ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಆಸ್ಟ್ರೀಯಾ ಮೂಲದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಕೆಟಿಎಂ ಇಂಡಿಯಾ ಸದ್ಯ ವಿವಿಧ ಮಾದರಿಯ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಡ್ಯೂಕ್ 125 ಆರಂಭಿಕ ಆವೃತ್ತಿಯನ್ನು ಬಿಡುಗಡೆ ಮಾಡಿತು.

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

10.5 ಲೀಟರ್ ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಪಡೆದಿರುವ 125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ. ಹೀಗಿರುವಾಗ ಈ ಬೈಕಿನ ಮೈಲೇಜ್ ಬಗ್ಗೆ ಕೆಲ ಗಾಳಿ ಮಾತುಗಳು ಕೇಳಿಬರುತ್ತಿದ್ದು, ಇದರ ಕುರಿತಾದ ಡಿವಿ ತಾಕೂರ್ ವಿಲಾಗ್ಸ್ ಎಂಬ ಯೂಟ್ಯುಬ್ ಚಾನಲ್ ಒಂದು ಈ ಕೆಟಿಎಂ ಡ್ಯೂಕ್ 125 ಬೈಕಿನ ಮೈಲೇಜ್ ಚೆಕ್ ಮಾಡಿದೆ.

ಡಿವಿ ತಾಕೂರ್ ವಿಲಾಗ್ಸ್ ಬಿಡುಗಡೆ ಮಾಡಿರುವ ಮೊದಲನೆಯ ವಿಡಿಯೋನಲ್ಲಿ ಕೇವಲ ಎಂದು ಲೀಟರ್‍‍ನ ಪೆಟ್ರೋಲ್ ತುಂಬಿಸಿಕೊಂಡು ಟ್ರಾಫಿಕ್ ಭರಿತ ಬೆಂಗಳೂರಿನ ಮೈಲೇಜ್ ಚೆಕ್ ಮಾಡಲಾಗಿತ್ತು. ಮೈಲೇಜ್ ಚೆಕ್ ಮಾಡಿದ ಸಮಯದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಒಂದು ಲೀಟರ್ ಪೆಟ್ರೋಲ್‍ಗೆ ಸಮರು 43 ಕಿಲೊಮೀಟರ್ ಮೈಲೇಜ್ ನೀಡಿದೆ.

ಇನ್ನು ಅದೇ ಕೆಟಿಎಂ ಡ್ಯೂಕ್ 125ಸಿಸಿ ಬೈಕ್ ಹೆದ್ದಾರಿಗಳಲ್ಲಿ ಕೇವಲ ಅರ್ಧ ಲೀಟರ್ ಪೆಟ್ರೋಲ್‍ಗೆ ಸುಮಾರು ಬರೊಬ್ಬರಿ 25.7 ಕಿಲೋಮೀಟರ್ ಮೈಲೇಜ್ ನೀಡಿದೆ ಎಂದರೆ ನಂಬಲೇಬೇಕು. ಅಂದರೆ ಹೆದ್ದಾರಿಯಲ್ಲಿ ಒಂದು ಲೀಟರ್ ಪೆಟ್ರೋಲ್‍‍ಗೆ ಸುಮಾರು 51.4 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೆದ್ದಾರಿಯಲ್ಲಿ ನಡೆಸಿದ ಮೈಲೇಜ್ ಚೆಕ್ ಕುರಿತಾದ ದೃಶ್ಯವನ್ನು ನೀವು ಈ ವಿಡಿಯೋನಲ್ಲಿ ಕಾಣಬಹುದಾಗಿದೆ.

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಇನ್ನು ಈ ಬೈಕಿನ ಜನಪ್ರಿಯತೆಯ ಬಗ್ಗೆ ಹೇಳೊದಾದ್ರೆ ಕಳೆದ ನವೆಂಬರ್‌ ತಿಂಗಳ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಿದ್ದ ಹೊಸ ಡ್ಯೂಕ್ 125 ತಿಂಗಳಾಂತ್ಯಕ್ಕೆ 450 ಬೈಕ್‌ಗಳು ಮಾರಾಟವಾಗಿದ್ದವು. ತದನಂತರ ಡಿಸೆಂಬರ್ ಅವಧಿಯಲ್ಲಿ ಉತ್ತಮ ಮಾರಾಟವನ್ನು ದಾಖಲಿಸುವ ಮೂಲಕ 2,414 ಬೈಕ್‌ಗಳು ಗ್ರಾಹಕರ ಕೈಸೇರಿವೆ.

