ ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ಮಧ್ಯಮ ವರ್ಗದ ನೆಚ್ಚಿನ ಬ್ರ್ಯಾಂಡ್ ಆಗಿದೆ. ಮಾರುತಿ ಸುಜುಕಿ ಕಂಪನಿಯು ಗ್ರಾಹಕರಿಗೆ ನೀಡುವ ವಿಶೇಷ ಆಫರ್‍‍ಗಳು ಮತ್ತು ಉತ್ತಮ ಸರ್ವಿಸ್‍ಗಳಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿರುವ ಎಲ್ಲಾ ಸೆಗ್‍‍ಮೆಂಟಿನಲ್ಲಿ ಮಾರುತಿ ಸುಜುಕಿ ಇಂದಿಗೂ ಪಾರುಪತ್ಯ ಸಾಧಿಸುತ್ತಿದೆ. ವಿಂಟರ್ ಕ್ಯಾಂಪ್‍‍ನ ಪ್ರಯೋಜನವನ್ನು ಡಿಸೆಂಬರ್ 20ರವರೆಗೆ ಪಡೆಯಬಹುದಾಗಿದೆ. ವಿಂಟರ್ ಸರ್ವಿಸ್ ಕ್ಯಾಂಪ್‍‍ಗಳಂತ ಯೋಜನೆಗಳಿಂದ ಮಾರುತಿ ಸುಜುಕಿ ಕಂಪನಿಯು ಮತ್ತಷ್ಟು ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Maruti Suzuki Starts Winter Service Camp: Offers Free Check Ups, Complimentary Washes & More - Read in Kannada
Story first published: Friday, November 15, 2019, 11:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X