ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಬೈಕ್ ಅಥವಾ ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವುದು ಕಾನೂನು ಬಾಹಿರವಾದದ್ದೂ ಎಂದು ತಿಳಿದ್ದಿದ್ದರೂ ಸಹ ಹಲವರು ಮಾಡಿಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡಿಸಿಕೊಂಡ ವಾಹನನಗಳನ್ನು ಸೀಝ್ ಅಥವಾ ದುಬಾರಿ ವೆಚ್ಚದಲ್ಲಿ ದಂಡ ನೀಡಬೇಕಾಗುತ್ತದೆ. ಅವುಗಳನ್ನು ಮೀರಿಯೂ ಕೂಡಾ ಹಲವರು ತಮ್ಮ ವಾಹನಗಳನ್ನು ಇನ್ನು ಮಾಡಿಫಿಕೇಶನ್ ಮಾಡಿಸಿಕೊಳ್ಳುತ್ತಿದ್ದಾರೆ. ಅಂತಹ ಒಂದು ವಿಚಿತ್ರ ಮಾಡಿಫೈಡ್ ಕಾರಿನ ಬಗ್ಗೆ ನಿಮಗಿಂದು ಮಾಹಿತಿ ನೀಡಲಿದ್ದೇವೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಬ್ರಿಟಿಷ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿನಿ ತಮ್ಮ ವಾಹನಗಳಿಂದ ಮತ್ತು ಐಷಾರಾಮಿ ಸೌವಲತ್ತುಗಳಿಂದ ಹೆಸರುವಾಸಿಯಾಗಿದೆ. ಆದ್ರೆ ಇಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಕಾರೊಂದು ಮಿನಿ ಕೂಪರ್ ಕಾರಿನ ಅವತಾರ ತಾಳಿದ್ದು, ಬಹಳ ಆಕರ್ಷಕವಾಗಿ ಮಾಡಿಫೈ ಮಾಡಲಾಗಿದೆ. ಅಷ್ಟಕ್ಕೂ ಮಿನಿ ಕೂಪರ್ ಕಾರಿನ ಹಾಗೆ ಬದಲಾವಣೆಯಾದ ಈ ಮಾರುತಿ ಸುಜುಕಿ ಸಂಸ್ಥೆಯ ಕಾರು ಯಾವುದು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ...

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಮಿನಿ ಕೂಪರ್ ವಿನ್ಯಾಸ ತಾಳಿರುವ ಈ ಕಾರು ಬೇರಾವುದೊ ಅಲ್ಲ. ಇದು ಮಾರುತಿ ಸುಜುಕಿ ಸಂಸ್ಥೆಯ ಜನಪ್ರಿಯ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರು..! ಸ್ವಿಫ್ಟ್ ಕಾರಿನ ಬಣ್ಣವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಕಾರಿನ ಹಲವಾರು ಕಡೆಯಲ್ಲಿ ಮಿನಿ ಸಂಸ್ಥೆಯ ಚಿಹ್ನೆಯನ್ನು ನೀಡಲಾಗಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಮಾಡಿಫೈಗಾಗಿ ಬಳಸಿದ ಉಪಕರಣಗಳು

ಮಿನಿ ಕೂಪರ್ ಕಾರಿನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಮುಂಭಾಗದಲ್ಲಿ ಸ್ವಿಫ್ಟ್ ಸ್ಪೋರ್ಟ್ ಕಾರಿನಿಂದ ಪಡೆದ ಹೊಸ ಬಂಪರ್, ಮಿನಿ ಕೂಪರ್ ಕಾರಿನಲ್ಲಿ ನೀಡಲಾದ ಹಾಗೆ ಬಂಪರ್‍‍ನ ಮೇಲೆ ಬ್ಲಾಕ್ ಪ್ಲೆಟ್, ಅಗಲವಾದ ಗ್ರಿಲ್ ಅನ್ನು ಮುಂಭಾಗದಲ್ಲಿ ನೀಡಲಾಗಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಇನ್ನು ಹಿಂಭಾಗದಲ್ಲಿ ಆಫ್ಟರ್ ಮಾರ್ಕೆಟ್ ಎಲ್ಇಡಿ ಲ್ಯಾಂಪ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಅನ್ನು ಸ್ವಿಫ್ಟ್ ಕಾರಿಗೆ ನೀಡಲಾಗಿದೆ. ಸುಮಾರು ಲಕ್ಷ ಬೆಲೆಬಾಳುವ ಮಿನಿ ಕೂಪರ್ ಕಾರಿನಂತೆ ಕಾಣಲು ಪ್ರಾರಂಭಿಕ ಬೆಲೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಕಾರನ್ನು ಮಾಡಿಫೈ ಮಾಡುವುದು ಎಂದರೆ ಅದು ಸುಲಭವಲ್ಲ.