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಇನ್ನು ಡ್ಯೂಕ್ 125 ತಾಂತ್ರಿಕವಾಗಿ 125ಸಿಸಿ ಆವೃತ್ತಿಯಾದ್ರು ಡ್ಯೂಕ್ 200 ಮಾದರಿಯಲ್ಲೇ ಬಹುತೇಕ ಹೊರ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಹೊಸ ಬೈಕಿನಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್-ಡೌನ್ ಫೋಕ್ಸ್‌ನೊಂದಿಗೆ ಖರೀದಿ ಉತ್ತಮವಾಗಿದೆ.

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಡ್ಯೂಕ್ 200 ಮಾದರಿಯಲ್ಲೇ ಚಾರ್ಸಿ, ಸಸ್ಷೆನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಡ್ಯೂಕ್ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಇದೇ ಕಾರಣಕ್ಕೆ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯು, ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

MOST READ: ಮರು ಜೀವ ಪಡೆಯುತ್ತಿರುವ ಭಾರತದ ಮೊದಲ ಮಾರುತಿ 800 ಕಾರು. ಈಗ ಹೇಗಿದೆ ನೀವೆ ನೋಡಿ

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಬೈಕಿನ ವೈಶಿಷ್ಟ್ಯತೆ

ಡಿಜಿಟಲ್ ಇನ್ಟ್ರಮೆಂಟ್ ಕ್ಲಸ್ಟರ್‌ನೊಂದಿಗೆ 148 ಕೆಜಿ ತೂಕ ಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯಲ್ಲಿ 818ಎಂಎಂ ಎತ್ತರದ ಆಸನ ಸೌಲಭ್ಯ ಹೊಂದಿದ್ದು, ಹಿಂಬದಿಯ ಸವಾರರ ಆಸನ ಇದ್ದರೂ ಸಹ ಅಷ್ಟಾಗಿ ಸ್ಥಳಾವಕಾಶ ನೀಡಿಲ್ಲ. ಹೀಗಾಗಿ ಡ್ಯೂಕ್ 125 ಬೈಕ್ ಮಾದರಿಯ ಸಿಂಗಲ್ ರೈಡ್‌ಗೆ ಅತ್ಯುತ್ತಮ ಎನ್ನಬಹುದು.

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಟೈರ್ ಮತ್ತು ಬ್ರೇಕಿಂಗ್ ಸೌಲಭ್ಯ

ಬೈಕಿನ ಮುಂಭಾಗದಲ್ಲಿ 110/70 ಆರ್17 ಮತ್ತು ಹಿಂಭಾಗದಲ್ಲಿ 150/60 ಆರ್17 ಎಂಆರ್‌ಎಫ್ ಗ್ರಿಪ್ ಟೈರ್‌ಗಳನ್ನು ಹೊಂದಿರುವ ಡ್ಯೂಕ್ 125 ಬೈಕಿನಲ್ಲಿ ಬ್ರೇಕಿಂಗ್ ಸೌಲಭ್ಯಗಳು ಮುಖ್ಯ ಆಕರ್ಷಣೆಯಾಗಿದೆ.

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

43-ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹೋಂದಾಣಿಕೆ ಮಾಡಬಲ್ಲ ಮೊನೋಶಾರ್ಕ್ ಸೌಲಭ್ಯದೊಂದಿಗೆ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 230ಎಂಎಂ ಡಿಸ್ಕ್ ಬ್ರೇಕ್ ಪಡೆದಿದ್ದು, ಬಾಷ್ ನಿರ್ಮಾಣದ ಸಿಂಗಲ್ ಚಾನೆಲ್ ಎಬಿಎಸ್ ಯುನಿಟ್ ಇದರಲ್ಲಿದೆ.

MOST READ: ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕ್ಕಿಬಿದ್ದಿದ್ದು ಹೀಗೆ...

ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಚೆಕ್

ಬೈಕಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡ್ಯೂಕ್ 125 ಮಾದರಿಯು 1.18 ಲಕ್ಷ ಬೆಲೆ ಪಡೆದಿದ್ದು, ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿದ್ದರು ಸಹ ಪರ್ಫಾಮೆನ್ಸ್ ವಿಚಾರದಲ್ಲಿ ಗಮನಸೆಳೆಯುವ ಬೈಕಿನ ಬೆಲೆಗಳು ಸ್ಪರ್ಧಾತ್ಮಕವಾಗಿವೆ ಎನ್ನಬಹುದು.

More from DriveSpark

Article Published On: Wednesday, February 20, 2019, 13:45 [IST]
English summary
Mileage Check Of KTM Duke125 In Bangalore And In Highway. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+