ಕಾರಿನ ಒಳಭಾಗದಲ್ಲಿ ಕೂಡಾ ಬದಲಾವಣೆಗಳನ್ನು ಮಾಡಲಾಗಿದ್ದು, ಇದಕ್ಕೆ ಡ್ಯಾಶ್‍‍ಬೋರ್ಡ್‍ನ ಮೇಲೆ ಆರೆಂಜ್ ಬಣ್ಣವನ್ನು ನೀಡಲಾಗಿದೆ. ಇಷ್ಟೆ ಅಲ್ಲದೇ ನಪ್ಪಾ ಲೆದರ್‍‍ನಿಂದ ಸಜ್ಜುಗೊಂಡ ಸೀಟ್‍‍ಗಳ ಮೇಲೆ ಕೂಡಾ ಆರೆಂಜ್ ಬಣ್ಣದ ಗೆರೆಗಳನ್ನು ಕಾಣಬಹುದಾಗಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಇನ್ನಷ್ಟು ಮಾಹಿತಿ

'ಇಂಡಿಯನ್ ಕಾರ್ ಆಫ್ ದಿ ಇಯರ್'

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಮೊದಲನೆಯ ತಲೆಮಾರಿನ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರನ್ನು 2005 ರಲ್ಲಿ ಬಿಡುಗಡೆಗೊಳಿಸಿದ್ದು, ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರನ್ನು ಈ ವರ್ಷ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಬಿಡುಗಡೆಗೊಂಡಾಗಿನಿಂದಲೂ ಗ್ರಾಹಕರಲ್ಲಿ ಹಾಟ್ ಫೇವರೇಟ್ ಹ್ಯಾಚ್‍ಬ್ಯಾಕ್ ಎಂಬ ಖ್ಯಾತಿಯನ್ನು ಪಡೆದಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಈ ವರ್ಷದ 'ಇಂಡಿಯನ್ ಕಾರ್ ಆಫ್ ದಿ ಇಯರ್' ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಕಳೆದ ವರ್ಷ ಈ ಪ್ರಶಸ್ತಿಯನ್ನು ಹ್ಯುಂಡೈ ವೆರ್ನಾ ಸೆಡಾನ್ ಕಾರು ತನ್ನದಾಗಿಸಿಕೊಂಡಿತ್ತು.

MOST READ: ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಈ ಪ್ರಶಸ್ತಿಯನ್ನು ಪಡೆಯಲು ಮಾರುತಿ ಸುಜುಕಿ ಸ್ವಿಫ್ಟ್ ಹ್ಯುಂಡೈ ಸ್ಯಾಂಟ್ರೋ, ಮಾರುತಿ ಎರ್ಟಿಗಾ, ಹೋಂಡಾ ಅಮೇಜ್, ಟೊಯೊಟಾ ಯಾರಿಸ್, ಮಹೀಂದ್ರಾ ಮರಾಜೊ, ಮಹೀಂದ್ರಾ ಆಲ್ಟುರಾಸ್ ಮತ್ತು ಹೋಂಡಾ ಬಿಎರ್‍-ವಿ ಕಾರುಗಳಿಗೆ ಮಾರಾಟದಲ್ಲಿ ಪೈಪೋಟಿಯನ್ನು ನೀಡಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಇನ್ನು ಪ್ರಶಸ್ತಿ ವಿಜೇತ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬಗ್ಗೆ ಹೇಳುವುದಾದರೆ 2005ರಲ್ಲಿ ಬಿಡುಗಡೆಗೊಂಡ ಮೊದಲ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರು 2010ರ ವೇಳೆಗೆ 50000 ಯೂನಿಟ್ ಮಾರಾಟಗೊಂಡು ಮೊದಲನೆಯ ಮೈಲಿಗಲ್ಲನ್ನು ತಲುಪಿತ್ತು. ನಂತರ 2016ರ ವೇಳೆಗೆ 1.5 ಮಿಲಿಯನ್ ಯೂನಿಟ್ ಮಾರಾಟಗೊಂಡು ಎರಡನೆಯ ಮೈಲಿಗಲ್ಲನ್ನು ತಲುಪಿತ್ತು. ಆದರೆ ಇದೀಗ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಬಿಡುಗಡೆಯ ನಂತರ ಒಟ್ಟಾರೆಯಾಗಿ 2.2 ಮಿಲಿಯನ್ ಯೂನಿಟ್‍ ಮಾರಾಟಗೊಂಡಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಐದನೇ ತಲೆಮಾರಿನ ಹರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಎಂಜಿನ್ ಸಾಮರ್ಥ್ಯ

ಹೊಸ ಸ್ವಿಫ್ಟ್ ವಿನೂತನ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 83 ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಆವೃತ್ತಿಯು 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಜೊತಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಡಿಜೈರ್ ಮತ್ತು ಬಲೆನೊ ಕಾರುಗಳಿಂತಲೂ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಕಾರಿನ ಒಳ ಮತ್ತು ಹೊರ ವಿನ್ಯಾಸ ಸ್ಪೋರ್ಟಿ ಇಂಟಿರಿಯರ್ ಲುಕ್ ಪಡೆದಿರುವ ಹೊಸ ಸ್ವಿಫ್ಟ್ ಕಾರುಗಳು ಅತ್ಯಾಕರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಇನ್ನು ಸ್ಮಾರ್ಟ್ ಕನೆಕ್ಟಿವಿಟಿಗೂ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಇಂಚಿನ ಇನ್ಪೋಟೈನ್‌ಮೆಂಟ್, ಆಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, ಮಿರರ್ ಲಿಂಕ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸಿಸ್ಟಂ ಒದಗಿಸಲಾಗಿದೆ.

MOST READ: ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

ಸುರಕ್ಷಾ ಸಾಧನಗಳು ಎಂಜಿನ್ ಸ್ಟಾರ್ಟ್ ಆ್ಯಂಡ್ ಸ್ಟಾಪ್ ಬಟನ್ ಒದಗಿಸಲಾಗಿದ್ದು, ಆಟೋ ಹೆಡ್‌ಲ್ಯಾಂಪ್, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಆಪರೇಟಿಂಗ್ ರಿಯರ್ ವ್ಯೂವ್ ಮಿರರ್, ಎಬಿಎಸ್ ಸೇರಿದಂತೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವಿದೆ.

ಮಿನಿ ಕೂಪರ್ ಕಾರಿನ ಅವತಾರದಲ್ಲಿ ಕಾಣಿಸಿಕೊಂಡ ಈ ಕಾರು ಯಾವುದು ಗೊತ್ತಾ.?

2018ರ ಸ್ವಿಫ್ಟ್ ಕಾರಿನ ಬೆಲೆಗಳನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯನ್ನು ರೂ. 4.99 ಲಕ್ಷಕ್ಕೆ ಮತ್ತು ಟಾಪ್ ಕಾರು ಮಾದರಿಯನ್ನು ರೂ. 8.39 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡಿದೆ.

More from DriveSpark

Article Published On: Saturday, February 23, 2019, 14:35 [IST]
English summary
Maruti Suzuki Swift Gets Modified As Mini Cooper. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+